ಸದ್ಯದಲ್ಲೇ ಬಿಡುಗಡೆಯಾಗಲಿದೆ ಹೊಸ ಫೋಕ್ಸ್‌ವ್ಯಾಗನ್ ಪೊಲೊ

ಫೋಕ್ಸ್‌ವ್ಯಾಗನ್ ಇಂಡಿಯಾ, ದೇಶಿಯ ಮಾರುಕಟ್ಟೆಗಾಗಿ ಪೊಲೊ ಜಿಟಿಯ ನವೀಕೃತ ಆವೃತ್ತಿಯನ್ನು ಅಭಿವೃದ್ದಿಪಡಿಸುತ್ತಿದೆ. ಹೊಸ ಕಾರ್ ಅನ್ನು ದೇಶಿಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸುವ ಮೊದಲು ಅನೇಕ ಬಾರಿ ಸ್ಪಾಟ್ ಟೆಸ್ಟ್ ಮಾಡಲಾಗಿದೆ.

ಸದ್ಯದಲ್ಲೇ ಬಿಡುಗಡೆಯಾಗಲಿದೆ ಹೊಸ ಫೋಕ್ಸ್‌ವ್ಯಾಗನ್ ಪೊಲೊ

ಉದ್ಯಮದ ಇತ್ತೀಚಿನ ವರದಿಗಳ ಪ್ರಕಾರ ಫೋಕ್ಸ್‌ವ್ಯಾಗನ್ ಕಂಪನಿಯು ಪೊಲೊ ಜಿಟಿಯ ನವೀಕೃತ ಆವೃತ್ತಿಯನ್ನು ಮುಂದಿನ ಮೂರರಿಂದ ನಾಲ್ಕು ತಿಂಗಳಲ್ಲಿ ಬಿಡುಗಡೆಗೊಳಿಸಲಿದೆ. ಬಿಡುಗಡೆಯಾಗಲಿರುವ ಫೋಕ್ಸ್‌ವ್ಯಾಗನ್ ಪೊಲೊ ಜಿಟಿ ಕಾರು, ದೇಶಿಯ ಮಾರುಕಟ್ಟೆಯಲ್ಲಿ ಮಾರಾಟವಾಗುತ್ತಿರುವ ಪೊಲೊ ಜಿಟಿ ಕಾರಿನ ನವೀಕೃತ ಆವೃತ್ತಿಯಾಗಿದೆ.

ಸದ್ಯದಲ್ಲೇ ಬಿಡುಗಡೆಯಾಗಲಿದೆ ಹೊಸ ಫೋಕ್ಸ್‌ವ್ಯಾಗನ್ ಪೊಲೊ

2019ರ ವೋಕ್ಸ್‌ವ್ಯಾಗನ್ ಪೊಲೊ ಜಿಟಿ ನವೀಕೃತ ಕಾರ್ ಅನ್ನು ಕಾಸ್ಮೆಟಿಕ್ ಬದಲಾವಣೆಗಳು ಹಾಗೂ ಹಲವಾರು ಮೆಕಾನಿಕಲ್ ಅಪ್‍‍ಡೇಟ್‍‍ಗಳ ಜೊತೆಗೆ ನೀಡಲಾಗುವುದು. ಹೊಸ ಕಾರಿನಲ್ಲಿರುವ ಪ್ರಮುಖ ಬದಲಾವಣೆಯೆಂದರೆ, ಮುಂಭಾಗದಲ್ಲಿರುವ ಹೊಸ ಗ್ರಿಲ್. ಈ ಗ್ರಿಲ್‍‍‍ನ ವಿನ್ಯಾಸವನ್ನು ಪೊಲೊ ಜಿ‍‍ಟಿ‍ಐ ಹ್ಯಾಚ್‍‍ಬ್ಯಾಕ್‍‍‍ನಿಂದ ಪಡೆಯಲಾಗಿದೆ.

ಸದ್ಯದಲ್ಲೇ ಬಿಡುಗಡೆಯಾಗಲಿದೆ ಹೊಸ ಫೋಕ್ಸ್‌ವ್ಯಾಗನ್ ಪೊಲೊ

ಮುಂಭಾಗದ ಗ್ರಿಲ್‍‍ನ ಜೊತೆಗೆ, ಎಲ್ಇಡಿ ಡಿಆರ್‍ಎಲ್‍‍ಗಳನ್ನು ಹೊಂದಿರುವ ಎಲ್ಇಡಿ ಹೆಡ್‍‍ಲ್ಯಾಂಪ್, ಮುಂಭಾಗ ಹಾಗೂ ಹಿಂಭಾಗದ ಬಂಪರ್‍‍ಗಳನ್ನು ಅಪ್‍‍ಡೇಟ್ ಮಾಡಲಾಗಿದೆ. ಹೊಸ ಕಾರಿನಲ್ಲಿರುವ ಎಲ್ಇಡಿ ಟೇಲ್‍‍‍ಲೈಟ್‍‍ಗಳ ವಿನ್ಯಾಸಗಳನ್ನು ಸಹ ಜಿಟಿಐ ಕಾರಿನಿಂದ ಪಡೆಯಲಾಗಿದೆ.

ಸದ್ಯದಲ್ಲೇ ಬಿಡುಗಡೆಯಾಗಲಿದೆ ಹೊಸ ಫೋಕ್ಸ್‌ವ್ಯಾಗನ್ ಪೊಲೊ

ಹೊಸ ಪೊಲೊ ಜಿಟಿ ಕಾರಿನ ಇಂಟಿರಿಯರ್ ಬಗ್ಗೆ ಹೇಳುವುದಾದರೆ, ಇಂಟಿರಿಯರ್‍‍ನಲ್ಲಿ ಹಲವಾರು ಬದಲಾವಣೆಗಳನ್ನು ಮಾಡಲಾಗಿದೆ. ಹೆಚ್ಚು ಪ್ರೀಮಿಯಂ, ಸ್ಪೋರ್ಟಿ ಅನುಭವವನ್ನು ನೀಡಲಿದೆ. 2019ರ ಪೊಲೊ ಜಿಟಿ ನವೀಕೃತ ಕಾರು ಸ್ಪೋರ್ಟಿ ಬ್ಲ್ಯಾಕ್ ಬಣ್ಣದ ಕ್ಯಾಬಿನ್‌ ಹೊಂದಿರುವ ಸಾಧ್ಯತೆಗಳಿವೆ.

ಸದ್ಯದಲ್ಲೇ ಬಿಡುಗಡೆಯಾಗಲಿದೆ ಹೊಸ ಫೋಕ್ಸ್‌ವ್ಯಾಗನ್ ಪೊಲೊ

ಇದರ ಜೊತೆಗೆ ಹಲವು ಹೊಸ ಫೀಚರ್ ಹಾಗೂ ಆಧುನಿಕವಾದ ಎಕ್ವಿಪ್‍‍ಮೆಂಟ್‍‍ಗಳನ್ನು ಅಳವಡಿಸಲಾಗಿದೆ. ಹೊಸ ಫೋಕ್ಸ್‌ವ್ಯಾಗನ್ ಪೊಲೊ ಜಿಟಿ ನವೀಕೃತ ಕಾರಿನಲ್ಲಿರುವ ಮತ್ತೊಂದು ಮುಖ್ಯ ಬದಲಾವಣೆಯೆಂದರೆ ಹೊಸ 1.0 ಲೀಟರಿನ ಮೂರು ಸಿಲಿಂಡರ್ ಟರ್ಬೊ ಪೆಟ್ರೋಲ್ ಎಂಜಿನ್‌.

ಸದ್ಯದಲ್ಲೇ ಬಿಡುಗಡೆಯಾಗಲಿದೆ ಹೊಸ ಫೋಕ್ಸ್‌ವ್ಯಾಗನ್ ಪೊಲೊ

ಈ ಹೊಸ ಎಂಜಿನ್ ಅನ್ನು ಸದ್ಯ ಮಾರುಕಟ್ಟೆಯಲ್ಲಿರುವ ಕಾರಿನಲ್ಲಿರುವ 1.2-ಲೀಟರ್ ಟಿಎಸ್ಐ ಎಂಜಿನ್ ಬದಲಿಗೆ ಅಳವಡಿಸಲಾಗುವುದು. ಹೊಸ 1.0 ಲೀಟರಿನ ಟರ್ಬೊ ಪೆಟ್ರೋಲ್ ಎಂಜಿನ್ ಹೊಸ ಬಿಎಸ್6 ಮಾಲಿನ್ಯ ನಿಯಮಗಳಿಗೆ ತಕ್ಕಂತೆ ಇರುವ ನಿರೀಕ್ಷೆಗಳಿವೆ.

MOST READ: ಸ್ಕೂಟರ್ ಬಿಡಿಭಾಗಗಳಿಂದಲೇ ಅಗ್ಗದ ಬೆಲೆಯ ಟ್ರಾಕ್ಟರ್ ನಿರ್ಮಾಣ ಮಾಡಿದ ರೈತ

ಸದ್ಯದಲ್ಲೇ ಬಿಡುಗಡೆಯಾಗಲಿದೆ ಹೊಸ ಫೋಕ್ಸ್‌ವ್ಯಾಗನ್ ಪೊಲೊ

ಹೊಸ ಟರ್ಬೊ ಪೆಟ್ರೋಲ್ ಎಂಜಿನ್‌ ಉತ್ಪಾದಿಸುವ ಪವರ್ ಹಾಗೂ ಟಾರ್ಕ್‍‍ನ ಅಂಕಿ ಅಂಶಗಳ ಬಗ್ಗೆ ತಿಳಿದು ಬಂದಿಲ್ಲ. ಬಿಡುಗಡೆಯ ಸಮಯದಲ್ಲಿ ಈ ಅಂಕಿ ಅಂಶಗಳನ್ನು ಬಹಿರಂಗಗೊಳಿಸಲಾಗುವುದು.

MOST READ: ರಾಯಲ್ ಎನ್‍‍ಫೀಲ್ಡ್ ಸೈಲೆನ್ಸರ್‍‍ಗಳನ್ನು ಕಿತ್ತುಹಾಕಿದ ಪೊಲೀಸರು

ಸದ್ಯದಲ್ಲೇ ಬಿಡುಗಡೆಯಾಗಲಿದೆ ಹೊಸ ಫೋಕ್ಸ್‌ವ್ಯಾಗನ್ ಪೊಲೊ

ಫೋಕ್ಸ್‌ವ್ಯಾಗನ್ ಕಂಪನಿಯು ಸದ್ಯಕ್ಕೆ ಮಾರುಕಟ್ಟೆಯಲ್ಲಿರುವ ಕಾರಿನಲ್ಲಿರುವ ಡಿ‍ಎಸ್‍‍ಜಿ ಆಟೋಮ್ಯಾಟಿಕ್ ಗೇರ್‍‍ಬಾಕ್ಸ್ ಅನ್ನು ಪೊಲೊ ಜಿಟಿ ಟಿ‍ಎಸ್‍ಐ ನವೀಕೃತ ಮಾದರಿಯಲ್ಲಿಯೂ ಸಹ ಅಳವಡಿಸುವ ಸಾಧ್ಯತೆಗಳಿವೆ.

MOST READ: ಮೋಟಾರ್‍‍ಸ್ಪೋರ್ಟ್ಸ್ ಪ್ರಶಸ್ತಿ ಗೆದ್ದ ಬೆಂಗಳೂರು ಹುಡುಗಿ

ಸದ್ಯದಲ್ಲೇ ಬಿಡುಗಡೆಯಾಗಲಿದೆ ಹೊಸ ಫೋಕ್ಸ್‌ವ್ಯಾಗನ್ ಪೊಲೊ

ಫೋಕ್ಸ್‌ವ್ಯಾಗನ್, ಮಾರುಕಟ್ಟೆಯಲ್ಲಿರುವ ಕಾರಿನಲ್ಲಿರುವ 1.5ಲೀಟರ್ ಟಿಡಿಐ ಎಂಜಿನ್‌ನ ಭವಿಷ್ಯದ ಬಗ್ಗೆ ಇನ್ನೂ ದೃಢಿಕರಿಸಿಲ್ಲ. ಮಾರುಕಟ್ಟೆಯಲ್ಲಿರುವ ಪೊಲೊ ಜಿಟಿಯಲ್ಲಿ ಅಳವಡಿಸಲಾಗಿರುವ ಡೀಸೆಲ್ ಎಂಜಿನ್ 108 ಬಿಹೆಚ್‌ಪಿ ಪವರ್ ಹಾಗೂ 250 ಎನ್ಎಂ ಟಾರ್ಕ್ ಉತ್ಪಾದಿಸುತ್ತದೆ. ಈ ಎಂಜಿನ್‍‍ನಲ್ಲಿ 5 ಸ್ಪೀಡಿನ ಮ್ಯಾನುವಲ್ ಗೇರ್‍‍ಬಾಕ್ಸ್ ಅನ್ನು ಸ್ಟಾಂಡರ್ಡ್ ಆಗಿ ಅಳವಡಿಸಲಾಗಿದೆ.

ಸದ್ಯದಲ್ಲೇ ಬಿಡುಗಡೆಯಾಗಲಿದೆ ಹೊಸ ಫೋಕ್ಸ್‌ವ್ಯಾಗನ್ ಪೊಲೊ

ಡ್ರೈವ್‍‍ಸ್ಪಾರ್ಕ್ ಅಭಿಪ್ರಾಯ

ಫೋಕ್ಸ್‌ವ್ಯಾಗನ್ ಮುಂದಿನ ಮೂರು - ನಾಲ್ಕು ತಿಂಗಳ ಅವಧಿಯಲ್ಲಿ ದೇಶಿಯ ಮಾರುಕಟ್ಟೆಯಲ್ಲಿ ತನ್ನ ಪೊಲೊ ಜಿಟಿ ನವೀಕೃತ ಕಾರ್ ಅನ್ನು ಬಿಡುಗಡೆಗೊಳಿಸಲಿದೆ. ಪೊಲೊ ಜಿಟಿಯನ್ನು ದೇಶಿಯ ಮಾರುಕಟ್ಟೆಯಲ್ಲಿ ಸುಮಾರು ನಾಲ್ಕೈದು ವರ್ಷಗಳ ಹಿಂದೆ ಬಿಡುಗಡೆಗೊಳಿಸಲಾಗಿತ್ತು.

ಸದ್ಯದಲ್ಲೇ ಬಿಡುಗಡೆಯಾಗಲಿದೆ ಹೊಸ ಫೋಕ್ಸ್‌ವ್ಯಾಗನ್ ಪೊಲೊ

ಈ ಕಾರು ಮೋಜಿನ ಹ್ಯಾಚ್‌ಬ್ಯಾಕ್‌ ಕಾರುಗಳನ್ನು ಇಷ್ಟಪಡುವವರ ನೆಚ್ಚಿನ ಆಯ್ಕೆಯಾಗಿತ್ತು. 2019ರ ಪೊಲೊ ಜಿಟಿ ನವೀಕೃತ ಕಾರಿನ ಬಿಡುಗಡೆಯೊಂದಿಗೆ, ಫೋಕ್ಸ್‌ವ್ಯಾಗನ್ ದೇಶಿಯ ಮಾರುಕಟ್ಟೆಯಲ್ಲಿ ತನ್ನ ಮಾರಾಟವನ್ನು ಹೆಚ್ಚಿಸಿಕೊಳ್ಳಲು ಬಯಸುತ್ತಿದೆ.

Most Read Articles

Kannada
English summary
New Volkswagen Polo GT Facelift Coming To India Within The Next 4 Months - Read in kannada
Story first published: Wednesday, August 14, 2019, 18:25 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X