ಸೆಲ್ಟೊಸ್ ಪ್ರೀಮಿಯಂ ಆಕ್ಸೆಸರಿಸ್ ಬಿಡುಗಡೆ ಮಾಡಿದ ಕಿಯಾ ಮೋಟಾರ್ಸ್

ಕಿಯಾ ಮೋಟಾರ್ಸ್ ಕಳೆದ ತಿಂಗಳು 22ರಂದು ತನ್ನ ಬಹುನೀರಿಕ್ಷಿತ ಸೆಲ್ಟೊಸ್ ಕಾರುನ್ನು ಬಿಡುಗಡೆ ಮಾಡಿದ್ದು, ಕೇವಲ 9 ದಿನಗಳಲ್ಲಿ ಬರೋಬ್ಬರಿ 6 ಸಾವಿರ ಕಾರು ಮಾರಾಟವಾಗುವ ಮೂಲಕ ಹೊಸ ದಾಖಲೆ ನಿರ್ಮಿಸಿದೆ. ಇದೀಗ ಕಿಯಾ ಸಂಸ್ಥೆಯು ಸೆಲ್ಟೊಸ್ ಕಾರಿಗೆ ಮತ್ತಷ್ಟು ಪ್ರೀಮಿಯಂ ಲುಕ್ ನೀಡಲು ಹೆಚ್ಚುವರಿ ಆಕ್ಸೆಸರಿಸ್‌ಗಳನ್ನು ಬಿಡುಗಡೆ ಮಾಡಿದ್ದು, ಆಸಕ್ತ ಗ್ರಾಹಕರು ಖರೀದಿ ಮಾಡಬಹುದಾಗಿದೆ.

ಸೆಲ್ಟೊಸ್ ಪ್ರೀಮಿಯಂ ಆಕ್ಸೆಸರಿಸ್ ಬಿಡುಗಡೆ ಮಾಡಿದ ಕಿಯಾ ಮೋಟಾರ್ಸ್

ಸೆಲ್ಟೊಸ್ ಕಾರು ಕಂಪ್ಯಾಕ್ಟ್ ಎಸ್‌ಯುವಿ ಮಾದರಿಯಲ್ಲೇ ವಿನೂತನ ವಿನ್ಯಾಸದೊಂದಿಗೆ ಖರೀದಿಗೆ ಲಭ್ಯವಿದ್ದು, ಸ್ಪೋರ್ಟಿ ಲುಕ್‌ ಮತ್ತು ಬಲಿಷ್ಠ ಬಾಡಿ ಕಿಟ್ ಹೊಂದಿರುವ ಸೆಲ್ಟೊಸ್ ಕಾರು ಒಟ್ಟು ಎರಡು ಮಾದರಿಗಳಲ್ಲಿ ಖರೀದಿಗೆ ಲಭ್ಯವಿವೆ. ಇದೀಗ ಬಿಡುಗಡೆ ಮಾಡಲಾಗಿರುವ ಆಕ್ಸೆಸರಿಸ್‌ಗಳು ಸೆಲ್ಟೊಸ್ ಕಾರಿಗೆ ಮತ್ತಷ್ಟು ಬಲಿಷ್ಠತೆ ಒದಗಿಸಲಿದ್ದು, ಆಸಕ್ತ ಗ್ರಾಹಕರು ಹೆಚ್ಚುವರಿ ದರ ಪಾವತಿಸಿ ಬಿಡಿಭಾಗಗಳನ್ನು ಖರೀದಿಸಬಹುದಾಗಿದೆ.

ಸೆಲ್ಟೊಸ್ ಪ್ರೀಮಿಯಂ ಆಕ್ಸೆಸರಿಸ್ ಬಿಡುಗಡೆ ಮಾಡಿದ ಕಿಯಾ ಮೋಟಾರ್ಸ್

ಸೆಲ್ಟೊಸ್ ಕಾರುಗಳು ತಾಂತ್ರಿಕ ಸೌಲಭ್ಯಗಳಿಗೆ ಅನುಗುಣವಾಗಿ ದೆಹಲಿ ಎಕ್ಸ್‌ಶೋರೂಂ ಪ್ರಕಾರ ರೂ. 9.69 ಲಕ್ಷಕ್ಕೆ ಮತ್ತು ಟಾಪ್ ಎಂಡ್ ಮಾದರಿಯು 15.99 ಲಕ್ಷಕ್ಕೆ ಖರೀದಿಗೆ ಲಭ್ಯವಾಗಿದ್ದು ಸೆಲ್ಟೊಸ್ ಕಾರು ಡೀಸೆಲ್ ಎಂಜಿನ್‌ನಲ್ಲಿ ಒಟ್ಟು 5 ವೆರಿಯೆಂಟ್‌ಗಳನ್ನು ಮತ್ತು ಪೆಟ್ರೋಲ್ ಎಂಜಿನ್‌ನಲ್ಲಿ 8 ವೆರಿಯೆಂಟ್‌ಗಳನ್ನು ಹೊಂದಿದೆ.

ಸೆಲ್ಟೊಸ್ ಪ್ರೀಮಿಯಂ ಆಕ್ಸೆಸರಿಸ್ ಬಿಡುಗಡೆ ಮಾಡಿದ ಕಿಯಾ ಮೋಟಾರ್ಸ್

ಕಿಯಾ ಸಂಸ್ಥೆಯು ಸ್ಟ್ಯಾಂಡರ್ಡ್ ಆಗಿ ನೀಡುವ ಬಿಡಿಭಾಗಗಳ ಹೊರತಾಗಿ ಬಂಪರ್ ಕಾರ್ನರ್ ಪ್ರೋಟೆಕ್ಟರ್(ರೂ. 730), ಬಾಡಿ ಸೈಡ್ ಮೊಲ್ಡಿಂಗ್(ರೂ. 2,471), ವಿಂಡೋ ಸೈಡ್ ಬಿಡಿಂಗ್(ರೂ.1,301), ಹೆಡ್‌ಲೈಟ್ ಕ್ರೋಮ್(ರೂ. 1,408), ಕ್ರೋಮ್ ಸ್ಟ್ರಿಪ್(ರೂ. 2,467), ರಿಯರ್ ರಿಪ್ಲೆಕ್ಟರ್ ಗಾರ್ನಿಶ್(ರೂ. 806), ಟೈಲ್ ಗೆಟ್ ಕ್ರೋಮ್(ರೂ.1,676), ವೀಲ್ಹ್ ರಿಂಗ್(ರೂ.1,889), ಸೈಡ್ ಸ್ಟೆಪ್(ರೂ.15,291), ಮಡ್ ಫ್ಲ್ಯಾಗ್(ರೂ.634), ಡೋರ್ ಹ್ಯಾಂಡಲ್ ಕ್ರೋಮ್(ರೂ. 1,201) ಖರೀದಿಸಬಹುದು.

ಸೆಲ್ಟೊಸ್ ಪ್ರೀಮಿಯಂ ಆಕ್ಸೆಸರಿಸ್ ಬಿಡುಗಡೆ ಮಾಡಿದ ಕಿಯಾ ಮೋಟಾರ್ಸ್

ಹಾಗೆಯೇ ಕಾರಿನ ಒಳಾಂಗಣ ಲುಕ್ ಹೆಚ್ಚಿಸಲು ಸಾಫ್ಟ್ ಟಾಯ್(ರೂ.552), ಬೂಟ್ ಆರ್ಗನೈಷರ್(ರೂ.1,652), ಬೂಟ್ ಮ್ಯಾಟ್(ರೂ.1,003), ಟ್ಯೂಶೂ ಬಾಕ್ಸ್(590), ಬೂಟ್ ಕ್ರೋಮ್ ಆಕ್ಸೆಂಟ್(ರೂ. 868), ಕೋಟ್ ಹ್ಯಾಂಗರ್(2,391), ಪ್ರಿಮಿಯಂ ಕುಷನ್(ರೂ.1,357), ಕಾರ್ ಡಸ್ಟಬಿನ್(493), ರಿಯರ್ ಎಂಟರ್‌ಟೈನ್‌ಮೆಂಟ್ ಸಿಸ್ಟಂ(36,045), ಬ್ಯಾಕ್ ಸೀಟ್ ಆರ್ಗೈಸರ್(ರೂ.848) ಮತ್ತು ಪ್ರಿಮಿಯಂ ನೆಕ್ ರೆಸ್ಟ್(ರೂ.849) ಖರೀದಿಗೆ ಲಭ್ಯವಿವೆ.

ಸೆಲ್ಟೊಸ್ ಪ್ರೀಮಿಯಂ ಆಕ್ಸೆಸರಿಸ್ ಬಿಡುಗಡೆ ಮಾಡಿದ ಕಿಯಾ ಮೋಟಾರ್ಸ್

ಇದರ ಹೊರತಾಗಿ ಸೆಲ್ಟೊಸ್ ಕಾರಿನಲ್ಲಿ ಟೈಗರ್ ನೋಸ್ ಗ್ರಿಲ್, ಕ್ರೌನ್ ಜವೆಲ್ ಎಲ್ಇಡಿ ಹೆಡ್‌ಲ್ಯಾಂಪ್, 3ಡಿ ಮಲ್ಟಿ ಲೆಯರ್ ಸೈಡ್ ಟರ್ನ್ ಇಂಡಿಕೇಟರ್, ಆಕರ್ಷಕ ಡಿಸೈನ್ ಪ್ರೇರಿತ ಏರ್‌ಡ್ಯಾಮ್ ಜೊತೆ ಬಂಪರ್ ಮತ್ತು ಡೈಮಂಡ್ ಶೇಪ್ ಫ್ರಂಟ್ ಗ್ರಿಲ್ ಜೋಡಣೆ ಹೊಂದಿದ್ದು, ಹೈ ಎಂಡ್ ವೆರಿಯೆಂಟ್‌ಗಳಲ್ಲಿ ವಾಯ್ಸ್ ಕಮಾಂಡ್, ರಿಮೋಟ್ ಎಂಜಿನ್ ಸ್ಟಾರ್ಟ್/ಸ್ಟಾಪ್, ಆಟೋ ಎಸಿ ಸೌಲಭ್ಯ, 6 ಹಂತಗಳಲ್ಲಿ ಹೊಂದಾಣಿಕೆ ಮಾಡಬಹುದಾದ ಚಾಲಕನ ಸೀಟು, ರಿಯರ್ ಎಸಿ ವೆಂಟ್ಸ್ ಮತ್ತು 37 ಫೀಚರ್ಸ್ ಒಳಗೊಂಡಿರುವ ಬ್ಲ್ಯೂ ಲಿಂಕ್ ಸೂಟ್ಸ್‌ ಹೊಂದಿರುವ ಯುವಿಒ ಕನೆಕ್ಟ್ ಟೆಕ್ನಾಲಜಿ ಸೌಲಭ್ಯದಿಂದಾಗಿ ಹೊಸ ಸೆಲ್ಟೊಸ್ ಕಾರಿಗೆ ಗರಿಷ್ಠ ಭದ್ರತೆ ದೊರೆಯಲಿದೆ.

ಸೆಲ್ಟೊಸ್ ಪ್ರೀಮಿಯಂ ಆಕ್ಸೆಸರಿಸ್ ಬಿಡುಗಡೆ ಮಾಡಿದ ಕಿಯಾ ಮೋಟಾರ್ಸ್

ಸುರಕ್ಷಾ ಸೌಲಭ್ಯಗಳು

ಅತ್ಯುತ್ತಮ ಸ್ಟೀಲ್ ಬಳಕೆಯೊಂದಿಗೆ ಸೆಲ್ಟೊಸ್ ಕಾರಿನಲ್ಲಿ ಪ್ರೀಮಿಯಂ ಫೀಚರ್ಸ್‌‌ನೊಂದಿಗೆ ಸುರಕ್ಷಾ ಸೌಲಭ್ಯಗಳಿಗೂ ಹೆಚ್ಚಿನ ಒತ್ತು ನೀಡಲಾಗಿದ್ದು, 6 ಏರ್‌ಬ್ಯಾಗ್‌ಗಳು, ಎಬಿಎಸ್ ಜೊತೆ ಇಎಸ್‌ಸಿ, ಫ್ರಂಟ್ ಆ್ಯಂಡ್ ರಿಯರ್ ಪಾರ್ಕಿಂಗ್ ಸೆನ್ಸಾರ್, ಹಿಲ್ ಅಸಿಸ್ಟ್ ಕಂಟ್ರೋಲ್, ಸೆಫ್ಟಿ ಅಲರ್ಟ್ ಸಿಸ್ಟಂ, ಟ್ರಾಕ್ಷನ್ ಕಂಟ್ರೋಲ್ ಸಿಸ್ಟಂ, ಆಲ್ ವೀಲ್ಹ್ ಡಿಸ್ಕ್ ಬ್ರೇಕ್ ಸೇರಿದಂತೆ ಹಲವು ಆಧುನಿಕ ತಂತ್ರಜ್ಞಾನ ಪ್ರೇರಣೆಯ ಸೌಲಭ್ಯಗಳನ್ನು ಜೋಡಿಸಲಾಗಿದೆ.

MOST READ: ಕುಸಿದಿರುವ ಹೊಸ ವಾಹನಗಳ ಮಾರಾಟ ಹೆಚ್ಚಳಕ್ಕೆ ಕೇಂದ್ರದಿಂದ ಸದ್ಯದಲ್ಲೇ ಮಹತ್ವದ ಘೋಷಣೆ..!

ಸೆಲ್ಟೊಸ್ ಪ್ರೀಮಿಯಂ ಆಕ್ಸೆಸರಿಸ್ ಬಿಡುಗಡೆ ಮಾಡಿದ ಕಿಯಾ ಮೋಟಾರ್ಸ್

ಇದರೊಂದಿಗೆ ಕಾರಿನ ಹಿಂಭಾಗದ ಡಿಸೈನ್ ಕೂಡಾ ಆಕರ್ಷಕವಾಗಿದ್ದು, ಐಷಾರಾಮಿ ಕಾರುಗಳ ಮಾದರಿಯಲ್ಲಿ ರನ್ನಿಂಗ್ ಟೈಲ್ ಲೈಟ್, ಡ್ಯುಯಲ್ ಎಕ್ಸಾಸ್ಟ್, ಸಿಲ್ವರ್ ಸ್ಕಿಡ್ ಪ್ಲೇಟ್, ಬ್ಲ್ಯಾಕ್ ಥೀಮ್ ಸ್ಪಾಯ್ಲರ್ ಸೇರಿದಂತೆ ಹಲವು ಹೊಸ ತಾಂತ್ರಿಕ ಸೌಲಭ್ಯಗಳನ್ನು ಪಡೆದುಕೊಂಡಿದ್ದು, ಕಾರಿನ ಲುಕ್ ಹೆಚ್ಚಿಸಲು ಅಲ್ಲಲ್ಲಿ ಬ್ರಿಡ್ಜ್ ಕ್ರೋಮ್ ಬಳಕೆ ಮಾಡಲಾಗಿದೆ. ರೂಫ್ ರೈಲ್ಸ್, ಆಟೋಮ್ಯಾಟಿಕ್ ಸನ್‌ರೂಫ್, ಶಾರ್ಕ್ ಫಿನ್ ಅಂಟೆನಾ, ಸ್ಕೀಡ್ ಪ್ಲೇಟ್ ರಿಪ್ಲೆಕ್ಟರ್ ಸೌಲಭ್ಯ ಹೊಸ ಕಾರಿನ ಖದರ್ ಹೆಚ್ಚಿಸಿದೆ.

MOST READ: ಇನ್ಮುಂದೆ ಪೆಟ್ರೋಲ್ ಎಂಜಿನ್‍‍ನಲ್ಲಿ ಮಾತ್ರ ಮಾರಾಟವಾಗುವ ಕಾರುಗಳಿವು

ಸೆಲ್ಟೊಸ್ ಪ್ರೀಮಿಯಂ ಆಕ್ಸೆಸರಿಸ್ ಬಿಡುಗಡೆ ಮಾಡಿದ ಕಿಯಾ ಮೋಟಾರ್ಸ್

ಎಂಜಿನ್ ಸಾಮರ್ಥ್ಯ

ಬಿಎಸ್-6 ಪ್ರೇರಿತ ನ್ಯಾಚುರಲಿ ಆಸ್ಪೆರೆಟೆಡ್ 1.5-ಲೀಟರ್ ಪೆಟ್ರೋಲ್, 1.5-ಲೀಟರ್ ಸಿಆರ್‌ಡಿಐ ಡೀಸೆಲ್ ಎಂಜಿನ್ ನೀಡಲಾಗಿದ್ದು, ಪರ್ಫಾಮೆನ್ಸ್ ಪ್ರಿಯರಿಗಾಗಿ 1.4-ಲೀಟರ್ ಟರ್ಬೋ ಪೆಟ್ರೋಲ್ ಎಂಜಿನ್ ನೀಡಲಾಗಿದೆ. ಇದರಲ್ಲಿ ಟೆಕ್ ಲೈನ್ ಪೆಟ್ರೋಲ್ ಮತ್ತು ಡೀಸೆಲ್ ಮಾದರಿಯು 115-ಬಿಎಚ್‌ಪಿಯೊಂದಿಗೆ 250-ಎನ್ಎಂ ಮತ್ತು 350-ಎನ್ಎಂ ಟಾರ್ಕ್ ಉತ್ಪಾದನೆ ಮಾಡಿದ್ದಲ್ಲಿ 1.4-ಲೀಟರ್ ಪೆಟ್ರೋಲ್ ಎಂಜಿನ್ ಮಾದರಿಯು 138-ಬಿಎಚ್‌ಪಿ ಮತ್ತು 242-ಎನ್ಎಂ ಟಾರ್ಕ್ ಉತ್ಪಾದಿಸುತ್ತದೆ.

MOST READ: ಹಳೆ ವಾಹನವನ್ನು ಗುಜರಿಗೆ ಹಾಕುವ ಮಾಲೀಕರಿಗೆ ಆಫರ್

ಸೆಲ್ಟೊಸ್ ಪ್ರೀಮಿಯಂ ಆಕ್ಸೆಸರಿಸ್ ಬಿಡುಗಡೆ ಮಾಡಿದ ಕಿಯಾ ಮೋಟಾರ್ಸ್

2020ರ ಏಪ್ರಿಲ್ 1ರಿಂದ ಜಾರಿಗೆ ಬರಲಿರುವ ಬಿಎಸ್-6 ನಿಯಮಾವಳಿಗೆ ಅನ್ವಯದಂತೆ ಕಿಯಾ ಸೆಲ್ಟೊಸ್ ಕಾರು ಸುಧಾರಿತ ಎಂಜಿನ್ ಮಾದರಿಯನ್ನು ಪಡೆದುಕೊಂಡಿದ್ದು, ಅತ್ಯುತ್ತಮ ಎಂಜಿನ್ ಕಾರ್ಯಕ್ಷಮತೆಯ ಜೊತೆಗೆ ಮಾಲಿನ್ಯ ಹೊರಸೂಸುವಿಕೆ ಪ್ರಮಾಣದಲ್ಲೂ ಸಾಕಷ್ಟು ಸುಧಾರಣೆ ಕಂಡಿದೆ. ಹೀಗಾಗಿ ಇದು ದೇಶದಲ್ಲೇ ಮೊದಲ ಬಾರಿಗೆ ಪೆಟ್ರೋಲ್ ಮತ್ತು ಡೀಸೆಲ್ ಆವೃತ್ತಿಗಳಲ್ಲಿ ಬಿಎಸ್-6 ನಿಯಮವನ್ನು ಡೆಡ್‌ಲೈನ್‌ಗೂ ಮುನ್ನವೇ ಪರಿಚಯಿಸಿದ ಮೊದಲ ಕಾರು ಉತ್ಪಾದನಾ ಸಂಸ್ಥೆ ಎಂಬ ಹೆಗ್ಗಳಿಕೆಗೂ ಪಾತ್ರವಾಗಿದೆ.

Most Read Articles

Kannada
English summary
Kia Seltos Accessories Launched: Gets Body Side Moulding, Boot Mats & More!
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X