Just In
- 18 hrs ago
ಎಲೆಕ್ಟ್ರಿಕ್ ಕಾರು ಮಾರಾಟಕ್ಕೆ ಭರ್ಜರಿ ಸಿದ್ದತೆ- 100 ಹೊಸ ಮಾರಾಟ ಮಳಿಗೆಗಳನ್ನು ತೆರೆಯಲಿದೆ ಟಾಟಾ
- 1 day ago
ನೆಚ್ಚಿನ ವಾಹನದ 50ನೇ ಹುಟ್ಟುಹಬ್ಬವನ್ನು ಆಚರಿಸಿದ ಅಪ್ಪ-ಮಗ
- 1 day ago
ಗ್ರಾಹಕರ ಕೈಸೇರಲು ಸಿದ್ದವಾದ ಬಿಎಸ್-6 ಎಂಜಿನ್ ಪ್ರೇರಿತ ಯಮಹಾ ಆರ್15 ವಿ3.0
- 1 day ago
ಆಟೋ ಮಾರುಕಟ್ಟೆ ಕುಸಿತದ ನಡುವೆಯೂ ಭರ್ಜರಿ ಮಾರಾಟವಾದ ಮಹೀಂದ್ರಾ ಸ್ಕಾರ್ಪಿಯೋ
Don't Miss!
- Sports
ಏಕದಿನ ಸರಣಿ; ಮೊದಲ ಪಂದ್ಯದಲ್ಲಿ ಭಾರತಕ್ಕೆ ಸೋಲುಣಿಸಿದ ವಿಂಡೀಸ್
- News
ಪೌರತ್ವ ಕಾಯ್ದೆ ಬಗ್ಗೆ ಮಾತಾಡಲ್ಲ, ಸಿದ್ದಾಂತವೇ ಬೇರೆ, ಸರ್ಕಾರವೇ ಬೇರೆ
- Finance
ಶಬರಿಮಲೆ ಅಯ್ಯಪ್ಪ ದೇವಳದಲ್ಲಿ 28 ದಿನದಲ್ಲಿ 104 ಕೋಟಿ ರು. ಸಂಗ್ರಹ
- Movies
ವಂಚನೆ ಆರೋಪದ ಬಗ್ಗೆ ಸ್ಪಷ್ಟನೆ ನೀಡಿದ 'ಲವ್ ಗುರು' ನಿರ್ದೇಶಕ
- Technology
ಆನ್ಲೈನ್ ಜಾಹೀರಾತುಗಳಿಂದ ಬೇಸರವಾಗಿದ್ದೀರಾ..? ಇಲ್ಲಿದೆ ಪರಿಹಾರ..!
- Lifestyle
ವಾರ ಭವಿಷ್ಯ- ಡಿಸೆಂಬರ್ 15ರಿಂದ ಡಿಸೆಂಬರ್ 21ರ ತನಕ
- Education
KSP: ಪೊಲೀಸ್ ಸಬ್ ಇನ್ಸ್ಪೆಕ್ಟರ್ ಹುದ್ದೆಗಳ ಇಟಿ- ಪಿಎಸ್ಟಿ ಪ್ರವೇಶ ಪತ್ರ ಬಿಡುಗಡೆ
- Travel
ಹಳ್ಳಿಗಾಡಿನ ಸೊಗಡನ್ನು ಅನುಭವಿಸಲು ಬೆಂಗಳೂರಿನ ಸುತ್ತಮುತ್ತ ಇರುವ ಈ ಸುಂದರ ಗ್ರಾಮಗಳಿಗೆ ಹೋಗಿ ಬನ್ನಿ
ಬಿಡುಗಡೆಯಾಯ್ತು ಬಿಎಸ್-6 ಮಹೀಂದ್ರಾ ಎಕ್ಸ್‌ಯುವಿ 300
ಮಹೀಂದ್ರಾ ಅಂಡ್ ಮಹೀಂದ್ರಾ ಲಿಮಿಟೆಡ್ ತನ್ನ ಮೊದಲ ಬಿಎಸ್-6 ಎಸ್‍ಯುವಿಯನ್ನು ಭಾರತದಲ್ಲಿ ಬಿಡುಗಡೆಗೊಳಿಸಿದೆ. ಮಹಿಂದ್ರಾ ಕಂಪನಿಯು ತನ್ನ ಮೊದಲ ಬಿಎಸ್-6 ಎಸ್‍ಯುವಿಯಾಗಿ ಎಕ್ಸ್‌ಯುವಿ 300 ಅನ್ನು ಬಿಡುಗಡೆಗೊಳಿಸಿದೆ.

ಕೇಂದ್ರ ಸರ್ಕಾರವು ಮಾಲಿನ್ಯವನ್ನು ನಿಯಂತ್ರಿಸಲು ಮುಂದಿನ ವರ್ಷದ ಏಪ್ರಿಲ್ ತಿಂಗಳಿನಿಂದ ಬಿಎಸ್-6 ಮಾಲಿನ್ಯ ನಿಯಮವನ್ನು ಜಾರಿಗೊಳಿಸುತ್ತಿದೆ. ಇದರಿಂದ ಮಹೀಂದ್ರಾ ಕಂಪನಿಯು ತನ್ನ ಸರಣಿಯಲ್ಲಿರುವ ಪ್ರಮುಖ ಎಸ್‍ಯುವಿಗಳನ್ನು ಬಿಎಸ್-6 ಮಾಲಿನ್ಯ ನಿಯಮಕ್ಕೆ ಅನುಸಾರವಾಗಿ ನವೀಕರಿಸುತ್ತಿದೆ.

ಇದರ ಭಾಗವಾಗಿ ಮಹೀಂದ್ರಾ ಕಂಪನಿಯು ತನ್ನ ಮೊದಲ ಬಿಎಸ್-6 ಎಸ್‍ಯುವಿಯಾಗಿ ಎಕ್ಸ್‌ಯುವಿ 300 ಅನ್ನು ಬಿಡುಗಡೆಗೊಳಿಸಿದೆ. ಈ ಎಸ್‍ಯುವಿಯು 1.2 ಲೀಟರ್ ಟರ್ಬೊಚಾರ್ಚ್ಡ್ ಪೆಟ್ರೋಲ್ ಎಂಜಿನ್ ಅನ್ನು ಹೊಂದಿದೆ.

ಮಹೀಂದ್ರಾ ಬಿಎಸ್-6 ಎಕ್ಸ್‌ಯುವಿ 300ಯನ್ನು ಸ್ವದೇಶದಲ್ಲಿ ಮೇಕ್ ಇನ್-ಇಂಡಿಯಾ ಯೋಜನೆಯಡಿಯಲ್ಲಿ ತಯಾರಿಸಲಾಗಿದೆ. ಬಿಎಸ್-6 ಗಡುವಿಗಿಂತ ಮೊದಲೇ ಮಹೀಂದ್ರಾ ಕಂಪನಿಯ ಮೊದಲ ಎಸ್‍ಯುವಿಯನ್ನು ಬಿಡುಗಡೆಗೊಳಿಸಲಾಗಿದೆ.

ಮಹೀಂದ್ರಾ ಎಕ್ಸ್ ಯುವಿ 300 ಬೆಲೆಯು ಭಾರತದ ಎಕ್ಸ್ ಶೋರೂಂ ಪ್ರಕಾರ ರೂ.8.30 ಲಕ್ಷಗಳಾಗಿದೆ. ಮಾರುಕಟ್ಟೆಯಲ್ಲಿ ಮಾರಾಟವಾಗುತ್ತಿರುವ ಎಕ್ಸ್‌ಯುವಿ 300 ಬೆಲೆಗಿಂತ ರೂ.20,000 ದುಬಾರಿಯಾಗಿದೆ.

ಎಕ್ಸ್‌ಯುವಿ 300 ಟಾಪ್ ರೇಂಜ್ ಎಸ್‍ಯುವಿಯ ಬೆಲೆ ಭಾರತದ ಎಕ್ಸ್ ಶೋರೂಂ ಪ್ರಕಾರ ರೂ.11.84 ಲಕ್ಷಗಳಾಗಿದೆ. ಪ್ರಸ್ತುತ ಮಾರುಕಟ್ಟೆಯಲ್ಲಿರುವ ಟಾಪ್ ರೇಂಜ್ ಎಸ್‍ಯುವಿಗೆ ಹೋಲಿಸಿದರೆ ರೂ.20,000 ಹೆಚ್ಚಾಗಿದೆ.

ಈ ಎಸ್‍ಯುವಿ ಸ್ಯಾಂಗ್‍ಯಾಂಗ್ ಟಿವೊಲಿಯಂತಯೇ ಇರುವ ಎಕ್ಸ್100 ಪ್ಲಾಟ್‍ಫಾರ್ಮ್ ಅನ್ನು ಆಧರಿಸಿದೆ. ಹೊಸ ಎಸ್‍ಯುವಿನಲ್ಲಿ ಜೈಲೊ ಮತ್ತು ಟಿಯುವಿ 300 ಎಸ್‍ಯುವಿಯ ರೀತಿಯಲ್ಲಿ ಸಬ್ 4 ಮೀಟರ್ ಸ್ಪೆಸ್ ಅನ್ನು ಹೊಂದಿದೆ.
MOST READ: ಬೈಕ್ ಚಲಾಯಿಸಿದ್ದು ಮಗ, ದಂಡ ಬಿದ್ದಿದ್ದು ಅಪ್ಪನಿಗೆ..!

2019ರ ಸೆಪ್ಟೆಂಬರ್‍ನಲ್ಲಿ ಮಹೀಂದ್ರಾ ತನ್ನ ವ್ಯಾಪ್ತಿಯನ್ನು ವಿಸ್ತರಿಸುವ ಭಾಗವಾಗಿ ಡಬ್ಲ್ಯು 6 ಡೀಸೆಲ್ ಎಎಂಟಿಯನ್ನು ಎಕ್ಸ್‌ಯುವಿ 300ರಲ್ಲಿ ಪರಿಚಯಿಸಿದೆ. ಈ ಎಸ್‍ಯುವಿಯಲ್ಲಿ 1.2 ಲೀಟರ್ ಮೂರು ಸಿಲಿಂಡರ್ ಟರ್ಬೋಚಾರ್ಜ್ಡ್ ಪೆಟ್ರೋಲ್ ಎಂಜಿನ್ ಅನ್ನು ಅಳವಡಿಸಲಾಗಿದೆ.
MOST READ: ಬೈಕ್ ಸವಾರನ ಪ್ರಾಣ ಉಳಿಸಿದ ಆಪಲ್ ವಾಚ್..!

ಈ ಎಂಜಿನ್ 110 ಬಿಹೆಚ್‍ಪಿ ಪವರ್ ಮತ್ತು 300 ಎನ್ಎಂ ಟಾರ್ಕ್ ಉತ್ಪಾದಿಸುತ್ತದೆ. ಈ ಎಂಜಿನ್‍ನೊಂದಿಗೆ 6 ಸ್ಪೀಡ್ ಮ್ಯಾನುವಲ್ ಮತ್ತು 6 ಸ್ಪೀಡ್ ಎಎಂಟಿ ಗೇರ್‍ಬಾಕ್ಸ್ ಅನ್ನು ಅಳವಡಿಸಲಾಗಿದೆ.
MOST READ: ವಾಹನ ಸವಾರರಿಗೆ ಸಿಹಿ ಸುದ್ದಿ ನೀಡಿದ ಸಚಿವ ನಿತಿನ್ ಗಡ್ಕರಿ ..!

ಪ್ರಸ್ತುತ ಮಾರುಕಟ್ಟೆಯಲ್ಲಿ ಮಾರಾಟವಾಗುತ್ತಿರುವ ಎಸ್‍ಯುವಿ 1.2 ಲೀಟರ್ ಟರ್ಬೋಚಾರ್ಜ್ಡ್ ಪೆಟ್ರೋಲ್ ಎಂಜಿನ್ ಅನ್ನು ಹೊಂದಿದೆ. ಈ ಎಂಜಿನ್ 5,000 ಆರ್‍ಪಿಎಂನಲ್ಲಿ 110 ಬಿಹೆಚ್‍ಪಿ ಪವರ್ ಮತ್ತು 2,000-3,500 ಆರ್‍ಪಿಎಂನಲ್ಲಿ 200 ಎನ್ಎಂ ಟಾರ್ಕ್ ಉತ್ಪಾದಿಸುತ್ತದೆ.

ಮಹೀಂದ್ರಾ ಕಂಪನಿಯ ಸರಣಿಯಲ್ಲಿ ಹೆಚ್ಚು ಮಾರಾಟವಾಗುತ್ತಿರುವ ಎಸ್‍ಯುವಿಯಲ್ಲಿ ಬೊಲೆರೊ ಮತ್ತು ಸ್ಕಾರ್ಪಿಯೋ ಜೊತೆಯಲ್ಲಿ ಎಕ್ಸ್‌ಯುವಿ 300 ಕೂಡ ಸೇರಿದೆ. ಎಕ್ಸ್‌ಯುವಿ 300 ದೇಶಿಯ ಮಾರುಕಟ್ಟೆಯಲ್ಲಿ ಮಾರುತಿ ಸುಜುಕಿ ವಿಟಾರಾ ಬ್ರಿಝಾ, ಹ್ಯುಂಡೈ ವೆನ್ಯೂ, ಟಾಟಾ ನೆಕ್ಸಾನ್ ಮತ್ತು ಹೋಂಡಾ ಡಬ್ಲ್ಯು ಆರ್-ವಿ ಕಾರುಗಳಿಗೆ ಪೈಪೋಟಿ ನೀಡಲಿದೆ.