ಎಲೆಕ್ಟ್ರಿಕ್ ಆವೃತ್ತಿಯಲ್ಲಿ ಬರಲಿರುವ ಮರ್ಸಿಡಿಸ್ - ಎಎಂಜಿ

ರೋಡ್ ಅಂಡ್ ಟ್ರಾಕ್ ವರದಿಯ ಪ್ರಕಾರ, ಜರ್ಮನ್ ಲಗ್ಷುರಿ ಕಾರು ತಯಾರಕ ಕಂಪನಿ ಮರ್ಸಿಡಿಸ್ ಬೆಂಜ್ ನ ಎಎಂಜಿ ಆವೃತ್ತಿಯು 2021 ರಿಂದ ಸಂಪೂರ್ಣವಾಗಿ ಎಲೆಕ್ಟ್ರಿಕ್ ಮಯವಾಗಿರಲಿದೆ. ಮೂಲಗಳ ಪ್ರಕಾರ 2019ರ ನ್ಯೂ ಯಾರ್ಕ್ ಆಟೋ ಶೋನಲ್ಲಿ ಅನಾವರಣಗೊಳಿಸಲಾದ ಹೊಸ ಮರ್ಸಿಡಿಸ್ ಜಿಎಲ್ಎಸ್ ನಲ್ಲಿ ಅಳವಡಿಸಲಾಗಿದ್ದ 48ವಿ ಲಘು ಹೈಬ್ರಿಡ್ ಅನ್ನು ಮರ್ಸಿಡಿಸ್ ಎಎಂಜಿ ಯಲ್ಲೂ ಬಳಸಲಾಗುವುದು.

ಎಲೆಕ್ಟ್ರಿಕ್ ಆವೃತ್ತಿಯಲ್ಲಿ ಬರಲಿರುವ ಮರ್ಸಿಡಿಸ್ - ಎಎಂಜಿ

ಎಎಂಜಿ ಸರಣಿಯ ಕಾರುಗಳನ್ನು ಎಲೆಕ್ಟ್ರಿಕ್‍ ಮಯ ಮಾಡುವ ಬಗ್ಗೆ ರೋಡ್ ಅಂಡ್ ಟ್ರಾಕ್ ಸುದ್ದಿ ಸಂಸ್ಥೆಯ ಜೊತೆ ಮಾತನಾಡಿರುವ ಮರ್ಸಿಡಿಸ್ ಕಂಪನಿಯ ಮುಖ್ಯಸ್ಥರೇ ಖಚಿತಪಡಿಸಿದ್ದಾರೆ. ಈ ಬಗ್ಗೆ ಮಾತನಾಡಿದ ಮರ್ಸಿಡಿಸ್ ಎಎಂಜಿಯ ಸಿಇಒ ಟಾಬಿಯಸ್ ಮೋರ್ಸ್ ರವರು, ಈಗಾಗಲೆ ವಿ8 ಎಸ್ ವಾಹನಕ್ಕೆ ಲಘು ಹೈಬ್ರಿಡ್ ಅಳವಡಿಸಿದ್ದ ಮರ್ಸಿಡಿಸ್ ನ ಘಟಕದಲ್ಲಿಯೇ ಹೊಸ ಮರ್ಸಿಡಿಸ್ ಜಿಎಲ್ಎಸ್ 580 ವಾಹನಕ್ಕೂ ಲಘು ಹೈಬ್ರಿಡ್ ಅಳವಡಿಸಲಾಗುವುದು ಎಂದು ತಿಳಿಸಿದರು.

ಎಲೆಕ್ಟ್ರಿಕ್ ಆವೃತ್ತಿಯಲ್ಲಿ ಬರಲಿರುವ ಮರ್ಸಿಡಿಸ್ - ಎಎಂಜಿ

ಮರ್ಸಿಡಿಸ್ ಜಿಎಲ್ಎಸ್ 580 ಯಲ್ಲಿ ಟ್ವಿನ್ ಟರ್ಬೋ 4.0 ಲೀಟರಿನ ವಿ8 ಎಂಜಿನ್ ಇದ್ದು, ಅದಕ್ಕೆ ಪೂರಕವಾಗಿ 48 ವೋಲ್ಟ್ಸ್ ಎಲೆಕ್ಟ್ರಿಕ್ ಮೋಟಾರ್ ಬಳಸುವ ಲಘು ಹೈಬ್ರಿಡ್ ಸಿಸ್ಟಂ ಅನ್ನು ಅಳವಡಿಸಲಾಗಿದೆ.

ಎಲೆಕ್ಟ್ರಿಕ್ ಆವೃತ್ತಿಯಲ್ಲಿ ಬರಲಿರುವ ಮರ್ಸಿಡಿಸ್ - ಎಎಂಜಿ

ಟ್ವಿನ್ ಟರ್ಬೋ ಎಎಂಜಿ ವಿ8 ಎಂಜಿನ್ ನಾರ್ಮಲ್ ಮೋಡ್ ನಲ್ಲಿದ್ದಾಗ 482 ಬಿಹೆಚ್‍ಪಿ ಮತ್ತು 700 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸಿದರೆ ಆಕ್ಸೆಲೆರೇಷನ್ ಮೋಡ್ ನಲ್ಲಿದ್ದಾಗ 22 ಬಿಹೆಚ್‍ಪಿ ಮತ್ತು 250 ಎನ್ಎಂ ಟಾರ್ಕ್ ಅನ್ನು ಹೆಚ್ಚುವರಿಯಾಗಿ ಉತ್ಪಾದಿಸುತ್ತದೆ.

ಎಲೆಕ್ಟ್ರಿಕ್ ಆವೃತ್ತಿಯಲ್ಲಿ ಬರಲಿರುವ ಮರ್ಸಿಡಿಸ್ - ಎಎಂಜಿ

ಮೋರ್ಸ್ ರವರ ಪ್ರಕಾರ ಎಎಂಜಿ ಯು ಲಘು ಹೈಬ್ರಿಡ್ ಸೆಟ್ ಅಪ್ ಅನ್ನು, ಜಿಎಲ್ಎಸ್ 580 ಮಾದರಿಯಲ್ಲಿ ಅಳವಡಿಸುವ ಮುನ್ನ, ಜಿಎಲ್ಇ ಮತ್ತು ಜಿಎಲ್ಎಸ್ ಮಾದರಿಗಳಲ್ಲಿ ಬಳಸಲಾಗಿತ್ತು. ಮೋರ್ಸ್ ರವರು ನೀಡಿರುವ ಹೇಳಿಕೆ ಪ್ರಕಾರ ಲಘು ಹೈಬ್ರಿಡ್ ಸೆಟ್ ಅಪ್ ಎಎಂಜಿ ಸಾಮರ್ಥ್ಯವನ್ನು ಹೊಂದಿ, ಮುಂದೆ ಬಿಡುಗಡೆಯಾಗುವ ಎಲ್ಲಾ ಕಾರುಗಳನ್ನು ಮತ್ತು ಎಸ್‍ಯುವಿಗಳನ್ನು ಅಫಾಲ್ಟರ್‍‍ಬಾಚ್ ಘಟಕದಲ್ಲಿ 2021 ರಿಂದ ಎಲೆಕ್ಟ್ರಿಫಿಕೇಷನ್ ಮಾಡಲಾಗುವುದು. ಎಲೆಕ್ಟ್ರಿಫಿಕೇಷನ್ ಹೊಂದುವುದು ಮುಂಬರುವ ದಿನಗಳಲ್ಲಿ ಅಧಿಕ ಸಾಮರ್ಥ್ಯದ ಕಾರುಗಳಿಗೆ ಅನಿವಾರ್ಯವಾಗಲಿದ್ದು, ಈ ಸೆಗ್ ಮೆಂಟಿನಲ್ಲಿ ಬರುವ ಕಾರುಗಳು ಅಧಿಕ ಸಂಖ್ಯೆಯ ಎಲೆಕ್ಟ್ರಿಕ್ ಪವರ್ ಟ್ರೇನ್ ಗಳನ್ನು ಹೊಂದಿರಲಿವೆ.

ಎಲೆಕ್ಟ್ರಿಕ್ ಆವೃತ್ತಿಯಲ್ಲಿ ಬರಲಿರುವ ಮರ್ಸಿಡಿಸ್ - ಎಎಂಜಿ

ಮರ್ಸಿಡಿಸ್ ಎಎಂಜಿ ಮೊದಲ ಬಾರಿಗೆ ಎಲೆಕ್ಟ್ರಿಕ್ ಪವರ್ ಟ್ರೇನ್ ಗಳನ್ನು ತನ್ನ ಹೊಸ 53 ಸೀರಿಸ್ ಕಾರುಗಳಲ್ಲಿ ಪ್ರಾರಂಭಿಸಿತು. 53ನೇ ಸೀರಿಸ್ ನಲ್ಲಿ ಮರ್ಸಿಡಿಸ್ ಎಎಂಜಿ ಟರ್ಬೋ ಚಾರ್ಜ್ ನ 3.0 ಲೀಟರಿನ ಸ್ಟ್ರೇಟ್ ಸಿಕ್ಸ್ ಎಂಜಿನ್ ಜೊತೆಗೆ 48 ವೋಲ್ಟ್ ನ ಇಂಟಿಗ್ರೇಟೆಡ್ ಸ್ಟಾರ್ಟರ್ ಜನರೇಟರ್ (ಐಎಸ್‍ಜಿ) ಮತ್ತು ಟರ್ಬೋಲಾಗ್ ಅನ್ನು ಬ್ಯಾಲೆನ್ಸ್ ಮಾಡಲು ಎಲೆಕ್ಟ್ರಿಕ್ ಕಂಪ್ರೆಸರ್ ಹೊಂದಿದೆ. ಹೊಸ ಜಿಎಲ್ಎಸ್ 580 ಕಾರು ಐಎಸ್‍ಜಿ ಯನ್ನು ಮಾತ್ರ ಬಳಸುತ್ತಿದೆ.

MUST READ: ಪರಿಸರ ಸ್ನೇಹಿ ಕಾರು ನಿರ್ಮಾಣದತ್ತ ಮರ್ಸಿಡಿಸ್ ಮಹತ್ವದ ಹೆಜ್ಜೆ

ಎಲೆಕ್ಟ್ರಿಕ್ ಆವೃತ್ತಿಯಲ್ಲಿ ಬರಲಿರುವ ಮರ್ಸಿಡಿಸ್ - ಎಎಂಜಿ

ಎಎಂಜಿ ಯ ಮುಂದಿನ ದೊಡ್ಡ ಪ್ರಾಜೆಕ್ಟ್ ಹೈಪರ್ ಕಾರು ಆಗಿರಲಿದೆ. ಅದು ಮರ್ಸಿಡಿಸ್ ಬ್ರಾಂಡಿನ ಎಲೆಕ್ಟ್ರಿಫಿಕೇಷನ್ ಯೋಜನೆಗಳ ಶೋ ಪೀಸ್ ಆಗಿರಲಿದೆ. ಮರ್ಸಿಡಿಸ್ ಎಎಂಜಿ ಒನ್ ಕಾರು 1.6 ಲೀಟರಿನ ಟರ್ಬೋ ಚಾರ್ಜ್ ಫಾರ್ಮುಲಾ ಒನ್ ಎಂಜಿನ್ ಜೊತೆಯಲ್ಲಿ 3 ಎಲೆಕ್ಟ್ರಿಕ್ ಮೋಟಾರ್ಸ್ ಗಳ (ಮುಂಭಾಗದಲ್ಲಿರುವ ಫ್ರಂಟ್ ವ್ಹೀಲ್ ಗಳ ಮೇಲೆ ಒಂದೊಂದು ಮತ್ತು ಮೂರನೇಯದನ್ನು ಕ್ರಾಂಕ್ ಶಾಫ್ಟ್ ಮೇಲೆ) ಜೊತೆಯಲ್ಲಿ ಎಲೆಕ್ಟ್ರಿಕ್ ಟರ್ಬೋ ಚಾರ್ಜರ್ ಅನ್ನು ಹೊಂದಿರಲಿದೆ.

ಎಲೆಕ್ಟ್ರಿಕ್ ಆವೃತ್ತಿಯಲ್ಲಿ ಬರಲಿರುವ ಮರ್ಸಿಡಿಸ್ - ಎಎಂಜಿ

ವಾಯು ಮಾಲಿನ್ಯದ ಕಠಿಣ ನಿಯಮಗಳಿಂದಾಗಿ ಎಎಂಜಿ ತನ್ನ ವಿ12 ಎಂಜಿನ್ ಅನ್ನು ನಿಲ್ಲಿಸುತ್ತಿದೆ. ಮೋರ್ಸ್ ರವರ ಪ್ರಕಾರ ಮುಂದಿನ ಎಎಂಜಿಯ 65 ಸರಣಿಯ ವಾಹನಗಳು ಮಾರ್ಕ್ಸ್ ಟ್ವಿನ್ ಟರ್ಬೋ ವಿ8 ಎಂಜಿನ್‍ಗಳ ಜೊತೆಯಲ್ಲಿ ಫ್ರಂಟ್ ವ್ಹೀಲ್ ಅನ್ನು ಡ್ರೈವ್ ಮಾಡುವ ಎಲೆಕ್ಟ್ರಿಕ್ ಮೋಟಾರ್ ಗಳಿರಲಿವೆ.

ಎಲೆಕ್ಟ್ರಿಕ್ ಆವೃತ್ತಿಯಲ್ಲಿ ಬರಲಿರುವ ಮರ್ಸಿಡಿಸ್ - ಎಎಂಜಿ

ಈ ಎಲ್ಲಾ ಬದಲಾವಣೆಗಳಿಂದ ನಾವು ಎಎಂಜಿಯ ವಿ8 ಇನ್ನಷ್ಟು ಕಾಲ ಮಾರುಕಟ್ಟೆಯಲ್ಲಿರುವುದನ್ನು ಕಾಣಬಹುದು. ಈಗ ಸದ್ಯಕ್ಕೆ ಎಲೆಕ್ಟ್ರಿಕ್ ಆಗದೇ ಇರುವ ವಾಹನವೆಂದರೆ ಅದು ಮರ್ಸಿಡಿಸ್ ಎಎಂಜಿ ಎ 45ಎಸ್, ಇದು ಎಎಂಜಿ ಯ ಟರ್ಬೋ ಚಾರ್ಜ್ 2.0 ಲೀಟರಿನ ಇನ್‍ಲೈನ್ ಫೋರ್ ಪವರ್‍‍ಪ್ಲಾಂಟ್ ಹೊಂದಿದ್ದು, 400 ಬಿಹೆಚ್‍ಪಿ ಉತ್ಪಾದಿಸುತ್ತಿದೆ.

Most Read Articles

Kannada
English summary
Mercedes-AMG To Go Hybrid From 2021 — Electricity To Save The Rumbling V8 - Read in Kannada
Story first published: Thursday, April 25, 2019, 11:50 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X