ಧಂತೇರಸ್‍ ಸಲುವಾಗಿ 12,500 ಕಾರುಗಳನ್ನು ವಿತರಿಸಿದ ಹ್ಯುಂಡೈ

ಹ್ಯುಂಡೈ ಮೋಟಾರ್ಸ್ ಒಂದೇ ದಿನದಲ್ಲಿ ತಮ್ಮ 12,500 ಯು‍‍ನಿ‍ಟ್‍ ಕಾರುಗಳನ್ನು ದೇಶಿಯ ಮಾರುಕಟ್ಟೆಯಲ್ಲಿ ವಿತರಿಸಿರುವುದಾಗಿ ತಿಳಿಸಿದೆ. ಭಾರತದಲ್ಲಿ ಧಂತೇರಸ್ ಶುಭ ಸಂದರ್ಭವಾಗಿದ್ದು, ಈ ಶುಭ ಸಂದರ್ಭಲ್ಲಿ ಹ್ಯುಂಡೈ ಒಂದೇ ದಿನದಲ್ಲಿ ತಮ್ಮ ವಿವಿಧ ಜನಪ್ರಿಯ ಮಾದರಿಗಳ 12,500 ಯು‍‍ನಿ‍ಟ್‍ಗಳನ್ನು ವಿತರಿಸಿರುವುದಾಗಿ ಕಂಪನಿ ತಿಳಿಸಿದೆ.

ಧಂತೇರಸ್‍ ಸಲುವಾಗಿ 12,500 ಕಾರುಗಳನ್ನು ವಿತರಿಸಿದ ಹ್ಯುಂಡೈ

ಮಾರುತಿ ಸುಜುಕಿಯ ನಂತರ ಹ್ಯುಂಡೈ ಪ್ರಸ್ತುತ ದೇಶಿಯ ಮಾರುಕಟ್ಟೆಯಲ್ಲಿ ಎರಡನೇ ಅತಿದೊಡ್ಡ ಕಾರು ತಯಾರಕ ಸಂಸ್ಥೆಯಾಗಿದೆ. ಹ್ಯುಂಡೈ ಕಾರುಗಳು ಟಾಪ್ - 10 ಹೆಚ್ಚು ಮಾರಾಟವಾದ ಮಾದರಿಗಳ ಪಟ್ಟಿಯಲ್ಲಿ ಸ್ಥಿರವಾಗಿ ಸ್ಥಾನಗಳಿಸುತ್ತಿವೆ. ಮಾರುತಿ ಸುಜುಕಿ ಹೊರತುಪಡಿಸಿ ಹ್ಯುಂಡೈ ಹೀಗೆ ಸ್ಥಿರವಾಗಿ ಟಾಪ್-10 ಪಟ್ಟಿಯಲ್ಲಿ ಸ್ಥಾನಗಳಿಸುತ್ತಿರುವ ಏಕೈಕ ಕಂಪನಿಯಾಗಿದೆ.

ಧಂತೇರಸ್‍ ಸಲುವಾಗಿ 12,500 ಕಾರುಗಳನ್ನು ವಿತರಿಸಿದ ಹ್ಯುಂಡೈ

ಕಂಪನಿ ಇತ್ತೀಚಿಗೆ ಬಿಡುಗಡೆಗೊಳಿಸಿದ ವೆನ್ಯೂ ಕಾಂಪ್ಯಾಕ್ಟ್ ಎಸ್‍‍ಯು‍ವಿ ಮತ್ತು ಗ್ರ್ಯಾಂಡ್ ಐ 10 ನಿಯೊಸ್ ಟಾಪ್-10 ಮಾರಾಟದ ಪಟ್ಟಿಯಲ್ಲಿ ಸೇರಿವೆ. ಎರಡು ಮಾದರಿಗಳು ದೇಶಿಯ ಮಾರುಕಟ್ಟೆಯಲ್ಲಿ ಉತ್ತಮವಾಗಿ ಮಾರಾಟವಾಗುತ್ತಿವೆ. ಹ್ಯುಂಡೈ ವೆನ್ಯೂ ಕಳೆದ ಎರಡು ತಿಂಗಳುಗಳಿಂದ ದೇಶಿಯ ಮಾರುಕಟ್ಟೆಯಲ್ಲಿ ಎಸ್‍ಯು‍ವಿ ಮಾರಾಟದಲ್ಲಿ ಅಗ್ರಸ್ಥಾನದಲ್ಲಿದೆ.

ಧಂತೇರಸ್‍ ಸಲುವಾಗಿ 12,500 ಕಾರುಗಳನ್ನು ವಿತರಿಸಿದ ಹ್ಯುಂಡೈ

ಹ್ಯುಂಡೈ ವೆನ್ಯೂ ಮತ್ತು ಗ್ರ್ಯಾಂಡ್ ಐ 10 ನಿಯೊಸ್ ಅನ್ನು ಹೊರತುಪಡಿಸಿ ಬ್ರ್ಯಾಂಡ್‍‍ನ ಇತರ ಜನಪ್ರಿಯ ಮಾದರಿಗಳು ಕ್ರೆಟಾ ಎಸ್‍‍ಯು‍ವಿ ಮತ್ತು ಎಲೈಟ್ ಐ 20 ಪ್ರೀಮಿಯಂ ಹ್ಯಾಚ್‍‍ಬ್ಯಾಕ್ ಸಹ ಟಾಪ್-10 ಪಟ್ಟಿಯಲ್ಲಿ ಒಳಗೊಂಡಿವೆ. ಹ್ಯುಂಡೈ ಎಲೈಟ್ ಐ 20 ಪ್ರಸ್ತುತ ದೇಶಿಯ ಮಾರುಕಟ್ಟೆಯಲ್ಲಿ ಹೆಚ್ಚು ಮಾರಾಟವಾಗುವ ಮಾದರಿಯಾಗಿದೆ.

ಧಂತೇರಸ್‍ ಸಲುವಾಗಿ 12,500 ಕಾರುಗಳನ್ನು ವಿತರಿಸಿದ ಹ್ಯುಂಡೈ

ಭಾರತದಲ್ಲಿ ಹ್ಯುಂಡೈನ ಎಲ್ಲಾ ನಾಲ್ಕು ಮಾದರಿಗಳು ಮಾರುಕಟ್ಟೆಯಲ್ಲಿ ಸ್ಥಿರವಾಗಿ ಮಾರಾಟವಾಗುತ್ತಿವೆ. ಕಂಪನಿಯು ಕಳೆದ ವರ್ಷ ಜನಪ್ರಿಯ ಸ್ಯಾಂಟ್ರೊ ಕಾರ್ ಅನ್ನು ದೇಶಿಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಿದೆ. ಹೊಸ ಸ್ಯಾಂಟ್ರೊ ಕಾರು ಕೊರಿಯನ್ ಬ್ರ್ಯಾಂಡ್‍‍ನ ಎಂಟ್ರಿ ಲೆವೆಲ್ ಕಾರು ಆಗಿದೆ.

ಧಂತೇರಸ್‍ ಸಲುವಾಗಿ 12,500 ಕಾರುಗಳನ್ನು ವಿತರಿಸಿದ ಹ್ಯುಂಡೈ

ಹ್ಯುಂಡೈ ಪ್ರಸ್ತುತ ದೇಶಿಯ ಮಾರುಕಟ್ಟೆಯಲ್ಲಿರುವ ತನ್ನ ಹೆಚ್ಚಿನ ಮಾದರಿಗಳನ್ನು ನವೀಕರಿಸುತ್ತಿದೆ. ಗ್ರ್ಯಾಂಡ್ ಐ 20 ನಿಯೊಸ್ ಅನ್ನು ಮುಂಬರುವ ಬಿಎಸ್-6 ಮಾದರಿಗಳಿಗೆ ತಕ್ಕಂತೆ ನವೀಕರಿಸಲಾಗುತ್ತಿದೆ ಮತ್ತು ಇನ್ನೂ ಉಳಿದ ಮಾದರಿಗಳನ್ನು ಮುಂದಿನ ವರ್ಷದ ಪ್ರಾರಂಭದಲ್ಲಿ ನವೀಕರಿಸಲಾಗುತ್ತದೆ.

ಧಂತೇರಸ್‍ ಸಲುವಾಗಿ 12,500 ಕಾರುಗಳನ್ನು ವಿತರಿಸಿದ ಹ್ಯುಂಡೈ

ಹ್ಯುಂಡೈ ಮಾದರಿಗಳ ನವೀಕರಣ ಹೊರತಾಗಿ ಮುಂದಿನ ತಲೆಮಾರಿನ ಕ್ರೆಟಾ ಎಸ್‍‍ಯು‍ವಿಯನ್ನು ದೇಶಿಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಲಿದೆ. ಹೊಸ ಹ್ಯುಂಡೈ ಕ್ರೆಟಾವನ್ನು 2020ರ ಆಟೋ ಎಕ್ಸ್ ಪೋದಲ್ಲಿ ಅನಾವರಣಗೊಳಿಸಲಿದೆ. ನಂತರದ ದಿನಗಳಲ್ಲಿ ಭಾರತದಲ್ಲಿ ಬಿಡುಗಡೆಗೊಳಿಸಲಿದೆ. ಹೊಸ ಹುಂಡೈ ಕ್ರೆಟಾವು ಸಂಪೂರ್ಣವಾಗಿ ಹೊಸ ವಿನ್ಯಾಸವನ್ನು ಹೊಂದಿರಲಿದೆ. ಇದರಲ್ಲಿ ಡ್ಯುಯಲ್ ಹೆಡ್ ಲ್ಯಾಂಪ್, ಎಲ್ಇಡಿ ಲೈಟಿಂಗ್‍ ನಂತಹ ವೈಶಿಷ್ಟ್ಯಗಳಿರಲಿವೆ.

MOST READ: ಹಳೆ ವಾಹನವನ್ನು ಗುಜರಿಗೆ ಹಾಕುವ ಮಾಲೀಕರಿಗೆ ಆಫರ್

ಧಂತೇರಸ್‍ ಸಲುವಾಗಿ 12,500 ಕಾರುಗಳನ್ನು ವಿತರಿಸಿದ ಹ್ಯುಂಡೈ

2020ರ ಹ್ಯುಂಡೈ ಕ್ರೆಟಾ ಎಸ್‍‍ಯು‍ವಿಯು ಬಿಎಸ್-6 ಪೆಟ್ರೋಲ್ ಮತ್ತು ಡೀಸೆಲ್ ಎಂಜಿನ್ ಕಿಯಾ ಮೋಟಾರ್ಸ್ ಹೊಂದಿರುವ ಎಂಜಿನ್ ಮಾದರಿಯಲ್ಲಿ ಇರುವ ಸಾಧ್ಯತೆಗಳಿವೆ. ಪ್ರಸ್ತುತ ದೇಶಿಯ ಮಾರುಕಟ್ಟೆಯಲ್ಲಿ ಕಿಯಾ ಸೆಲ್ಟೋಸ್ ಎಸ್‍‍ಯು‍ವಿಯು ಪವರ್‍‍ಫುಲ್ ಎಂಜಿನ್ ಅನ್ನು ಹೊಂದಿದೆ.

MOST READ: ಬೈಕ್ ಚಲಾಯಿಸಿದ್ದು ಮಗ, ದಂಡ ಬಿದ್ದಿದ್ದು ಅಪ್ಪನಿಗೆ..!

ಧಂತೇರಸ್‍ ಸಲುವಾಗಿ 12,500 ಕಾರುಗಳನ್ನು ವಿತರಿಸಿದ ಹ್ಯುಂಡೈ

ದೇಶದಲ್ಲಿ ಒಂದೇ ದಿನದಲ್ಲಿ ಕಂಪನಿಯ 12,500 ಕ್ಕೂ ಹೆಚ್ಚು ಮಾದರಿಗಳನ್ನು ವಿತರಿಸಿರುವುದಾಗಿ ಹ್ಯುಂಡೈ ತಿಳಿಸಿದೆ. ಭಾರತೀಯ ಗ್ರಾಹಕರು ಸಾಮಾನ್ಯವಾಗಿ ಧಂತೇರಸ್‍ನಂತಹ ವಿಶೇಷ ಸಂದರ್ಭದಲ್ಲಿ ಕಾರನ್ನು ಖರೀದಿಸಲು ಬಯಸುತ್ತಾರೆ. ಈ ಸಂದರ್ಭದಲ್ಲಿ ಕಾರು ಖರೀದಿಸುವುದು ಶುಭ ಸಂದರ್ಭವೆಂದು ಪರಿಗಣೆಸಲಾಗುತ್ತದೆ. ಹ್ಯುಂಡೈ ಹೊರತುಪಡಿಸಿ ಎಂಜಿ ಮೋಟಾರ್ ಕೂಡ ಒಂದೇ ದಿನದಲ್ಲಿ 700 ಹೆಕ್ಟರ್ ಯುನಿ‍‍ಟ್‍ಗಳನ್ನು ವಿತರಿಸಿದೆ.

Most Read Articles

Kannada
English summary
Hyundai Registers 12,500 Car Deliveries In A Single Day On Dhanteras - Read in Kannada
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X