ಬಿಡುಗಡೆಗಾಗಿ ಸಜ್ಜುಗೊಳ್ಳುತ್ತಿರುವ ಟಾಟಾ ಮೋಟಾರ್ಸ್‍ನ ಕ್ಯಾಸಿನಿ (ಬಝರ್ಡ್) ಕಾರು

ಟಾಟಾ ಮೋಟಾರ್ಸ್ ಸಂಸ್ಥೆಯು ಇದೇ ತಿಂಗಳು 5ರಂದು ಜಿನೆವಾ ಆಟೋ ಮೇಳದಲ್ಲಿ ತನ್ನ ಭವಿಷ್ಯದ 7 ಸೀಟರ್ ಎಸ್‌ಯುವಿ ಮಾದರಿಯಾದ ಹೆಚ್7ಎಕ್ಸ್ ಬಝರ್ಡ್ ಕಾರನ್ನು ಅನಾವರಣ ಮಾಡಿದಲ್ಲದೇ ಮುಂಬರುವ ಅಕ್ಟೋಬರ್ ಹೊತ್ತಿಗೆ ಭಾರತ ಸೇರಿದಂತೆ ವಿಶ್ವದ ಪ್ರಮುಖ ಬಿಡುಗಡೆಯ ಸುಳಿವು ನೀಡಿದ್ದು, ಕೆಲವು ದಿನಗಳ ಹಿಂದಷ್ಟೆ ಟಾಟಾ ಸಂಸ್ಥೆಯು ಹೊಸ ಕಾರಿಗೆ ಕ್ಯಾಸಿನ್ನಿ ಎಂಬ ಹೆಸರನ್ನು ನೀಡಿದೆ. ಆದರೆ ಈ ಕುರಿತಾದ ಮಾಹಿತಿಯನ್ನು ಸಂಸ್ಥೆಯು ಇನ್ನು ಅಧಿಕೃತವಾಗಿ ಬಹಿರಂಗಪಡಿಸಲಿಲ್ಲ.

ಬಿಡುಗಡೆಗಾಗಿ ಸಜ್ಜುಗೊಳ್ಳುತ್ತಿರುವ ಟಾಟಾ ಮೋಟಾರ್ಸ್‍ನ ಕ್ಯಾಸಿನಿ (ಬಝರ್ಡ್) ಕಾರು

ಅನಾವರಣಗೊಂಡ ಸಮಯದಲ್ಲಿ ಬಝರ್ಡ್ ಹೆಸರನ್ನು ಪಡೆದುಕೊಂಡಿದ್ದ ಕ್ಯಾಸಿನಿ ಕಾರು ಇದೀಗ ಪುಣೆ ನಗರದ ರಸ್ತೆಗಳಲ್ಲಿ ಎಂಜಿನ್ ಕಾರ್ಯಕ್ಷಮೆತೆಯನ್ನು ಪರೀಕ್ಷಿಸುವಾಗ ಸ್ಪಾಟ್ ಟೆಸ್ಟಿಂಗ್ ವೇಳೆ ಕಾಣಿಸಿಕೊಂಡಿದ್ದು, ಟೊಯೊಟಾ ಫಾರ್ಚೂನರ್, ಫೋರ್ಡ್ ಎಂಡೀವರ್ ಮತ್ತು ಮಹೀಂದ್ರಾ ಅಲ್ಟುರಾಸ್ ಜಿ4 ಕಾರುಗಳಿಗೆ ಪೈಪೋಟಿ ನೀಡಲಿದೆ. ಟಾಟಾ ಈ ಹಿಂದೆ ಜನವರಿ ಆರಂಭದಲ್ಲಿ ಬಿಡುಗಡೆ ಮಾಡಿದ್ದ 5 ಸೀಟರ್ ಹ್ಯಾರಿಯರ್ ಸಬ್ ಕಂಪ್ಯಾಕ್ಟ್ ಎಸ್‌ಯುವಿ ಹೋಲಿಕೆಯಲ್ಲೇ ಬಝರ್ಡ್ ಕಾರನ್ನು ವಿನೂತನ ವೈಶಿಷ್ಟ್ಯತೆಗಳೊಂದಿಗೆ ಅಭಿವೃದ್ಧಿಗೊಳಿಸಿದೆ.

ಬಿಡುಗಡೆಗಾಗಿ ಸಜ್ಜುಗೊಳ್ಳುತ್ತಿರುವ ಟಾಟಾ ಮೋಟಾರ್ಸ್‍ನ ಕ್ಯಾಸಿನಿ (ಬಝರ್ಡ್) ಕಾರು

ಹೊಸ ಬಝರ್ಡ್ ಕಾರು ಮಾದರಿಯು 6 ಪ್ಲಸ್ 1 ಆಸನ ಮಾದರಿಯ ಎಸ್‌ಯುವಿ ಕಾರು ಆವೃತ್ತಿಯಾಗಿದ್ದು, 5 ಸೀಟರ್ ಹ್ಯಾರಿಯರ್ ಮಾದರಿಯಲ್ಲೇ ಹೊಸ ಕಾರು ಕೂಡಾ ಒಳ ಮತ್ತು ಹೊರ ವಿನ್ಯಾಸಗಳನ್ನು ಪಡೆದುಕೊಂಡಿದೆ.

ಬಿಡುಗಡೆಗಾಗಿ ಸಜ್ಜುಗೊಳ್ಳುತ್ತಿರುವ ಟಾಟಾ ಮೋಟಾರ್ಸ್‍ನ ಕ್ಯಾಸಿನಿ (ಬಝರ್ಡ್) ಕಾರು

ಹೀಗಾಗಿ ಸದ್ಯ ಮಾರುಕಟ್ಟೆಯಲ್ಲಿರುವ ಹೆಕ್ಸಾ ಕಾರಿಗಿಂತಲೂ ಹೆಚ್ಚಿನ ಮಟ್ಟದ ತಾಂತ್ರಿಕ ಸೌಲಭ್ಯವನ್ನು ಹೊಂದಿರುವ ಬಝರ್ಡ್ ಕಾರು, 2,741-ಎಂಎಂ ನಷ್ಟು ವೀಲ್ಹ್ ಬೆಸ್ ಸೌಲಭ್ಯದೊಂದಿಗೆ ಹ್ಯಾರಿಯರ್ ಕಾರಿಗಿಂತ 62-ಎಂಎಂ ಉದ್ದವಾಗಿದೆ ಎನ್ನಲಾಗಿದೆ. ಇದು ಮೂರನೇ ಸಾಲಿನಲ್ಲಿ ಕೂರುವ ಪ್ರಯಾಣಿಕರಿಗೆ ಸಹಕಾರಿಯಾಗಲಿದ್ದು, ಎಸ್‌ಯುವಿ ಕಾರುಗಳ ಪ್ರಮುಖ ಆಕರ್ಷಣೆಯಾದ ಫುಟ್ ಬೋರ್ಡ್, ರೂಫ್ ರೈಲ್ಸ್ ಮತ್ತು 18-ಇಂಚಿನ ಅಲಾಯ್ ಚಕ್ರಗಳು ಗ್ರಾಹಕರನ್ನು ಸೆಳೆಯುವುದರಲ್ಲಿ ಯಾವುದೇ ಅನುಮಾನವಿಲ್ಲ.

ಬಿಡುಗಡೆಗಾಗಿ ಸಜ್ಜುಗೊಳ್ಳುತ್ತಿರುವ ಟಾಟಾ ಮೋಟಾರ್ಸ್‍ನ ಕ್ಯಾಸಿನಿ (ಬಝರ್ಡ್) ಕಾರು

ಮತ್ತೊಂದು ವಿಚಾರ ಅಂದ್ರೆ, ಹೊಸ ಕಾರು ಇಂಪ್ಯಾಕ್ಟ್ 2.0 ಡಿಸೈನ್ ಅಡಿ ನಿರ್ಮಾಣವಾಗಿದ್ದು, ಫ್ಲೇರ್ಡ್ ಆರ್ಚೆಸ್, ಮುಂಭಾಗದ ಬಂಪರ್‍‍ಗಳಿಗೆ ಟ್ರೈ ಆರೋ ಡಿಸೈನ್, ಡ್ಯುಯಲ್ ಟೋನ್ ಬಂಪರ್, ಎಲ್ಇಡಿ ಹೆಡ್‍ಲೈಟ್, ವ್ರಾಪ್ಡ್ ಅರೌಂಡ್ ಟೈಲ್ ಲೈಟ್ ಮತ್ತು ಸ್ಕಿಡ್ ಪ್ಲೇಟ್‍‍ಗಳಿಂದ ಸಜ್ಜುಗೊಂಡಿದೆ.

ಬಿಡುಗಡೆಗಾಗಿ ಸಜ್ಜುಗೊಳ್ಳುತ್ತಿರುವ ಟಾಟಾ ಮೋಟಾರ್ಸ್‍ನ ಕ್ಯಾಸಿನಿ (ಬಝರ್ಡ್) ಕಾರು

ಕಾರಿನ ವಿನ್ಯಾಸ

ಬಝರ್ಡ್ ಎಸ್‍ಯುವಿ ಕಾರು ಐಷಾರಾಮಿ ಒಳವಿನ್ಯಾಸದೊಂದಿಗೆ ವಿಶಾಲವಾದ ಕ್ಯಾಬಿನ್ ಸ್ಪೆಸ್ ಹೊಂದಿದ್ದು, ಟಚ್‍ಸ್ಕ್ರೀನ್ ಇನ್ಫೋಟೈನ್ಮೆಂಟ್ ಸಿಸ್ಟಂ, ಆಟೋಮ್ಯಾಟಿಕ್ ಕ್ಲೈಮೆಟ್ ಕಂಟ್ರೋಲರ್, ಪ್ರೀಮಿಯಂ ಆಡಿಯೊ ಸಿಸ್ಟಂ ಹಾಗೂ ಇನ್ನು ಹಲವಾರು ವೈಶಿಷ್ಟ್ಯತೆಗಳನ್ನು ಪಡೆದುಕೊಂಡಿರಲಿದೆ. ಜೊತೆಗೆ ಹೊಸ ಕಾರು ಆಪ್ಟಿಮಲ್ ಮಾಡ್ಯುಲರ್ ಎಫಿಶಿಯೆಂಟ್ ಗ್ಲೋಬಲ್ ಅಡ್ವಾನ್ಸ್ಡ್ ಪ್ಲಾಟ್‍ಫಾರ್ಮ್ ಅನ್ನು ಆಧರಿಸಿದ್ದು, ಇದೇ ತಂತ್ರವನ್ನು ಲ್ಯಾಂಡ್ ರೋವರ್ ಡಿಸ್ಕವರಿ ಕಾರಿನಲ್ಲಿಯೂ ಕೂಡಾ ಇದನ್ನು ನಾವು ಕಾಣಬಹುದಾಗಿದೆ.

ಬಿಡುಗಡೆಗಾಗಿ ಸಜ್ಜುಗೊಳ್ಳುತ್ತಿರುವ ಟಾಟಾ ಮೋಟಾರ್ಸ್‍ನ ಕ್ಯಾಸಿನಿ (ಬಝರ್ಡ್) ಕಾರು

ಎಂಜಿನ್ ಸಾಮರ್ಥ್ಯ

ಬಝರ್ಡ್ ಕಾರುಗಳಲ್ಲಿ 2.0-ಲೀಟರ್ ಕ್ರೆಯೊಟೆಕ್ ಡೀಸೆಲ್ ಎಂಜಿನ್ ಸಹಾಯದಿಂದ 170-ಬಿಹೆಚ್‍ಪಿ ಹಾಗೂ 350-ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುವ ಶಕ್ಟಿಯನ್ನು ಪಡೆದಿದ್ದು, ಹ್ಯುಂಡೈನಿಂದ ಎರವಲು ಪಡೆಯಲಾಗಿರುವ ಸಿಕ್ಸ್ ಸ್ಪೀಡ್ ಮ್ಯಾನುವಲ್ ಮತ್ತು ಸಿಕ್ಸ್ ಸ್ಪಿಡ್ ಟಾರ್ಕ್ ಕನ್ವರ್ಟರ್ ಆಟೋಮ್ಯಾಟಿಕ್ ಟ್ರಾನ್ಸ್‌ಮಿಷನ್ ಸೌಲಭ್ಯ ಪಡೆದುಕೊಳ್ಳಲಿದೆ.

ಬಿಡುಗಡೆಗಾಗಿ ಸಜ್ಜುಗೊಳ್ಳುತ್ತಿರುವ ಟಾಟಾ ಮೋಟಾರ್ಸ್‍ನ ಕ್ಯಾಸಿನಿ (ಬಝರ್ಡ್) ಕಾರು

ಕಾರಿನ ಬೆಲೆ ಮತ್ತು ಬಿಡುಗಡೆಯ ಅವಧಿ(ಅಂದಾಜು)

ಟಾಟಾ ಸಂಸ್ಥೆಯು ಸದ್ಯ ನಾಲ್ಕು ವಿವಿಧ ಮಾದರಿಯ ಕಾರುಗಳ ಬಿಡುಗಡೆಗಾಗಿ ಯೋಜನೆ ರೂಪಿಸಿದ್ದು, ಇದರಲ್ಲಿ ಮೊದಲಿಗೆ ಆಲ್‌ಟ್ರೊಜ್ ಕಾರು ಬಿಡುಗಡೆಯಾದ ನಂತರವಷ್ಟೇ ಬಝರ್ಡ್ ಕಾರು ಮಾರುಕಟ್ಟೆಗೆ ಪ್ರವೇಶ ಪಡೆಯಲಿದೆ.

ಬಿಡುಗಡೆಗಾಗಿ ಸಜ್ಜುಗೊಳ್ಳುತ್ತಿರುವ ಟಾಟಾ ಮೋಟಾರ್ಸ್‍ನ ಕ್ಯಾಸಿನಿ (ಬಝರ್ಡ್) ಕಾರು

ಮೂಲಗಳ ಪ್ರಕಾರ, ಬಝರ್ಡ್ ಕಾರು 2019ರ ಅಂತ್ಯದಲ್ಲಿ ಇಲ್ಲವೇ 2020ರ ಆರಂಭದಲ್ಲಿ ಬಿಡುಗಡೆಯಾಗುವ ನೀರಿಕ್ಷೆಗಳಿದ್ದು, ಕಾರಿನ ಬೆಲೆಯು ಮಾರುಕಟ್ಟೆಯಲ್ಲಿರುವ ಪ್ರತಿಸ್ಪರ್ಧಿ ಎಸ್‌ಯುವಿ ಕಾರುಗಳಿಂತಲೂ ಅತಿ ಕಡಿಮೆ ಬೆಲೆಯಲ್ಲಿ ದೊರೆಯಲಿದೆ. ಎಕ್ಸ್‌ಶೋರೂಂ ಪ್ರಕಾರ ಆರಂಭಿಕ ಆವೃತ್ತಿಯು ರೂ.21 ಲಕ್ಷದಿಂದ ಟಾಪ್ ಎಂಡ್ ಆವೃತ್ತಿಯು ರೂ.23 ಲಕ್ಷ ಬೆಲೆ ಹೊಂದಿರಬಹುದು ಎಂದು ನೀರಿಕ್ಷಿಸಲಾಗಿದೆ.

Source: Motor World India

Most Read Articles

Kannada
English summary
Tata Buzzard akd Cassini Spotted Testing In Pune. Read In Kannada
Story first published: Wednesday, March 27, 2019, 17:48 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X