ಕಳೆದ 26 ತಿಂಗಳನಲ್ಲಿ ಮಾರಾಟಗೊಂಡ ಮಾರುತಿ ಸುಜುಕಿ ಇಗ್ನಿಸ್ ಕಾರುಗಳು ಎಷ್ಟು.?

ಮಾರುತಿ ಸುಜುಕಿ ಸಂಸ್ಥೆಯು ಫೆಬ್ರುವರು 2017ರಲ್ಲಿ ತಮ್ಮ್ ಪ್ರೀಮಿಯಂ ಸೌಲಭ್ಯಗಳನ್ನು ಒಳಗೊಂಡ ಹೊಸ ಎಗ್ನಿಸ್ ಕಾರುಗಳನ್ನು ಬಿಡುಗಡೆ ಮಾಡಲಾಗಿದ್ದು, ರಶ್‍‍ಲೇನ್ ವರದಿ ಪ್ರಕಾರ ಇಲ್ಲಿಯವರೆಗು ಅಂದರೇ ಬಿಡುಗಡೆಗೊಂಡ 26 ರತಿಂಗಳಿನಲ್ಲಿ ಸಮರು 1 ಲಕ್ಷ ಇಗ್ನಿಸ್ ಕಾರುಗಳು ಮಾರಾಟಗೊಂಡಿದೆ. ಲೆಕ್ಕದ ಪ್ರಕಾರ ಪ್ರತೀ ತಿಂಗಳಿಗೆ ಸುಮಾರು 3850 ಯೂನಿಟ್‍ಗಳು ಮಾರಾಟವಾಗುತ್ತಿದೆ.

ಕಳೆದ 26 ತಿಂಗಳನಲ್ಲಿ ಮಾರಾಟಗೊಂಡ ಮಾರುತಿ ಸುಜುಕಿ ಇಗ್ನಿಸ್ ಕಾರುಗಳು ಎಷ್ಟು.?

ಕೆಲ ದಿನಗಳ ಹಿಂದಷ್ಟೆ ಮಾರುತಿ ಸುಜುಕಿ ಸಂಸ್ಥೆಯು ತನ್ನ ಪ್ರಮುಖ ಕಾರು ಆವೃತ್ತಿಗಳನ್ನು ವಿನೂತನ ಸೌಲಭ್ಯಗಳೊಂದಿಗೆ ಮರು ಬಿಡುಗಡೆಗೊಳಿಸುತ್ತಿದ್ದು, ಇದೀಗ ಇಗ್ನಿಸ್ ಫೇಸ್‌ಲಿಫ್ಟ್ ಆವೃತ್ತಿ ಕೂಡಾ ಹಲವು ಹೊಸ ಫೀಚರ್ಸ್‌ಗಳೊಂದಿಗೆ ಮಾರುಕಟ್ಟೆಗೆ ಲಗ್ಗೆಯಿಟ್ಟಿದೆ. ಇಗ್ನಿಸ್ ಫೇಸ್‌ಲಿಫ್ಟ್ ಆವೃತ್ತಿಯು ಹಳೆಯ ಮಾದರಿಗಿಂತ ಫೇಸ್‌ಲಿಫ್ಟ್ ಮಾದರಿಯು ಅತಿ ವಿನೂತನ ಸೌಲಭ್ಯಗಳೊಂದಿಗೆ ಬಿಡುಗಡೆಯಾಗಿದ್ದು, ದೆಹಲಿ ಎಕ್ಸ್‌ಶೋರೂಂ ಪ್ರಕಾರ ಆರಂಭಿಕ ಆವೃತ್ತಿಯು ರೂ.4.79 ಲಕ್ಷ ಬೆಲೆ ಪಡೆದುಕೊಂಡಿದ್ದು, ಹೈ ಎಂಡ್ ಮಾದರಿಗೆ ರೂ.7.14 ಲಕ್ಷ ಬೆಲೆ ನಿಗದಿಗೊಳಿಸಲಾಗಿದೆ.

ಕಳೆದ 26 ತಿಂಗಳನಲ್ಲಿ ಮಾರಾಟಗೊಂಡ ಮಾರುತಿ ಸುಜುಕಿ ಇಗ್ನಿಸ್ ಕಾರುಗಳು ಎಷ್ಟು.?

ಇಗ್ನಿಸ್ ಫೇಸ್‌ಲಿಫ್ಟ್ ಆವೃತ್ತಿಯಲ್ಲಿ ಒಟ್ಟು ನಾಲ್ಕು ವೆರಿಯೆಂಟ್‌ಗಳು ಖರೀದಿಗೆ ಲಭ್ಯವಿದ್ದು, ಕಾರಿನ ಬೆಲೆಗಳಿಗೆ ಅನುಗುಣವಾಗಿ ಫೀಚರ್ಸ್‌ಗಳಲ್ಲೂ ಸಹ ತುಸು ಬದಲಾವಣೆ ಹೊಂದಿರುತ್ತವೆ. ಇದರಲ್ಲಿ ಸಿಗ್ಮಾ ವೆರಿಯೆಂಟ್ ಆರಂಭಿಕವಾಗಿ ಮತ್ತು ಆಲ್ಫಾ ಆವೃತ್ತಿಯು ಹೈ ಎಂಡ್ ಆವೃತ್ತಿಯಾಗಿ ಮಾರಾಟಗೊಳ್ಳಲಿದೆ.

ಕಳೆದ 26 ತಿಂಗಳನಲ್ಲಿ ಮಾರಾಟಗೊಂಡ ಮಾರುತಿ ಸುಜುಕಿ ಇಗ್ನಿಸ್ ಕಾರುಗಳು ಎಷ್ಟು.?

ಇನ್ನು ಮಾರುತಿ ಸುಜುಕಿ ಸಂಸ್ಥೆಯ ಹೊಸ ಕಾರುಗಳಲ್ಲಿ ಹೆಚ್ಚಿನ ಮಟ್ಟದ ಸುರಕ್ಷಾ ಸೌಲಭ್ಯಗಳಿಗೆ ಹೆಚ್ಚಿನ ಒತ್ತು ನೀಡುತ್ತಿದ್ದು, ಹೊಸ ಇಗ್ನಿಸ್ ಕಾರಿನಲ್ಲಿಯೂ ಸಹ ಕೆಲವು ಮಹತ್ವದ ಫೀಚರ್ಸ್ ಪಡೆದುಕೊಂಡಿರುವುದು ಈ ಬಾರಿ ಮಾರಾಟದಲ್ಲಿ ಉತ್ತಮ ಬೇಡಿಕೆ ಪಡೆದುಕೊಳ್ಳುವ ಸಾಧ್ಯತೆಗಳಿವೆ.

ಕಳೆದ 26 ತಿಂಗಳನಲ್ಲಿ ಮಾರಾಟಗೊಂಡ ಮಾರುತಿ ಸುಜುಕಿ ಇಗ್ನಿಸ್ ಕಾರುಗಳು ಎಷ್ಟು.?

ಹೊಸ ಕಾರಿನಲ್ಲಿ ಈ ಬಾರಿ ರಿಯರ್ ಪಾರ್ಕಿಂಗ್ ಕ್ಯಾಮೆರಾ, ಎಬಿಎಸ್ ಜೊತೆ ಇಬಿಡಿ, ಹೈ ಸ್ಪೀಡ್ ಅಲರ್ಟ್, ಸೀಟ್ ಬೇಲ್ಟ್ ರಿಮೆಂಡರ್ ಸಿಸ್ಟಂ, ಡ್ಯುಯಲ್ ಏರ್‌ಬ್ಯಾಗ್, ISOFIX ಚೈಲ್ಡ್ ಸೀಟ್ ಮೌಂಟ್ಸ್ ಸೇರಿದಂತೆ ಹಲವು ಹೊಸ ಸೌಲಭ್ಯಗಳನ್ನು ಜೋಡಿಸಲಾಗಿದೆ.

ಕಳೆದ 26 ತಿಂಗಳನಲ್ಲಿ ಮಾರಾಟಗೊಂಡ ಮಾರುತಿ ಸುಜುಕಿ ಇಗ್ನಿಸ್ ಕಾರುಗಳು ಎಷ್ಟು.?

ಜೊತೆಗೆ ಎಲ್ಲಾ ವೆರಿಯೆಂಟ್‌ಗಳನ್ನು ಪ್ರಮುಖ ಸುರಕ್ಷಾ ಸೌಲಭ್ಯಗಳನ್ನು ಸ್ಟ್ಯಾಂಡರ್ಡ್ ಆಗಿ ನೀಡಲಾಗಿದ್ದು, ಈ ಬಾರಿ ಜೆಟಾ ಮತ್ತು ಅಲ್ಫಾ ಆವೃತ್ತಿಗಳಲ್ಲಿ ರೂಫ್ ರೈಲ್ ಸೌಲಭ್ಯ ಒದಗಿಸಿರುವುದು ಇಗ್ನಿಸ್ ಕಾರು ಮತ್ತಷ್ಟು ಪ್ರೀಮಿಯಂ ಮಾದರಿಯಾಗಿ ಹೊರಹೊಮ್ಮಿದೆ.

ಕಳೆದ 26 ತಿಂಗಳನಲ್ಲಿ ಮಾರಾಟಗೊಂಡ ಮಾರುತಿ ಸುಜುಕಿ ಇಗ್ನಿಸ್ ಕಾರುಗಳು ಎಷ್ಟು.?

ಎಂಜಿನ್ ಸಾಮರ್ಥ್ಯ

ಇಗ್ನಿಸ್ ಫೇಸ್‌ಲಿಫ್ಟ್ ಆವೃತ್ತಿಯು 1.2-ಲೀಟರ್ ಪೆಟ್ರೋಲ್ ಎಂಜಿನ್‌ನೊಂದಿಗೆ 89-ಬಿಎಚ್‌ಪಿ ಮತ್ತು 113-ಎನ್ಎಂ ಟಾರ್ಕ್ ಉತ್ಪಾದನೆ ಮಾಡಲಿದ್ದು, 5-ಸ್ಪೀಡ್ ಮ್ಯಾನುವಲ್ ಗೇರ್‌ಬಾಕ್ಸ್‌ನೊಂದಿಗೆ ಆಯ್ಕೆ ರೂಪದಲ್ಲಿ ಆಟೋಮ್ಯಾಟಿಕ್ ಗೇರ್ ಶಿಫ್ಟ್ ಆವೃತ್ತಿಯನ್ನು ಸಹ ಖರೀದಿ ಮಾಡಬಹುದಾಗಿದೆ.

ಕಳೆದ 26 ತಿಂಗಳನಲ್ಲಿ ಮಾರಾಟಗೊಂಡ ಮಾರುತಿ ಸುಜುಕಿ ಇಗ್ನಿಸ್ ಕಾರುಗಳು ಎಷ್ಟು.?

ಸಧ್ಯಕ್ಕೆ ಮಾರುಕಟ್ಟೆಯಲ್ಲಿ ಕೇವಲ ಬಿಎಸ್-4 ಎಂಜಿನ್ ಆಧಾರಿತ ಇಗ್ನಿಸ್ ಕಾರುಗಳು ಮಾರಾಟವಾಗುತ್ತಿದ್ದು, ಭವಿಷ್ಯದಲ್ಲಿ ಬಿಎಸ್-6 ಎಂಜಿನ್ ಆಧಾರಿತ ಮಾರುತಿ ಸುಜುಕಿ ಇಗ್ನಿಸ್ ಕಾರುಗಳನು ನಿರ್ಮಾಣ ಮಾಡಲಿದೆ ಎಂದು ಹೇಳಿಕೊಂಡಿದೆ. ಈಗಾಗಲೆ ಸಂಸ್ಥೆಯು ತಮ್ಮ ಅಪ್ಡೇಟೆಡ್ ಆಲ್ಟೋ ಮತ್ತು ಬಲೆನೊ ಕಾರುಗಳಿಗೆ ಬಿಎಸ್-6 ಎಂಜಿನ್ ಅನ್ನು ಅಳವಡಿದಲಾಗಿದೆ.

ಕಳೆದ 26 ತಿಂಗಳನಲ್ಲಿ ಮಾರಾಟಗೊಂಡ ಮಾರುತಿ ಸುಜುಕಿ ಇಗ್ನಿಸ್ ಕಾರುಗಳು ಎಷ್ಟು.?

ಖರೀದಿಗೆ ಲಭ್ಯವಿರುವ ಬಣ್ಣಗಳು

ಈ ಹಿಂದೆ ಖರೀದಿಗೆ ಲಭ್ಯವಿದ್ದ ನೆಕ್ಸಾ ಬ್ಲೂ, ಸಿಲ್ಕಿ ಸಿಲ್ವರ್, ಟಿನ್‌ಸೆಲ್ ಬ್ಲ್ಯೂ, ಅಪ್‌ಟೌನ್ ರೆಡ್ ಮತ್ತು ಪರ್ಲ್ ಆರ್ಟಿಕ್ ವೈಟ್ ಎನ್ನುವ ನಾಲ್ಕು ಬಣ್ಣಗಳೊಂದಿಗೆ ಈ ಬಾರಿ ಟಿನ್‌ಸೆಲ್ ಬ್ಲ್ಯೂ/ಮಿಡ್‌ನೈಟ್ ಬ್ಲಾಕ್, ಟಿನ್‌ಸೆಲ್ ಬ್ಲ್ಯೂ/ಪರ್ಲ್ ಆರ್ಟಿಕ್ ವೈಟ್ ಮತ್ತು ಅಪ್‌ಟೌನ್ ರೆಡ್/ಮಿಡ್‌ನೈಟ್ ಬ್ಲಾಕ್ ಎಂಬ ಮೂರು ಡ್ಯುಯಲ್ ಟೋನ್ ಆವೃತ್ತಿಗಳನ್ನು ಸಹ ಬಿಡುಗಡೆ ಮಾಡಲಾಗಿದೆ.

ಕಳೆದ 26 ತಿಂಗಳನಲ್ಲಿ ಮಾರಾಟಗೊಂಡ ಮಾರುತಿ ಸುಜುಕಿ ಇಗ್ನಿಸ್ ಕಾರುಗಳು ಎಷ್ಟು.?

ಒಟ್ಟಿನಲ್ಲಿ ಆರಂಭಿಕ ಕಾರು ಆವೃತ್ತಿಗಳಲ್ಲಿ ಉತ್ತಮ ಮಾದರಿಯ ಪ್ರೀಮಿಯಂ ಸೌಲಭ್ಯ ಹೊಂದಿರುವ ಕೆಲವೇ ಮಾದರಿಗಳಲ್ಲಿ ಇಗ್ನಿಸ್ ಕೂಡಾ ಒಂದಾಗಿದ್ದು, ಅರ್ಬನ್ ಕಾರು ಮಾರಾಟದಲ್ಲಿ ಮುಂಚೂಣಿಯಲ್ಲಿರುವ ಹ್ಯುಂಡೈ ಗ್ರಾಂಡ್ ಐ10 ಮತ್ತು ಮಹೀಂದ್ರಾ ಕೆಯುವಿ100 ಆವೃತ್ತಿಗಳಿಗೆ ಈ ಬಾರಿ ಉತ್ತಮ ಪೈಪೋಟಿ ನೀಡಲಿದೆ.

Most Read Articles

Kannada
English summary
Maruti Suzuki Ignis Crosses 1 Lakh Units In 26 Months. Read In Kannada
Story first published: Thursday, May 2, 2019, 9:00 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X