Just In
Don't Miss!
- News
ಪದ್ಮವಿಭೂಷಣ ಉಸ್ತಾದ್ ಗುಲಾಂ ಮುಸ್ತಾಫಾ ಖಾನ್ ವಿಧಿವಶ
- Movies
ಫೋಟೋಗಳು: ರಮೇಶ್ ಅರವಿಂದ್ ಮಗಳ ಮದುವೆ ಆರತಕ್ಷತೆಯಲ್ಲಿ ಸಿನಿ ತಾರೆಯರು; ಯಶ್, ಸುದೀಪ್ ಸಖತ್ ಡ್ಯಾನ್ಸ್
- Finance
ಸಿಲಿಂಡರ್ ಬುಕ್ ಮಾಡಿದ ಎರಡು ಗಂಟೆಯೊಳಗೆ ಮನೆ ಬಾಗಿಲಿಗೆ ಡೆಲಿವರಿ
- Sports
ಆಸಿಸ್ ಬೌಲರ್ಗಳಿಗೆ ಪಾಂಟಿಂಗ್ ಚಾಟಿ: ಶಾರ್ದೂಲ್- ಸುಂದರ್ ಆಟಕ್ಕೆ ಮೆಚ್ಚುಗೆ
- Lifestyle
ಸಂಜೆ ಸ್ನ್ಯಾಕ್ಸ್ ಗೆ ಹೇಳಿಮಾಡಿಸಿದ್ದು ಈ ತಡ್ಕಾ ಮಸಾಲೆ ಮ್ಯಾಗಿ
- Education
BEL Recruitment 2021: 205 ಟೆಕ್ನೀಶಿಯನ್ ಅಪ್ರೆಂಟಿಸ್ ಹುದ್ದೆಗಳಿಗೆ ಅರ್ಜಿ ಆಹ್ವಾನ
- Technology
ಒನ್ಪ್ಲಸ್ ನಾರ್ಡ್ ಜುಲೈ 15 ರಿಂದ ಅಮೆಜಾನ್ ತಾಣದಲ್ಲಿ ಪ್ರಿ-ಆರ್ಡರ್ಗೆ ಲಭ್ಯವಿದೆ; ಖರೀದಿಸುವಲ್ಲಿ ಮೊದಲಿಗರಾಗಿರಿ!
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
ಮಾರ್ಚ್ ತಿಂಗಳ ಮಾರಾಟದಲ್ಲಿ ಸ್ಯಾಂಟ್ರೋ ಕಾರನ್ನು ಹಿಂದಿಕ್ಕಿದ ವ್ಯಾಗನ್ ಆರ್
ಮೊದಲನೆಯ ತಲೆಮಾರಿನ ಮಾರುತಿ ಸುಜುಕಿ ವ್ಯಾಗನ್ ಆರ್ ಕಾರುಗಳು 1999ರಲ್ಲಿ ಬಿಡುಗಡೆಗೊಂಡಿದ್ದು, ಹೊಸ ತಲೆ ಮಾರಿನ ವ್ಯಾಗನ್ ಆರ್ ಕಾರು ಜನವರಿ 23, 2019ರಂದು ಬಿಡುಗಡೆಗೊಂಡಿತು. ಹೀಗಿರುವಾಗ ಈ ಕಾರುಗಳಿಗೆ ಪೈಪೋಟಿ ನೀಡಲು ಮಾರುಕಟ್ಟೆಗೆ ರೀ ಎಂಟ್ರೊ ಕೊಟ್ಟ ಹ್ಯುಂಡೈ ಸ್ಯಾಂಟ್ರೋ ಕಾರುಗಳು ಹೆಚ್ಚಾಗಿ ಸದ್ದು ಮಾಡಿದರೂ ಸಹ ವ್ಯಾಗನ್ ಆರ್ ಕಾರನ್ನು ಖರೀದಿಸಲು ಗ್ರಾಹಕರು ಮುಂದಾಗುತ್ತಿದ್ದಾರೆ.

ಕಾರ್‍ಟಾಕ್ ವರದಿಗಳ ಪ್ರಕಾರ ಮಾರ್ಚ್ 2019ರಲ್ಲಿ ಸುಮಾರು 16,152 ಯೂನಿಟ್ ವ್ಯಾಗನ್ ಆರ್ ಕಾರುಗಳು ಮಾರಾಟಗೊಂಡರೆ ಇನ್ನು 8,280 ಯೂನಿಟ್ ಸ್ಯಾಂಟ್ರೋ ಕಾರುಗಳು ಮಾರಾಟಗೊಂಡಿದೆ. ಅಂದರೆ ಲೆಕ್ಕ ಹಾಕಿದರೆ ಸ್ಯಾಂಟ್ರೋ ಕಾರುಗಳಿಗಿಂತಲೂ 2ರಷ್ಟು ಮಾರುತಿ ಸುಜುಕಿ ವ್ಯಾಗನ್ ಆರ್ ಕಾರುಗಳು ಮಾರಾಟಗೊಂಡಿದೆ. ಹಾಗಾದರೆ ಈ ಕಾರಿಗೆ ಯಾಕಿಷ್ಟು ಬೇಡಿಕೆ ಮತ್ತು ಇದರಲ್ಲಿರುವ ವೈಶಿಷ್ಟ್ಯತೆಗಳೆನು ಎಂದು ತಿಳಿಯಲು ಮುಂದಕ್ಕೆ ಓದಿರಿ..

ಬೆಲೆ ಮತ್ತು ಬುಕ್ಕಿಂಗ್
ಹೊಸ ಮಾರುತಿ ಸುಜುಕಿ ವ್ಯಾಗನ್ ಆರ್ ಕಾರು ದೆಹಲಿಯ ಎಕ್ಸ್ ಶೋರಂ ಪ್ರಕಾರ ರೂ. 4.19 ಲಕ್ಷದ ಪ್ರಾರಂಭಿಕ ಬೆಲೆಯನ್ನು ಪಡೆದುಕೊಂಡಿದ್ದು, ಖರೀದಿಸಲು ಬಯಸುವ ಗ್ರಾಹಕರು ನಿಮ್ಮ ಸಮೀಪದಲ್ಲಿರುವ ಮಾರುತಿ ಸುಜುಕಿ ಡೀಲರ್‍ಗಳ ಬಳಿ ರೂ. 11,000 ನೀಡಿ ಬುಕ್ಕಿಂಗ್ ಮಾಡಿಕೊಳ್ಳಬಹುದಾಗಿದೆ.

ಹೊಸ ಮಾರುತಿ ಸುಜುಕಿ ವ್ಯಾಗನ್ ಆರ್ ಕಾರು ಸಂಸ್ಥೆಯ ಸ್ವಿಫ್ಟ್, ಎರ್ಟಿಗಾ ಮತ್ತು ಇಗ್ನಿಸ್ ಕಾರುಗಳಲ್ಲಿ ಬಳಸಲಾದ ಹಾರ್ಟ್‍ಟೆಕ್ಶ್ ಪ್ಲಾಟ್‍ಫಾರ್ಮ್ ಅನ್ನು ಆಧರಿಸಿದ್ದು, ಹಳೆಯ ವ್ಯಾಗನ್ ಆರ್ ಕಾರಿಗಿಂತಲೂ ಹೆಚ್ಚಿನ ಬದಲಾವಣೆಗಳನ್ನು ಪಡೆದುಕೊಂಡಿದೆ. ಬಿಡುಗಡೆಗೂ ಮುನ್ನವೇ ಸ್ಪಾಟ್ ಟೆಸ್ಟಿಂಗ್ ವೇಳೆ ಮತ್ತು ಟೀಸರ್‍ಗಳ ಮೂಲಕ ಗ್ರಾಹಕರಲ್ಲಿ ಹೆಚ್ಚಿನ ನಿರೀಕ್ಷೆಯನ್ನು ಹುಟ್ಟುಹಾಕಿದೆ.

ಹೊಸ ವ್ಯಾಗನ್ ಆರ್ ವಿನ್ಯಾಸ
ಬಿಡುಗಡೆಯಾದ ಹೊಸ ಮಾರುತಿ ಸುಜುಕಿ ವ್ಯಾಗನ್ ಆರ್ ಕಾರಿನ ಮುಂಭಾಗದಲ್ಲಿ ಈ ಬಾರಿ ಹೊಸ ಗ್ರಿಲ್ ಡಿಸೈನ್, ನವೀಕರಿಸಲಾದ ಬಂಪರ್ ಮತ್ತು ಫಾಗ್ ಲ್ಯಾಂಪ್ ಅನ್ನು ಪಡೆದುಕೊಂಡಿದೆ. ಇದಲ್ಲದೇ ಅಪ್ಡೇಟೆಡ್ ವರ್ಟಿಕಲ್ ಟೈಲ್‍ಲೈಟ್ಸ್, ಕ್ರೋಮ್ ಸ್ಟ್ರಿಪ್ ಅನ್ನು ನೀಡಲಾಗಿದೆ.

ಇನ್ನು ಕಾರಿನ ಸೈಡ್ ಪ್ರೊಫೈಲ್ ಬಗ್ಗೆ ಹೇಳುವುದಾದರೆ ಈ ಕಾರು 14 ಇಂಚಿನ ಅಲಾಯ್ ವ್ಹೀಲ್ಸ್, ಪ್ಲೋಟಿಂಗ್ ರೂಫ್ ಡಿಸೈನ್, ಮತ್ತು ಒಆರ್‍ವಿಎಂನ ಮೇಲೆ ಇಂಟಿಗ್ರೇಟೆಡ್ ಇಂಡಿಕೇಟರ್‍ಗಳನ್ನು ನೀಡಲಾಗಿದೆ. ಕಾರಿನ ಹಿಂಭಾಗದಲ್ಲಿರುವ ನಂಬರ್ ಪ್ಲೇಟ್‍ನ ಮೇಲೆ ಕ್ರೋಮ್ ಸ್ಟ್ರಿಪ್ ಹಾಗು 'Wagon R' ಬ್ಯಾಡ್ಜಿಂಗ್ ಅನ್ನು ನೀಡಲಾಗಿದೆ.

ಹೊಸ ವ್ಯಾಗನ್ ಆರ್ ಕಾರಿನ ಸುತ್ತಳತೆ
ಹೊಸ ಮಾರುತಿ ಸುಜುಕಿ ವ್ಯಾಗನ್ ಆರ್ ಕಾರು ಹಿಂದಿನ ಮಾದರಿಯ ಕಾರಿಗಿಂತಲೂ ಗಾತ್ರದಲ್ಲಿ ಹೆಚ್ಚಿನ ಬದಲಾವಣೆಗಳನ್ನು ಪಡೆದುಕೊಂಡಿದ್ದು, ಹಿಂದಿನ ಮಾದರಿಗಿಂತಲೂ 60ಎಂಎಂ ಉದ್ದ, 145ಎಂಎಂ ಅಗಲ ಮತ್ತು 35ಎಂಎಂನ ಗ್ರೌಂಡ್ ಕ್ಲಿಯರೆನ್ಸ್ ಅನ್ನು ಅಧಿಕವಾಗಿ ಪಡೆದುಕೊಂಡಿದೆ.

ವೈಶಿಷ್ಟ್ಯತೆಗಳು
ಹೊಸ ವ್ಯಾಗನ್ ಆರ್ ಕಾರಿನ ಒಳಭಾಗದಲ್ಲಿ ಡ್ಯುಯಲ್ ಟೋನ್ ಡ್ಯಾಶ್‍ಬೋರ್ಡ್, ಆಪಲ್ ಕಾರ್ ಪ್ಲೇ ಮತ್ತು ಆಂಡ್ರಾಯ್ಡ್ ಆಟೋ ಸಪೋರ್ಟ್ ಮಾಡುವ 7 ಇಂಚಿನ ಟಚ್‍ಸ್ಕ್ರೀನ್ ಒನ್ಫೋಟೈನ್ಮೆಂಟ್ ಸಿಸ್ಟಂ, ಮ್ಯಾನುವಲ್ ಎಸಿ ಕಂಟ್ರೋಲ್ಸ್, ವಿದ್ಯುತ್‍ನಿಂದ ಅಡ್ಜಸ್ಟ್ ಮಾಡಬಹುದಾದ ಒಆರ್‍ವಿಎಂ, ಸ್ಟೀರಿಂಗ್ ಮೌಂಟೆಡ್ ಆಡಿಯೋ ಕಂಟ್ರೋಲ್ಸ್, ಪವರ್ ಮೀಟರ್ ಮತ್ತು ಅನಾಲಾಗ್ ಸ್ಪೀಡೊಮೀಟರ್ ಅನ್ನು ಅಳವಡಿಸಲಾಗಿದೆ.

ಎಂಜಿನ್ ಸಾಮರ್ಥ್ಯ
2019ರ ಹೊಸ ವ್ಯಾಗನ್ ಆರ್ ಕಾರಿನ ಎಲ್ಲಾ ವೇರಿಯಂಟ್‍ಗಳು 1.0 ಲೀಟರ್ 3 ಸಿಲೆಂಡರ್ ಪೆಟ್ರೋಲ್ ಎಂಜಿನ್ ಸಹಾಯದಿಂಡ 67ಬಿಹೆಚ್‍ಪಿ ಮತ್ತು 90 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುವ ಶಕ್ತಿಯನ್ನು ಪಡೆದುಕೊಂಡಿರುತ್ತದೆ. ಮತ್ತು ಕಾರಿನ ವಿಎಕ್ಸ್ಐ ಹಾಗು ಜೆಡ್ಎಕ್ಸ್ಐ ವೇರಿಯಂಟ್ ಕಾರುಗಳು 1.2 ಲೀಟರ್ 4 ಸಿಲೆಂಡರ್ ಪೆಟ್ರೋಲ್ ಎಂಜಿನ್ ಸಹಾಯದಿಂದ 90 ಬಿಹೆಚ್‍ಪಿ ಮತ್ತು 113ಎನ್ಎಮ್ ಟಾಕ್ರ್ ಅನ್ನು ಉತ್ಪಾದಿಸುವ ಶಕ್ತಿಯನ್ನು ಪಡೆದುಕೊಂಡಿದೆ.

ಎರಡೂ ಎಂಜಿನ್ ಅನ್ನು 5 ಸ್ಪೀಡ್ ಮ್ಯಾನುವಲ್ ಗೇರ್ ಬಾಕ್ಸ್ ಹಾಗು 1.2 ಲೀಟರ್ ಎಂಜಿನ್ ಅನ್ನು ಮಾರುತಿ ಸುಜುಕಿ ಸಂಸ್ಥೆಯ ಮಾರುತಿ ಎಜಿಎಸ್ (ಆಟೋ ಗೇರ್ ಶಿಫ್ಟ್) ಎಂಬ ಟ್ರಾನ್ಸ್ ಮಿಷನ್ ಆಯ್ಕೆಯೊಂದಿಗೆ ಖರೀದಿಗೆ ಲಭ್ಯವಿರಲಿದೆ.

ಸುರಕ್ಷಾ ಸಾಧನಗಳು
ಮಾರುತಿ ಸುಜುಕಿ ವ್ಯಾಗನ್ ಕಾರಿನಲ್ಲಿ ಈ ಬಾರಿ ಪ್ರಯಾಣಿಕರ ಸುರಕ್ಷತೆಗೆ ಹೆಚ್ಚು ಒತ್ತನ್ನು ನೀಡಲಾಗಿದ್ದು, ಎಬಿಎಸ್‍ನೊಂದಿಗೆ ಇಬಿಡಿ, ಡ್ಯುಯಲ್ ಏರ್‍ಬ್ಯಾಗ್ಸ್, ಸೀಟ್ ಬೆಲ್ಟ್ ರಿಮೈಂಡರ್, ಹೈ ಸ್ಪೀಡ್ ಅಲರ್ಟ್ ಸಿಸ್ಟಂ ಮತ್ತು ರಿವರ್ಸ್ ಪಾರ್ಕಿಂಗ್ ಸೆನ್ಸಾರ್‍ಗಳನ್ನು ಅಳವಡಿಸಲಾಗಿದೆ.

ಲಭ್ಯವಿರುವ ಬಣ್ಣಗಳು
2019ರ ಹೊಸ ಮಾರುತಿ ಸುಜುಕಿ ವ್ಯಾಗನ್ ಆರ್ ಕಾರು ಸುಪೀರಿಯರ್ ವೈಟ್, ಸಿಲ್ಕಿ ಸಿಲ್ವರ್, ಮ್ಯಾಗ್ಮಾ ಗ್ರೇ, ಆಟಮ್ನ್ ಆರೆಂಜ್, ನಟ್‍ಮೆಗ್ ಬ್ರೌನ್ ಮತ್ತು ಪೋಲ್‍ಸೈಡ್ ಬ್ಲೂ ಎಂಬ ಒಟ್ಟು 6 ಬಣ್ಣಗಳಲ್ಲಿ ಖರೀದಿಗೆ ಲಭ್ಯವಿದೆ.