ಮಾರಾಟದಲ್ಲಿ ಕ್ರೆಟಾ ಎಸ್‍‍ಯುವಿಯನ್ನು ಹಿಂದಿಕ್ಕಿದ ವೆನ್ಯೂ

ಹ್ಯುಂಡೈ ಕಂಪನಿಯು ತನ್ನ ಮೊದಲ ಕಾಂಪ್ಯಾಕ್ಟ್ ಎಸ್‌ಯುವಿ ವೆನ್ಯೂವನ್ನು ಇತ್ತೀಚೆಗೆ ದೇಶಿಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಿದೆ. ಹ್ಯುಂಡೈ ವೆನ್ಯೂ ಎಸ್‍‍ಯುವಿಯ ಬೆಲೆಯು ದೆಹಲಿಯ ಎಕ್ಸ್ ಶೋ ರೂಂ ದರದಂತೆ ರೂ.6.50 ಲಕ್ಷಗಳಿಂದ ಪ್ರಾರಂಭವಾಗುತ್ತದೆ. ದೇಶಿಯ ಮಾರುಕಟ್ಟೆಯಲ್ಲಿ ಬಿಡುಗಡೆಯಾದಾಗಿನಿಂದ, ವೆನ್ಯೂ ಎಸ್‍‍ಯುವಿ ಸಾಕಷ್ಟು ಜನಪ್ರಿಯತೆಯನ್ನು ಗಳಿಸಿ, ಮಾರಾಟದಲ್ಲಿ ತನ್ನ ಪ್ರತಿಸ್ಪರ್ಧಿಗಳನ್ನು ಹಿಂದಿಕ್ಕಿದೆ.

ಮಾರಾಟದಲ್ಲಿ ಕ್ರೆಟಾ ಎಸ್‍‍ಯುವಿಯನ್ನು ಹಿಂದಿಕ್ಕಿದ ವೆನ್ಯೂ

ಮೊದಲ ತಿಂಗಳಿನ ಮಾರಾಟದ ನಂತರ, 2019ರ ಜೂನ್ ತಿಂಗಳಲ್ಲಿ ಹ್ಯುಂಡೈ ವೆನ್ಯೂವಿನ 8,763 ಯೂನಿಟ್‍‍ಗಳನ್ನು ಮಾರಾಟ ಮಾಡಲಾಗಿದೆ. ಬಿಡುಗಡೆಯಾದ ಮೊದಲ ತಿಂಗಳಿನಲ್ಲಿ ಹ್ಯುಂಡೈ ಕ್ರೆಟಾಗಿಂತ ಸುಮಾರು 400 ಯೂನಿಟ್‍‍ಗಳನ್ನು ಹೆಚ್ಚು ಮಾರಾಟ ಮಾಡಲಾಗಿದೆ ಎಂದು ಹೇಳಲಾಗುತ್ತಿದೆ. ಮೊದಲ ತಿಂಗಳಿನಲ್ಲಿ ಹ್ಯುಂಡೈ ಕ್ರೆಟಾದ 7,334 ಯೂನಿಟ್‍‍ಗಳನ್ನು ಮಾರಾಟ ಮಾಡಲಾಗಿತ್ತು. ಹ್ಯುಂಡೈ ಕ್ರೆಟಾ ದೇಶಿಯ ಮಾರುಕಟ್ಟೆಯಲ್ಲಿ ಕೊರಿಯ ಮೂಲದ ಕಂಪನಿಯು ಬಿಡುಗಡೆಗೊಳಿಸಿರುವ ಅತ್ಯಂತ ಜನಪ್ರಿಯ ಮಾದರಿಯಾಗಿದ್ದು, ಕಂಪನಿಗೆ ಸ್ಥಿರವಾದ ಮಾರುಕಟ್ಟೆಯನ್ನು ಒದಗಿಸಿದೆ.

ಮಾರಾಟದಲ್ಲಿ ಕ್ರೆಟಾ ಎಸ್‍‍ಯುವಿಯನ್ನು ಹಿಂದಿಕ್ಕಿದ ವೆನ್ಯೂ

ಐದು ಸೀಟುಗಳ ಎಸ್‌ಯುವಿ ಸೆಗ್‍‍ಮೆಂಟಿನಲ್ಲಿ ಕ್ರೆಟಾ ಹೆಚ್ಚು ಮಾರಾಟವಾಗುತ್ತಿರುವ ಕಾರ್ ಆಗಿದ್ದು, ಮಹೀಂದ್ರಾ ಎಕ್ಸ್‌ಯುವಿ 500, ಟಾಟಾ ಹ್ಯಾರಿಯರ್, ಎಂಜಿ ಹೆಕ್ಟರ್ ಹಾಗೂ ನಿಸ್ಸಾನ್ ಕಿಕ್ಸ್‌ ಕಾರುಗಳಿಂದ ಪೈಪೋಟಿಯನ್ನು ಎದುರಿಸುತ್ತಿದೆ. ಎಲೈಟ್ ಐ20 ಪ್ರೀಮಿಯಂ ಹ್ಯಾಚ್‌ಬ್ಯಾಕ್ ನಂತರ ಹ್ಯುಂಡೈ ವೆನ್ಯೂ ದೇಶಿಯ ಮಾರುಕಟ್ಟೆಯಲ್ಲಿ ಕಂಪನಿಯಿಂದ ಹೆಚ್ಚು ಮಾರಾಟವಾಗುತ್ತಿರುವ ಎರಡನೇ ವಾಹನವಾಗಿದೆ.

ಮಾರಾಟದಲ್ಲಿ ಕ್ರೆಟಾ ಎಸ್‍‍ಯುವಿಯನ್ನು ಹಿಂದಿಕ್ಕಿದ ವೆನ್ಯೂ

ಹ್ಯುಂಡೈ ವೆನ್ಯೂ ಎಸ್‍‍ಯು‍‍ವಿಯಲ್ಲಿ ಹೊಸ ಫೀಚರ್ ಹಾಗೂ ಬಿಡಿಭಾಗಗಳನ್ನು ಅಳವಡಿಸಲಾಗಿದ್ದು, ಕಂಪನಿಯ ಹೊಸ ಡಿಸೈನ್ ಲ್ಯಾಂಗ್ವೇಜ್ ಅಳವಡಿಸಲಾಗಿದೆ. ವೆನ್ಯೂ ಎಸ್‍‍ಯುವಿಯಲ್ಲಿ ಈ ಸೆಗ್‍‍ಮೆಂಟಿನಲ್ಲಿಯೇ ಮೊದಲ ಬಾರಿಗೆ ಎನ್ನಬಹುದಾದ ವೆಂಟಿಲೇಟೆಡ್ ಸೀಟುಗಳು, ಹಲವು ಏರ್‌ಬ್ಯಾಗ್‌ಗಳು, ಆಟೋಮ್ಯಾಟಿಕ್ ಕೈಮೇಟ್ ಕಂಟ್ರೋಲ್, ಹ್ಯುಂಡೈನ ಬ್ಲೂ ಲಿಂಕ್ ಕನೆಕ್ಟೆಡ್ ಟೆಕ್ನಾಲಜಿ, ಎಲೆಕ್ಟ್ರಿಕ್ ಸನ್‌ರೂಫ್ ಹಾಗೂ ಇತರ ಹಲವಾರು ಫೀಚರ್‍‍ಗಳನ್ನು ಅಳವಡಿಸಲಾಗಿದೆ.

ಮಾರಾಟದಲ್ಲಿ ಕ್ರೆಟಾ ಎಸ್‍‍ಯುವಿಯನ್ನು ಹಿಂದಿಕ್ಕಿದ ವೆನ್ಯೂ

ಹ್ಯುಂಡೈ ವೆನ್ಯೂವನ್ನು ಎರಡು ಪೆಟ್ರೋಲ್ ಹಾಗೂ ಒಂದು ಡೀಸೆಲ್ ಸೇರಿದಂತೆ ಮೂರು ಎಂಜಿನ್ ಆಯ್ಕೆಗಳೊಂದಿಗೆ ಮಾರಾಟ ಮಾಡಲಾಗುತ್ತಿದೆ. ಇದರಲ್ಲಿ 1.2-ಲೀಟರ್ ಪೆಟ್ರೋಲ್ ಎಂಜಿನ್ 83ಬಿ‍‍ಹೆಚ್‍‍ಪಿ ಹಾಗೂ 115ಎನ್‍ಎಂ ಟಾರ್ಕ್ ಉತ್ಪಾದಿಸುತ್ತದೆ. ಈ ಎಂಜಿನ್‍‍ನಲ್ಲಿ 5 ಸ್ಪೀಡ್ ಮ್ಯಾನುವಲ್ ಗೇರ್‌ಬಾಕ್ಸ್‌ ಅಳವಡಿಸಲಾಗಿದೆ. ಕ್ರೆಟಾ ಎಸ್‍‍ಯು‍‍‍‍ವಿದಿಂದ ಪಡೆಯಲಾಗಿರುವ 1.4-ಲೀಟರ್ ಡೀಸೆಲ್ ಎಂಜಿನ್ 89ಬಿಹೆ‍‍ಚ್‍‍ಪಿ ಹಾಗೂ 220ಎನ್‍ಎಂ ಟಾರ್ಕ್ ಉತ್ಪಾದಿಸುತ್ತದೆ.

ಮಾರಾಟದಲ್ಲಿ ಕ್ರೆಟಾ ಎಸ್‍‍ಯುವಿಯನ್ನು ಹಿಂದಿಕ್ಕಿದ ವೆನ್ಯೂ

ಹೋಂಡಾ ಸಿಟಿ ಮತ್ತು ಮಾರುತಿ ಸುಜುಕಿ ಸಿಯಾಜ್‌ಗೆ ಟಕ್ಕರ್ ನೀಡುತ್ತಿರುವ ಟೊಯೊಟಾ ಯಾರಿಸ್ ಖರೀದಿಗೆ ಈಗಲೇ ಟೆಸ್ಟ್ ಡ್ರೈವ್ ಮಾಡಿ..!

ಈ ಎಂಜಿನ್‍‍ನಲ್ಲಿ 6 ಸ್ಪೀಡಿನ ಮ್ಯಾನುವಲ್ ಗೇರ್‌ಬಾಕ್ಸ್‌ ಅಳವಡಿಸಲಾಗಿದೆ. ಹ್ಯುಂಡೈ ವೆನ್ಯೂ ಎಸ್‍‍ಯು‍‍ವಿಯನ್ನು ಹೊಸ 1.0-ಲೀಟರ್ ಟರ್ಬೊ-ಪೆಟ್ರೋಲ್ ಎಂಜಿನ್‌‍‍ನಲ್ಲಿಯೂ ಸಹ ಮಾರಾಟ ಮಾಡಲಾಗುತ್ತದೆ. ಈ ಎಂಜಿನ್ 125 ಬಿಹೆಚ್‌ಪಿ ಹಾಗೂ 172 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಈ ಎಂಜಿನ್‍‍ನಲ್ಲಿ 6 ಸ್ಪೀಡ್ ಮ್ಯಾನುವಲ್ ಗೇರ್‌ಬಾಕ್ಸ್‌ ಅಥವಾ 7 ಸ್ಪೀಡಿನ ಡಿಸಿಟಿ ಆಟೋಮ್ಯಾಟಿಕ್ ಟ್ರಾನ್ಸ್ ಮಿಷನ್ ಅಳವಡಿಸಲಾಗಿದೆ.

ಮಾರಾಟದಲ್ಲಿ ಕ್ರೆಟಾ ಎಸ್‍‍ಯುವಿಯನ್ನು ಹಿಂದಿಕ್ಕಿದ ವೆನ್ಯೂ

ಡ್ರೈವ್‍‍ಸ್ಪಾರ್ಕ್ ಅಭಿಪ್ರಾಯ

ಹ್ಯುಂಡೈ ವೆನ್ಯೂ ದೇಶಿಯ ಮಾರುಕಟ್ಟೆಯಲ್ಲಿ ವೇಗವಾಗಿ ಜನಪ್ರಿಯತೆಯನ್ನು ಗಳಿಸುತ್ತಿದೆ. ಈಗಾಗಲೇ ಮಾರಾಟದ ವಿಷಯದಲ್ಲಿ ಕ್ರೆಟಾ ಎಸ್‍‍ಯು‍‍ವಿಯನ್ನು ಹಿಂದಿಕ್ಕಿದೆ. ಕಾಂಪ್ಯಾಕ್ಟ್ ಎಸ್‌ಯುವಿ ಸೆಗ್‍‍ಮೆಂಟಿನಲ್ಲಿ ವೆನ್ಯೂ ತನ್ನ ಪ್ರತಿಸ್ಪರ್ಧಿಗಳಾದ ಮಹೀಂದ್ರಾ ಎಕ್ಸ್‌ಯುವಿ 300, ಫೋರ್ಡ್ ಇಕೋಸ್ಪೋರ್ಟ್ ಹಾಗೂ ಟಾಟಾ ನೆಕ್ಸಾನ್ ವಾಹನಗಳನ್ನು ಹಿಂದಿಕ್ಕಿದೆ. ಈ ಸೆಗ್‍‍ಮೆಂಟಿನ ಮಾರಾಟದಲ್ಲಿ ಮಾರುತಿಯ ವಿಟಾರಾ ಬ್ರಿಝಾ ಮೊದಲ ಸ್ಥಾನದಲ್ಲಿದೆ.

Most Read Articles

Kannada
English summary
Hyundai Venue Overtakes Creta In Sales For June 2019 — Enters Top-10 Best-Selling Car List - Read in kannada
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X