ಎರಡು ಹೊಸ ಬಣ್ಣಗಳಲ್ಲಿ ಬಿಡುಗಡೆಯಾಗಲಿದೆ ವೆನ್ಯೂ

ಕೊರಿಯಾ ಮೂಲದ ವಾಹನ ತಯಾರಕ ಕಂಪನಿಯಾದ ಹ್ಯುಂಡೈ ಟಾಪ್ ಮಾದರಿಯ ವೆನ್ಯೂ ಕಾರುಗಳನ್ನು ಡ್ಯುಯಲ್ ಟೋನ್ ಬಣ್ಣದಲ್ಲಿ ಬಿಡುಗಡೆಗೊಳಿಸಲಿದೆ. ಕಾಂಪ್ಯಾಕ್ಟ್ ಎಸ್‍‍ಯು‍ವಿ ಬಿಡುಗಡೆಯಾದಾಗ ಎಸ್‍ಎಕ್ಸ್ ಮಾದರಿಯ ಡೀಸೆಲ್ ಮತ್ತು ಪೆಟ್ರೋಲ್ ಕಾರುಗಳನ್ನು ಡ್ಯುಯಲ್ ಟೋನ್ ಬಣ್ಣಗಳಲ್ಲಿ ನೀಡಲಾಗಿತ್ತು.

ಎರಡು ಹೊಸ ಬಣ್ಣಗಳಲ್ಲಿ ಬಿಡುಗಡೆಯಾಗಲಿದೆ ವೆನ್ಯೂ

ಆಟೋಕಾರ್ ಇಂಡಿಯಾದ ಪ್ರಕಾರ ಡ್ಯುಯಲ್ ಟೋನ್ ಬಣ್ಣವನ್ನು 1.0 ಲೀಟರ್ ಪೆಟ್ರೋಲ್ ಎಸ್ಎಕ್ಸ್ ಮತ್ತು 1.4 ಲೀಟರ್ ಡೀಸೆಲ್ ಎಸ್ಎಕ್ಸ್ ರೂಪಾಂತರಗಳೊಂದಿಗೆ ಮಾತ್ರ ನೀಡಲಿದ್ದು. ಪೆಟ್ರೋಲ್ ಮ್ಯಾನುವಲ್ ಎಸ್ಎಕ್ಸ್(ಒ) ಟ್ರಿಮ್, ಡೀಸೆಲ್ ಎಸ್‍ಎಕ್ಸ್(ಒ) ಮತ್ತು ಪೆಟ್ರೋಲ್ ಆಟೋಮ್ಯಾಟಿಕ್ ಎಸ್ಎಕ್ಸ್ ಪ್ಲಸ್ ಟ್ರಿಮ್‍‍ಗಳು ಡ್ಯುಯಲ್ ಟೋನ್ ಲಿಸ್ಟ್ ಸೇರ್ಪಡೆಗೊಳ್ಳುವ ಹೊಸ ಟ್ರಿಮ್‍‍ಗಳಾಗಿವೆ.

ಎರಡು ಹೊಸ ಬಣ್ಣಗಳಲ್ಲಿ ಬಿಡುಗಡೆಯಾಗಲಿದೆ ವೆನ್ಯೂ

ವೆನ್ಯೂ 1.2 ಲೀಟರ್ ಪೆಟ್ರೋಲ್ ಮಾದರಿಯು ಡ್ಯುಯಲ್-ಟೋನ್ ಬಣ್ಣಗಳ ಶೇಡ್ ಆಯ್ಕೆಗಳನ್ನು ಹೊಂದಿರುವುದಿಲ್ಲ. ಈ ಎಂಜಿನ್ ಲೋವರ್(ಕಡಿಮೆ) ಇ ಮತ್ತು ಎಸ್ ರೂಪಾಂತರಗಳಲ್ಲಿ ಮಾತ್ರ ಲಭ್ಯವಿದೆ. ಅಲ್ಲದೆ 1.0 ಲೀಟರ್ ಪೆಟ್ರೋಲ್ ಆಟೋಮ್ಯಾಟಿಕ್ ಡ್ಯುಯಲ್ ಟೋನ್ ಬಣ್ಣಗಳು ಇದುವರೆಗೂ ಅಳವಡಿಸಲಾಗಿಲ್ಲ.

ಎರಡು ಹೊಸ ಬಣ್ಣಗಳಲ್ಲಿ ಬಿಡುಗಡೆಯಾಗಲಿದೆ ವೆನ್ಯೂ

ಹ್ಯುಂಡೈ ಮೂರು ಎಂಜಿನ್ ಆಯ್ಕೆಗಳಲ್ಲಿ ಲಭ್ಯವಿದೆ. 1.2 ಲೀಟರ್ ನಾಲ್ಕು ಸಿಲಿಂಡರ್ ಪೆಟ್ರೋಲ್ ಎಂಜಿನ್ 82 ಬಿ‍ಎಚ್‍‍ಪಿ ಪವರ್ ಮತ್ತು 115 ಎನ್‍ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ. 1.0 ಲೀಟರ್ ಟರ್ಬೊಚಾರ್ಜ್ಡ್ ಮೂರು ಸಿಲಿಂಡರ್ ಪೆಟ್ರೋಲ್ ಎಂಜಿನ್ 118 ಬಿಎಚ್‍ಪಿ ಪವರ್ ಮತ್ತು 172 ಎನ್‍ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಇನ್ನೂ 1.4 ಲೀಟರ್ ನಾಲ್ಕು ಸಿಲಿಂಡರ್ ಡೀಸೆಲ್ ಎಂಜಿನ್ 89 ಬಿಎಚ್‍ಪಿ ಪವರ್ ಮತ್ತು 220 ಎನ್‍ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ.

ಎರಡು ಹೊಸ ಬಣ್ಣಗಳಲ್ಲಿ ಬಿಡುಗಡೆಯಾಗಲಿದೆ ವೆನ್ಯೂ

ವೆನ್ಯೂ ಕಾರು1.2 ಪೆಟ್ರೋಲ್ 5ಸ್ಪೀಡ್ ಮ್ಯಾನುವಲ್ ಗೇರ್‍‍ಬಾಕ್ಸ್ ಅಳವಡಿಸಿದ್ದರೆ, 1.0 ಟರ್ಬೊ ಪೆಟ್ರೋಲ್ ಮತ್ತು 1.4 ಡೀಸೆಲ್ ಯುನಿ‍ಟ್ 6 ಸ್ಪೀಡ್ ಮ್ಯಾನುವಲ್ ಅನ್ನು ಹೊಂದಿದೆ. ವೆನ್ಯೂ 1.0 ಲೀಟರ್ ಟರ್ಬೊ ಪೆಟ್ರೋಲ್ ಎಂಜಿನ್‍‍ನೊಂದಿಗೆ 7 ಸ್ಪೀಡ್ ಸಿವಿಟಿ ಆಟೋಮ್ಯಾಟಿಕ್ ಗೇರ್‍‍ಬಾಕ್ಸ್ ಅನ್ನು ಹೊಂದಲಿದೆ.

ಎರಡು ಹೊಸ ಬಣ್ಣಗಳಲ್ಲಿ ಬಿಡುಗಡೆಯಾಗಲಿದೆ ವೆನ್ಯೂ

ಬಿಎಸ್-6 ಮಾಲಿನ್ಯ ನಿಯಮ ಜಾರಿಯಾದ ಬಳಿಕ ವೆನ್ಯೂ 1.4 ಲೀಟರ್ ಡೀಸೆಲ್ ಎಂಜಿನ್ ಅನ್ನು 1.5 ಲೀಟರ್ ಡೀಸೆಲ್ ಯುನಿ‍ಟ್‍‍ನೊಂದಿಗೆ ಕಿಯಾ ಸೆಲ್ಟೋಸ್‍‍ನಲ್ಲಿ ಮರುರಚಿಸಲಾಗುವುದು ಎಂದು ಖಚಿತ ಪಡಿಸಿದೆ.

ಎರಡು ಹೊಸ ಬಣ್ಣಗಳಲ್ಲಿ ಬಿಡುಗಡೆಯಾಗಲಿದೆ ವೆನ್ಯೂ

ಕಾಂಪ್ಯಾಕ್ಟ್ ಎಸ್‍‍ಯು‍ವಿ ವಿಭಾಗದಲ್ಲಿ ಟಾಟಾ ನೆಕ್ಸಾನ್, ಮಹೀಂದ್ರಾ ಎಕ್ಸ್‌ಯುವಿ 300, ಫೋರ್ಡ್ ಇಕೋಸ್ಪೋರ್ಟ್ ಮತ್ತು ಮಾರುತಿ ವಿಭಾಗದ ಬೆಸ್ಟ್ ಸೆಲ್ಲರ್ ಸುಜುಕಿ ವಿಟಾರಾ ಬ್ರಿಝಾ ಕಾರುಗಳಿಗೆ ಹ್ಯುಂಡೈ ವೆನ್ಯೂ ಪೈಪೋಟಿ ನೀಡಲಿದೆ. ಟಾಪ್ ಟ್ರಿಮ್‌ಗಳಲ್ಲಿ ನೀಡಲಾಗುವ ಡ್ಯುಯಲ್-ಟೋನ್ ಬಣ್ಣಗಳ ಆಯ್ಕೆಗಳನ್ನು ಶೀಘ್ರದಲ್ಲೇ ಬಿಡುಗಡೆ ಮಾಡಲಾಗುವುದು ಎಂದು ನಾವು ನಿರೀಕ್ಷಿಸುತ್ತೇವೆ.

MOST READ: ಬೈಕ್ ಚಲಾಯಿಸಿದ್ದು ಮಗ, ದಂಡ ಬಿದ್ದಿದ್ದು ಅಪ್ಪನಿಗೆ..!

ಎರಡು ಹೊಸ ಬಣ್ಣಗಳಲ್ಲಿ ಬಿಡುಗಡೆಯಾಗಲಿದೆ ವೆನ್ಯೂ

ಕಳೆದ ಸೆಪ್ಟೆಂಬರ್ ತಿಂಗಳಲ್ಲಿ ಹ್ಯುಂಡೈ ವೆನ್ಯೂ ಅತಿ ಹೆಚ್ಚು ಮಾರಾಟವಾದ ಎಸ್‍‍ಯು‍ವಿ ವಿಭಾಗದಲ್ಲಿ ಹ್ಯುಂಡೈ ವೆನ್ಯೂ ಎರಡನೇ ಸ್ಥಾನವನ್ನು ಪಡೆದುಕೊಂಡಿತ್ತು.

MOST READ: ಹಳೆ ವಾಹನವನ್ನು ಗುಜರಿಗೆ ಹಾಕುವ ಮಾಲೀಕರಿಗೆ ಆಫರ್

ಎರಡು ಹೊಸ ಬಣ್ಣಗಳಲ್ಲಿ ಬಿಡುಗಡೆಯಾಗಲಿದೆ ವೆನ್ಯೂ

ಹ್ಯುಂಡೈ ವೆನ್ಯೂ ಟಾಟಾ ನೆಕ್ಸಾನ್, ಮಹೀಂದ್ರಾ ಎಕ್ಸ್‌ಯುವಿ 300 ಮತ್ತು ಮಾರುತಿ ವಿಟಾರಾ ಬ್ರೆಝಾ ಕಾರುಗಳಿಗೆ ಪೈಪೋಟಿಯನ್ನು ನೀಡಲಿ, ಈ ಕಾರುಗಳೆಲ್ಲಾ ಡ್ಯುಯಲ್ ಟೋನ್ ಬಣ್ಣಗಳ ಆಯ್ಕೆಯನ್ನು ಹೊಂದಿದೆ. ಇದರಿಂದ ಕಾಂಪ್ಯಾಕ್ಟ್ ಎಸ್‍‍ಯು‍ವಿ ವಿಭಾಗದಲ್ಲಿ ಪ್ರಬಲ ಪೈಪೋಟಿಯಿಂದ ಕೂಡಿರಲಿದ್ದು, ಡ್ಯುಯಲ್ ಟೋನ್ ಬಣ್ಣಗಳ ಆಯ್ಕೆಯನ್ನು ನೀಡುವ ಮೂಲಕ ಮತ್ತಷ್ಟು ಗ್ರಾಹಕರನ್ನು ಸೆಳೆಯುವ ತಂತ್ರವನ್ನು ಹೊಂದಿದೆ.

Most Read Articles

Kannada
English summary
Hyundai Venue Will Be Introduced With Dual-Tone Paint Scheme Soon: We Have All The Details - Read in kannada
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X