ಕ್ರ್ಯಾಶ್ ಟೆಸ್ಟಿಂಗ್ ವೇಳೆ ರೆನಾಲ್ಟ್ ಕ್ಯಾಪ್ಚುರ್ ಪಡೆದ ಅಂಕ ಎಷ್ಟು ಗೊತ್ತಾ.??

ರೆನಾಲ್ಟ್ ಸಂಸ್ಥೆಯ ಎಸ್‍ಯುವಿ ಕಾರಾದ ಕ್ಯಾಪ್ಚುರ್ ಮೊದಲ ಬಾರಿಗೆ 2017ರಲ್ಲಿ ಬಿಡುಗಡೆಗೊಂಡಿದ್ದು, ಇದೀಗ ಈ ಕಾರಿನ ಕ್ರ್ಯಾಶ್ ಟೆಸ್ಟಿಂಗ್‍‍ಗಾಗಿ ಕಳುಹಿಸಲಾಗಿದೆ. ಕ್ರಾಶ್ ಟೆಸ್ಟಿಂಗ್‍ನಲ್ಲಿ ಈ ಕಾರು ಉತ್ತಮ ಅಂಕ ಪಡೆದರೂ ಸಹ ದೇಶಿಯ ಮಾರುಕಟ್ಟೆಯಲ್ಲಿ ಮಾತ್ರ ಅಷ್ಟಾಗಿ ಸದ್ದು ಮಾಡುತ್ತಿಲ್ಲ.

ಕ್ರ್ಯಾಶ್ ಟೆಸ್ಟಿಂಗ್ ವೇಳೆ ರೆನಾಲ್ಟ್ ಕ್ಯಾಪ್ಚುರ್ ಪಡೆದ ಅಂಕ ಎಷ್ಟು ಗೊತ್ತಾ.??

ವಿಷಯ ಏನಪ್ಪ ಅಂದ್ರೆ ಹಿಂದಿನ ದಿನಗಳಲ್ಲಿ ಹೊಸ ವಾಹನ ಖರೀದಿ ಮಾಡುವ ಮುನ್ನ ಕೆವಲ ಬೆಲೆ ಮತ್ತು ಈ ವಾಹನ ಎಷ್ಟು ಮೈಲೇಜ್ ನೀಡುತ್ತೆ ಎಂದು ನೋಡುತ್ತಿದ್ದರು. ಆದರೆ ಇದೀಗ ಗ್ರಾಹಕರು ಬುದ್ದಿವಂತರಾಗಿದ್ದು, ಕಾರಿನಲ್ಲಿ ಯಾವ ಮಟ್ಟದ ಸುರಕ್ಷಾ ಸಾಧನಗಳನ್ನು ಮತು ವಾಹನ ನಿರ್ಮಾಣದ ಗುಣಮಟ್ಟದ ಬಗ್ಗೆ ಆಲೋಚಿಸಲು ಶುರು ಮಾಡಿದ್ದಾರೆ. ಹೀಗಾಗಿ ಬಹು ಹಿಂದಿನಿಂದ ಯಾವುದಾದ್ರು ವಾಹನ ಬಿಡುಗಡೆಗೊಂಡಲ್ಲಿ ಅವುಗಳನ್ನು ಕ್ರ್ಯಾಶ್ ಟೆಸ್ಟಿಂಗ್‍ಗಾಗಿ ಕಳುಹಿಸಲಾಗುತ್ತದೆ. ಅದರಲ್ಲಿ 5 ಕ್ಕೆ 3ಕಿಂತಲೂ ಹೆಚ್ಚಿನ ಅಂಕವನ್ನು ಪಡೆದ ಕಾರುಗಳು ಉತ್ತಮ ಗುಣಮಟ್ಟದಿಂದ ಕೂಡಿದೆ ಎಂದರ್ಥ.

ಕ್ರ್ಯಾಶ್ ಟೆಸ್ಟಿಂಗ್ ವೇಳೆ ರೆನಾಲ್ಟ್ ಕ್ಯಾಪ್ಚುರ್ ಪಡೆದ ಅಂಕ ಎಷ್ಟು ಗೊತ್ತಾ.??

ಹೀಗಾಗಿ ಒಟ್ಟು 4 ಏರ್‍‍ಬ್ಯಾಗ್‍‍ಗಳನ್ನು ಅಳವಡಿಸಿರುವ ರೆನಾಲ್ಟ್ ಕ್ಯಾಪ್ಚುರ್ ಕಾರನ್ನು ಗ್ಲೋಬಲ್ ಎನ್‍ಸಿಎಪಿ ಕ್ರ್ಯಾಶ್ ಟೆಸ್ಟಿಂಗ್‍‍ಗಾಗಿ ಕಳುಹಿಸಲಾಗಿದ್ದು, ಈ ಪರೀಕ್ಷೆಯಲ್ಲಿ 5 ಕ್ಕೆ 4 ಅಂಕವನ್ನು ಪಡೆದುಕೊಂಡಿದೆ. ಆದರೆ ಪರೀಕ್ಷೆಗೊಳಗಾದ ರೆನಾಲ್ಟ್ ಕ್ಯಾಪ್ಚುರ್ ಕಾರು ವಿದೇಶಿ ಮಾರುಕಟ್ಟೆಯಲ್ಲಿ ಮರಾಟವಾಗುತ್ತಿರುವ ಕಾರಾದರೂ ಸಹ ಇದೇ ವೈಶಿಷ್ಟಯೆಗಳನ್ನು ನೀವು ದೇಶಿಯ ಮಾರುಕಟ್ಟೆಯಲ್ಲಿ ಮಾರಾಟವಾಗುತ್ತಿರುವ ಕಾರಿನಲ್ಲಿಯೂ ಕಾಣಬಹುದಾಗಿದೆ.

ಕ್ರ್ಯಾಶ್ ಟೆಸ್ಟಿಂಗ್ ವೇಳೆ ರೆನಾಲ್ಟ್ ಕ್ಯಾಪ್ಚುರ್ ಪಡೆದ ಅಂಕ ಎಷ್ಟು ಗೊತ್ತಾ.??

ಹಾಗೆಯೆ ರೆನಾಲ್ಟ್ ಸಂಸ್ಥೆಯು ತಮ್ಮ ಕ್ಯಾಪ್ಚುರ್ ಎಸ್‍ಯುವಿ ಕಾರಿಗೆ ಈ ಬಾರಿ ಹೆಚ್ಚಿನ ಸುರಕ್ಷಾ ಸಾಧನಗಳನ್ನು ನೀಡಿ ಬಿಡುಗಡೆ ಮಾಡಲಾಗಿದ್ದು, ಬೆಲೆಯಲ್ಲಿ ಕೂಡಾ ಕಡಿಮೆ ಮಾಡಲಾಗಿದೆ. ಭಾರತ್ ನ್ಯೂ ವೆಹಿಕಲ್ ಸೇಫ್ಟಿ ಅಸೆಸ್ಮೆಂಟ್ ಪ್ರೋಗ್ರಾಂ (BNVSAP) ಅಡಿಯಲ್ಲಿ ಎಪ್ರಿಲ್ 1, 2019 ರಿಂದ ಮಾರಾಟಗೊಳ್ಳುವ ಎಲ್ಲಾ ಕಾರುಗಳು ಸರಿಯಾದ ಸೇಫ್ಟಿ ಫೀಚರ್‍‍ಗಳನ್ನು ಹೊಂದಿರಲೇಬೇಕಿದೆ. ಹೊಸ ರೆನಾಲ್ಟ್ ಕ್ಯಾಪ್ಚುರ್ ಕಾರು ದೆಹಲಿಯ ಎಕ್ಸ್ ಶೋರುಂ ಪ್ರಕಾರ ರೂ. 9.5 ಲಕ್ಷದ ಪ್ರಾರಂಭಿಕ ಬಲೆಯನ್ನು ಪಡೆದುಕೊಂದಿದೆ.

ಕ್ರ್ಯಾಶ್ ಟೆಸ್ಟಿಂಗ್ ವೇಳೆ ರೆನಾಲ್ಟ್ ಕ್ಯಾಪ್ಚುರ್ ಪಡೆದ ಅಂಕ ಎಷ್ಟು ಗೊತ್ತಾ.??

ಹೊಸ ಫೀಚರ್ಸ್

ಈ ಬಾರಿ ಪ್ರಯಾಣಿಕರ ಸುರಕ್ಷತೆಗಾಗಿ ಈ ಕಾರಿನಲ್ಲಿ ಡ್ಯುಯಲ್ ಏರ್‍‍ಬ್ಯಾಗ್ಸ್, ಎಬಿಎಸ್, ಇಬಿಡಿ, ಬ್ರೇಕ್ ಅಸಿಸ್ಟ್, ರಿಯರ್ ಪಾರ್ಕಿಂಗ್ ಸೆನ್ಸಾರ್ಸ್, ಡ್ರೈವರ್ ಮತ್ತು ಕೋ ಡ್ರೈವರ್ ಸೀಟ್ ಬೆಲ್ಟ್ ರಿಮೈಂಡರ್, ಸ್ಪೀಡ್ ಅಲರ್ಟ್, ಹೈಟ್ ಅಡ್ಜಸ್ಟಬಲ್ ಸೀಟ್ ಬೆಲ್ಟ್ಸ್, ಲ್ಯಾಟರಲ್ ಐಎಸ್ಒಫಿಕ್-ಚೈಲ್ಡ್ ಸೀಟ್ ಆಂಕರ್, ರಿಯರ್ ಡೀಫಾಗರ್, ರಿಯರ್ ವೈಪರ್ & ವಾಶರ್ ಹಾಗು ಸ್ಪೀಡ್ ಸೆನ್ಸಿಂಗ್ ಆಟೋ ಡೋರ್ ಲಾಕ್ ಎಂಬ ಫೀಚರ್‍‍ಗಳನ್ನು ರೆನಾಲ್ಟ್ ಕ್ಯಾಪ್ಚುರ್ ಕಾರುನ ಎಲ್ಲಾ ವೇರಿಯಂಟ್‍ಗಳಲ್ಲಿ ಸ್ಟ್ಯಾಂಡರ್ಡ್ ಆಗಿ ನೀಡಲಾಗಿದೆ.

ಕ್ರ್ಯಾಶ್ ಟೆಸ್ಟಿಂಗ್ ವೇಳೆ ರೆನಾಲ್ಟ್ ಕ್ಯಾಪ್ಚುರ್ ಪಡೆದ ಅಂಕ ಎಷ್ಟು ಗೊತ್ತಾ.??

ಇಷ್ಟೆ ಅಲ್ಲದೆಯೆ 210ಎಂಎಂನ ಗ್ರೌಂಡ್ ಕ್ಲಿಯರೆನ್ಸ್ ಹೊಂದಿರುವ ಕ್ಯಾಪ್ಚುರ್ ಕಾರುಗಳಲ್ಲಿನ ಪ್ಲಾಟೈನ್ ವೇರಿಯಂಟ್‍ನಲ್ಲಿ ಆಟೋ ಹೆಡ್‍ಲ್ಯಾಂಪ್ಸ್, ರೈನ್ ಸೆನ್ಸಿಂಗ್ ವೈಪರ್ಸ್, ರೂಫ್ ರೈಲ್ಸ್, ರಿಯರ್ ಪಾರ್ಕಿಂಗ್ ಕ್ಯಾಮೆರಾ, ಕ್ರೂಸ್ ಕಂಟ್ರೋಲ್‍‍ನೊಂದಿಗೆ ಸ್ಪೀಡ್ ಲಿಮಿಟರ್, ಮತ್ತು 17 ಇಂಚಿನ ಕ್ರಿಸ್ಟಲ್ ಕಟ್ ಅಲಾಯ್ ವ್ಹೀಲ್ಸ್ ಫೀಚರ್‍‍ಗಳನ್ನು ಒದಗಿಸಲಾಗಿದೆ.

ಕ್ರ್ಯಾಶ್ ಟೆಸ್ಟಿಂಗ್ ವೇಳೆ ರೆನಾಲ್ಟ್ ಕ್ಯಾಪ್ಚುರ್ ಪಡೆದ ಅಂಕ ಎಷ್ಟು ಗೊತ್ತಾ.??

ಇನ್ನು ರೆನಾಲ್ಟ್ ಕ್ಯಾಪ್ಚುರ್ ಕಾರಿನ ಪ್ಲಾಟಿನೆ ವೇರಿಯಂಟ್‍ನಲ್ಲಿ ಇನ್ನೋವೇಟೆಡ್ ಲೈಟಿಂಗ್ ಸಿಸ್ಟಂ ಅಂದರೆ, ಸ್ಪಾರ್ಕ್ಲ್ ಫುಲ್ ಎಲ್ಇಡಿ ಹೆಡ್‍ಲ್ಯಾಂಪ್ಸ್, ಫ್ಲೋಟಿಂಗ್ ಇಂಡಿಕೆಟರ್ಸ್, ಸಫೈರ್ ಎಲ್ಇಡಿ ಡಿಆರ್‍ಎಲ್. ರಿಪ್ಲ್ ಟೈಲ್ ಲ್ಯಾಂಪ್ಸ್ ಎಂಬ ವೈಶಿಷ್ಟ್ಯತೆಗಳನನ್ನು ಒದಗಿಸಲಾಗಿದೆ.

MOST READ: ಸ್ಮಾರ್ಟ್ ಹೈಬ್ರಿಡ್ ಟೆಕ್ನಾಲಜಿಯೊಂದಿಗೆ ಮಾರಾಟದಲ್ಲಿ ಮಿಂಚುತ್ತಿದೆ ಮಾರುತಿ ಬಲೆನೊ

ಕ್ರ್ಯಾಶ್ ಟೆಸ್ಟಿಂಗ್ ವೇಳೆ ರೆನಾಲ್ಟ್ ಕ್ಯಾಪ್ಚುರ್ ಪಡೆದ ಅಂಕ ಎಷ್ಟು ಗೊತ್ತಾ.??

ಎಂಜಿನ್ ಸಾಮರ್ಥ್ಯ

ಡಸ್ಟರ್ ಕಾರು ಮಾದರಿಯಲ್ಲೇ ಕ್ಯಾಪ್ಚರ್ ಕಾರುಗಳು 1.5-ಲೀಟರ್ ಪೆಟ್ರೋಲ್ ಮತ್ತು ಡೀಸೆಲ್ ಎಂಜಿನ್ ಪಡೆದುಕೊಂಡಿದ್ದು, ಪೆಟ್ರೋಲ್ ಕಾರುಗಳು 105-ಬಿಎಚ್‌ಪಿ, 142-ಎನ್ಎಂ ಟಾರ್ಕ್ ಉತ್ಪಾದನೆ ಮಾಡಿದಲ್ಲಿ ಡೀಸೆಲ್ ಕಾರುಗಳು 119-ಬಿಎಚ್‌ಪಿ ಮತ್ತು 240-ಎನ್ಎಂ ಟಾರ್ಕ್ ಉತ್ಪಾದಿಸುತ್ತವೆ.

MOST READ: ರಾಜ್ಯದೆಲ್ಲೆಡೆ ಎಂಬತ್ತೊಂಬತ್ತು ಸಾವಿರಕ್ಕು ಹೆಚ್ಚಿನ ಡ್ರೈವಿಂಗ್ ಲೈಸೆನ್ಸ್ ರದ್ದು

ಜೊತೆಗೆ ಪೆಟ್ರೋಲ್ ಕಾರುಗಳಲ್ಲಿ 5-ಸ್ಪೀಡ್ ಮ್ಯಾನುವಲ್ ಗೇರ್‌ಬಾಕ್ಸ್ ಒದಗಿಸಲಾಗಿದ್ದು, ಡೀಸೆಲ್ ಆವೃತ್ತಿಗಳಲ್ಲಿ 6-ಸ್ಪೀಡ್ ಮ್ಯಾನುವಲ್ ಗೇರ್‌ಬಾಕ್ಸ್ ಜೋಡಣೆಯನ್ನು ಹೊಂದಿದೆ. ರೆನಾಲ್ಟ್ ಕ್ಯಾಪ್ಚುರ್ ಕಾರಿನ ಪೆಟ್ರೋಲ್ ಆವೃತ್ತಿಗಳು ಪ್ರತೀ ಲೀಟರ್ ಪೆಟ್ರೋಲ್‍‍ಗೆ ಸುಮಾರು 13.87 ಕಿಲೋಮೀಟರ್ ಮತ್ತು ಡೀಸೆಲ್ ಎಂಜಿನ್ ಕಾರುಗಳಿ ಪ್ರತೀ ಲೀಟರ್‍‍ಗೆ ಸುಮಾರು 20.37 ಕಿಲೋಮೀಟರ್ ಮೈಲೇಜ್ ನೀಡಬಲ್ಲದು.

MOST READ: ದಿನಂಪ್ರತಿ ಲಿಫ್ಟ್ ಕೇಳುತ್ತಿದ್ದವನಿಗೆ ಅವನ ಸ್ನೇಹಿತರ ಗುಂಪು ಮಾಡಿದ್ದೇನು ಗೊತ್ತಾ?

ಕ್ರ್ಯಾಶ್ ಟೆಸ್ಟಿಂಗ್ ವೇಳೆ ರೆನಾಲ್ಟ್ ಕ್ಯಾಪ್ಚುರ್ ಪಡೆದ ಅಂಕ ಎಷ್ಟು ಗೊತ್ತಾ.??

ಲಭ್ಯವಿರುವ ಕಾರಿನ ಬಣ್ಣಗಳು

ಮೂನ್ ಲೈಟ್ ಸಿಲ್ವರ್, ಪ್ಲ್ಯಾನೆಟ್ ಗ್ರೇ, ಕೆಯೆನಿ ಆರೆೇಂಜ್, ಮೊಹೊಗೆನಿ ಬ್ರೌನ್ ಮತ್ತು ಪರ್ಲ ವೈಟ್ ಎಂಬ ಐದು ಬಣ್ಣಗಳಲ್ಲಿ ಖರೀದಿಗೆ ಲಭ್ಯವಿದೆ.

ಕ್ರ್ಯಾಶ್ ಟೆಸ್ಟಿಂಗ್ ವೇಳೆ ರೆನಾಲ್ಟ್ ಕ್ಯಾಪ್ಚುರ್ ಪಡೆದ ಅಂಕ ಎಷ್ಟು ಗೊತ್ತಾ.??

ಹೊಸದಾಗಿ ಸುರಕ್ಷಾ ಸಾಧನಗಳನ್ನು ಹೊತ್ತು ಬಿಡುಗಡೆಗೊಂಡ ರೆನಾಲ್ಟ್ ಕ್ಯಾಪ್ಚುರ್ ಕಾರು ಮಾರುಕಟ್ಟೆಯಲ್ಲಿರುವ ಇನ್ನಿತರೆ ಕಾರುಗಳಿಗಿಂತಲೂ ಹೆಚ್ಚಿನ ಮಾರಾಟವನ್ನು ಪಡೆಯುವ ತವಕದಲ್ಲಿದೆ. ಆದರೆ ರೆನಾಲ್ಟ್ ಕ್ಯಾಪ್ಚುರ್ ಕಾರುಗಳು ತಿಂಗಳಿಗೆ 200 ಯೂನಿಟ್ ಮಾರಾಟ ಗೊಂಡರೆ ತನ್ನ ಎದುರಾಳಿಯಾದ ಹ್ಯುಂಡೈ ಕ್ರೆಟಾ ಮಾತ್ರ ತಿಂಗಳಿಗೆ 10,000 ಯೂನಿಟ್ ಬುಕ್ಕಿಂಗ್ ಪಡೆದುಕೊಳ್ಳುತ್ತಿದೆ.

Most Read Articles

Kannada
English summary
Renault Captur Scored 4 Star Rating In Global NCAP Crash Test. Read In Kannada
Story first published: Sunday, June 2, 2019, 13:30 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X