ಬಿಡುಗಡೆಯಾಲಿರುವ ಹೊಸ ಮಾರುತಿ ಸುಜುಕಿ ಇಗ್ನಿಸ್ ಫೇಸ್‍ಲಿಫ್ಟ್ ಕಾರಿನ ವಿಶೇಷತೆ ಏನು.?

ದೇಶಿಯ ವಾಹನ ತಯಾರಕ ಸಂಸ್ಥೆಯಾದ ಮಾರುತಿ ಸುಜುಕಿ ಇತ್ತೀಚೆಗಷ್ಟೆ ತಮ್ಮ ಹೊಸ ವ್ಯಾಗನಾರ್ ಮತ್ತು ಬಲೆನೊ ಫೇಸ್‍ಲಿಫ್ಟ್ ಮಾದರಿಗಳನ್ನು ಬಿಡುಗಡೆಗೊಳಿಸಿದ್ದು, ಇದೀಗ ತಾವು 2017ರಲ್ಲಿ ಬಿಡುಗಡೆಗೊಳಿಸಿದ ಇಗ್ನಿಸ್ ಕಾರಿನ ಫೇಸ್‍ಲಿಫ್ಟ್ ಮಾದರಿಯನ್ನು ಮಾರುಕಟ್ಟೆಯಲ್ಲಿ ಶೀಘ್ರವೇ ಬಿಡುಗಡೆಗೊಳಿಸಲಿದ್ದಾರೆ.

ಬಿಡುಗಡೆಯಾಲಿರುವ ಹೊಸ ಮಾರುತಿ ಸುಜುಕಿ ಇಗ್ನಿಸ್ ಫೇಸ್‍ಲಿಫ್ಟ್ ಕಾರಿನ ವಿಶೇಷತೆ ಏನು.?

ಇವೆಲ್ಲದರ ನಂತರ ಮಾರುತಿ ಸುಜುಕಿ ಸಂಸ್ಥೆಯು ತಮ್ಮದೇಯಾದ ಸಿಯಾಜ್ ಸೆಡಾನ್ ಮತ್ತು ಎರ್ಟಿಗಾ ಕಾರುಗಳಿಗೆ ಹೊಸದಾಗಿ 1.5 ಲೀಟರ್ ಡೀಸೆಲ್ ಎಂಜಿನ್ ಅನ್ನು ಅಳವಡಿಸಲಿದ್ದು, ಇವುಗಳನ್ನು ಕೂಡಾ ಮಾರುಕಟ್ಟೆಯಲ್ಲಿ ಶೀಘ್ರವೇ ಬಿಡುಗಡೆ ಮಾಡಲಿದೆ. ಆದ್ರೆ ಈ ಬಾರಿಯ ಹೊಸ ಇಗ್ನಿಸ್ ಫೇಸ್‍ಲಿಫ್ಟ್ ಮಾದರಿಯಲ್ಲಿ ಕೇವಲ ವಿನ್ಯಾಸದಲ್ಲಿ ಮಾತ್ರ ಬದಲಾವಣೆಗಳನ್ನು ಕಾಣಬಹುದಾಗಿದೆ.

ಬಿಡುಗಡೆಯಾಲಿರುವ ಹೊಸ ಮಾರುತಿ ಸುಜುಕಿ ಇಗ್ನಿಸ್ ಫೇಸ್‍ಲಿಫ್ಟ್ ಕಾರಿನ ವಿಶೇಷತೆ ಏನು.?

ಹೊಸ ಇಗ್ನಿಸ್ ಫೇಸ್‍ಲಿಫ್ಟ್ ಕಾರಿನ ಒಳಭಾಗದಲ್ಲಿ ಹೊಸ ಫ್ಯಾಬ್ರಿಕ್‍ನಿಂದ ಕೂಡಿದ ಸೀಟ್‍ಗಳು ಮತ್ತು ಅಪ್ಡೆಟೆಡ್ ಇನ್ಫೋಟೈನ್ಮೆಂಟ್ ಸಿಸ್ಟಂ ಅನ್ನು ಅಳವಡಿಸಲಿದೆ. ಈ ಬಾರಿ ಅಳವಡಿಸಲಿರುವ ಹೊಸ ಇನ್ಫೋಟೈನ್ಮೆಂಟ್ ಸಿಸ್ಟಂ ಅನ್ನು ಸಂಸ್ಥೆಯು ಈಗಾಗ್ಲೆ ತಾವು ಬಿಡಿಗಡೆಗೊಳಿಸಿದ ವ್ಯಾಗನ್ ಆರ್ ಮತ್ತು ಬಲೆನೊ ಫೇಸ್‍ಲಿಫ್ಟ್ ಮಾದರಿಗಳಲ್ಲಿ ಕಾಣಬಹುದಾಗಿದೆ.

ಬಿಡುಗಡೆಯಾಲಿರುವ ಹೊಸ ಮಾರುತಿ ಸುಜುಕಿ ಇಗ್ನಿಸ್ ಫೇಸ್‍ಲಿಫ್ಟ್ ಕಾರಿನ ವಿಶೇಷತೆ ಏನು.?

ಬಿಡುಗಡೆಗೆ ಸಜ್ಜುಗೊಳ್ಳುತ್ತಿರುವ ಮಾರುತಿ ಸುಜುಕಿ ಇಗ್ನಿಸ್ ಕಾರಿನಲ್ಲಿ ಈ ಬಾರಿ ಎಲ್ಇಡಿ ಪ್ರೊಜೆಕ್ಟರ್ ಹೆಡ್‍ಲ್ಯಾಂಪ್ಸ್ ಜೊತೆಗೆ ಎಲ್ಇಡಿ ಡಿಆರ್‍ಎಲ್‍ಗಳನ್ನು ನೀಡಲಾಗುತ್ತಿದೆ. ಈ ಕಾರಿಗೆ ಪ್ರೀಮಿಯಂ ಟಚ್ ನೀಡಲು ಸಕ ಸಿದ್ದತೆಯನ್ನು ನಡೆಸುತ್ತಿರುವ ಮಾರುತಿ ಸುಜುಕಿ ಸಂಸ್ಥೆಯು ಈ ಕಾರಿನ ಡೀಸೆಲ್ ಮಾದರಿಗಳಿಗೆ ಬಂದ ಕಡಿಮೆ ಬೇಡಿಕೆಯ ಅನುಸಾರ ಅವುಗಳ ಪ್ರೊಡಕ್ಷನ್ ಅನ್ನು ಸ್ಥಗಿತಗೊಳಿಸಿತ್ತು.

ಬಿಡುಗಡೆಯಾಲಿರುವ ಹೊಸ ಮಾರುತಿ ಸುಜುಕಿ ಇಗ್ನಿಸ್ ಫೇಸ್‍ಲಿಫ್ಟ್ ಕಾರಿನ ವಿಶೇಷತೆ ಏನು.?

ಇಷ್ಟೆ ಅಲ್ಲದೇ ಇಗ್ನಿಸ್ ಫೇಸ್‍ಲಿಫ್ಟ್ ಕಾರು ಮುಂದಿನ ವರ್ಷ ಜಾರಿಯಾಗಲಿರುವ ಹೊಸ ಸುರಕ್ಷಾ ಕಾಯ್ದೆಯ ಅನುಸಾರ ಹಲವಾರು ಸೇಫ್ಟಿ ಫೀಚರ್‍‍ಗಳನ್ನು ಸಹ ಪಡೆದುಕೊಳ್ಳಲಿದ್ದು, ಕಾರಿನ ಒಳಭಾಗದಲ್ಲಿ ಆಂಡ್ರಾಯ್ಡ್ ಆಟೋ, ಆಪಲ್ ಕಾರ್ ಪ್ಲೇ ಮತ್ತು ಮಿರರ್ ಲಿಂಕ್ ಸಪೋರ್ಟ್ ಮಾಡುವ 7 ಇಂಚಿನ ಟಚ್‍ಸ್ಕ್ರೀನ್ ಇನ್ಫೋಟೈನ್ಮೆಂಟ್ ಸಿಸ್ಟಂ ಅನ್ನು ಸಹ ಪಡೆದುಕೊಳ್ಳಲಿದೆ.

MOST READ: ಟಾಟಾ ನೆಕ್ಸಾನ್ ಕಾರಿನ ಮೇಲೆ ಬಿಲ್‍ಬೋರ್ಡ್ ಬಿದ್ದರೂ, ಕಾರಿನಲ್ಲಿದ್ದವರಿಗೆ ಏನೂ ಆಗಲಿಲ್ಲ..!

ಬಿಡುಗಡೆಯಾಲಿರುವ ಹೊಸ ಮಾರುತಿ ಸುಜುಕಿ ಇಗ್ನಿಸ್ ಫೇಸ್‍ಲಿಫ್ಟ್ ಕಾರಿನ ವಿಶೇಷತೆ ಏನು.?

ಸ್ವಿಫ್ಟ್, ಬಲೆನೊ ಮತ್ತು ಡಿಜೈರ್ ಹಾಗು ಎರ್ಟಿಗಾ ಪ್ಲಾಟ್‍‍ಫಾರ್ಮ್ ಅನ್ನು ನಿರ್ಮಾಣ ಮಾಡಿದ 'ಹಾರ್ಟ್‍ಟೆಕ್ಟ್' ಪ್ಲಾಟ್‍‍ಪಾರ್ಮ್‍ನ ಅಡಿಯಲ್ಲೆ ಈ ಕಾರನ್ನು ಕೂಡಾ ನಿರ್ಮಾಣ ಮಾಡಲಗುತ್ತಿದ್ದು, ಪ್ರಸ್ತುತ ಇರುವ ಇಗ್ನಿಸ್ ಕಾರುಗಳು1.2 ಲೀಟರ್ ಕೆ-ಸಿರೀಸ್ ಪೆಟ್ರೋಲ್ ಎಂಜಿನ್ ಸಹಾಯದಿಂದ 82ಬಿಹೆಚ್‍ಪಿ ಮತ್ತು 113 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುವ ಶಕ್ತಿಯನ್ನು ಪಡೆದುಕೊಂಡಿದೆ. ಮತ್ತು ಎಂಜಿನ್ ಅನು 5 ಸ್ಪೀಡ್ ಮ್ಯಾನುವಲ್ ಮತ್ತು ಎಎಂಟಿ ಗೃ‍‍ಬಾಕ್ಸ್ ಆಯ್ಕೆಗಳಲ್ಲಿ ದೊರೆಯುತ್ತಿದೆ.

ಬಿಡುಗಡೆಯಾಲಿರುವ ಹೊಸ ಮಾರುತಿ ಸುಜುಕಿ ಇಗ್ನಿಸ್ ಫೇಸ್‍ಲಿಫ್ಟ್ ಕಾರಿನ ವಿಶೇಷತೆ ಏನು.?

ಮಾರುತಿ ಸುಜುಕಿ ಬಲೆನೊ ಮತ್ತು ಸ್ವಿಫ್ಟ್ ಕಾರುಗಳಿಗಿಂತಾ ಕದಿಮೆ ಬೆಲೆಯಲ್ಲಿ ಬಿಡುಗಡೆಯಾಗಲಿರುವ ಇಗ್ನಿಸ್ ಫೇಸ್‍ಲಿಫ್ಟ್ ಕಾರು ದೆಹಲಿಯ ಎಕ್ಸ್ ಶೋರುಂ ಪ್ರಕಾರ ರೂ. 4.66 ಲಕ್ಷದ ಪ್ರಾರಂಭಿಕ ಬಲೆಯನ್ನು ಪಡೆದುಕೊಂಡಿರಲಿದೆ. ಇನ್ನು ಈ ಕಾರಿನ ಬಿಡುಗಡೆಯ ಕುರಿತಾಗಿ ಸಂಸ್ಥೆಯು ಸರಿಯಾದ ಮಾಹಿತಿಯನ್ನು ನೀಡಲಿಲ್ಲವಾದ ಕಾರಣ ಇದೇ ತಿಂಗಳಿನಲ್ಲಿ ಬಿಡುಗಡೆಗೊಳಿಸುವ ಎಲ್ಲಾ ಸಾಧ್ಯತೆಗಳಿವೆ.

Source: gaadiwaadi

Most Read Articles

Kannada
English summary
Maruti Suzuki To Launch Ignis Facelift Soon In India. Read In Kannada
Story first published: Wednesday, February 20, 2019, 12:25 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X