2018ರಲ್ಲಿ ಅಧಿಕವಾಗಿ ಮಾರಾಟಗೊಂಡ ಬೆಸ್ಟ್ ಸೆಲ್ಲಿಂಗ್ ಕಾರು ಇದೇ...

ನಮಗೆಲ್ಲರಿಗೂ ತಿಳಿದಿರುವ ಹಾಗೆ ದೇಶಿಯ ಮಾರುಕಟ್ಟೆಯಲ್ಲಿ ಕಲವು ವರ್ಷಗಳ ವರೆಗು ಮಾರುತಿ 800 ಕಾರು ಮಾರಾಟದಲ್ಲಿ ಹೆಚ್ಚು ಜನಪ್ರಿಯತೆಯನ್ನು ಪಡೆದುಕೊಂದಿತ್ತು, ಆ ನಂತರ ಬಂದ ಆಲ್ಟೋ ಅದೆಷ್ಟೋ ವರ್ಷ ಮಾರುಕಟ್ಟೆಯಲ್ಲಿ ತನ್ನ ಹವಾ ತೋರಿಸಲು ಮುಂದಾಗಿದ್ದು, ಈ ಕಾರು ಕೂಡಾ ಅಧಿಕವಾಗಿ ಮಾರಾಟಗೊಂಡು ವರ್ಷದ ಟಾಪ್ 10 ಕಾರಿನಲ್ಲಿ ಪ್ರಥಮ ಸ್ಥಾನವನ್ನು ಪಡೆದುಕೊಂಡಿತ್ತು.

2018ರಲ್ಲಿ ಅಧಿಕವಾಗಿ ಮಾರಾಟಗೊಂಡ ಬೆಸ್ಟ್ ಸೆಲ್ಲಿಂಗ್ ಕಾರು ಇದೇ...

ಆದರೇ ದೇಶಿಯ ಆಟೋಮೊಬೈಲ್ ಉಧ್ಯಮದಲ್ಲಿ ಇದೇ ಮೊದಲ ಬಾರಿಗೆ ಟಾಪ್ 10 ಮಾರಾಟವಾದ ಕಾರುಗಳಲ್ಲಿ ಸಣ್ಣಗಾತ್ರದ ಹ್ಯಾಚ್‍‍ಬ್ಯಾಕ್ ಅನ್ನು ಹಿಂದಿಕ್ಕಿ ಸೆಡಾನ್ ಕಾರೊಂದು ಮೊದಲನೆಯ ಸ್ಥಾನವನ್ನು ಪಡೆದುಕೊಂಡಿದ್ದು, ಇದರಿಂದಾಗಿ ಗ್ರಾಹಕರು ಯಾವ ಮಾದರಿಯ ಕಾರಿನ ಕಡೆಗೆ ತಮ್ಮ ಒಲವನ್ನು ತೋರುತ್ತಿದ್ದಾರೆ ಎಂಬುದು ಅರಿವಾಗುತ್ತದೆ.

2018ರಲ್ಲಿ ಅಧಿಕವಾಗಿ ಮಾರಾಟಗೊಂಡ ಬೆಸ್ಟ್ ಸೆಲ್ಲಿಂಗ್ ಕಾರು ಇದೇ...

ಮೊದಲಿಗೆ ಮಾರುತಿ 800 ಕಾರು ದೇಶದಲ್ಲಿ ಹೆಚ್ಚು ಜನಪ್ರೀಯತೆಯನ್ನು ಪಡೆದುಕೊಂಡಿದ್ದು, ಮತ್ತು ಆಲ್ಟೊ ಬಿಡುಗಡೆಯಾದ ನಂತರ ಕೊಮ್ಚ ದುಬಾರಿಯಾದರೂ ಸಹ ಗ್ರಾಹಕರು ಆಲ್ಟೋ ಖರೀದಿಸಲು ಮುಂದಾದರು. ಆದರೆ ಇದೀಗ ಎಲ್ಲವನು ಮೂಲೆಗೆ ತಳ್ಳಿ ಇದೀಗ ಮಾರುತಿ ಸುಜುಕಿ ಡಿಜೈರ್ ಮಾರುಕಟ್ಟೆಯಲ್ಲಿ ಮುಂಚುತ್ತಿದೆ ಎಂದರೆ ತಪ್ಪಾಗುವುದಿಲ್ಲ.

2018ರಲ್ಲಿ ಅಧಿಕವಾಗಿ ಮಾರಾಟಗೊಂಡ ಬೆಸ್ಟ್ ಸೆಲ್ಲಿಂಗ್ ಕಾರು ಇದೇ...

ಏಕೆಂದರೆ ಮಾರುತಿ ಆಲ್ಟೋ ಸತತ 13 ವರ್ಷಗಳ ಕಾಲ ಬೆಸ್ಟ್ ಸೆಲ್ಲಿಂಗ್ ಕಾರು ಎಂಬ ಹೆಗ್ಗಳಿಕೆಯನ್ನು ಪಡೆದಿಕೊಂಡಿದ್ದು, ಇದೀಗ ಡಿಜರ್ ಸೆಡಾನ್ ಕಾರು ಆಲ್ಟೋವನ್ನು ಹಿಂದಿಕ್ಕಿದೆ. 2018ರ ಜನವರಿ ಇಂದ ನವೆಂಬರ್‍‍ನ ವರೆಗು ಅಲ್ಟೋ ಕಾರು 2,31,540 ಯೂನಿಟ್ ಮಾರಾಟವಾದರೆ ಇನ್ನು ಡಿಜರ್ ಕಾರು 2,47,815 ಯೂನಿಟ್ ಕಾರುಗಳು ಮಾರಾಟವಾಗಿದೆಯಂತೆ.

2018ರಲ್ಲಿ ಅಧಿಕವಾಗಿ ಮಾರಾಟಗೊಂಡ ಬೆಸ್ಟ್ ಸೆಲ್ಲಿಂಗ್ ಕಾರು ಇದೇ...

ರೂ. 2.7 ಲಕ್ಷದ ಪ್ರಾರಂಭಿಕ ಬೆಲೆಯನ್ನು ಹೊಂದಿರುವ ಮಾರುತಿ ಆಲ್ಟೋ ಕಾರಿಗೆ ಹೋಲಿಸಿದರೆ ಮಾರುತಿ ಸುಜುಕಿ ಸ್ವಿಫ್ಟ್ ಡಿಜೈರ್ ಕಾರು ರೂ. 5.6 ಲಕ್ಷದ ಮಾರಾಟದ ಬೆಲೆಯನ್ನು ಪಡೆದುಕೊಂಡಿದೆ, ಇದರಿಂದಲೇ ತಿಳಿಯುತ್ತದೆ ದೇಶಿಯ ಮಾರುಕಟ್ಟೆಯಲ್ಲಿನ ಗ್ರಾಹಕರು ಹೊಸ ಸೆಗ್ಮೆಂಟ್ ಕಾರುಗಳ ಕಡೆಗೆ ಒಲವು ತೋರುತ್ತಿದಾರೆ ಎಂದು.

2018ರಲ್ಲಿ ಅಧಿಕವಾಗಿ ಮಾರಾಟಗೊಂಡ ಬೆಸ್ಟ್ ಸೆಲ್ಲಿಂಗ್ ಕಾರು ಇದೇ...

ಡಿಜೈರ್ ಕಾರುಗಳು ಸ್ವಂತ ಬಳಕೆಗೆ ಮಾತ್ರವಲ್ಲದೆ ಕ್ಯಾಬ್ ಆಪರೇಟರ್‍‍ಗಳು ಕೂಡಾ ಹೆಚ್ಚು ಬಳಸುವ ಕಾರಾಗಿದ್ದು, ಓಲಾ ಮತ್ತು ಊಬರ್ ಕ್ಯಾಬ್ ಸರ್ವಿಸ್‍‍ಗಳಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳುತ್ತಿವೆ. ಈ ನಿಟ್ಟಿನಲ್ಲಿ ಸಂಸ್ಥೆಯು ಕೆಲ ದಿನಗಳ ನಂತರ ಎರಡನೆಯ ತಲೆಮಾರಿನ ಡಿಜೈರ್ ಟೂರ್ ಕಾರನ್ನು ಬಿಡುಗಡೆಗೊಳಿಸಿ ಕೇವಲ ಕ್ಯಾಬ್ ಚಾಲಕರಿಗೆ ಸಹಾಯವಾಗುವಂತೆ ತಯಾರು ಮಾಡಲಾಗಿದೆ.

2018ರಲ್ಲಿ ಅಧಿಕವಾಗಿ ಮಾರಾಟಗೊಂಡ ಬೆಸ್ಟ್ ಸೆಲ್ಲಿಂಗ್ ಕಾರು ಇದೇ...

ಇದಲ್ಲದೆ ಸಂಸ್ಥೆಯು ಮೂರನೆಯ ತಲೆಮಾರಿನ ಡಿಜೈರ್ ಕಾರುಗಳನ್ನು ಕೂಡ ಬಿಡುಗಡೆಗೊಳಿಸಿದ್ದು, ಪೆಟ್ರೋಲ್ ಮತ್ತು ಡೀಸೆಲ್ ಎಂಜಿನ್ ಮಾದರಿಗಳಲ್ಲಿ ಲಭ್ಯವಿದೆ. ಮೂರನೆಯ ತಲೆಮಾರಿನ ಡಿಜೈರ್ ಕಾರುಗಳು ದೆಹಲಿಯ ಎಕ್ಸ್ ಶೋರಂ ಪ್ರಕಾರ ರೂ 5.56 ಲಕ್ಷಕ್ಕೆ ಪ್ರಾರಂಭಿಕ ಬೆಲೆಯನ್ನು ಪಡೆದುಕೊಂಡಿದೆ.

2018ರಲ್ಲಿ ಅಧಿಕವಾಗಿ ಮಾರಾಟಗೊಂಡ ಬೆಸ್ಟ್ ಸೆಲ್ಲಿಂಗ್ ಕಾರು ಇದೇ...

ಎಂಜಿನ್ ಸಾಮರ್ಥ್ಯ

ಮೂರನೆಯ ತಲೆಮಾರಿನ ಡಿಸೈರ್ ಕಾರುಗಳು 1.2 ಲೀಟರ್ ಕೇ ಸಿರೀಸ್ ಪೆಟ್ರೋಲ್ ಎಂಜಿನ್ ಸಹಾಯದಿಂದ 82 ಬಿಹೆಚ್‍ಪಿ ಮತ್ತು 113ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುವ ಶಕ್ತಿಯನ್ನು ಪಡೆದಿದ್ದು, 5 ಸ್ಪೀಡ್ ಮ್ಯಾನುವಲ್ ಮತ್ತು ಎಎಂಟಿ ಗೇರ್‍‍ಬಾಕ್ಸ್ ನೊಂದಿಗೆ ಜೋಡಿಸಲಾಗಿದೆ.

2018ರಲ್ಲಿ ಅಧಿಕವಾಗಿ ಮಾರಾಟಗೊಂಡ ಬೆಸ್ಟ್ ಸೆಲ್ಲಿಂಗ್ ಕಾರು ಇದೇ...

ಇನ್ನು ಡೀಸೆಲ್ ಮಾದರಿಯ ಡಿಜೈರ್ ಕಾರುಗಳು 1.3 ಲೀಟರ್ ಫಿಯೆಟ್ ಮಲ್ಟಿಜೆಟ್ ಎಂಜಿನ್ ಸಹಾಯದಿಂದ 74ಬಿಹೆಚ್‍ಪಿ ಮತ್ತು 190ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುವ ಶಕ್ತಿಯನ್ನು ಪಡೆದಿದ್ದು, ಪೆಟ್ರೋಲ್ ಮಾದರಿಗಳಂತೆಯೆ 5 ಸ್ಪೀಡ್ ಮ್ಯಾನುವಲ್ ಅಥವಾ ಎಎಮ್‍ಟಿ ಗೇರ್‍‍ಬಾಕ್ಸ್ ನೊಂದಿಗೆ ಜೋಡಿಸಲಾಗಿದೆ.

2018ರಲ್ಲಿ ಅಧಿಕವಾಗಿ ಮಾರಾಟಗೊಂಡ ಬೆಸ್ಟ್ ಸೆಲ್ಲಿಂಗ್ ಕಾರು ಇದೇ...

ಡಿಜೈರ್ ಕಾರಿನ ಎಲ್ಲಾ ವೇರಿಯಂಟ್‍‍ಗಳಲ್ಲಿಯು ಟ್ವಿನ್ ಏರ್‍‍ಬ್ಯಾಗ್ಸ್ ಮತ್ತು ಎಬಿಎಸ್ ಅನ್ನು ಅಳವಡಿಸಲಾಗಿದ್ದು, ಟಾಪ್ ಎಂಡ್ ವೇರಿಯಂಟ್ ಕಾರುಗಳು ಮಾರುತಿ ಸುಜುಕಿ ಸಂಸ್ಥೆಯ ಸ್ಮಾರ್ಟ್‍ ಫೋನ್ ಕನೆಕ್ಟಿವಿಯನ್ನು ಹೊಂದಿರುವ ಸ್ಮಾರ್ಟ್‍‍‍‍ಪ್ಲೇ ಟಚ್‍‍ಸ್ಕ್ರೀನ್ ಇನ್ಫೋಟೈನ್ಮೆಂಟ್ ಸಿಸ್ಟಂ ಅನ್ನು ಪಡೆದುಕೊಂಡಿರಲಿದೆ.

Source: Rushlane

Most Read Articles

Kannada
English summary
Maruti Dzire sedan replaces Alto small hatch as India’s best selling car. Read In Kannada
Story first published: Wednesday, January 2, 2019, 10:59 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X