ಒಂದೇ ದಿನದಲ್ಲಿ ಎರಡು ಸಾವಿರಕ್ಕು ಹೆಚ್ಚಿನ ಬುಕ್ಕಿಂಗ್ ಪಡೆದ ಹ್ಯುಂಡೈ ವೆನ್ಯೂ..!

ಹ್ಯುಂಡೈ ವೆನ್ಯೂ ಕಂಪ್ಯಾಕ್ಟ್ ಎಸ್‌ಯುವಿ ಮಾದರಿಯು ಇದೇ ತಿಂಗಳು 21ರಂದು ಬಿಡುಗಡೆಯಾಗುತ್ತಿದ್ದು, ಅಂತಿಮ ಹಂತದ ಸ್ಪಾಟ್ ಟೆಸ್ಟಿಂಗ್ ಪೂರ್ಣಗೊಳಿಸುತ್ತಿರುವ ವೆನ್ಯೂ ಕಾರು ಕಂಪ್ಯಾಕ್ಟ್ ಎಸ್‌ಯುವಿ ಪ್ರಿಯರ ಬೇಡಿಕೆಯೆಂತೆ ಹಲವಾರು ಹೊಸ ಆಯ್ಕೆಯನ್ನು ಹೊತ್ತು ಬರುವುದು ಬಹುತೇಕ ಖಚಿತವಾಗಿದೆ.

ಒಂದೇ ದಿನದಲ್ಲಿ ಎರಡು ಸಾವಿರಕ್ಕು ಹೆಚ್ಚಿನ ಬುಕ್ಕಿಂಗ್ ಪಡೆದ ಹ್ಯುಂಡೈ ವೆನ್ಯೂ..!

ಹ್ಯುಂಡೈ ಸಂಸ್ಥೆಯು ನೆನ್ನೆಯಷ್ಟೆ ತಮ್ಮ ಹೊಸ ವೆನ್ಯೂ ಕಾರಿನ ಬುಕ್ಕಿಂಗ್ ಪ್ರಕ್ರಿಯೆಯನ್ನು ಪ್ರಾರಂಭಿಸಲಾಗಿದ್ದು, ಟೈಮ್ಸ್ ನೌ ನ್ಯೂಸ್ ವರದಿ ಪ್ರಕಾರ ಕೇವಲ ಒಂದೇ ದಿನದಲ್ಲಿ ಎರಡೂ ಸಾವಿರ ಮಂದಿ ಬುಕ್ಕಿಂಗ್ ಮಾಡಿಕೊಂಡಿದ್ದಾರೆ. ನೀವು ಕೂಡಾ ಈ ಹೊಸ ವೆನ್ಯೂ ಕಾರನ್ನು ಖರೀದಿ ಮಾಡುವ ಯೋಜನೆಯಲಿದ್ದರೆ, ಈ ಕೂಡಲೇ ನಿಮ್ಮ ಸಮೀಪದಲ್ಲಿರುವ ಹ್ಯುಂಡೈ ಡೀಲರ್‍ ಅನ್ನು ಭೀತಿ ಮಾಡಿ ರೂ. 21000 ನೀಡಿ ಪ್ರೀ ಬುಕ್ಕಿಂಗ್ ಮಾಡಿಕೊಳ್ಳಬಹುದಾಗಿದೆ.

ಒಂದೇ ದಿನದಲ್ಲಿ ಎರಡು ಸಾವಿರಕ್ಕು ಹೆಚ್ಚಿನ ಬುಕ್ಕಿಂಗ್ ಪಡೆದ ಹ್ಯುಂಡೈ ವೆನ್ಯೂ..!

ವೆನ್ಯೂ ಕಾರುಗಳು ಒಟ್ಟು ಮೂರು ಎಂಜಿನ್ ಆಯ್ಕೆಯೊಂದಿಗೆ ಖರೀದಿಗೆ ಲಭ್ಯವಾಗುತ್ತಿದ್ದು, ಎಂಟ್ರಿ ಲೆವಲ್‌ನಲ್ಲಿ 1.0-ಲೀಟರ್ ತ್ರಿ ಸಿಲಿಂಡರ್ ಎಂಜಿನ್ ಮಾರಾಟವಾಗಲಿದ್ದರೆ, ಟಾಪ್ ಎಂಡ್ ಮಾದರಿಯಲ್ಲಿ 1.4 ಲೀಟರ್ ಪೆಟ್ರೋಲ್ ಎಂಜಿನ್ ಮತ್ತು 1.4-ಲೀಟರ್ ಡೀಸೆಲ್ ಎಂಜಿನ್ ಆಯ್ಕೆಯನ್ನು ಸಹ ಹೊಂದಿರಲಿದೆ.

ಒಂದೇ ದಿನದಲ್ಲಿ ಎರಡು ಸಾವಿರಕ್ಕು ಹೆಚ್ಚಿನ ಬುಕ್ಕಿಂಗ್ ಪಡೆದ ಹ್ಯುಂಡೈ ವೆನ್ಯೂ..!

ಈ ಮೂರು ಎಂಜಿನ್ ಮಾದರಿಗಳಲ್ಲಿ ಡೀಸೆಲ್ ಎಂಜಿನ್‌ಗಿಂತ ಪೆಟ್ರೋಲ್ ಆವೃತ್ತಿಗಳ ಮೇಲೆ ಹೆಚ್ಚಿನ ಒತ್ತು ನೀಡಿರುವ ಹ್ಯುಂಡೈ ಸಂಸ್ಥೆಯು ಒಟ್ಟು 13 ವೆರಿಯೆಂಟ್‌ಗಳನ್ನು ಒದಗಿಸಲಿದ್ದು, 7 ಸಾಮಾನ್ಯ ಮಾದರಿಯ ಬಣ್ಣಗಳ ಆಯ್ಕೆ ಹಾಗೂ 3 ಡ್ಯುಯಲ್ ಟೋನ್ ಬಣ್ಣಗಳಲ್ಲಿ ಆಯ್ಕೆಯಲ್ಲಿ ವೆನ್ಯೂ ಲಭ್ಯವಿರಲಿದೆಯೆಂತೆ.

ಒಂದೇ ದಿನದಲ್ಲಿ ಎರಡು ಸಾವಿರಕ್ಕು ಹೆಚ್ಚಿನ ಬುಕ್ಕಿಂಗ್ ಪಡೆದ ಹ್ಯುಂಡೈ ವೆನ್ಯೂ..!

ಹೀಗಾಗಿ ಹೊಸ ಕಾರಿನ ಬೆಲೆಯು ಎಕ್ಸ್‌ಶೋರೂಂ ಪ್ರಕಾರ ಆರಂಭಿಕವಾಗಿ ರೂ. 7.50 ಲಕ್ಷದಿಂದ ಟಾಪ್ ಎಂಡ್ ಮಾದರಿಗೆ ರೂ.10 ಲಕ್ಷ ಇರಬಹುದೆಂದು ಅಂದಾಜಿಸಲಾಗಿದ್ದು, ಮಾರುತಿ ಸುಜುಕಿ ಬ್ರೆಝಾ ಮತ್ತು ಮಹೀಂದ್ರಾ ಎಕ್ಸ್‌ಯುವಿ 300 ಕಾರಿಗೆ ಪೈಪೋಟಿಯಾಗಿ ಹಲವಾರು ಹೊಸ ವೈಶಿಷ್ಟ್ಯತೆಗಳನ್ನು ವೆನ್ಯೂ ಕಾರಿನಲ್ಲಿ ಒದಗಿಸಿರುವುದು ಈಗಾಗಲೇ ಸ್ಪಾಟ್ ಟೆಸ್ಟಿಂಗ್ ವೇಳೆ ಖಚಿತವಾಗಿದೆ.

ಒಂದೇ ದಿನದಲ್ಲಿ ಎರಡು ಸಾವಿರಕ್ಕು ಹೆಚ್ಚಿನ ಬುಕ್ಕಿಂಗ್ ಪಡೆದ ಹ್ಯುಂಡೈ ವೆನ್ಯೂ..!

ಜೊತೆಗೆ ವೆನ್ಯೂ ಕಾರಿನಲ್ಲಿ ಅಳವಡಿಸಲಾಗಿರುವ ಬ್ಲ್ಯೂ ಲಿಂಕ್ ತಂತ್ರಜ್ಞಾನವು ಕಾರು ಮಾರಾಟದಲ್ಲಿ ಹ್ಯುಂಡೈಗೆ ವರದಾನವಾಗಲಿದ್ದು, ಜಿಯೋ ಫೆನ್ಸ್ ಸೌಲಭ್ಯವು ಕೂಡಾ ಕಾರಿಗೆ ಮತ್ತಷ್ಟು ಭದ್ರತೆ ನೀಡಲಿದೆ. ಒಂದು ನೀರ್ದಿಷ್ಟ ಪ್ರದೇಶವನ್ನು ಬ್ಯೂ ಲಿಂಕ್ ಮೂಲಕ ಗುರುತು ಮಾಡಿಟ್ಟಲ್ಲಿ ಆ ಪ್ರದೇಶವನ್ನು ದಾಟಿ ನಿಮ್ಮ ಕಾರು ಹೊರಹೊದಲ್ಲಿ ನಿಮ್ಮನ್ನು ತಕ್ಷಣವೇ ಎಚ್ಚರಿಸುವಂತಹ ತಂತ್ರಜ್ಞಾನ ಇದಾಗಿದೆ.

MOST READ: ಎರಡು ವರ್ಷದಲ್ಲಿ 300ಕ್ಕು ಹೆಚ್ಚು ಡೀಲರ್‍‍ಶಿಪ್‍ಗಳು ಬಂದ್..! ಇದಕ್ಕೆ ಕಾರಣ.?

ಒಂದೇ ದಿನದಲ್ಲಿ ಎರಡು ಸಾವಿರಕ್ಕು ಹೆಚ್ಚಿನ ಬುಕ್ಕಿಂಗ್ ಪಡೆದ ಹ್ಯುಂಡೈ ವೆನ್ಯೂ..!

ಹಾಗೆಯೇ ರಿಯರ್ ಟೈಮ್ ವೆಹಿಕಲ್ ಟ್ರ್ಯಾಕಿಂಗ್ ಮೂಲಕ ಕಳ್ಳತನವಾದ ಕಾರನ್ನು ಕೆಲವೇ ನಿಮಿಷಗಳಲ್ಲಿ ಪತ್ತೆ ಮಾಡಬಹುದಾಗಿದ್ದು, ರಿಮೋಟ್ ಮೂಲಕವೇ ಎಂಜಿನ್ ಸ್ಟಾರ್ಟ್/ಸ್ಟಾಪ್, ಲಾಕ್/ಅನ್‌ಲಾಕ್, ಹಾರ್ನ್ ಮತ್ತು ಲೈಟ್ ಕಂಟ್ರೋಲ್, ಫೈಂಡ್ ಮೈ ಕಾರ್ ಲೋಕೇಷನ್, ಶೇರ್ ಮೈ ಕಾರ್ ಮತ್ತು ರಿಯರ್ ಟೈಮ್ ಮೂಲಕ ಟ್ರಾಫಿಕ್ ಇನ್‌ಫಾರ್ಮೆಷನ್ ಪಡೆದುಕೊಳ್ಳಬಹುದಾದ ಸೌಲಭ್ಯ ಈ ಕಾರಿನಲ್ಲಿದೆ.

ಒಂದೇ ದಿನದಲ್ಲಿ ಎರಡು ಸಾವಿರಕ್ಕು ಹೆಚ್ಚಿನ ಬುಕ್ಕಿಂಗ್ ಪಡೆದ ಹ್ಯುಂಡೈ ವೆನ್ಯೂ..!

ಇನ್ನು ಹೊಸ ಕಾರಿನಲ್ಲಿ ಎಲ್‌ಇಡಿ ಹೆಡ್‌ಲ್ಯಾಂಪ್, ಎಲ್ಇಡಿ ಟೈಲ್ ಲೈಟ್, 6 ಸ್ಪೀಡ್ ಡ್ಯುಯಲ್ ಕ್ಲಚ್ ಗೇರ್‌ಬಾಕ್ಸ್, ಆಲ್ ವೀಲ್ಹ್ ಡಿಸ್ಕ್ ಬ್ರೇಕ್, ಎಬಿಎಸ್, 4 ಏರ್‌ಬ್ಯಾಗ್, ಸನ್‌ರೂಫ್, ಡ್ಯುಯಲ್ ಟೋನ್ ಬಾಡಿ ಕಲರ್, ಡ್ಯುಯಲ್ ಟೋನ್ ಇಂಟಿರಿಯರ್, ರಿಯರ್ ವ್ಯೂ ಕ್ಯಾಮೆರಾ, ಪಾರ್ಕಿಂಗ್ ಸೆನ್ಸಾರ್, ಸ್ಮಾರ್ಟ್ ಕೆನೆಕ್ಟಿವಿಟಿ ಮತ್ತು ಲಾರ್ಜ್ ಟಚ್‌ಸ್ಕ್ರೀನ್ ಡಿಸ್‌ಪ್ಲೇಯೊಂದಿಗೆ ಹಲವು ಮಾದರಿಯ ಪ್ರೀಮಿಯಂ ಸೌಲಭ್ಯಗಳನ್ನು ಪಡೆದುಕೊಂಡಿರಲಿದೆ.

MOST READ: ಹೊಸ ವಾಹನ ಖರೀದಿದಾರರೇ ಇತ್ತ ಗಮನಿಸಿ- ದೇಶಾದ್ಯಂತ ವಾಹನಗಳ ನೋಂದಣಿಗೆ ಬಿದ್ದಿದೆ ಬ್ರೇಕ್..!

ಒಂದೇ ದಿನದಲ್ಲಿ ಎರಡು ಸಾವಿರಕ್ಕು ಹೆಚ್ಚಿನ ಬುಕ್ಕಿಂಗ್ ಪಡೆದ ಹ್ಯುಂಡೈ ವೆನ್ಯೂ..!

ಈ ಮೂಲಕ ಕಂಪ್ಯಾಕ್ಟ್ ಎಸ್‌ಯುವಿ ಕಾರುಗಳ ಮಾರಾಟದಲ್ಲಿ ಮುಂಚೂಣಿ ಸಾಧಿಸುತ್ತಿರುವ ಮಾರುತಿ ಸುಜುಕಿ ಬ್ರೆಝಾ, ಮಹೀಂದ್ರಾ ಎಕ್ಸ್‌ಯುವಿ 300, ಟಾಟಾ ನೆಕ್ಸಾನ್, ಫೋರ್ಡ್ ಇಕೋ ಸ್ಪೋರ್ಟ್ ಕಾರುಗಳಿಗೆ ತೀವ್ರ ಪೈಪೋಟಿ ನೀಡಲಿರುವ ವೆನ್ಯೂ ಕಾರು ಸದ್ಯ ಮಾರುಕಟ್ಟೆಯಲ್ಲಿರುವ ಕ್ರೆಟಾ ಕಾರಿನಂತೆಯೇ ಹೊಸ ಸಂಚಲನಕ್ಕೆ ಕಾರಣವಾಗಿದೆ.

Most Read Articles

Kannada
English summary
Hyundai Venue Bagged 2000 Pre-Bookings In One Day. Read In Kannada
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X