ಮಾರಾಟದಲ್ಲಿ ಮಾರುತಿ ಸುಜುಕಿ ಸೆಲೆರಿಯೊ ಕಾರನ್ನು ಹಿಂದಿಕ್ಕಿದ ಹ್ಯುಂಡೈ ಸ್ಯಾಂಟ್ರೋ

ಜುಲೈ 2019 ತಿಂಗಳ ಕಾರುಗಳ ಮಾರಾಟದ ಪಟ್ಟಿ ಇದೀಗ ಬಹಿರಂಗಗೊಂಡಿದ್ದು, ಹಲವಾರು ಕಾರುಗಳು ಕಡಿಮೆ ಸಂಖ್ಯೆಯಲ್ಲಿ ಮಾರಾಟವಾಗಿದೆ. ಅವುಗಳಲ್ಲಿ ಮಾರುತಿ ಸುಜುಕಿ ಕಾರುಗಳು ಟಾಪ್ 10 ಸ್ಥಾನದಲ್ಲಿ 7 ಕಾರುಗಳಿದ್ದು, ಇನ್ನು ಮೂರು ಕಾರುಗಳು ಹ್ಯುಂಡೈ ಸಂಸ್ಥೆಯದ್ದಾಗಿದೆ.

ಮಾರಾಟದಲ್ಲಿ ಮಾರುತಿ ಸುಜುಕಿ ಸೆಲೆರಿಯೊ ಕಾರನ್ನು ಹಿಂದಿಕ್ಕಿದ ಹ್ಯುಂಡೈ ಸ್ಯಾಂಟ್ರೋ

ಮಾರುತಿ ಸುಜುಕಿ ಸಂಸ್ಥೆಯು ಎಂದಿನಂತೆಯೆ ಉತ್ತಮವಾದ ಮಾರಾಟವನ್ನು ಕಣುತ್ತಿದ್ದು, ಈ ಸಂಸ್ಥೆಯಲ್ಲಿನ ವ್ಯಾಗನ್ ಆರ್ ಕಾರು ಜುಲೈ 2019ರ ಟಾಪ್ 10 ಕಾರು ಮಾರಾಟದಲ್ಲಿ ಮೊದಲನೆಯ ಸ್ಥಾನವನ್ನು ಪಡೆದುಕೊಂಡಿದೆ. ಇನ್ನು ಹ್ಯುಂಡೈ ಸಂಸ್ಥೆಯಲ್ಲಿನ ಎಂಟ್ರಿ ಲೆವೆಲ್ ಹ್ಯಾಚ್‍‍ಬ್ಯಾಕ್ ಕಾರಾದ ಸ್ಯಾಂಟ್ರೋ ಕಾರು ಮಾರುತಿ ಸುಜುಕಿ ಸಂಸ್ಥೆಯಲ್ಲಿನ ಸೆಲೆರಿಯೊ ಕಾರುಗಳನ್ನು ಮಾರಾಟದಲ್ಲಿ ಹಿಂದಿಕ್ಕಿದೆ.

ಮಾರಾಟದಲ್ಲಿ ಮಾರುತಿ ಸುಜುಕಿ ಸೆಲೆರಿಯೊ ಕಾರನ್ನು ಹಿಂದಿಕ್ಕಿದ ಹ್ಯುಂಡೈ ಸ್ಯಾಂಟ್ರೋ

ಜುಲೈ 2019ರ ಅವಧಿಯಲ್ಲಿ ಹ್ಯುಂಡೈ ಸಂಸ್ಥೆಯು ಇತ್ತೀಚೆಗೆ ಬಿಡುಗಡೆ ಮಾಡಲಾದ ವೆನ್ಯೂ ಕಾರು ಕೂಡಾ ಸಬ್-ಕಾಂಪ್ಯಾಕ್ಟ್ ಎಸ್‍ಯುವಿ ಕಾರುಗಳಲ್ಲಿ ಜನಪ್ರೀಯತೆಯನ್ನು ಪಡೆಯುತ್ತಿದೆ. ಇನ್ನು ವಿಷಯಕ್ಕೆ ಬಂದರೆ ಜುಲೈ 2019ರಲ್ಲಿ 5,309 ಯೂನಿಟ್ ಸ್ಯಾಂಟ್ರೋ ಕಾರುಗಳು ಮಾರಾಟಗೊಂಡಲ್ಲಿ, 4,805 ಯೂನಿಟ್ ಮಾರುತಿ ಸೆಲೆರಿಯೊ ಕಾರುಗಳು ಮಾರಾಟವಾಗಿದೆ.

ಮಾರಾಟದಲ್ಲಿ ಮಾರುತಿ ಸುಜುಕಿ ಸೆಲೆರಿಯೊ ಕಾರನ್ನು ಹಿಂದಿಕ್ಕಿದ ಹ್ಯುಂಡೈ ಸ್ಯಾಂಟ್ರೋ

2018 ಅಕೋಬರ್‍‍‍ನಲ್ಲಿ ಬಿಡುಗಡೆಯಾದ ಹ್ಯುಂಡೈ ಸ್ಯಾಂಟ್ರೋ ಎಂಟ್ರಿ ಲೆವೆಲ್ ಹ್ಯಾಚ್‍‍ಬ್ಯಾಕ್ ಕಾರು ಈ ಮೊದಲು ಎಕ್ಸ್ ಶೋರುಂ ಪ್ರಕಾರ ರೂ. 3.89 ಲಕ್ಷದ ಬೆಲೆಯನ್ನು ಪಡೆದುಕೊಂಡಿತ್ತು. ಆದರೆ ಇದೀಗ ಹೊಸ ಹ್ಯುಂಡೈ ಸ್ಯಾಂಟ್ರೋ ಕಾರು ರೂ. 4.15 ಲಕ್ಷದ ಪ್ರಾರಂಭಿಕ ಬೆಲೆಯನ್ನು ಪಡೆದುಕೊಂಡಿದೆ.

ಮಾರಾಟದಲ್ಲಿ ಮಾರುತಿ ಸುಜುಕಿ ಸೆಲೆರಿಯೊ ಕಾರನ್ನು ಹಿಂದಿಕ್ಕಿದ ಹ್ಯುಂಡೈ ಸ್ಯಾಂಟ್ರೋ

ಕಳೆದ ವರ್ಷದ ಸ್ಯಾಂಟ್ರೋ ಕಾರನ್ನು ಡಿಲೈಟ್, ಎರಾ, ಮ್ಯಾಗ್ನಾ, ಸ್ಪೋಟ್ಜ್, ಆಸ್ಟ್ರಾ ಎನ್ನುವ ಐದು ಆವೃತ್ತಿಗಳಲ್ಲಿ ಬಿಡುಗಡೆ ಮಾಡಿತ್ತು. ಆದ್ರೆ ಇದರಲ್ಲಿ ಗ್ರಾಹಕರನ್ನು ಸೆಳೆಯುವಲ್ಲಿ ವಿಫಲವಾಗಿರುವ ಎರಾ ಆವೃತ್ತಿಯನ್ನು ಈ ಬಾರಿ ಸ್ಥಗಿತಗೊಳಿಸಿರುವ ಹ್ಯುಂಡೈ ಸಂಸ್ಥೆಯು ಡಿಲೈಟ್ ಮತ್ತು ಮ್ಯಾಗ್ನಾ ಕಾರುಗಳಲ್ಲಿ ಕೆಲವು ತಾಂತ್ರಿಕ ಸೌಲಭ್ಯಗಳನ್ನು ಉನ್ನತಿಕರಿಸಿದೆ.

ಮಾರಾಟದಲ್ಲಿ ಮಾರುತಿ ಸುಜುಕಿ ಸೆಲೆರಿಯೊ ಕಾರನ್ನು ಹಿಂದಿಕ್ಕಿದ ಹ್ಯುಂಡೈ ಸ್ಯಾಂಟ್ರೋ

ಹಳೆಯ ಮಾದರಿಯ ಸ್ಯಾಂಟ್ರೋ ಕಾರಿಗೂ ಮತ್ತು ಹೊಸ ಸ್ಯಾಂಟ್ರೋ‌ ಕಾರಿಗೂ ಸಾಕಷ್ಟು ಭಿನ್ನತೆಯಿದ್ದು, ಹೊಸ ಕಾರಿನ ಹೊರ ಮತ್ತು ಒಳ ಭಾಗದ ಡಿಸೈನ್‌ನಲ್ಲಿ ಮಹತ್ವದ ಬದಲಾವಣೆ ಕಂಡಿರುವ ಹೊಸ ಸ್ಯಾಂಟ್ರೋ ಕಾರು ಹೊಚ್ಚ ಹೊಸ ಡಿಸೈನ್ ಪ್ರೇರಿತ ಕಾಸ್‌ಕ್ಯಾಡಿಂಗ್ ಬ್ಲ್ಯಾಕ್ ಗ್ರಿಲ್, ಸ್ವೆಪ್ಟ್‌ಬ್ಯಾಕ್ ಹೆಡ್‌ಲ್ಯಾಂಪ್, ಫಾಗ್ ಲ್ಯಾಂಪ್, ಬ್ಲ್ಯಾಕ್ ಪ್ಲ್ಯಾಸ್ಟಿಕ್ ಕ್ಲ್ಯಾಡಿಂಗ್, ಸ್ಪೋರ್ಟಿ ಬಂಪರ್ ಪಡೆದುಕೊಂಡಿದೆ.

ಮಾರಾಟದಲ್ಲಿ ಮಾರುತಿ ಸುಜುಕಿ ಸೆಲೆರಿಯೊ ಕಾರನ್ನು ಹಿಂದಿಕ್ಕಿದ ಹ್ಯುಂಡೈ ಸ್ಯಾಂಟ್ರೋ

ಆರಂಭಿಕ ಮಾದರಿಯಾದ ಡಿಲೈಟ್ ಆವೃತ್ತಿಯು ಈ ಬಾರಿ ಎಸಿ ಸೌಲಭ್ಯವನ್ನು ಪಡೆದುಕೊಂಡಿರುವುದಲ್ಲದೇ ಬಾಡಿ ಕಲರ್ ಫ್ರಂಟ್ ಬಂಪರ್, ಡ್ಯುಯಲ್ ಟೋನ್ ರಿಯರ್ ಬಂಪರ್ ಮತ್ತು ಮುಂಭಾಗದಲ್ಲಿ ಪವರ್ ವಿಂಡೋ ಸೌಲಭ್ಯವನ್ನು ಪಡೆದಿದೆ.

MOST READ: ದಂಡ ವಿಧಿಸಿದ ಪೊಲೀಸರಿಗೆ ಸರಿಯಾಗಿ ಚಮಕ್ ಕೊಟ್ಟ ಎಲೆಕ್ಟ್ರಿಷಿಯನ್

ಮಾರಾಟದಲ್ಲಿ ಮಾರುತಿ ಸುಜುಕಿ ಸೆಲೆರಿಯೊ ಕಾರನ್ನು ಹಿಂದಿಕ್ಕಿದ ಹ್ಯುಂಡೈ ಸ್ಯಾಂಟ್ರೋ

ಹಾಗೆಯೇ ಮ್ಯಾಗ್ನಾ ಪೆಟ್ರೋಲ್ ಮತ್ತು ಸಿಎನ್‌ಜಿ ಆವೃತ್ತಿಯಲ್ಲಿ ಫ್ರಂಟ್ ಡೋರ್ ಸ್ಪೀಕರ್ಸ್ ವೈಶಿಷ್ಟ್ಯತೆಯ ಹೊಸ ಮ್ಯೂಸಿಕ್ ಸಿಸ್ಟಂ ಜೋಡಣೆ ಮಾಡಲಾಗಿದ್ದು, ಸ್ಟೀರಿಂಗ್ ಮೌಂಟೆಡ್ ಕಂಟ್ರೋಲ್ ಸೌಲಭ್ಯವನ್ನು ಜೋಡಣೆ ಮಾಡಲಾಗಿದೆ. ಇದರಲ್ಲಿ ಸ್ಪೋರ್ಟ್ಜ್ ಪ್ಲಸ್ ಮಾದರಿ ಕೂಡಾ ಸಹ ಪ್ರಯಾಣಿಕರ ವಿಭಾಗದ ಏರ್‌ಬ್ಯಾಗ್, ರಿಯಲ್ ವ್ಯೂ ಕ್ಯಾಮೆರಾ ಮತ್ತು ಸೀಟ್ ಬೆಲ್ಟ್ ರಿಮೆಂಡರ್ ಸೌಲಭ್ಯ ಪಡೆದಿದೆ.

MOST READ: ವಾಹನ ಚಾಲಕರೇ ಇತ್ತ ಗಮನಿಸಿ - ಅಕ್ಟೋಬರ್ 1 ರಿಂದ ಜಾರಿಯಾಗಲಿದೆ ಹೊಸ ರೂಲ್ಸ್

ಮಾರಾಟದಲ್ಲಿ ಮಾರುತಿ ಸುಜುಕಿ ಸೆಲೆರಿಯೊ ಕಾರನ್ನು ಹಿಂದಿಕ್ಕಿದ ಹ್ಯುಂಡೈ ಸ್ಯಾಂಟ್ರೋ

ಇನ್ನು ಪ್ರೀಮಿಯಂ ಇಂಟಿರಿಯರ್ ವೈಶಿಷ್ಟ್ಯತೆಗಳನ್ನು ಹೊತ್ತು ಬಂದಿರುವ ಹೊಸ ಸ್ಯಾಂಟ್ರೋ ಕಾರಿನ ಒಳಭಾಗದ ವಿನ್ಯಾಸಗಳು ಎಂಟ್ರಿ ಲೆವಲ್ ಕಾರುಗಳಲ್ಲೇ ವಿಶೇಷವಾಗಿದ್ದು, ವೀಲ್ಹ್ ಆರ್ಚ್‌ ಹೆಚ್ಚಿಸಿರುವ ಹಿನ್ನೆಲೆಯಲ್ಲಿ ಕಾರಿನ ಕ್ಯಾಬಿನ್ ಸ್ಥಳಾವಕಾಶ ಕೂಡಾ ಹೆಚ್ಚಿದೆ.

MOST READ: ವ್ಯವಸಾಯಕ್ಕಾಗಿ ರೂ.50 ಲಕ್ಷ ಬೆಲೆ ಬಾಳುವ ಐಷಾರಾಮಿ ಕಾರನ್ನು ಬಳಸಿದ ರೈತ

ಮಾರಾಟದಲ್ಲಿ ಮಾರುತಿ ಸುಜುಕಿ ಸೆಲೆರಿಯೊ ಕಾರನ್ನು ಹಿಂದಿಕ್ಕಿದ ಹ್ಯುಂಡೈ ಸ್ಯಾಂಟ್ರೋ

ಹೈ ಎಂಡ್ ಮಾದರಿಗಳಲ್ಲಿ ಪ್ರೀಮಿಯಂ ವೈಶಿಷ್ಟ್ಯತೆಗಳಾದ 7-ಇಂಚಿನ ಟಚ್‌ಸ್ಕ್ರೀನ್ ಇನ್ಪೋಟೈನ್‌ಮೆಂಟ್ ಸಿಸ್ಟಂ, ಅಂಡ್ರಾಯಿಡ್ ಆಟೋ, ಆ್ಯಪಲ್ ಕಾರ್ ಪ್ಲೇ, ಮಿರರ್‌ ಲಿಂಕ್, ಎಲೆಕ್ಟ್ರಿಕ್ ಅಡ್ಜೆಸ್ಟ್‌ಮೆಂಟ್ ರಿಯರ್ ವ್ಯೂವ್ ಮಿರರ್, ಮಲ್ಟಿ ಇನ್ಫಾರ್ಮೆಷನ್ ಡಿಸ್‌ಪ್ಲೇ, ರಿಯರ್ ವೈಪರ್ ಮತ್ತು ರಿಯರ್ ಡಿಫಾಗರ್ ಸೌಲಭ್ಯವಿದೆ.

ಮಾರಾಟದಲ್ಲಿ ಮಾರುತಿ ಸುಜುಕಿ ಸೆಲೆರಿಯೊ ಕಾರನ್ನು ಹಿಂದಿಕ್ಕಿದ ಹ್ಯುಂಡೈ ಸ್ಯಾಂಟ್ರೋ

ಎಂಜಿನ್ ಸಾಮರ್ಥ್ಯ

ನ್ಯೂ ಜನರೇಷನ್ ಹ್ಯುಂಡೈ ಸ್ಯಾಂಟ್ರೊ ಕಾರು 1.1-ಲೀಟರ್ (1,100 ಸಿಸಿ) ಫೋರ್ ಸಿಲಿಂಡರ್ ಪೆಟ್ರೋಲ್ ಎಂಜಿನ್ ಹೊಂದಿದ್ದು, 5-ಸ್ಪೀಡ್ ಮ್ಯಾನುವಲ್ ಮತ್ತು 5-ಸ್ಪೀಡ್ ಎಎಂಟಿ ಆಯ್ಕೆಯೊಂದಿಗೆ 68-ಬಿಎಚ್‌ಪಿ ಮತ್ತು 99-ಎನ್ಎಂ ಟಾರ್ಕ್ ಉತ್ಪಾದಿಸಬಲ್ಲವು. ಇದಲ್ಲದೇ ಹೊಸ ಸ್ಯಾಂಟ್ರೋ ಕಾರಿನ ಮ್ಯಾಗ್ನಾ ಮತ್ತು ಸ್ಪೋರ್ಟ್ಜ್ ವೆರಿಯೆಂಟ್‌ಗಳಲ್ಲಿ ಸಿಎನ್‌ಜಿ ಇಂಧನ ಆಯ್ಕೆ ಲಭ್ಯವಿದ್ದು, ಪೆಟ್ರೋಲ್ ಕಾರು ಪ್ರತಿ ಲೀಟರ್‌ಗೆ 20.3 ಕಿ.ಮಿ ಮೈಲೇಜ್ ನೀಡಿದ್ದಲ್ಲಿ ಸಿಎನ್‌ಜಿ ಮಾದರಿಯು ಪ್ರತಿ ಕೆಜಿ ಸಿಎನ್‌ಜಿಗೆ 30.5 ಕಿ.ಮಿ ನಷ್ಟು ಗರಿಷ್ಠ ಮೈಲೇಜ್ ನೀಡುತ್ತೆ.

Most Read Articles

Kannada
English summary
Hyundai Santro Beats Maruti Celerio in July 2019 Sales
Story first published: Wednesday, August 7, 2019, 13:25 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X