ಮೊದಲ ಬಾರಿಗೆ ಸ್ಪಾಟ್ ಟೆಸ್ಟಿಂಗ್ ವೇಳೆ ಕಾಣಿಸಿಕೊಂಡ ಹೊಸ ಆಲ್ಟೋ ಕಾರು

ಮಾರುತಿ ಸುಜುಕಿ ಸಂಸ್ಥೆಯು ತಮ್ಮ ಜನಪ್ರಿಯ ಎಂಟ್ರಿ ಲೆವೆಲ್ ಆಲ್ಟೋ ಹ್ಯಾಚ್‍‍ಬ್ಯಾಕ್ ಕಾರನ್ನು ಸ್ಥಗಿತಗೊಳಿಸಲಿದೆ ಎಂಬ ವದಂತಿಗಳು ಕೇಳಿಬರುತ್ತಿತ್ತು. ಆದರೆ ನಾವು ಆಲ್ಟೋ ಕಾರನ್ನು ಸ್ಥಗಿತಗೊಳಿಸುವುದಿಲ್ಲ, ಬದಲಾಗಿ ಹೆಚ್ಚಿನ ಬದಲಾವಣೆಗಳನ್ನು ನೀಡಿ ಮತ್ತು ಹೊಸ ಎಮಿಷನ್ ಕಾಯಿದೆಯನ್ನು ತಲುಪುವ ಉಪಕರಣಗಳನ್ನು ಒದಗಿಸುತ್ತೇವೆ ಎಂದು ಸ್ಪಷ್ಟನೆ ನೀಡಿದೆ.

ಮೊದಲ ಬಾರಿಗೆ ಸ್ಪಾಟ್ ಟೆಸ್ಟಿಂಗ್ ವೇಳೆ ಕಾಣಿಸಿಕೊಂಡ ಹೊಸ ಆಲ್ಟೋ ಕಾರು

ಇದೀಗ ಮೊದಲ ಬಾರಿಗೆ ಹೊಸ ಮಾರುತಿ ಸುಜುಕಿ ಆಲ್ಟೋ ಕಾರಿನ ರಹಸ್ಯ ಚಿತ್ರಗಳು ಸ್ಪಾಟ್ ಟೆಸ್ಟಿಂಗ್ ವೇಳೆ ಕಾಣಿಸಿಕೊಂಡಿದ್ದು, ಸಾಮಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಸ್ಪಾಟ್ ಟೆಸ್ಟಿಂಗ್ ವೇಳೆ ಕಾಣಿಸಿಕೊಂಡ ಆಲ್ಟೋ ಕಾರನ್ನು ಸಂಪೂರ್ಣವಾಗಿ ಮುಚ್ಚಲಾಗಿದ್ದು, ಕೇವಲ ಕಾರಿನ ಹಿಂಭಾಗದ ಚಿತ್ರಗಳು ಮಾತ್ರ ಸೋರಿಕೆಯಾಗಿದೆ.

ಮಾರುತಿ ಸುಜುಕಿ ಅಧಿಕಾರಿಗಳು ಈಗಾಗಲೆ ಹೊಸ ಆಲ್ಟೋ ಕಾರು ಅಭಿವೃದ್ಧಿ ಅಡಿಯಲ್ಲಿದೆ ಎಂದು ಹೇಳಿಕೊಂಡಿದ್ದಾರೆ. ಹೊಸ ಆಲ್ಟೋ ಕಾರು ಪ್ರಸ್ಥುತ ಇರುವ ಆಲ್ಟೋ ಕಾರಿನ ಸ್ಥಾನವನ್ನು ತುಂಬಲಿದ್ದು, ಹೊಸ ಮಾರುತಿ ಆಲ್ಟೊ ಹೊಸ ಮಾದರಿ ಭಾರತ್ ನ್ಯೂ ವೆಹಿಕಲ್ ಸೇಫ್ಟಿ ಅಸ್ಸೆಸ್ಮೆಂಟ್ ಪ್ರೋಗ್ರಾಂ (BNVSAP) ಯೊಂದಿಗೆ ಅನುಸರಿಸುವಾಗ ಪ್ರಸ್ತುತ ಮಾದರಿಯನ್ನು ಬದಲಾಯಿಸುತ್ತದೆ.

ಆಲ್ಟೋ ಕಾರು ದೇಶಿಯ ವಾಹನ ತಯಾರಕ ಸಂಸ್ಥೆಯಾದ ಮಾರುತಿ ಸುಜುಕಿಯ ಜನಪ್ರಿಯ ಕಾರುಗಳಲ್ಲಿ ಒಂದಾಗಿದ್ದು, ಹೆಚ್ಚಿನ ಬುಕ್ಕಿಂಗ್ ಅನ್ನು ಪಡೆಯುತಿತ್ತು. ಅಷ್ಟೆ ಅಲ್ಲದೆ ಈ ಕಾರು ಮಾರುತಿ ಸುಜುಕಿಯು ಬಿಡುಗಡೆ ಮಾಡಿದ ಮೊದಲ ಕಾರು ಮಾದರಿಗಳಲ್ಲಿ ಕೂಡಾ ಒಂದಾಗಿದ್ದು, ಹಲವಾರು ಬಾರಿ ನವೀಕರಣ ಮತ್ತು ಪುನರಾವರ್ತೆಗಳನ್ನು ಪಡೆಯುತ್ತಲೇ ಬಂದಿದೆ.

ಮೊದಲ ಬಾರಿಗೆ ಸ್ಪಾಟ್ ಟೆಸ್ಟಿಂಗ್ ವೇಳೆ ಕಾಣಿಸಿಕೊಂಡ ಹೊಸ ಆಲ್ಟೋ ಕಾರು

ಕಳೆದ ಎರಡು ವರ್ಷಗಳಿಂದ ನಿರಂತರವಾಗಿ ಭಾರತದಲ್ಲಿ ಅತ್ಯಧಿಕ ಮಾರಾಟವಾಗುವ ಕಾರುಗಳಲ್ಲಿ ಒಂದನೇ ಸ್ಥಾನವನ್ನು ಉಳಿಸಿಕೊಳ್ಳುವಲ್ಲಿ ಯಶಸ್ವಿಯಾಗಿದೆ. ಆದಾಗ್ಯೂ, ಕಠಿಣ ಮುಂಬರುವ ಸುರಕ್ಷತೆ ಮತ್ತು ಹೊರಸೂಸುವಿಕೆ ನಿಬಂಧನೆಗಳನ್ನು ಶೀಘ್ರದಲ್ಲೇ ಜಾರಿಗೊಳಿಸಲಾಗುತ್ತಿದೆ, ಮಾರುತಿ ಸುಜುಕಿ ಕಾರುಗಳು ಮಾರುಕಟ್ಟೆಯಲ್ಲಿ ಪ್ರಮುಖ ನವೀಕರಣಗಳನ್ನು ಮತ್ತು ಬದಲಾವಣೆಗಳನ್ನು ಒದಗಿಸಬೇಕಾಗುತ್ತದೆ.

ಪ್ರಸ್ತುತ ತಲೆಮಾರಿನ ಮಾರುತಿ ಸುಜುಕಿ ಆಲ್ಟೋ ಕಾರು 800ಸಿಸಿ ಮತ್ತು 1.0 ಲೀಟರ್ ಪೆಟ್ರೋಲ್ ಎಂಜಿನ್ ಆಯ್ಕೆಯಲ್ಲಿ ಖರೀದಿಗೆ ಲಭ್ಯವಿದೆ. 800ಸಿಸಿ ಮಾದರಿಯು 48 ಬಿಹೆಚ್‍ಪಿ ಮತ್ತು 69 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುವ ಗುಣವನ್ನು ಹೊಂದಿದರೆ ಇನ್ನು 1.0 ಲೀಟರ್ ಎಂಜಿನ್ 67ಬಿಹೆಚ್‍ಪಿ ಮತ್ತು 90ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುವ ಗುಣವನ್ನು ಹೊಂದಿದೆ. ಎರಡೂ ಎಂಜಿನ್‍‍ಗಳನ್ನು 5 ಸ್ಪೀಡ್ ಮ್ಯಾನುವಲ್ ಗೃ‍‍ಬಕ್ಸ್ ಮತ್ತು 1.0 ಲೀಟರ್‍‍ನ ಎಂಜಿನ್ ಸಂಸ್ಥೆಯ ಆಟೋ ಗೇರ್ ಶಿಫ್ಟ್ (ಎಜಿಎಸ್) ಆಯ್ಕೆಯಲ್ಲಿ ಕೂಡಾ ದೊರೆಯುತ್ತಿದೆ.

ಮೊದಲ ಬಾರಿಗೆ ಸ್ಪಾಟ್ ಟೆಸ್ಟಿಂಗ್ ವೇಳೆ ಕಾಣಿಸಿಕೊಂಡ ಹೊಸ ಆಲ್ಟೋ ಕಾರು

ಹೊಸದಾಗಿ ಬಿಡುಗಡೆಯಾಗಲಿರುವ ಹೊಸ ಮಾರುತಿ ಸುಜುಕಿ ಆಲ್ಟೋ ಕಾರು ಈ ಬಾರಿ ಹಲವಾರು ಬದಲಾವಣೆಗಳನ್ನು ಪಡೆಯಲಿದ್ದು, ಸಂಸ್ಥೆಯ ಮಾರಾಟದ ಶ್ರೇಣಿಯನ್ನು ಅಧಿಕಗೊಳಿಸಲು ಹಲವಾರು ಬಾರಿ ಆಲ್ಟೋ ಕಾರು ಸಹಕಾರಿಯಾಗಿದೆ. ಮತ್ತು ಮಾರುಕಟ್ಟೆಯಲ್ಲಿರುವ ರೆನಾಲ್ಟ್ ಕ್ವಿಡ್ ಕಾರುಗಳಿಗೆ ಪೈಪೋಟಿ ನೀಡುತ್ತಿದೆ.

Image Courtesy: Rushlane

Most Read Articles

Kannada
English summary
New Maruti Alto 2019 Spied Testing — Launch Expected In Late-2019. Read In Kannada
Story first published: Wednesday, February 13, 2019, 16:43 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X