ಹೊಸ ಎಂಜಿನ್‍ನೊಂದಿಗೆ ಬಿಡುಗಡೆಯಾದ ಮಾರುತಿ ಸುಜುಕಿ ಸಿಯಾಜ್

ಮಾರುತಿ ಸುಜುಕಿ ಸಂಸ್ಥೆಯು ತಮ್ಮ ಸಿಯಾಜ್ ಕಾರನ್ನು ಇದೀಗ ಹೊಸ ಅಪ್ಡೇಟ್‍ನೊಂದಿಗೆ ಬಿಡುಗಡೆ ಮಾಡಲಾಗಿದ್ದು, ಈ ಬಾರಿ ಸಂಸ್ಥೆಯು ಸಿಯಾಜ್ ಕಾರಿನಲ್ಲಿ ಹೊಸದಾಗಿ 1.5 ಲೀಟರ್‍‍ನ ಡೀಸೆಲ್ ಎಂಜಿನ್ ಅನ್ನು ನೀಡಲಾಗಿದೆ. ಹೊಸ ಎಂಜಿನ್‍ ಹೊತ್ತು ಬಿಡುಗಡೆಗೊಂಡ ಮಾರುತಿ ಸುಜುಕಿ ಸಿಯಾಜ್ ಕಾರುಗಳು ದೆಹಲಿಯ ಎಕ್ಸ್ ಶೋರುಂ ಪ್ರಕಾರ ರೂ. 9.97 ಲಕ್ಷದ ಪ್ರಾರಂಭಿಕ ಬೆಲೆಯನ್ನು ನಿಗದಿ ಮಾಡಲಾಗಿದೆ.

ಹೊಸ ಎಂಜಿನ್‍ನೊಂದಿಗೆ ಬಿಡುಗಡೆಯಾದ ಮಾರುತಿ ಸುಜುಕಿ ಸಿಯಾಜ್

ಹೊಸ 1.5 ಲೀಟರ್ ಡೀಸೆಲ್ ಎಂಜಿನ್ ಹೊಂದಿರುವ ಸಿಯಾಜ್ ಕಾರುಗಳು ಫಿಯಾಟ್‍ನಿಂದ ಪಡೆದ ಹಳೆಯ 1.3 ಲೀಟರ್ ಡಿಡಿಐಎಸ್200 ಡೀಸೆಲ್ ಎಂಜಿನ್ ಜೊತೆಗೆ ಮಾರಾಟವಾಗಲಿದ್ದು, ಇನ್ನು ಕೆಲೆವೇ ದಿನಗಳಲ್ಲಿ 1.3 ಲೀಟರ್‍‍ನ ಮಾರಾಟವನ್ನು ಸ್ಥಗಿತಗೊಳಿಸಲಿದೆ ಎಂಬ ಮಾಹಿತಿಯನ್ನು ಸಹ ಸಂಸ್ಥೆಯು ಹೊರಹಾಕಿದೆ.

ಹೊಸ ಎಂಜಿನ್‍ನೊಂದಿಗೆ ಬಿಡುಗಡೆಯಾದ ಮಾರುತಿ ಸುಜುಕಿ ಸಿಯಾಜ್

ಹೊಸ ಎಂಜಿನ್ ಸಾಮರ್ಥ್ಯ ಮತ್ತು ಮೈಲೇಜ್

ಹೊಸ ಮಾರುತಿ ಸುಜುಕಿ ಸಿಯಾಜ್ ಕಾರು ಸಂಸ್ಥೆಯೆ ಸ್ವತಃ ತಯಾರು ಮಾಡಲಾದ 1.5 ಲೀಟರ್ 4 ಸಿಲೆಂಡರ್ ಡಿಡಿಐಎಸ್225 ಡೀಸೆಲ್ ಎಂಜಿನ್ ಸಹಾಯದಿಂದ 94 ಬಿಹೆಚ್‍ಪಿ ಮತ್ತು 225ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುವ ಶಕ್ತಿಯನ್ನು ಪಡೆದುಕೊಂಡಿದ್ದು, ಎಂಜಿನ್ ಅನ್ನು 6 ಸ್ಪೀಡ್ ಮ್ಯಾನುವಲ್ ಗೇರ್‍‍ಬಾಕ್ಸ್ ನೊಂಡಿಗೆ ಜೋಡಿಸಲಾಗಿದೆ. ಅಷ್ಟೆ ಅಲ್ಲದೇ ಪ್ರತೀ ಲೀಟರ್‍‍ಗೆ 26.82 ಕಿಲೋಮೀಟರ್‍‍ನ ಮೈಲೇಜ್ ಅನ್ನು ಸಹ ನೀಡುತ್ತೆ.

ಹೊಸ ಎಂಜಿನ್‍ನೊಂದಿಗೆ ಬಿಡುಗಡೆಯಾದ ಮಾರುತಿ ಸುಜುಕಿ ಸಿಯಾಜ್

ಹೊಸ ಸಿಯಾಜ್ ಕಾರುಗಳು ಪೆಟ್ರೋಲ್ ಮತ್ತು ಡಿಸೇಲ್ ಎಂಜಿನ್‌ಗಳಲ್ಲಿ ಆಯ್ಕೆಗೆ ಲಭ್ಯವಿದ್ದು, ಗ್ರಾಹಕರು ತಮ್ಮ ಬೇಡಿಕೆಗೆ ಅನುಗುಣವಾಗಿ ಸಿಗ್ಮಾ, ಡೆಲ್ಟಾ, ಡೆಲ್ಟ್ ಎಟಿ, ಜೆಟಾ, ಜೆಟಾ ಎಟಿ, ಆಲ್ಫಾ ಮತ್ತು ಆಲ್ಫಾ ಎಟಿ ಕಾರುಗಳನ್ನ ಪರಿಚಯಿಸಿದೆ. ಹೀಗಾಗಿ ವಿವಿಧ ಕಾರು ಆವೃತ್ತಿಗಳಲ್ಲಿ ವಿವಿಧ ಹಂತದ ಬೆಲೆ ಪಟ್ಟಿ ನಿಗದಿ ಮಾಡಲಾಗಿದೆ.

ಹೊಸ ಎಂಜಿನ್‍ನೊಂದಿಗೆ ಬಿಡುಗಡೆಯಾದ ಮಾರುತಿ ಸುಜುಕಿ ಸಿಯಾಜ್

ಹೊಸ ಸಿಯಾಜ್ ವಿನ್ಯಾಸಗಳು

ಹಳೆಯ ಸಿಯಾಜ್ ಕಾರುಗಳಿಂತಲೂ ಮಹತ್ವದ ಬದಲಾಣೆಗಳನ್ನ ಹೊಂದಿರುವ ಹೊಸ ಸಿಯಾಜ್ ಕಾರುಗಳು, ಮರು ವಿನ್ಯಾಸಗೊಳಿಸಲಾದ ಗ್ರಿಲ್, ಹೊಸ ವಿನ್ಯಾಸದ ಎಲ್ಇಡಿ ಡಿಆರ್‍ಎಲ್ ಹೆಡ್‍‍ಲ್ಯಾಂಪ್ಸ್, ಸೆಂಟ್ರಲ್ ಏರ್ ಡ್ಯಾಮ್‍ ನೊಂದಿಗೆ ರಿವ್ಯಾಂಪ್ಡ್ ಫ್ರಂಟ್ ಬಂಪರ್ ಮತ್ತು ಸಿ-ಆಕಾರದ ಕ್ರೋಮ್ ಅನ್ನು ಫಾಗ್ ಲ್ಯಾಂಪ್‍‍ನಲ್ಲಿ ಅಳವಡಿಸಿರುವುದು ಕಾರಿಗೆ ಸ್ಪೋರ್ಟಿ ಲುಕ್ ನೀಡಿದೆ.

ಹೊಸ ಎಂಜಿನ್‍ನೊಂದಿಗೆ ಬಿಡುಗಡೆಯಾದ ಮಾರುತಿ ಸುಜುಕಿ ಸಿಯಾಜ್

ಇದಲ್ಲದೆ ಸಿಯಾಜ್ ಫೇಸ್‍‍ಲಿಫ್ಟ್ ಕಾರುಗಳಲ್ಲಿ ಮಲ್ಟಿ ಸ್ಪೋಕ್ 15 ಇಂಚಿನ ಅಲಾಯ್ ಚಕ್ರಗಳು, ಕ್ರೋಮ್ ಆಧಾರಿತ ಡೋರ್ ಹ್ಯಾಂಡಲ್ಸ್ ಮತ್ತು ಒಆರ್‍‍ವಿಎಮ್ ಅನ್ನು ಇಂಟಿಗ್ರೇಟೆಡ್ ಟರ್ನ್ ಇಂಡಿಕೇಟರ್ಸ್ ಅನ್ನು ಪ್ರಸ್ತುತ ಮಾರಾಟಗೊಳ್ಳುತ್ತಿರುವ ಸಿಯಾಜ್ ಕಾರಿನಿಂದ ಆಧರಿಸಿದೆ. ಹಾಗೆಯೇ ಮರು ವಿನ್ಯಾಸಗೊಳಿಸಲಾದ ಹಿಂಭಾಗದ ಬಂಪರ್ ಅನ್ನು ಕೂಡಾ ಅಳವಡಿಸಲಾಗಿದೆ.

ಹೊಸ ಎಂಜಿನ್‍ನೊಂದಿಗೆ ಬಿಡುಗಡೆಯಾದ ಮಾರುತಿ ಸುಜುಕಿ ಸಿಯಾಜ್

ಕಾರಿನ ಒಳಭಾಗದ ವಿನ್ಯಾಸ

ಈ ಹಿಂದಿನ ಸಿಯಾಜ್ ಕಾರುಗಳಲ್ಲಿ ಲಭ್ಯವಿದ್ದ ಬಹುತೇಕ ತಾಂತ್ರಿಕ ಅಂಶಗಳು ಹೊಸ ಕಾರಿನಲ್ಲೂ ಮುಂದುವರಿಸಲಾಗಿದ್ದು, ಪ್ರಸ್ತುತ ಮಾರುಕಟ್ಟೆಯಲ್ಲಿ ಬೇಡಿಕೆಗೆ ಅನುಗುಣವಾಗಿ ಕೆಲವೊಂದು ಹೊಸ ಸೌಲಭ್ಯಗಳನ್ನು ಜೋಡಣೆ ಮಾಡಲಾಗಿದೆ. ಇವುಗಳಲ್ಲಿ ಮರದ ದಿಣ್ಣೆಗಳಿಂದ ತಯಾರಿಸಲಾದ ಡ್ಯಾಶ್‌ಬೋರ್ಡ್, ಬಾಗಿಲು ಅಂಚುಗಳು ಹೊಸ ಆಕರ್ಷಣೆಯಾಗಿವೆ.

ಹೊಸ ಎಂಜಿನ್‍ನೊಂದಿಗೆ ಬಿಡುಗಡೆಯಾದ ಮಾರುತಿ ಸುಜುಕಿ ಸಿಯಾಜ್

ಜೊತೆಗೆ ಕಾರಿನ ಸ್ಟೀರಿಂಗ್ ವೀಲ್ಹ್, ಆಕರ್ಷಕವಾದ ಲೆದರ್ ಸೀಟುಗಳು, ಟಚ್ ಸ್ಕ್ರೀನ್ ಇನ್ಫೋಟೈನ್‌ಮೆಂಟ್, ಅಂಡ್ರಾಯಿಡ್ ಆಟೋ, ಆ್ಯಪಲ್ ಕಾರ್ ಪ್ಲೇ, ಸುಜುಕಿ ಕನೆಕ್ಟ್ ಟೆಲಿಮ್ಯಾಟಿಕ್ ಸಿಸ್ಟಂ, ಇನ್‌ಸ್ಟ್ರುಮೆಂಟ್ ಕ್ಲಸ್ಟರ್ ಜೊತೆ ಟಿಟಿಪಿ ಕಲರ್ ಎಂಐಡಿ ಮತ್ತು ಕ್ರೂಸ್ ಕಂಟ್ರೊಲರ್ ಸೌಲಭ್ಯವಿದೆ.

ಹೊಸ ಎಂಜಿನ್‍ನೊಂದಿಗೆ ಬಿಡುಗಡೆಯಾದ ಮಾರುತಿ ಸುಜುಕಿ ಸಿಯಾಜ್

ಸುರಕ್ಷಾ ಸೌಲಭ್ಯಗಳು

ಸಾಮಾನ್ಯ ಕಾರುಗಳಲ್ಲಿ ಫ್ರಂಟ್ ಡ್ಯುಯಲ್ ಏರ್‌ಬ್ಯಾಗ್‌ಗಳನ್ನು ಹೊಂದಿರುವ ಸಿಯಾಜ್ ಫೇಸ್‌ಲಿಫ್ಟ್ ಕಾರುಗಳು ಟಾಪ್ ಎಂಡ್ ಆವೃತ್ತಿಯಲ್ಲಿ 6 ಏರ್‌ಬ್ಯಾಗ್‌ಗಳನ್ನು ಪಡೆದುಕೊಂಡಿದೆ. ಜೊತೆಗೆ ಎಬಿಎಸ್, ಚಾಲಕನ್ನು ಎಚ್ಚರಿಸುವ ಸೀಟ್ ಬೆಲ್ಟ್ ವಾರ್ನಿಂಗ್, ರಿವರ್ಸ್ ಪಾರ್ಕಿಂಗ್ ಸೆನ್ಸಾರ್ ಮತ್ತು ಸ್ಪೀಡ್ ವಾರ್ನಿಂಗ್ ಮಾನಿಟರ್ ಇದರಲ್ಲಿದೆ. ಇದು ಗಂಟೆಗೆ 120 ಕಿ.ಮಿಗಿಂತ ಹೆಚ್ಚು ಚಾಲನೆ ಮಾಡುವಾಗ ಬಿಫ್ ಸೌಂಡ್ ಮೂಲಕ ಚಾಲಕನಿಗೆ ಎಚ್ಚರಿಕೆ ನೀಡುತ್ತದೆ.

ಹೊಸ ಎಂಜಿನ್‍ನೊಂದಿಗೆ ಬಿಡುಗಡೆಯಾದ ಮಾರುತಿ ಸುಜುಕಿ ಸಿಯಾಜ್

ಲಭ್ಯವಿರುವ ಬಣ್ಣಗಳು

ಒಟ್ಟು 7 ವಿವಿಧ ಬಣ್ಣದ ಆಯ್ಕೆಯನ್ನು ಹೊಂದಿರುವ ಸಿಯಾಜ್ ಫೇಸ್‌ಲಿಫ್ಟ್ ಕಾರುಗಳು ಬ್ಯೂ ನೆಕ್ಸಾ, ಮೆಟಾಲಿಕ್ ಮ್ಯಾಗ್ಮಾ ಗ್ರೇ, ಪರ್ಲ್ ಮಿಡ್‌ನೈಟ್ ಬ್ಲ್ಯಾಕ್, ಪರ್ಲ್ ಸಾಂಗ್ರಿಯಾ ರೆಡ್, ಪರ್ಲ್ ಮೆಟಾಲಿಕ್ ಡಿಗ್ನಿಟಿ ಬ್ರೌನ್, ಮೆಟಾಲಿಕ್ ಪ್ರಿಮಿಯಂ ಸಿಲ್ವರ್ ಮತ್ತು ಪರ್ಲ್ ಸ್ನೋ ವೈಟ್ ಬಣ್ಣಗಳಲ್ಲಿ ಲಭ್ಯವಿದೆ.

ಹೊಸ ಎಂಜಿನ್‍ನೊಂದಿಗೆ ಬಿಡುಗಡೆಯಾದ ಮಾರುತಿ ಸುಜುಕಿ ಸಿಯಾಜ್

ಒಟ್ಟಿನಲ್ಲಿ ಹಲವು ಹೊಸ ಸೌಲಭ್ಯವನ್ನು ಹೊತ್ತು ಮಾರುಕಟ್ಟೆ ಪ್ರವೇಶ ಪಡೆದಿರುವ ಹೊಸ ಸಿಯಾಜ್ ಕಾರುಗಳು ಎಂಜಿನ್ ವಿಭಾಗದಲ್ಲಿ ಗುರುತರ ಬದಲಾಣೆ ಹೊಂದಿರುವುದು ಸೆಡಾನ್ ಪ್ರಿಯರ ಆಕರ್ಷಣೆಗೆ ಕಾರಣವಾಗಲಿದ್ದು, ಹೋಂಡಾ ಸಿಟಿ, ಟೊಯೊಟಾ ಯಾರಿಸ್ ಮತ್ತು ಹ್ಯುಂಡೈ ವೆರ್ನಾ ಕಾರುಗಳಿಗೆ ನೇರ ಪೈಪೋಟಿ ನೀಡಲಿದೆ ಎನ್ನಬಹುದು.

Most Read Articles

Kannada
English summary
Maruti Launches New 1.5-Litre Diesel Engine On The Ciaz — Priced At Rs 9.97 Lakh. Read In Kannada
Story first published: Friday, March 29, 2019, 9:09 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X