ಇನ್ಮುಂದೆ 'ಡ್ರಂಕ್ ಅಂಡ್ ಡ್ರೈವ್‌' ಕೇಸ್‌ನಲ್ಲಿ ಸಿಕ್ಕಿಬಿದ್ರೆ ನಿಮ್ಮ ಕಥೆ ಅಷ್ಟೇ..!

ದೇಶದಲ್ಲಿ ಪ್ರತಿದಿನ ನೂರಾರು ರಸ್ತೆ ಅಪಘಾತಗಳು ನಡೆಯುತ್ತಲೇ ಇರುತ್ತವೆ. ಇದರಲ್ಲಿ ಶೇ.40ಕ್ಕೂ ಹೆಚ್ಚು ಅಪಘಾತ ಪ್ರಕರಣಗಳು ಡ್ರಂಕ್ ಅಂಡ್ ಡ್ರೈವ್‌ನಿಂದಲೇ ಸಂಭವಿಸುತ್ತಿದ್ದು, ಈ ಹಿನ್ನೆಲೆ ಕುಡಿದು ವಾಹನ ಚಾಲನೆ ಮಾಡುವರರ ವಿರುದ್ಧ ಕೇಂದ್ರ ಸಾರಿಗೆ ಇಲಾಖೆಯು ಕಠಿಣ ಕಾನೂನು ಜಾರಿ ಮಾಡಲು ಮುಂದಾಗಿದೆ.

ಇನ್ಮುಂದೆ 'ಡ್ರಂಕ್ ಅಂಡ್ ಡ್ರೈವ್‌' ಕೇಸ್‌ನಲ್ಲಿ ಸಿಕ್ಕಿಬಿದ್ರೆ ನಿಮ್ಮ ಕಥೆ ಅಷ್ಟೇ..!

ಕಳೆದ ಎರಡು ವರ್ಷಗಳಿಂದ ಡ್ರಂಕ್ ಅಂಡ್ ಡ್ರೈವ್ ಪ್ರಕರಣಗಳು ಹೆಚ್ಚುತ್ತಿದ್ದು, ಕುಡಿದು ವಾಹನ ಮಾಡಿದ ಪರಿಣಾಮ ಹಲವರು ಪ್ರಾಣ ಕಳೆದುಕೊಂಡಿದ್ದಾರೆ. ಇದರಲ್ಲಿ ತಪ್ಪು ಮಾಡಿದವರಿಗಿಂತ ಅಮಾಯಕರೇ ಹೆಚ್ಚು ಬಲಿಯಾಗುತ್ತಿದ್ದು, ಇದಕ್ಕೆ ಬ್ರೇಕ್ ಹಾಕಲು ಮುಂದಾಗಿರುವ ಕೇಂದ್ರ ಸಾರಿಗೆ ಇಲಾಖೆಯು ಸುಪ್ರೀಂ ಕೋರ್ಟ್ ಸೂಚನೆಯಂತೆ ಹೊಸ ಕಾನೂನು ಜಾರಿ ಮಾಡುತ್ತಿದೆ.

ಇನ್ಮುಂದೆ 'ಡ್ರಂಕ್ ಅಂಡ್ ಡ್ರೈವ್‌' ಕೇಸ್‌ನಲ್ಲಿ ಸಿಕ್ಕಿಬಿದ್ರೆ ನಿಮ್ಮ ಕಥೆ ಅಷ್ಟೇ..!

ಹೌದು, ಕೇಂದ್ರ ಸಾರಿಗೆ ಇಲಾಖೆಯು ಡ್ರಂಕ್ ಅಂಡ್ ಡ್ರೈವ್ ಮಾಡುವರರ ವಿರುದ್ಧ ಕಠಿಣ ಕಾನೂನು ಕ್ರಮ ತೆಗದುಕೊಳ್ಳುವ ಹೊಸ ನಿಮಯವನ್ನು ಸದ್ಯದಲ್ಲೇ ಜಾರಿಗೆ ತರುತ್ತಿದ್ದು, ಈ ಮೂಲಕ ಅಪಘಾತ ಪ್ರಕರಣಗಳನ್ನು ತಗ್ಗಿಸುವ ಉದ್ದೇಶ ಹೊಂದಿದೆ.

ಇನ್ಮುಂದೆ 'ಡ್ರಂಕ್ ಅಂಡ್ ಡ್ರೈವ್‌' ಕೇಸ್‌ನಲ್ಲಿ ಸಿಕ್ಕಿಬಿದ್ರೆ ನಿಮ್ಮ ಕಥೆ ಅಷ್ಟೇ..!

ಸದ್ಯ ದೇಶಾದ್ಯಂತ ಕುಡಿದು ಚಾಲನೆ ಮಾಡುವವರ ವಿರುದ್ದ ಕಟ್ಟುನಿಟ್ಟಿನ ಕ್ರಮಕೈಗೊಳ್ಳಲಾಗುತ್ತಿದ್ದು, ವಿಕೇಂಡ್‌ಗಳಲ್ಲಿ ಹೆಚ್ಚಾಗಿ ದಾಖಲಾಗುವ ಕುಡಿದು ಚಾಲನೆ ಪ್ರಕರಣಗಳನ್ನು ತಗ್ಗಿಸಲು ಮುಂದಿನ ದಿನಗಳಲ್ಲಿ ಮತ್ತಷ್ಟು ಕಠಿಣ ನಿಯಮಗಳನ್ನು ಜಾರಿಗೆ ಮಾಡಲಾಗುತ್ತಿದೆ.

ಇನ್ಮುಂದೆ 'ಡ್ರಂಕ್ ಅಂಡ್ ಡ್ರೈವ್‌' ಕೇಸ್‌ನಲ್ಲಿ ಸಿಕ್ಕಿಬಿದ್ರೆ ನಿಮ್ಮ ಕಥೆ ಅಷ್ಟೇ..!

7 ವರ್ಷ ಜೈಲು..!

ಕೇಂದ್ರ ಸರ್ಕಾರವು ಜಾರಿಗೆ ತರಲು ಹೊರಟಿರುವ ಹೊಸ ನಿಯಮದ ಪ್ರಕಾರ ಕುಡಿದ ವಾಹನ ಚಾಲನೆ ಮಾಡಿ ಸಾವಿಗೆ ಕಾರಣರಾದಲ್ಲಿ 7 ವರ್ಷಗಳ ಕಾಲ ಸೆರೆವಾಸ ವಿಧಿಸುವ ಹೊಸ ಕಾನೂನು ಜಾರಿ ಮಾಡುತ್ತಿದ್ದು, ಸುಪ್ರೀಂಕೋರ್ಟ್ ಕೋರ್ಟ್ ನಿರ್ದೇಶನದಂತೆ ಜೈಲುವಾಸದ ಮಿತಿಯನ್ನು ಹೆಚ್ಚಿಸಲಾಗುತ್ತಿದೆ.

ಇನ್ಮುಂದೆ 'ಡ್ರಂಕ್ ಅಂಡ್ ಡ್ರೈವ್‌' ಕೇಸ್‌ನಲ್ಲಿ ಸಿಕ್ಕಿಬಿದ್ರೆ ನಿಮ್ಮ ಕಥೆ ಅಷ್ಟೇ..!

ಸದ್ಯ ಕುಡಿದು ವಾಹನ ಚಾಲನೆ ಮಾಡುವಾಗ ಸಾವಿಗೆ ಕಾರಣರಾದಲ್ಲಿ 2 ವರ್ಷಗಳ ಕಾಲ ಜೈಲು ವಿಧಿಸುವ ಅವಕಾಶವಿದ್ದರೂ ಸಹ ಅಪಘಾತ ಪ್ರಕರಣಗಳು ಮಾತ್ರ ಹತೋಟಿಗೆ ಬರುತ್ತಿಲ್ಲ. ಇದರಿಂದ ಸುಪ್ರೀಂ ಸೂಚನೆ ಮೇರೆಗೆ 7 ವರ್ಷ ಜೈಲು ವಾಸವನ್ನು ವಿಧಿಸುವ ಬಗ್ಗೆ ಕೇಂದ್ರ ಒಪ್ಪಿಗೆ ಸೂಚಿಸಿದೆ.

ಇನ್ಮುಂದೆ 'ಡ್ರಂಕ್ ಅಂಡ್ ಡ್ರೈವ್‌' ಕೇಸ್‌ನಲ್ಲಿ ಸಿಕ್ಕಿಬಿದ್ರೆ ನಿಮ್ಮ ಕಥೆ ಅಷ್ಟೇ..!

ಇದು ಮುಂಬರುವ ದಿನಗಳಲ್ಲಿ ಜಾರಿಗೆ ಬರುವ ಸಾಧ್ಯತೆಗಳಿದ್ದು, ಈ ಬಗ್ಗೆ ಹೊಸ ಕಾನೂನು ರಚನೆಯ ಅವಶ್ಯಕತೆಯಿದೆ. ಇದರಿಂದ ಮುಂದಿನ ಕೆಲವೇ ದಿನಗಳಲ್ಲಿ ಜಾರಿಗೆ ಬರುವುದು ಖಚಿತವಾಗಿದ್ದು, ಅಮಾಯಕರ ಜೀವಕ್ಕೆ ಆಪತ್ತು ತರುವ ಮುನ್ನ ಪ್ರತಿಯೊಬ್ಬರು ಈ ಬಗ್ಗೆ ಯೋಚನೆ ಮಾಡಲೇಬೇಕು.

ಇನ್ಮುಂದೆ 'ಡ್ರಂಕ್ ಅಂಡ್ ಡ್ರೈವ್‌' ಕೇಸ್‌ನಲ್ಲಿ ಸಿಕ್ಕಿಬಿದ್ರೆ ನಿಮ್ಮ ಕಥೆ ಅಷ್ಟೇ..!

ಜೊತೆಗೆ ಕುಡಿದು ಚಾಲನೆ ಮಾಡಿ ಸಿಕ್ಕಿಬಿದ್ದಲ್ಲಿ ಭಾರೀ ಪ್ರಮಾಣದ ದಂಡ ತೆತ್ತಬೇಕಲ್ಲದೇ ಮಾಡಿರುವ ಘನಂದಾರಿ ಕೆಲಸವನ್ನು ನಿಮ್ಮ ಮನೆಯವರಿಗೆ ಮತ್ತು ನೀವು ಕೆಲಸ ಮಾಡುವ ಸಂಸ್ಥೆಗೂ ಈ ಬಗ್ಗೆ ಮಾಹಿತಿ ರವಾನೆಯಾಗಲಿದೆ.

ಇನ್ಮುಂದೆ 'ಡ್ರಂಕ್ ಅಂಡ್ ಡ್ರೈವ್‌' ಕೇಸ್‌ನಲ್ಲಿ ಸಿಕ್ಕಿಬಿದ್ರೆ ನಿಮ್ಮ ಕಥೆ ಅಷ್ಟೇ..!

ಅಂದ್ರೆ, ನೀವು ಕುಡಿದ ಚಾಲನೆ ಮಾಡುವ ಕೆಟ್ಟ ಚಟದ ಬಗ್ಗೆ ಮನೆಯವರು ಮತ್ತು ಕೆಲಸ ಮಾಡುವ ಸಂಸ್ಥೆಗಳ ಗಮನಕ್ಕೂ ತರಲು ನಿರ್ಧರಿಸುವ ಕೇಂದ್ರ ಸಾರಿಗೆ ಇಲಾಖೆಯು ಪ್ರಾಯೋಗಿಕವಾಗಿ ಪುಣೆಯಲ್ಲಿ ಹೊಸ ನಿಯಮವನ್ನು ಜಾರಿಗೆ ಮಾಡಲಾಗಿದೆ.

ಇನ್ಮುಂದೆ 'ಡ್ರಂಕ್ ಅಂಡ್ ಡ್ರೈವ್‌' ಕೇಸ್‌ನಲ್ಲಿ ಸಿಕ್ಕಿಬಿದ್ರೆ ನಿಮ್ಮ ಕಥೆ ಅಷ್ಟೇ..!

ಇದರಿಂದ ಯಾವ ವಾಹನ ಸವಾರನು ಕುಡಿದು ಚಾಲನೆ ಮಾಡುತ್ತಿದ್ದಾನೋ ಅಂತವರ ಮೇಲೆ ಅವರ ಕುಟುಂಬ ಮತ್ತು ಕೆಲಸ ಮಾಡುವ ಸಂಸ್ಥೆಗಳು ಸಹ ನಿಗಾವಹಿಸಲಿ ಎನ್ನುವ ಉದ್ದೇಶದಿಂದ ಇಂತಹ ಹೊಸ ಪ್ರಯೋಗ ಮಾಡಲಾಗುತ್ತಿದೆ.

MOST READ: ಕೇವಲ 40 ರೂಪಾಯಿ ಆಸೆಗೆ ಬರೋಬ್ಬರಿ 40 ಲಕ್ಷ ಕಳೆದುಕೊಂಡ ಹ್ಯುಂಡೈ ಕಾರು ಚಾಲಕ..!

ಇನ್ಮುಂದೆ 'ಡ್ರಂಕ್ ಅಂಡ್ ಡ್ರೈವ್‌' ಕೇಸ್‌ನಲ್ಲಿ ಸಿಕ್ಕಿಬಿದ್ರೆ ನಿಮ್ಮ ಕಥೆ ಅಷ್ಟೇ..!

ಈಗಾಗಲೇ ಹೊಸ ನಿಯಮದಿಂದಾಗಿ ಪುಣೆಯಲ್ಲಿ ಡ್ರಂಕ್ ಅಂಡ್ ಡ್ರೈವ್ ಪ್ರಕರಣಗಳಲ್ಲಿ ಇಳಿಕೆ ಕಂಡುಬಂದಿದ್ದು, ಪೊಲೀಸರ ಕೈಗೆ ಸಿಕ್ಕಿಬಿದ್ರೆ ದಂಡ ಕಟ್ಟುವುದಷ್ಟೇ ಅಲ್ಲದೇ ಕುಟುಂಬದ ಸದಸ್ಯರು ಮತ್ತು ಕೆಲಸ ಮಾಡುವ ಸಂಸ್ಥೆಗಳಲ್ಲೂ ತಮ್ಮ ಮರ್ಯಾದೆ ಹೋಗುತ್ತೆ ಎನ್ನುವ ಕಾರಣಕ್ಕೆ ಅದೆಷ್ಟೋ ವಾಹನ ಸವಾರರು ಡ್ರಂಕ್ ಅಂಡ್ ಡ್ರೈವ್‌ಗೆ ಗುಡ್‌ಬೈ ಹೇಳುತ್ತಿದ್ದಾರೆ.

ಇನ್ಮುಂದೆ 'ಡ್ರಂಕ್ ಅಂಡ್ ಡ್ರೈವ್‌' ಕೇಸ್‌ನಲ್ಲಿ ಸಿಕ್ಕಿಬಿದ್ರೆ ನಿಮ್ಮ ಕಥೆ ಅಷ್ಟೇ..!

ಸದ್ಯಕ್ಕೆ ಹೊಸ ನಿಯಮವನ್ನು ಪುಣೆಯಲ್ಲಿ ಮಾತ್ರವೇ ಜಾರಿಯಲ್ಲಿದ್ದು, ಮುಂದಿನ ದಿನಗಳಲ್ಲಿ ದೇಶದ ಪ್ರಮುಖ ನಗರಗಳಲ್ಲೂ ಈ ಹೊಸ ನಿಯಮಗಳನ್ನು ಜಾರಿ ಮಾಡುವ ಬಗ್ಗೆ ಕೇಂದ್ರ ಸಾರಿಗೆಯು ಚಿಂತನೆ ನಡೆಸಿದೆ.

MOST READ: ಶಾಕಿಂಗ್ ಸುದ್ದಿ- ಭಾರತದಲ್ಲಿ ಬ್ಯಾನ್ ಆಗಲಿವೆ ಈ ಒಂಬತ್ತು ಜನಪ್ರಿಯ ಕಾರುಗಳು..!

ಇನ್ಮುಂದೆ 'ಡ್ರಂಕ್ ಅಂಡ್ ಡ್ರೈವ್‌' ಕೇಸ್‌ನಲ್ಲಿ ಸಿಕ್ಕಿಬಿದ್ರೆ ನಿಮ್ಮ ಕಥೆ ಅಷ್ಟೇ..!

ಹೀಗಾಗಿ ಕುಡಿದು ವಾಹನ ಚಾಲನೆ ಮಾಡುವ ವಾಹನ ಪ್ರಿಯರು ಎಚ್ಚೆತ್ತುಕೊಳ್ಳಬೇಕಿದ್ದು, ಒಂದು ವೇಳೆ ಕುಡಿದು ವಾಹನ ಚಾಲಾಯಿಸಿ ಅಮಾಯಕರ ಜೀವ ತೆಗೆದಲ್ಲಿ ಯಾವುದೇ ಜಾಮೀನು ಇಲ್ಲದೇ 7 ವರ್ಷಗಳ ಕಾಲ ಜೈಲು ವಾಸ ಅನುಭವಿಸಬೇಕು ಎಂಬುವುದನ್ನು ಮರೆಯಬೇಡಿ.

Most Read Articles

Kannada
English summary
Police Will Share Drunken Driving Details With Your Family And Employer. Read in Kannada.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X