ಹೊಸ ಸುರಕ್ಷಾ ಸೌಲಭ್ಯವನ್ನು ಹೊತ್ತು ಬಂದ ಮಾರುತಿ ಸುಜುಕಿ ಆಲ್ಟೋ ಕೆ10

ಮಾರುತಿ ಸುಜುಕಿ ಸಂಸ್ಥೆಯು ತಾವು ಮಾರಾಟ ಮಾಡುತ್ತಿರುವ ಗ್ಗದ ಬೆಲೆಯ ಕಾರುಗಳಲ್ಲಿ ಸುಪ್ರೀಂ ಕೋರ್ಟ್‍‍ನ ಹೊಸ ಆದೇಶದ ಅನುಸಾರ ಹೆಚ್ಚಿನ ಸೇಫ್ಟಿ ಫೀಚರ್‍‍ಗಳನ್ನು ಸ್ಟ್ಯಾಂಡರ್ಡ್ ಆಗಿ ಅಳವಡಿಸಲಾಗುತ್ತಿದ್ದು, ಇದೀಗ ತಮ್ಮ ಜನಪ್ರಿಯ ಆಲ್ಟೋ ಕೆ10 ಕಾರಿಗೂ ಸಹ ಸ್ಪೇಫ್ಟಿ ಫೀಚರ್‍‍ಗಳನ್ನು ನೀಡಲಾಗಿದೆ.

ಹೊಸ ಸುರಕ್ಷಾ ಸೌಲಭ್ಯವನ್ನು ಹೊತ್ತು ಬಂದ ಮಾರುತಿ ಸುಜುಕಿ ಆಲ್ಟೋ ಕೆ10

ಮಾರುತಿ ಸುಜುಕಿ ಆಲ್ಟೋ ಕೆ10 ಕಾರಿನ ಎಲ್ಲಾ ವೇರಿಂಯಂಟ್‍‍ಗಳಲ್ಲಿ ಹೊಸದಾಗಿ ಎಬಿಎಸ್, ಇಬಿಡಿ, ಡ್ರೈವರ್ ಏರ್‍‍ಬ್ಯಾಗ್, ರಿವರ್ಸ್ ಪಾರ್ಕಿಂಗ್ ಸೆನ್ಸಾರ್ಸ್, ಸ್ಪೀಡ್ ಅಲರ್ಟ್ ಸಿಸ್ಟಂ ಹಾಗು ಡ್ರೈವರ್ ಮತ್ತು ಸೀಟ್ ಬೆಲ್ಟ್ ರಿಮೈಂಡರ್ ಎಂಬ ಸುರಕ್ಷಾ ಸಾಧನಗಳನ್ನು ಅಳವಡಿಸಲಾಗಿದೆ. ಹೊಸ ಸೇಫ್ಟಿ ಫೀಚರ್‍‍ಗಳನ್ನು ಪಡೆದ ನಂತರ ಕಾರಿನ ಮಾರಾಟದ ಬೆಲೆಯು ಕೂಡಾ ಅಧಿಕವಾಗಿದ್ದು, ಇದೀಗ ಹೊಸ ಆಲ್ಟೋ ಕೆ10 ಕಾರುಗಳು ದೆಹಲಿಯ ಎಕ್ಸ್ ಶೋರುಂ ಪ್ರಕಾರ ರೂ. 3.75 ಲಕ್ಷದ ಪ್ರಾರಂಭಿಕ ಬೆಲೆಯನ್ನು ಪಡೆದುಕೊಂಡಿದೆ.

ಹೊಸ ಸುರಕ್ಷಾ ಸೌಲಭ್ಯವನ್ನು ಹೊತ್ತು ಬಂದ ಮಾರುತಿ ಸುಜುಕಿ ಆಲ್ಟೋ ಕೆ10

ಅಗ್ಗದ ಬೆಲೆಯಲ್ಲಿ ಲಭ್ಯವಿರುವ ಮಾರುತಿ ಸುಜುಕಿ ಆಲ್ಟೋ ಕೆ10 ಕಾರುಗಳು ಪವರ್ ಸ್ಟೀರಿಂಗ್, ಮುಂಭಾಗದಲ್ಲಿ ವೆಂಟಿಲೇಟೆಡ್ ಡಿಸ್ಕ್ ಬ್ರೇಕ್ ಮತ್ತು ಹಿಂಭಾಗದಲ್ಲಿ ಡ್ರಮ್ ಬ್ರೇಕಿಂಗ್ ಸಿಸ್ಟಂ ಅನ್ನು ಪಡೆದುಕೊಂಡಿದೆ. ಐದು ಮಂದಿ ಕೂರಬಹುದಾದ ಈ ಕಾರಿನಲ್ಲಿ ಎಸಿಯನ್ನು ಕೂಡಾ ನೀಡಲಾಗಿದೆ.

ಹೊಸ ಸುರಕ್ಷಾ ಸೌಲಭ್ಯವನ್ನು ಹೊತ್ತು ಬಂದ ಮಾರುತಿ ಸುಜುಕಿ ಆಲ್ಟೋ ಕೆ10

ಮಾರುತಿ ಸುಜುಕಿ ಆಲ್ಟೋ ಕೆ10 ಕಾರು 3545ಎಂಎಂ ಉದ್ದ, 1490ಎಂಎಂ ಅಗಲ, 1475ಎಂಎಂ ಎತ್ತರ, 2360ಎಂಎಂ ವ್ಹೀಲ್ ಬೇಸ್ ಮತ್ತು 160ಎಂಎಂನ ಗ್ರೌಂಡ್ ಕ್ಲಿಯರೆನ್ಸ್ ಅನ್ನು ಪಡೆದುಕೊಂಡಿದೆ. ಇವುಗಳ ಜೊತೆಗೆ 177 ಲೀಟರ್‍‍ನ ಬೂಟ್ ಸ್ಪೇಸ್, 35 ಲೀಟರ್‍‍ನ ಫ್ಯುಯಲ್ ಟ್ಯಾಂಕ್ ಅನ್ನು ಸಹ ಪಡೆದುಕೊಂಡಿದೆ.

ಹೊಸ ಸುರಕ್ಷಾ ಸೌಲಭ್ಯವನ್ನು ಹೊತ್ತು ಬಂದ ಮಾರುತಿ ಸುಜುಕಿ ಆಲ್ಟೋ ಕೆ10

ಎಂಜಿನ್ ಸಾಮರ್ಥ್ಯ

ಇವುಗಳ ಜೊತೆಗೆ ಮಾರುತಿ ಸುಜುಕಿ ಆಲ್ಟೋ ಕೆ10 ಕಾರು ಪೆಟ್ರೋಲ್ ಮತ್ತು ಸಿಎನ್‍ಜಿ ಆಯ್ಕೆಗಳಲ್ಲಿ ಖರೀದಿಗೆ ಲಭ್ಯವಿದ್ದು, ಪೆಟ್ರೋಲ್ ಆಧಾರಿತ ಮಾರುತಿ ಸುಜುಕಿ ಆಲ್ಟೋ ಕೆ10 ಕಾರು 67.1 ಬಿಹೆಚ್‍ಪಿ ಮತ್ತು 90ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುವ ಗುಣಾವನ್ನು ಪಡೆದುಕೊಂಡಿದೆ. ಪೆಟ್ರೋಲ್ ಆಧಾರಿತ ಕಾರಿನ ಎಂಜಿನ್ ಅನ್ನು 5 ಸ್ಪೀಡ್ ಮ್ಯಾನುವಲ್ ಹಾಗು ಸಿಎನ್‍ಜಿ ಆಧಾರಿತ ಕಾರಿನ ಎಂಜಿನ್ ಅನ್ನು ಆಟೋಮ್ಯಾಟಿಕ್ ಗೇರ್‍‍ಬಾಕ್ಸ್ ನೊಂದಿಗೆ ಜೋಡಿಸಲಾಗಿದೆ.

ಹೊಸ ಸುರಕ್ಷಾ ಸೌಲಭ್ಯವನ್ನು ಹೊತ್ತು ಬಂದ ಮಾರುತಿ ಸುಜುಕಿ ಆಲ್ಟೋ ಕೆ10

ಮೈಲೇಜ್

35 ಲೀಟರ್‍‍ನ ಪ್ಯುಯಲ್ ಟ್ಯಾಂಕ್ ಅನ್ನು ಪಡೆದುಕೊಂಡಿರುವ ಮಾರುತಿ ಸುಜುಕಿ ಆಲ್ಟೋ ಕೆ10 ಕಾರುಗಳು ಗಂಟೆಗೆ 145 ಕಿಲೋಮೀಟರ್ ವೇಗದಲ್ಲಿ ಚಲಿಸಬಲ್ಲ ಟಾಪ್ ಸ್ಪೀಡ್ ಮತ್ತು ಪ್ರತೀ ಲೀಟರ್‍‍ಗೆ ಸುಮಾರು 24.07 ಕಿಲೋಮೋಟರ್ ಮೈಲೇಜ್ ನೀಡಬಲ್ಲದು.

ಹೊಸ ಸುರಕ್ಷಾ ಸೌಲಭ್ಯವನ್ನು ಹೊತ್ತು ಬಂದ ಮಾರುತಿ ಸುಜುಕಿ ಆಲ್ಟೋ ಕೆ10

ಇಷ್ಟೆ ಅಲ್ಲದೆಯೆ ಮಾರುತಿ ಸುಜುಕಿ ತನ್ನ ಜನಪ್ರಿಯ ಆಲ್ಟೋ ಹ್ಯಾಚ್‌ಬ್ಯಾಕ್ ಮಾದರಿಯ ಉತ್ಪಾದನೆಯನ್ನು ಸದ್ಯಕ್ಕೆ ಸ್ಥಗಿತಗೊಳಿಸಿದ್ದು, ಆಟೋ ಉತ್ಪಾದನಾ ಹೊಸ ನಿಯಮಗಳಿಗೆ ಅನುಗುಣವಾಗಿ ನ್ಯೂ ಜನರೇಷನ್ ವೈಶಿಷ್ಟ್ಯತೆಗಳೊಂದಿಗೆ ಆಲ್ಟೋ ಕಾರನ್ನು ಬಿಡುಗಡೆಗೊಳಿಸುತ್ತಿದೆ.

ಹೊಸ ಸುರಕ್ಷಾ ಸೌಲಭ್ಯವನ್ನು ಹೊತ್ತು ಬಂದ ಮಾರುತಿ ಸುಜುಕಿ ಆಲ್ಟೋ ಕೆ10

ಈ ಹಿಂದೆ 2018ರ ಫೆಬ್ರುವರಿಯಲ್ಲಿ ನಡೆದಿದ್ದ ದೆಹಲಿ ಆಟೋ ಮೇಳದಲ್ಲಿ ಪ್ರದರ್ಶನ ಮಾಡಲಾಗಿದ್ದ ಫ್ಯೂಚರ್ ಎಸ್ ಕಾನ್ಸೆಪ್ಟ್ ಮಾದರಿಯಲ್ಲೇ ಹೊಸ ಆಲ್ಟೋ ಕಾರು ರಸ್ತೆಗಿಳಿಯಲಿದ್ದು, ಮಿನಿ ಎಸ್‌ಯುವಿ ಮಾದರಿಯಲ್ಲಿ ನಿರ್ಮಾಣಗೊಂಡಿರವುದು ಹಲವು ವಿಶೇಷಗಳಿಗೆ ಕಾರಣವಾಗಿದೆ.

ಹೊಸ ಸುರಕ್ಷಾ ಸೌಲಭ್ಯವನ್ನು ಹೊತ್ತು ಬಂದ ಮಾರುತಿ ಸುಜುಕಿ ಆಲ್ಟೋ ಕೆ10

ಈಗಾಗಲೇ ಹೊಸ ಕಾರಿನ ಸ್ಪಾಟ್ ಟೆಸ್ಟಿಂಗ್ ನಡೆಸಿರುವ ಮಾರುತಿ ಸುಜುಕಿ ಸಂಸ್ಥೆಯು ಎಂಜಿನ್ ಕಾರ್ಯಕ್ಷಮತೆ ಕುರಿತು ಹಲವು ಸುತ್ತಿನ ಪರೀಕ್ಷೆಗಳನ್ನು ನಡೆಸಿದ್ದು, ಇದೇ ವರ್ಷ ಜೂನ್ ಅಂತ್ಯಕ್ಕೆ ಇಲ್ಲವೇ ಜುಲೈ ಆರಂಭದಲ್ಲಿ ನ್ಯೂ ಜನರೇಷನ್ ಆಲ್ಟೋ ಕಾರು ಮಾರಾಟಕ್ಕೆ ಲಭ್ಯವಾಗುವ ಸಾಧ್ಯತೆಗಳಿವೆ.

Source: ETAuto

Most Read Articles

Kannada
English summary
Maruti Suzuki adds safety features in Alto K10: price goes up. Read In Kannada
Story first published: Thursday, April 11, 2019, 17:47 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X