2019ರಲ್ಲಿ ಹೊಸ ಸಂಚಲನ ಸೃಷ್ಠಿಸಲಿವೆ ಬಿಡುಗಡೆಯಾಗಲಿರುವ ಈ ಐದು ಕಾರುಗಳು..!

ಭಾರತೀಯ ಗ್ರಾಹಕರ ಅಭಿರುಚಿಗಳು ಬದಲಾಗುತ್ತಿವೆ. ಹೀಗಾಗಿ ಆಟೋ ಉದ್ಯಮವು ಸಹ ಹಲವು ಹೊಸತನಗಳೊಂದಿಗೆ ಬದಲಾವಣೆಗೊಳ್ಳುತ್ತಿದ್ದು, ಪ್ರಮುಖ ಕಾರು ಸಂಸ್ಥೆಗಳು ಈ ವರ್ಷ ತಮ್ಮ ಬಹುನೀರಿಕ್ಷಿತ ಕಾರುಗಳನ್ನು ಬಿಡುಗಡೆಗೊಳಿಸುವ ತವಕದಲ್ಲಿವೆ.

2019ರಲ್ಲಿ ಹೊಸ ಸಂಚಲನ ಸೃಷ್ಠಿಸಲಿವೆ ಬಿಡುಗಡೆಯಾಗಲಿರುವ ಈ ಐದು ಕಾರುಗಳು..!

ದೇಶಿಯ ಮಾರುಕಟ್ಟೆಯಲ್ಲಿ ಇಷ್ಟು ದಿನಗಳ ಕಾಲ ಬಹುತೇಕ ಗ್ರಾಹಕರು ಅಗ್ಗದ ಬೆಲೆಯಲ್ಲಿ ಉತ್ತಮ ಮೈಲೇಜ್ ನೀಡಬಹುದಾದ ಕಾರುಗಳಿಗೆ ಹೆಚ್ಚಿನ ಆದ್ಯತೆ ನೀಡುತ್ತಿದ್ದರು. ಆದ್ರೆ ಇದೀಗ ಗ್ರಾಹಕರ ಬೇಡಿಕೆಗಳು ಬದಲಾವಣೆಗೊಳ್ಳುತ್ತಿದ್ದು, ಮೈಲೇಜ್ ಜೊತೆಗೆ ಸುರಕ್ಷತೆ, ಪರ್ಫಾಮೆನ್ಸ್ ಕಡೆಗೂ ಹೆಚ್ಚಿನ ಗಮನಹರಿಸುತ್ತಿದ್ದು, ಈ ನಿಟ್ಟಿನಲ್ಲಿ ಗ್ರಾಹಕರ ಅಭಿರುಚಿ ತಕ್ಕಂತೆ ಕಾರು ಉತ್ಪಾದನಾ ಸಂಸ್ಥೆಗಳು ಹೊಸ ಕಾರುಗಳನ್ನು ಸಿದ್ದಗೊಳಿಸುತ್ತಿವೆ. ಇವುಗಳಲ್ಲಿ ಬಿಡುಗಡೆಯಾಗಲಿರುವ ಟಾಪ್ 5 ಕಾರುಗಳ ಸಂಪೂರ್ಣ ಮಾಹಿತಿ ಇಲ್ಲಿದೆ ನೋಡಿ...

2019ರಲ್ಲಿ ಹೊಸ ಸಂಚಲನ ಸೃಷ್ಠಿಸಲಿವೆ ಬಿಡುಗಡೆಯಾಗಲಿರುವ ಈ ಐದು ಕಾರುಗಳು..!

01. ಟಾಟಾ ಹ್ಯಾರಿಯರ್

ಟಾಟಾ ಸಂಸ್ಥೆಯು ದೇಶಿಯ ಮಾರುಕಟ್ಟೆಯಲ್ಲಿ ವಿವಿಧ ಮಾದರಿಯ ವಾಹನ ಉತ್ಪಾದನೆ ಮತ್ತು ಮಾರಾಟದಲ್ಲಿ ತನ್ನದೆ ಆದ ವಿಶೇಷ ಬೇಡಿಕೆ ಹೊಂದಿದ್ದು, ಕಾಲಕ್ಕೆ ತಕ್ಕಂತೆ ಹೊಸತನ ಹುಟ್ಟುಹಾಕುವ ಟಾಟಾ ಈ ಬಾರಿ ಹ್ಯಾರಿಯರ್ ಎನ್ನುವ ಕಾರಿನ ಮೂಲಕ ಕಾರು ಖರೀದಿದಾರರಿಗೆ ಮತ್ತಷ್ಟು ಹತ್ತಿರವಾಗುವ ಪ್ರಯತ್ನಕ್ಕೆ ಕೈಹಾಕಿದೆ.

2019ರಲ್ಲಿ ಹೊಸ ಸಂಚಲನ ಸೃಷ್ಠಿಸಲಿವೆ ಬಿಡುಗಡೆಯಾಗಲಿರುವ ಈ ಐದು ಕಾರುಗಳು..!

ಇಂಪ್ಯಾಕ್ಟ್ ಡಿಸೈನ್ 2.0 ತಂತ್ರಜ್ಞಾನ ಆಧಾರದ ಮೇಲೆ ಹ್ಯಾರಿಯರ್ ಕಾರುಗಳನ್ನು ನಿರ್ಮಾಣ ಮಾಡಲಾಗಿದ್ದು, ಹೊಸ ಕಾರುಗಳಲ್ಲಿ "ಅಪ್ಟಿಮಲ್ ಮಾಡ್ಯೂಲರ್ ಎಫಿಷಿಯೆಂಟ್ ಗ್ಲೋಬಲ್ ಅಡ್ವಾನ್ಸ್ (OMEGA)" ಆರ್ಕಿಟೆಕ್ಚರ್ ಬಳಕೆ ಮಾಡಿರುವುದೇ ಹೊಸ ಕಾರಿನ ವಿನ್ಯಾಸಕ್ಕೆ ಮೆರಗು ತಂದಿವೆ.

2019ರಲ್ಲಿ ಹೊಸ ಸಂಚಲನ ಸೃಷ್ಠಿಸಲಿವೆ ಬಿಡುಗಡೆಯಾಗಲಿರುವ ಈ ಐದು ಕಾರುಗಳು..!

ಎಂಜಿನ್ ಸಾಮರ್ಥ್ಯ

ಹ್ಯಾರಿಯರ್ ಎಸ್‌ಯುವಿ ಕಾರು 2-ಲೀಟರ್(2 ಸಾವಿರ ಸಿಸಿ) 4 ಸಿಲಿಂಡರ್, ಕ್ರೆಯೊಟೆಕ್ ಡೀಸೆಲ್ ಎಂಜಿನ್ ಸಹಾಯದಿಂದ 138-ಬಿಹೆಚ್‍ಪಿ, 350-ಎನ್ಎಂ ಶಕ್ತಿಯನ್ನು ಉತ್ಪಾದಿಸುವ ಶಕ್ತಿಯೊಂದಿಗೆ ಪರ್ಫಾಮೆನ್ಸ್ ಪ್ರಿಯರ ಗಮನಸೆಳೆಯುತ್ತವೆ.

2019ರಲ್ಲಿ ಹೊಸ ಸಂಚಲನ ಸೃಷ್ಠಿಸಲಿವೆ ಬಿಡುಗಡೆಯಾಗಲಿರುವ ಈ ಐದು ಕಾರುಗಳು..!

ಕಾರಿನ ಬೆಲೆಗಳು(ಆನ್ ರೋಡ್ ಪ್ರಕಾರ)

ಕಂಪ್ಯಾಕ್ಟ್ ಎಸ್‌ಯುವಿ ಕಾರುಗಳಲ್ಲಿ ವಿಶೇಷ ಡಿಸೈನ್ ಹೊತ್ತು ಬಂದಿರುವ ಹ್ಯಾರಿಯರ್ ಕಾರಿನ ಬೆಲೆಯನ್ನು ಆನ್ ರೋಡ್ ಪ್ರಕಾದ ಆರಂಭಿಕವಾಗಿ ರೂ. 16 ಲಕ್ಷ ಮತ್ತು ಟಾಪ್ ಎಂಡ್ ಮಾದರಿಯನ್ನು ರೂ. 21 ಲಕ್ಷಕ್ಕೆ ಬಿಡುಗಡೆಗೊಳಿಸುವುದಾಗಿ ಟಾಟಾ ಸಂಸ್ಥೆಯೇ ಹೇಳಿಕೊಂಡಿದೆ.

ಬಿಡುಗಡೆಯ ದಿನಾಂಕ: ಜನವರಿ 23( ಟಾಟಾ ಅಧಿಕೃತ ಹೇಳಿಕೆ)

2019ರಲ್ಲಿ ಹೊಸ ಸಂಚಲನ ಸೃಷ್ಠಿಸಲಿವೆ ಬಿಡುಗಡೆಯಾಗಲಿರುವ ಈ ಐದು ಕಾರುಗಳು..!

02. ನಿಸ್ಸಾನ್ ಕಿಕ್ಸ್

ನಿನ್ಸಾಸ್ ಸಂಸ್ಥೆಯು ಭಾರತ ಸೇರಿದಂತೆ ಯುರೋಪ್ ರಾಷ್ಟ್ರಗಳಲ್ಲಿ ವಿವಿಧ ಮಾದರಿಯ ವಾಹನ ಉತ್ಪನ್ನಗಳನ್ನು ಮಾರಾಟ ಮಾಡುತ್ತಿದ್ದು, ಯುರೋಪ್‌ನಲ್ಲಿ ಜನಪ್ರಿಯತೆ ಸಾಧಿಸಿದಷ್ಟು ಭಾರತದಲ್ಲಿ ಅಷ್ಟಾಗಿ ಬೆಳವಣಿಗೆ ಕಾಣುತ್ತಿಲ್ಲ. ಹೀಗಾಗಿ ಪ್ರಸ್ತುತ ಗ್ರಾಹಕರ ಬೇಡಿಕೆಗೆ ಅನುಗುಣವಾಗಿ ಈ ಬಾರಿ ಕಿಕ್ಸ್ ಕಾರಿನೊಂದಿಗೆ ಹೊಸ ಪ್ರಯತ್ನಕ್ಕೆ ಕೈ ಹಾಕಿರುವುದು ಎಸ್‌ಯುವಿ ವಿಭಾಗದಲ್ಲಿ ಹೊಸ ಸಂಚಲನ ಮೂಡಿಸಿದೆ.

2019ರಲ್ಲಿ ಹೊಸ ಸಂಚಲನ ಸೃಷ್ಠಿಸಲಿವೆ ಬಿಡುಗಡೆಯಾಗಲಿರುವ ಈ ಐದು ಕಾರುಗಳು..!

ಜಾಗತಿಕ ಮಾರುಕಟ್ಟೆಗಳಲ್ಲಿ 2017ರ ಅವಧಿಯ ಬೆಸ್ಟ್ ಎಸ್‌ಯುವಿ ಎಂಬ ಹೆಗ್ಗಳಿಕೆ ಪಾತ್ರವಾಗಿರುವ ಕಿಕ್ಸ್ ಕಾರು ಇದೀಗ ಭಾರತದಲ್ಲೂ ಕಮಾಲ್ ಮಾಡಲು ಸಜ್ಜಾಗಿದ್ದು, ಆಕರ್ಷಕ ನೋಟ, ಗಮನಸೆಳೆಯುವ ಎಂಜಿನ್ ಪರ್ಫಾಮೆನ್ಸ್ ಮತ್ತು ಕೈಗೆಟುಕುವ ಬೆಲೆಗಳೇ ಈ ಹೊಸ ಕಾರಿನ ಪ್ರಮುಖ ಹೈಲೆಟ್ಸ್.

2019ರಲ್ಲಿ ಹೊಸ ಸಂಚಲನ ಸೃಷ್ಠಿಸಲಿವೆ ಬಿಡುಗಡೆಯಾಗಲಿರುವ ಈ ಐದು ಕಾರುಗಳು..!

ಎಂಜಿನ್ ಸಾಮರ್ಥ್ಯ

ಹೊಸ ಕಿಕ್ಸ್ ಮಾದರಿಯು 1.5-ಲೀಟರ್ ಹೆಚ್4ಕೆ ಪೆಟ್ರೋಲ್ ಎಂಜಿನ್ ಹಾಗೂ 1.5-ಲೀಟರ್ ಕೆ9ಕೆ ಡಿಸೇಲ್ ಎಂಜಿನ್ ಆಯ್ಕೆಯನ್ನು ಹೊಂದಿದ್ದು, ಪೆಟ್ರೋಲ್ ಮಾದರಿಯಲ್ಲಿ 5-ಸ್ಪೀಡ್ ಮ್ಯಾನುವಲ್ ಮತ್ತು ಡಿಸೇಲ್ ಮಾದರಿಯಲ್ಲಿ 6-ಸ್ಪೀಡ್ ಮ್ಯಾನುವಲ್ ಗೇರ್‌ಬಾಕ್ಸ್ ಜೋಡಿಸಲಾಗಿದೆ.

2019ರಲ್ಲಿ ಹೊಸ ಸಂಚಲನ ಸೃಷ್ಠಿಸಲಿವೆ ಬಿಡುಗಡೆಯಾಗಲಿರುವ ಈ ಐದು ಕಾರುಗಳು..!

ಕಾರಿನ ಬೆಲೆಗಳು(ಅಂದಾಜು)

ನಿಸ್ಸಾನ್ ಕಿಕ್ಸ್ ಕಾರಿನ ಬೆಲೆಗಳು ಎಕ್ಸ್‌ಶೋರೂಂ ಪ್ರಕಾರ ಆರಂಭಿಕವಾಗಿ ಎಕ್ಸ್‌ಶೋರೂಂ ಪ್ರಕಾರ ರೂ.11 ಲಕ್ಷದಿಂದ ಟಾಪ್ ಎಂಡ್ ಮಾದರಿಗೆ ರೂ.15 ಲಕ್ಷ ಬೆಲೆ ಇರಬಹುದೆಂದು ಅಂದಾಜಿಸಲಾಗಿದ್ದು, ಮಾರುತಿ ಸುಜುಕಿ ಎಸ್ ಕ್ರಾಸ್, ಹ್ಯುಂಡೈ ಕ್ರೇಟಾ, ಮಹೀಂದ್ರಾ ಎಕ್ಸ್‌ಯುವಿ 500 ಮತ್ತು ಬಿಡುಗಡೆಯಾಗಲಿರುವ ಟಾಟಾ ಹ್ಯಾರಿಯರ್ ಕಾರುಗಳಿಗೆ ತೀವ್ರ ಪೈಪೋಟಿ ನೀಡಲಿದೆ.

ಬಿಡುಗಡೆಯ ದಿನಾಂಕ(ಅಂದಾಜು): ಫೆಬ್ರುವರಿ ಅಂತ್ಯಕ್ಕೆ ಅಥವಾ ಮಾರ್ಚ್ ಆರಂಭದಲ್ಲಿ

2019ರಲ್ಲಿ ಹೊಸ ಸಂಚಲನ ಸೃಷ್ಠಿಸಲಿವೆ ಬಿಡುಗಡೆಯಾಗಲಿರುವ ಈ ಐದು ಕಾರುಗಳು..!

03. ಮಹೀಂದ್ರಾ ಎಕ್ಸ್‌ಯುವಿ300

ಮಹೀಂದ್ರಾ ಸಂಸ್ಥೆಯು ಕಾರು ಮಾರಾಟದಲ್ಲಿ ಭಾರೀ ಬದಲಾವಣೆ ತರುತ್ತಿದ್ದು, ಗ್ರಾಹಕರ ಬೇಡಿಕೆಗೆ ತಕ್ಕಂತೆ ವಿವಿಧ ನಮೂನೆಯ ಹೊಸ ಉತ್ಪನ್ನಗಳನ್ನು ಬಿಡುಗಡೆ ಮಾಡುತ್ತಿರುವುದು ಗ್ರಾಹಕರ ಆಕರ್ಷಣೆ ಕಾರಣವಾಗಿದೆ. ಸ್ಯಾಂಗ್‌ಯಾಂಗ್ ಜೊತೆಗೂಡಿ ಅಭಿವೃದ್ಧಿ ಪಡಿಸಲಾಗಿರುವ ಎಕ್ಸ್‌ಯುವಿ300 ಕಾರು ಮಾದರಿಯು ಹಲವು ವಿಶೇಷತೆಗಳಿಂದ ಕೂಡಿದ್ದು, 5 ಆಸನವುಳ್ಳ ಕಾರು ಮಾದರಿಯಾಗಿದೆ.

MOST READ: 8.50 ಕೋಟಿ ಮೌಲ್ಯದ ರೋಲ್ಸ್ ರಾಯ್ಸ್ ಕಲಿನಿಯನ್ ಒಡತಿಯಾದ ಭಾರತದ ಮೊದಲ ಮಹಿಳೆ..!

2019ರಲ್ಲಿ ಹೊಸ ಸಂಚಲನ ಸೃಷ್ಠಿಸಲಿವೆ ಬಿಡುಗಡೆಯಾಗಲಿರುವ ಈ ಐದು ಕಾರುಗಳು..!

ಮಹೀಂದ್ರಾ ಸಂಸ್ಥೆಯು ದಕ್ಷಿಣ ಕೊರಿಯಾದ ಐಷಾರಾಮಿ ಕಾರು ಉತ್ಪಾದನಾ ಸಂಸ್ಥೆಯಾದ ಸ್ಯಾಂಗ್‌ಯಾಂಗ್ ಜೊತೆಗೂಡಿ ಹೊಸ ನಮೂನೆಯ ಕಾರು ಉತ್ಪನ್ನಗಳನ್ನು ಅಭಿವೃದ್ಧಿ ಪಡೆಸುತ್ತಿದ್ದು, ಸ್ಯಾಂಗ್‌ಯಾಂಗ್ ನಿರ್ಮಾಣದ ಟಿವೊಲಿ ಕಾರಿನ ಮಾದರಿಯಲ್ಲೇ ಹೊಸ ಎಕ್ಸ್‌ಯುವಿ300 ಕಾರನ್ನು ಭಾರತೀಯ ಗ್ರಾಹಕರ ಅಭಿರುಚಿಗೆ ತಕ್ಕಂತೆ ನಿರ್ಮಾಣ ಮಾಡಿದೆ.

2019ರಲ್ಲಿ ಹೊಸ ಸಂಚಲನ ಸೃಷ್ಠಿಸಲಿವೆ ಬಿಡುಗಡೆಯಾಗಲಿರುವ ಈ ಐದು ಕಾರುಗಳು..!

ಎಂಜಿನ್ ಸಾಮರ್ಥ್ಯ

ಹೊಸ ಎಕ್ಸ್‌ಯುವಿ300 ಕಾರು ಡಿಸೇಲ್ ಮತ್ತು ಪೆಟ್ರೋಲ್ ಎರಡು ಮಾದರಿಯಲ್ಲೂ ಖರೀದಿಗೆ ಲಭ್ಯವಾಗಲಿದ್ದು, ಡಿಸೇಲ್ ಕಾರುಗಳು 1.5-ಲೀಟರ್( 1,500ಸಿಸಿ) ಎಂಜಿನ್‌ನೊಂದಿಗೆ 121-ಬಿಎಚ್‌ಪಿ ಮತ್ತು 320-ಎನ್ಎಂ ಟಾರ್ಕ್ ಉತ್ಪಾದನಾ ಗುಣ ಹೊಂದಿರಲಿವೆ.

2019ರಲ್ಲಿ ಹೊಸ ಸಂಚಲನ ಸೃಷ್ಠಿಸಲಿವೆ ಬಿಡುಗಡೆಯಾಗಲಿರುವ ಈ ಐದು ಕಾರುಗಳು..!

ಕಾರಿನ ಬೆಲೆಗಳು(ಅಂದಾಜು)

ಮಾರುಕಟ್ಟೆಯಲ್ಲಿ ಲಭ್ಯವಿರುವ ಕಂಪ್ಯಾಕ್ಟ್ ಎಸ್‌ಯುವಿಗಳಿಂತೂ ತಾಂತ್ರಿಕವಾಗಿ ಬಲಿಷ್ಠವಾಗಿರುವ ಎಕ್ಸ್‌ಯುವಿ300 ಕಾರುಗಳ ಬೆಲೆಯು ಎಕ್ಸ್‌ಶೋರೂಂ ಪ್ರಕಾರ ಆರಂಭಿಕವಾಗಿ ರೂ. 9.99 ಲಕ್ಷದಿಂದ ಟಾಪ್ ಎಂಡ್ ಮಾದರಿಗೆ ರೂ. 13 ಲಕ್ಷ ಬೆಲೆ ನಿಗದಿಯಾಗುವ ಸಾಧ್ಯತೆಗಳಿವೆ.

ಬಿಡುಗಡೆಯ ದಿನಾಂಕ: ಫೆಬ್ರುವರಿ 15(ಮಹೀಂದ್ರಾ ಅಧಿಕೃತ ಹೇಳಿಕೆ)

2019ರಲ್ಲಿ ಹೊಸ ಸಂಚಲನ ಸೃಷ್ಠಿಸಲಿವೆ ಬಿಡುಗಡೆಯಾಗಲಿರುವ ಈ ಐದು ಕಾರುಗಳು..!

04. ಮಾರುತಿ ಸುಜುಕಿ ನ್ಯೂ ವ್ಯಾಗನ್ ಆರ್

ದೇಶಿಯ ಮಾರುಕಟ್ಟೆಯಲ್ಲಿ ಹೆಚ್ಚು ಜನಪ್ರಿಯತೆಯನ್ನು ಪಡೆದಿರುವ ಮಾರುತಿ ಸುಜುಕಿ ಸಂಸ್ಥೆಯು ತನ್ನ ಬಹುಬೇಡಿಕೆಯ ವ್ಯಾಗನ್ ಆರ್ ಕಾರು ಮಾದರಿಯನ್ನು ಹೊಸ ತಲೆಮಾರಿನ ವೈಶಿಷ್ಟ್ಯತೆಗಳೊಂದಿಗೆ ಮರುಬಿಡುಗಡೆ ಮಾಡುತ್ತಿದೆ.

MOST READ: ಶಾಕಿಂಗ್ ಸುದ್ದಿ- 2019ರಲ್ಲಿ ಬ್ಯಾನ್ ಆಗಲಿವೆ ಈ ಒಂಬತ್ತು ಜನಪ್ರಿಯ ಕಾರುಗಳು..!

2019ರಲ್ಲಿ ಹೊಸ ಸಂಚಲನ ಸೃಷ್ಠಿಸಲಿವೆ ಬಿಡುಗಡೆಯಾಗಲಿರುವ ಈ ಐದು ಕಾರುಗಳು..!

ಜಪಾನ್ ಮಾರುಕಟ್ಟೆಯಲ್ಲಿ ಮಾರಾಟವಾಗುತ್ತಿರುವ ಟಾಲ್-ಬಾಯ್ ವಿನ್ಯಾಸವನ್ನು ಆಧರಿಸಿ ಹೊಸ ವ್ಯಾಗನ್ ಆರ್ ಭಾರತದಲ್ಲಿ ಬಿಡುಗಡೆಗೊಳ್ಳಲಿದ್ದು, ಹೊಸ ವಿನ್ಯಾಸದ ಹೆಡ್‍ಲ್ಯಾಂಪ್ ಕ್ಲಸ್ಟರ್, ಏರ್ ಇಂಟೇಕ್ಸ್ ನೊಂದಿಗೆ ಮರುವಿನ್ಯಾಸ ಮಾಡಲಾದ ಬಂಪರ್, ಫಾಗ್ ಲ್ಯಾಂಪ್, ದೊಡ್ಡ ಗಾತ್ರದ ಕ್ರೋಮ್ ವಿನ್ಯಾಸ ಮತ್ತು ಮಧ್ಯಭಾಗದಲ್ಲಿ ಬ್ಯಾಡ್ಜಿಂಗ್ ಅನ್ನು ನೀಡಲಾಗಿದೆ.

2019ರಲ್ಲಿ ಹೊಸ ಸಂಚಲನ ಸೃಷ್ಠಿಸಲಿವೆ ಬಿಡುಗಡೆಯಾಗಲಿರುವ ಈ ಐದು ಕಾರುಗಳು..!

ಕಾರಿನ ಬೆಲೆಗಳು(ಅಂದಾಜು)

ಸದ್ಯ ಮಾರುಕಟ್ಟೆಯಲ್ಲಿರುವ ಸಾಮಾನ್ಯ ಮಾದರಿಯ ವ್ಯಾಗನ್ ಆರ್ ಕಾರಿಗಿಂತಲೂ ಹೆಚ್ಚುವರಿಯಾಗಿ ರೂ. 1.50 ಲಕ್ಷದಿಂದ ರೂ. 2 ಲಕ್ಷದ ತನಕ ಬೆಲೆ ಪಡೆದುಕೊಳ್ಳಲಿದ್ದು, 1.0 ಕೆ ಸಿರೀಸ್ ಪೆಟ್ರೋಲ್ ಎಂಜಿನ್ ಸಹಾಯದೊಂದಿಗೆ 67ಬಿಹೆಚ್‍‍ಪಿ ಮತ್ತು 91ಎನ್ಎಮ್ ಟಾರ್ಕ್ ಅನ್ನು ಉತ್ಪಾದಿಸುವ ಶಕ್ತಿಯನ್ನು ಪಡೆದುಕೊಂಡಿದೆ.

ಬಿಡುಗಡೆಯ ದಿನಾಂಕ: ಜನವರಿ 23( ಮಾರುತಿ ಸುಜುಕಿ ಅಧಿಕೃತ ಹೇಳಿಕೆ)

2019ರಲ್ಲಿ ಹೊಸ ಸಂಚಲನ ಸೃಷ್ಠಿಸಲಿವೆ ಬಿಡುಗಡೆಯಾಗಲಿರುವ ಈ ಐದು ಕಾರುಗಳು..!

05. ಕಿಯಾ ಎಸ್‌ಪಿ ಕಾನ್ಸೆಪ್ಟ್

ಜಗತ್ತಿನ 8ನೇ ಅತಿದೊಡ್ಡ ಕಾರು ಉತ್ಪಾದನಾ ಸಂಸ್ಥೆಯಾಗಿರುವ ದಕ್ಷಿಣ ಕೊರಿಯಾದ ಕಿಯಾ ಮೋಟಾರ್ಸ್ ಭಾರತದಲ್ಲಿ ಪ್ರಥಮ ಬಾರಿಗೆ ತನ್ನ ವಾಣಿಜ್ಯ ಚಟುವಟಿಕೆಗಳನ್ನು ಆರಂಭಗೊಳಿಸುತ್ತಿದ್ದು, 2019ರ ಅವಧಿಯಲ್ಲಿ ವಿವಿಧ ಮಾದರಿಯ ಒಟ್ಟು 8 ಹೊಸ ಕಾರುಗಳನ್ನು ಬಿಡುಗಡೆಗೊಳಿಸುವ ಯೋಜನೆಯಲ್ಲಿದೆ. ಇದರಲ್ಲಿ ಮೊದಲಿಗೆ ಮಾರುಕಟ್ಟೆಗೆ ಲಗ್ಗೆಯಿಡುವುದೇ ಎಸ್‌ಪಿ ಕಾನ್ಸೆಪ್ಟ್ ಕಂಪ್ಯಾಕ್ಟ್ ಎಸ್‌ಯುವಿ.

2019ರಲ್ಲಿ ಹೊಸ ಸಂಚಲನ ಸೃಷ್ಠಿಸಲಿವೆ ಬಿಡುಗಡೆಯಾಗಲಿರುವ ಈ ಐದು ಕಾರುಗಳು..!

ಹ್ಯುಂಡೈ ಕ್ರೆಟಾ, ಮಾರುತಿ ಸುಜುಕಿ ವಿಟಾರಾ ಬ್ರೆಝಾ ಕಾರುಗಳಿಗೆ ಪ್ರತಿಸ್ಪರ್ಧಿಯಾಗಿ ರಸ್ತೆಗಿಳಿಯುವ ಎಸ್‌ಪಿ ಕಾನ್ಸೆಪ್ಟ್ ಕಾರುಗಳು 1.6-ಲೀಟರ್ ಡೀಸೆಲ್ ಎಂಜಿನ್ ಮತ್ತು 1.5-ಲೀಟರ್ ಪೆಟ್ರೋಲ್ ಎಂಜಿನ್‌ನೊಂದಿಗೆ ಉತ್ತಮ ಚಾಲನಾ ಸೌಲಭ್ಯಗಳನ್ನು ಪಡೆದುಕೊಳ್ಳಲಿವೆ.

MOST READ: 7 ಸಾವಿರ ಕೋಟಿ ವೆಚ್ಚದಲ್ಲಿ ತಲೆಎತ್ತಿದ ಕಿಯಾ ಮೋಟಾರ್ಸ್ ಮೊದಲ ಕಾರು ಉತ್ಪಾದನಾ ಘಟಕ

2019ರಲ್ಲಿ ಹೊಸ ಸಂಚಲನ ಸೃಷ್ಠಿಸಲಿವೆ ಬಿಡುಗಡೆಯಾಗಲಿರುವ ಈ ಐದು ಕಾರುಗಳು..!

ಕಿಯಾ ಮೋಟಾರ್ಸ್ ಸಂಸ್ಥೆಯು ಸದ್ಯಕ್ಕೆ ಭಾರತದಲ್ಲಿ ಮೊದಲ ಕಾರು ಉತ್ಪಾದನಾ ಘಟಕವನ್ನು ಆಂಧ್ರಪ್ರದೇಶದ ಅನಂತಪುರ ಜಿಲ್ಲೆ ಪೆನುಕೊಂಡದ ಬಳಿ ನಿರ್ಮಾಣ ಮಾಡಿದ್ದು, ಬರೋಬ್ಬರಿ 7 ಸಾವಿರ ಕೋಟಿ ಬಂಡವಾಳದೊಂದಿಗೆ 540 ಎಕರೆ ವಿಸ್ತೀರ್ಣದಲ್ಲಿ ವಿಶ್ವದರ್ಜೆ ಸೌಲಭ್ಯಗಳೊಂದಿಗೆ ಹೊಸ ಕಾರು ಉತ್ಪಾದನಾ ಘಟಕವನ್ನ ಸಿದ್ದಗೊಳಿಸಲಾಗಿದೆ.

2019ರಲ್ಲಿ ಹೊಸ ಸಂಚಲನ ಸೃಷ್ಠಿಸಲಿವೆ ಬಿಡುಗಡೆಯಾಗಲಿರುವ ಈ ಐದು ಕಾರುಗಳು..!

2019ರ ಎರಡನೇ ತ್ರೈಮಾಸಿಕ ಅವಧಿಯಲ್ಲಿ ತನ್ನ ಮೊದಲ ಎಸ್‌ಪಿ ಕಾನ್ಸೆಪ್ಟ್ ಕಾರನ್ನು ಬಿಡುಗಡೆ ಮಾಡಲಿರುವ ಕಿಯಾ ಸಂಸ್ಥೆಯು ತದನಂತರ ಸೊರೆಂಟೊ, ಸ್ಟೊನಿಕ್ ಕ್ರಾಸ್ ಓವರ್ ಎಸ್‌ಯುವಿ, ನಿಯೊ ಎಲೆಕ್ಟ್ರಿಕ್ ಮತ್ತು ಗ್ರ್ಯಾಂಡ್ ಕಾರ್ನಿವಾಲ್ ಕಾರನ್ನು ಬಿಡುಗಡೆ ಮಾಡುವ ಯೋಜನೆ ರೂಪಿಸಿದೆ. ಇನ್ನು ಹೊಸ ಕಾನ್ಸೆಪ್ಟ್ ಕಾರಿನ ಬೆಲೆಯು ಎಕ್ಸ್‌ಶೋರೂಂ ಪ್ರಕಾರ ರೂ. 11 ಲಕ್ಷದಿಂದ ರೂ.14 ಲಕ್ಷ ಇರಬಹುದೆಂದು ಅಂದಾಜಿಸಲಾಗಿದೆ.

Most Read Articles

Kannada
English summary
Most awaited upcoming cars in 2019. Read in Kannada.
Story first published: Tuesday, January 1, 2019, 14:48 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X