ಸೇಫ್ಟಿ ಹ್ಯಾಚ್‍ಬ್ಯಾಕ್ ಕಾರಾಗಿ ಎಂಟ್ರಿ ಕೊಡಲಿರುವ ಟಾಟಾ ಅಲ್‍ಟ್ರೋಜ್ ಕಾರಿನ ಟೀಸರ್ ಇಲ್ಲಿದೆ ನೋಡಿ

ಕಳೆದ ವರ್ಷದಲ್ಲಿ ನಡೆದ ಗ್ಲೋಬಲ್ ಕ್ರ್ಯಾಶ್ ಟೆಸ್ಟಿಂಗ್‍ನಲ್ಲಿ ಟಾಟಾ ನೆಕ್ಸಾನ್ ಕಾರು 5ಕ್ಕೆ 5 ಅಂಕವನ್ನು ಪಡೆದು ಭಾತದ ಸೇಫೆಸ್ಟ್ ಎಸ್‍ಯುವಿ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದ್ದು, ಇದೀಗ ಟಾಟಾ ಮೋಟಾರ್ಸ್ ಸಂಸ್ಥೆಯು ತಮ್ಮ ಆಲ್‍ಟ್ರೋಜ್ ಕಾರನ್ನು ಆಲ್ಫಾ ಪ್ಲಾಟ್‍‍ಫಾರ್ಮ್‍ನ ಅಡಿಯಲ್ಲಿ ನಿರ್ಮಾಣ ಮಾಡಲಿರುವ ಕಾರಣ ಈ ಕಾರು ಮತ್ತಷ್ಟು ಬಲಿಷ್ಠವಾಗಿ ಅಭಿವೃದ್ದಿಗೊಳ್ಳಲಿದೆ.

ಸೇಫ್ಟಿ ಹ್ಯಾಚ್‍ಬ್ಯಾಕ್ ಕಾರಾಗಿ ಎಂಟ್ರಿ ಕೊಡಲಿರುವ ಟಾಟಾ ಅಲ್‍ಟ್ರೋಜ್ ಕಾರಿನ ಟೀಸರ್ ಇಲ್ಲಿದೆ ನೋಡಿ

ಹಾಗೆಯೆ ಟಾಟಾ ಅಲ್‍ಟ್ರೋಜ್ ಕಾರಿನ ಬಗ್ಗೆ ಮತ್ತೊಂದು ಮಾಹಿತಿ ಲಭ್ಯವಾಗಿದ್ದು, ಟಾಟಾ ಟಿಯಾಗೊ ಜೆಟಿಪಿ ಕಾರನಲ್ಲಿ ನೀಡಲಾದ 1.2 ಲೀಟರ್ ಪೆಟ್ರೋಲ್ ಎಂಜಿನ್ ಅನ್ನು ಈ ಕಾರಿನಲ್ಲಿಯೂ ನೀಡಲಿದೆ ಎಂಬ ಮಾಹಿತಿಯು ಲಭ್ಯವಾಗಿದೆ. ಅಲ್‍ಟ್ರೋಜ್ ಕಾರು ಜೆಟಿಪಿ ಎಂಜಿನ್ ಪಡೆದಿದ್ದೆ ಆದಲ್ಲಿ ಈ ಕಾರು 114 ಬಿಹೆಚ್‍ಪಿ ಮತ್ತು 150 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುವ ಗುಣವನ್ನು ಹೊಂದಿರಲಿದೆ.

ಟಾಟಾ ಅಲ್‍ಟ್ರೋಜ್ ಕಾರು ಇದೀಗ ಟಾಟಾ ಮೋಟಾರ್ಸ್ ಸಂಸ್ಥೆಯಲ್ಲಿ ಹೆಚ್ಚಿನ ಸೇಫ್ಟಿ ಫೀಚರ್‍‍ಗಳನ್ನು ಪಡೆಯಲಿರುವ ಕಾರಾಗಿದ್ದು, ಈ ಕುರಿತಾದ ಕಾರಿನ ಡ್ರೈವಿಂಗ್ ಸಾಮರ್ಥ್ಯದ ಕುರಿತಾಗಿ ಸಂಸ್ಥೆಯು ಹೊಸ ಟೀಸರ್ ಅನ್ನು ಬಿಡುಗಡೆ ಮಾಡಲಾಗಿದೆ. ಟಾಟಾ ಅಲ್‍ಟ್ರೋಜ್ ಕಾರು ಕ್ರ್ಯಾಶ್ ಟೆಸ್ಟಿಂ‍ಗ್‍ನಲ್ಲಿ 5 ಕ್ಕೆ 5 ಅಂಕಗಳನ್ನು ಪಡೆಯುವ ಹಾಗೆ ನಿರ್ಮಾಣ ಮಾಡುತ್ತೇವೆ ಎಂದು ಸಂಸ್ಥೆಯು ಹೇಳಿಕೊಂಡಿದೆ.

ಸೇಫ್ಟಿ ಹ್ಯಾಚ್‍ಬ್ಯಾಕ್ ಕಾರಾಗಿ ಎಂಟ್ರಿ ಕೊಡಲಿರುವ ಟಾಟಾ ಅಲ್‍ಟ್ರೋಜ್ ಕಾರಿನ ಟೀಸರ್ ಇಲ್ಲಿದೆ ನೋಡಿ

ಹತ್ತುಹಲವು ವಿಶೇಷತೆಗಳನ್ನು ಹೊತ್ತು ಇನ್ನು ಕೆಲವೇ ದಿನಗಳಲ್ಲಿ ಬಿಡುಗಡೆಯಾಗಲಿರುವ ಟಾಟಾ ಆಲ್‍ಟ್ರೋಜ್ ಕಾರು ಜೂನ್ ತಿಂಗಳಿನಲ್ಲಿ ಡೀಲರ್‍‍ಗಳ ಯಾರ್ಡ್ ತಲಪುವ ಸಾಧ್ಯತೆಗಳಿದ್ದು, ಆಗಸ್ಟ್ ತಿಂಗಳೊಳಗೆ ಮಾರುಕಟ್ಟೆಗೆ ಲಗ್ಗೆ ಇಡುವ ಎಲ್ಲಾ ಲಕ್ಷಣಗಳು ಕಂಡುಬರುತ್ತಿವೆ. ಈ ನಿಟ್ಟಿನಲ್ಲಿ ಟಾಟಾ ಆಲ್ಟ್ರೋಜ್ ಕಾರು ಏನೆಲ್ಲಾ ಉಪಕರಣಗಳು ಮತ್ತು ವೈಶಿಷ್ಟ್ಯತೆಗಳನ್ನು ಹೊತ್ತು ಬರಲಿದೆ ಎಂದು ನೀವೆ ನೋಡಿ..

ಸೇಫ್ಟಿ ಹ್ಯಾಚ್‍ಬ್ಯಾಕ್ ಕಾರಾಗಿ ಎಂಟ್ರಿ ಕೊಡಲಿರುವ ಟಾಟಾ ಅಲ್‍ಟ್ರೋಜ್ ಕಾರಿನ ಟೀಸರ್ ಇಲ್ಲಿದೆ ನೋಡಿ

ಸಧ್ಯ ತನ್ನ ಎಂಜಿನ್ ಕಾರ್ಯಕ್ಷಮತೆಯನ್ನು ಪರೀಕ್ಷಿಸಲು ಸ್ಪಾಟ್ ಟೆಸ್ಟಿಂಗ್ ನಡೆಸುತ್ತಿದ್ದು, ಪುಣೆಯಲ್ಲಿ ಮುಸುಕಿಲ್ಲದೇ ಅನಾವರಣಗೊಂಡಾಗ ಹೇಗೆ ಕಾಣಿಸುತ್ತಿತ್ತೋ, ಹಾಗೆಯೆ ಸ್ಪಾಟ್ ಟೆಸ್ಟಿಂಗ್ ವೇಳೆ ಕಾಣಿಸಿಕೊಂಡಿದೆ. ಈ ಕಾರು ಟಾಟಾ ಮೋಟಾರ್ಸ್‍‍ನಲ್ಲಿರುವ ಬೇರೆಲ್ಲಾ ಹ್ಯಾಚ್‍‍ಬ್ಯಾಕ್ ಕಾರುಗಳಿಗಿಂತಲೂ ವಿನ್ಯಾಸದಲ್ಲಿ ವಿಭಿನ್ನವಾಗಿದೆ ಎಂದು ನೋಡಿದ ತಕ್ಷಣವೇ ತಿಳಿಯುತ್ತದೆ.

ಸೇಫ್ಟಿ ಹ್ಯಾಚ್‍ಬ್ಯಾಕ್ ಕಾರಾಗಿ ಎಂಟ್ರಿ ಕೊಡಲಿರುವ ಟಾಟಾ ಅಲ್‍ಟ್ರೋಜ್ ಕಾರಿನ ಟೀಸರ್ ಇಲ್ಲಿದೆ ನೋಡಿ

ಆಲ್ಬಾಟ್ರೊಸ್ ಎನ್ನುವ ಸಮುದ್ರ ಹಕ್ಕಿಯ ಬಲಿಷ್ಠತೆ ಮತ್ತು ಚತುರತೆಯ ಪ್ರೇರಣೆಯೊಂದಿಗೆ ಆಲ್‌ಟ್ರೊಜ್ ಕಾರನ್ನು ನಿರ್ಮಾಣ ಮಾಡಿರುವ ಟಾಟಾ ಸಂಸ್ಥೆಯು ಸದ್ಯ ಮಾರುಕಟ್ಟೆಯಲ್ಲಿರುವ ಮಾರುತಿ ಸುಜುಕಿ ಬಲೆನೊ ಮತ್ತು ಹ್ಯುಂಡೈ ಐ20 ಕಾರುಗಳಿಗೆ ಪ್ರಬಲ ಪೈಪೋಟಿಯಾಗಿ ಮಾರುಕಟ್ಟೆಗೆ ಪ್ರವೇಶ ಪಡೆಯುವುದು ಬಹುತೇಕ ಖಚಿತವಾಗಿದೆ. ಇದಕ್ಕೆ ಕಾರಣ, ಆಲ್‌ಟ್ರೊಜ್ ಕಾರಿನ ಎಂಜಿನ್ ಪರ್ಫಾಮೆನ್ಸ್ ಗುಣಲಕ್ಷಣಗಳು ಇತರೆ ಹ್ಯಾಚ್‌ಬ್ಯಾಕ್ ಆವೃತ್ತಿಗಳಿಂತಲೂ ಉತ್ತಮವಾಗಿರುವುದಲ್ಲದೇ ಪ್ರೀಮಿಯಂ ಸೌಲಭ್ಯಗಳನ್ನು ಹೊತ್ತುಬರಲಿದೆ.

ಸೇಫ್ಟಿ ಹ್ಯಾಚ್‍ಬ್ಯಾಕ್ ಕಾರಾಗಿ ಎಂಟ್ರಿ ಕೊಡಲಿರುವ ಟಾಟಾ ಅಲ್‍ಟ್ರೋಜ್ ಕಾರಿನ ಟೀಸರ್ ಇಲ್ಲಿದೆ ನೋಡಿ

ಮಾಹಿತಿಗಳ ಪ್ರಕಾರ ಟಾಟಾ ಅಲ್‍ಟ್ರೋಜ್ ಕಾರಿನಲ್ಲಿ ಸ್ಲಿಮ್ ಹೆಡ್‍ಲ್ಯಾಂಪ್ಸ್, ಆಕರ್ಷಕವಾದ ಫ್ರಂಟ್ ಗ್ರಿಲ್, ಪಿಯಾನೊ ಬ್ಲಾಕ್ ಒಆರ್‍‍ವಿಎಂ, ಮತ್ತು ಸಿಗ್ನೇಚರ್ ಗ್ರಿಲ್ ಅನ್ನು ಹೊಂದಿರಲಿದ್ದು, ಇವುಗಳ ಜೊತೆಗೆ ಈ ಕಾರಿನ ಟಾಪ್ ಸ್ಪೆಕ್ ಮಾಡಲ್‍‍ನಲ್ಲಿ 16 ಇಂಚಿನ ಅಲಾಯ್ ವ್ಹೀಲ್ಸ್ ಅನ್ನು ಸಹ ಅಳವಡಿಸಲಾಗಿದೆ.

ಸೇಫ್ಟಿ ಹ್ಯಾಚ್‍ಬ್ಯಾಕ್ ಕಾರಾಗಿ ಎಂಟ್ರಿ ಕೊಡಲಿರುವ ಟಾಟಾ ಅಲ್‍ಟ್ರೋಜ್ ಕಾರಿನ ಟೀಸರ್ ಇಲ್ಲಿದೆ ನೋಡಿ

ವೈಶಿಷ್ಟ್ಯತೆಗಳು

ಇನ್ನು ಕಾರಿನ ಒಳಭಾಗದಲ್ಲಿ 7 ಇಂಚಿನ ಫ್ಲೋಟಿಂಗ್ ಇನ್ಫೋಟನ್ಮೆಂಟ್ ಸಿಸ್ಟಂ, ಟಿಎಫ್‍ಟಿ ಕ್ಲಸ್ಟರ್ ಡಿಸ್ಪ್ಲೇ, ರಿಯರ್ ಎಸಿ ವೆಂಟ್ಸ್ ಅನ್ನು ಪಡೆದುಕೊಂಡಿರಲಿದ್ದು, ಪ್ರಯಾಣಿಕರ ಸುರಕ್ಷತೆಗಾಗಿ ಇದರಲ್ಲಿ ಕ್ರೂಸ್ ಕಂತ್ರೋಲ್, ಡ್ರೈವರ್ ಮತ್ತು ಕೋ ಡ್ರೈವರ್ ಏರ್‍‍ಬ್ಯಾಗ್ಸ್, ಸೀಟ್ ಬೆಲ್ಟ್ ರಿಮೈಂಡರ್, ಪಾರ್ಕಿಂಗ್ ಅಸಿಸ್ಟ್, ಎಬಿಡಿ, ಇಬಿಡಿ, ಐಎಸ್ಒಫಿಕ್ಸ್ ಚೈಲ್ಡ್ ಸೀಟ್ ಮೌಂಟ್ಸ್ ಮತ್ತು ರಿಯರ್ ಸೆನ್ಸಾರ್ಸ್ ಹಾಗು ಕ್ಯಾಮೆರಾವನ್ನು ನೀಡಲಾಗಿದೆ.

ಸೇಫ್ಟಿ ಹ್ಯಾಚ್‍ಬ್ಯಾಕ್ ಕಾರಾಗಿ ಎಂಟ್ರಿ ಕೊಡಲಿರುವ ಟಾಟಾ ಅಲ್‍ಟ್ರೋಜ್ ಕಾರಿನ ಟೀಸರ್ ಇಲ್ಲಿದೆ ನೋಡಿ

ಪ್ರಮುಖ ವಿಚಾರ ಅಂದ್ರೆ, ಟಾಟಾ ಸಂಸ್ಥೆಯು ಸದ್ಯ ಜೆಎಲ್ಆರ್ ಸಂಸ್ಥೆಯ ಜೊತೆಗೂಡಿ ಕಾರು ನಿರ್ಮಾಣದಲ್ಲಿ ಭಾರೀ ಬದಲಾವಣೆ ತರುತ್ತಿದ್ದು, ಹ್ಯಾರಿಯರ್ ಕಾರು ಮಾದರಿಯಲ್ಲೇ ಹೊಸ ಆಲ್‌ಟ್ರೊಜ್ ಕಾರನ್ನು ಸಹ ಇಂಪ್ಯಾಕ್ಟ್ ಡಿಸೈನ್ 2.0 ಅಡ್ವಾನ್ಸ್ ಆಕ್ಟಿಟೆಕ್ಕರ್ ವಿನ್ಯಾಸದೊಂದಿಗೆ ಅಭಿವೃದ್ಧಿಗೊಳಿಸಿರುವುದು ಕಾರಿನ ತೂಕವನ್ನು ಕಡಿತಗೊಳಿಸುವಲ್ಲಿ ಸಾಕಷ್ಟು ನೆರವಾಗಿದೆ. ಇದು ನೆರವಾಗಿ ಕಾರಿನ ಎಂಜಿನ್ ಪರ್ಫಾಮೆನ್ಸ್ ಪರಿಣಾಮ ಬೀರುವುದಲ್ಲದೇ ಮೈಲೇಜ್ ಪ್ರಮಾಣ ಕೂಡಾ ಹೆಚ್ಚಳವಾಗಲಿದೆ.

ಸೇಫ್ಟಿ ಹ್ಯಾಚ್‍ಬ್ಯಾಕ್ ಕಾರಾಗಿ ಎಂಟ್ರಿ ಕೊಡಲಿರುವ ಟಾಟಾ ಅಲ್‍ಟ್ರೋಜ್ ಕಾರಿನ ಟೀಸರ್ ಇಲ್ಲಿದೆ ನೋಡಿ

ಆದ್ರೆ ಕಾರಿನ ಒಳವಿನ್ಯಾಸಗಳ ಬಗ್ಗೆ ಯಾವುದೇ ತಾಂತ್ರಿಕ ಮಾಹಿತಿಗಳನ್ನು ಬಿಟ್ಟುಕೊಡದ ಟಾಟಾ ಮೋಟಾರ್ಸ್ ಸಂಸ್ಥೆಯು ಇದೇ ವರ್ಷ ಜೂನ್ ಅಥವಾ ಜುಲೈ ಅಂತ್ಯಕ್ಕೆ ಬಿಡುಗಡೆಗೊಳಿಸುವ ಸುಳಿವು ನೀಡಿದ್ದು, ಹೊಸ ಕಾರಿನ ಬೆಲೆಯು ದೆಹಲಿ ಎಕ್ಸ್‌ಶೋರೂಂ ಪ್ರಕಾರ ರೂ. 5 ಲಕ್ಷದಿಂದ ರೂ.7 ಲಕ್ಷ ಇರಬಹುದೆಂದು ಅಂದಾಜಿಸಲಾಗಿದೆ.

Most Read Articles

Kannada
English summary
Tata Altroz First TVC Out Here's The Video. Read In Kannada
Story first published: Friday, June 14, 2019, 13:03 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Drivespark sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Drivespark website. However, you can change your cookie settings at any time. Learn more