ಕ್ರ್ಯಾಶ್ ಟೆಸ್ಟಿಂಗ್‍ನ ನಂತರ ಅಧಿಕಗೊಂಡ ಟಾಟಾ ನೆಕ್ಸಾನ್ ಕಾರಿನ ಮಾರಾಟ

ಡಿಸೆಂಬರ್ 2018ರಲಿ ಎನ್‍ಸಿಎಪಿ ಯಲ್ಲಿ ನಡೆದ ಕ್ರ್ಯಾಶ್ ಟೆಸ್ಟಿಂಗ್‍ನಲ್ಲಿ ನಮ್ಮ ದೇಶಿಯ ವಾಹನ ತಯಾಕರ ಸಂಸ್ಥೆಯ ಎಸ್‍ಯುವಿ ಕಾರಾದ ಟಾಟಾ ನೆಕ್ಸಾನ್ ಒಟ್ಟಾರೆಯಾಗಿ ಒಟ್ಟು ಐದಕ್ಕೆ ಐದು ಅಂಕಗಳನ್ನು ಪಡೆದುಕೊಂಡು, ದೇಶದ ಸೇಫೆಸ್ಟ್ ಎಸ್‍ಯುವಿ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.

ಕ್ರ್ಯಾಶ್ ಟೆಸ್ಟಿಂಗ್‍ನ ನಂತರ ಅಧಿಕಗೊಂಡ ಟಾಟಾ ನೆಕ್ಸಾನ್ ಕಾರಿನ ಮಾರಾಟ

ಇಷ್ಟೆ ಅಲ್ಲದೇ ಕ್ರ್ಯಾಶ್ ಟೆಸ್ಟಿಂಗ್‍ನ ನಂತರ ಈ ಕಾರಿಗೆ ಮಾರುಕಟ್ಟೆಯಲ್ಲಿ ಡಿಮ್ಯಾಂಡ್ ಜಾತಿಯಾಗಿದ್ದು, ತನ್ನ ಎದುರಾಳಿಗಳಿಗೆ ತೀವ್ರವಾಗಿ ಪೈಪೋಟಿ ನೀಡುತ್ತಿದೆ. ಜನವರಿ 2019ರಕ್ಕಿಂತ ಮುಂಚಿತವಾಗಿ ಯಾವ ತಿಂಗಳಿನಲ್ಲಿಯೂ 5,000 ಮಾರಾಟದ ಸಂಖ್ಯೆಯನ್ನು ದಾಟದ ಟಾಟಾ ನೆಕ್ಸಾನ್ ಜನವರಿ 2019ರ ನಂತರದಲ್ಲಿ ಪ್ರತೀ ತಿಂಗಳೂ ಸುಮಾರು 5 ಸಾವಿರಕ್ಕು ಹೆಚ್ಚಿನ ಸಂಖ್ಯೆಯಲ್ಲಿ ಮಾರಾಟವಾಗಿದೆ.

ಕ್ರ್ಯಾಶ್ ಟೆಸ್ಟಿಂಗ್‍ನ ನಂತರ ಅಧಿಕಗೊಂಡ ಟಾಟಾ ನೆಕ್ಸಾನ್ ಕಾರಿನ ಮಾರಾಟ

ಜನವರಿ 2019ರಲ್ಲಿ ಸುಮಾರು 5,095 ಯೂನಿಟ್‍‍ಗಳು ಮಾರಾಟವಾದರೆ ಇನ್ನು ಫೆಬ್ರುವರಿ 2019ರಲ್ಲಿ ಸುಮಾರು 5,263 ಯೂನಿಟ್ ಕಾರುಗಳು ಹಾಗು ಮಾರ್ಚ್ ತಿಂಗಳಿನಲ್ಲಿ ಬರೊಬ್ಬರಿ 5,616 ಯೂನಿಟ್‍‍ಗಳು ಮಾರಾಟಗೊಂಡು ಹ್ಯುಂಡೈ ಬ್ರೆಝಾ, ಮಹೀಂದ್ರಾ ಎಕ್ಸ್ಯುವಿ 300, ಫೋರ್ಡ್ ಇಕೊಸ್ಪೋರ್ಟ್, ಹೋಂಡಾ ಡಬ್ಲ್ಯೂಆರ್‍‍ವಿ ಮತ್ತು ಮಹೀಂದ್ರಾ ಟಿಯುವಿ300 ಕಾರುಗಳಿಗೆ ಪೈಪೋಟಿ ನೀಡುತ್ತಿದೆ.

ಕ್ರ್ಯಾಶ್ ಟೆಸ್ಟಿಂಗ್‍ನ ನಂತರ ಅಧಿಕಗೊಂಡ ಟಾಟಾ ನೆಕ್ಸಾನ್ ಕಾರಿನ ಮಾರಾಟ

ವಿಶಿಷ್ಟ ವಿನ್ಯಾಸಗಳೊಂದಿಗೆ ಎಸ್‌ಯುವಿ ಪ್ರಿಯರನ್ನು ಸೆಳೆಯುವಲ್ಲಿ ಯಶಸ್ವಿಯಾಗಿರುವ ನೆಕ್ಸಾನ್ ಆವೃತ್ತಿಗಳು ಇಂಪ್ಯಾಕ್ಟ್ 2.0 ಡಿಸೈನ್‌ನೊಂದಿಗೆ ಅಭಿವೃದ್ಧಿಗೊಂಡಿದ್ದು, ಮಲ್ಟಿ ಡ್ರೈವ್ ಮೋಡ್, ತೇಲುವ ಡ್ಯಾಶ್ ಟಾಪ್ ಎಚ್‌ಡಿ ಟಚ್‌ಸ್ಕ್ರೀನ್, ಹರ್ಮನ್ ಇನ್ಫೋಟೈನ್ಮೆಂಟ್ ಸಿಸ್ಟಂ, ಬೃಹತ್ತಾದ ಸೆಂಟ್ರಲ್ ಕನ್ಸಾಲ್ ಪಡೆದುಕೊಂಡಿದೆ.

ಕ್ರ್ಯಾಶ್ ಟೆಸ್ಟಿಂಗ್‍ನ ನಂತರ ಅಧಿಕಗೊಂಡ ಟಾಟಾ ನೆಕ್ಸಾನ್ ಕಾರಿನ ಮಾರಾಟ

ಟಾಟ ಮೋಟರ್ಸ್ ಮೊನ್ನೆಯಷ್ಟೆ ತಮ್ಮ ನೆಕ್ಸಾನ್ ಕಾರಿನ ಎಎಮ್‍‍ಟಿ ಕಾರಿನ ಮಾದರಿಯನ್ನು ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಿದ್ದು, ನೆಕ್ಸಾನ್ ಪೆಟ್ರೋಲ್ ಮಾದರಿಯ ಕಾರುಗಳ ಬೆಲೆಯು ರೂ 9.41 ಲಕ್ಷಕ್ಕೆ ನಿಗದಿಪಡಿಸಲಾಗಿದ್ದು, ಇನ್ನು ಡೀಸೆಲ್ ಮಾದರುಯ ಕಾರುಗಳ ಬೆಲೆಯು ರೂ 10.3 ಲಕ್ಷಕ್ಕೆ ನಿಗದಿಪಡಿಸಲಾಗಿದೆ.

ಕ್ರ್ಯಾಶ್ ಟೆಸ್ಟಿಂಗ್‍ನ ನಂತರ ಅಧಿಕಗೊಂಡ ಟಾಟಾ ನೆಕ್ಸಾನ್ ಕಾರಿನ ಮಾರಾಟ

ಇಷ್ಟೆ ಅಲ್ಲದೆಯೆ ಆಟೋಮ್ಯಾಟಿಕ್ ಗೇರ್‌ಬಾಕ್ಸ್ ಮಾದರಿಗಳಿಗೆ ಈಗಾಗಲೇ ಸಾವಿರಾರು ಗ್ರಾಹಕರು ಬೇಡಿಕೆಯಿಟ್ಟಿದ್ದು, ಈ ಹಿನ್ನೆಲೆ ಮಹತ್ವದ ಯೋಜನೆ ರೂಪಿಸಿರುವ ಟಾಟಾ ಮೋಟಾರ್ಸ್ ಸಂಸ್ಥೆಯು ಮಾರ್ಚ್,2018 ಮೊದಲ ವಾರದಲ್ಲಿ ಆಟೋಮ್ಯಾಟಿಕ್ ಗೇರ್‍‌ಬಾಕ್ಸ್ ಆವೃತ್ತಿಯನ್ನು ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಲಿದೆ.

ಕ್ರ್ಯಾಶ್ ಟೆಸ್ಟಿಂಗ್‍ನ ನಂತರ ಅಧಿಕಗೊಂಡ ಟಾಟಾ ನೆಕ್ಸಾನ್ ಕಾರಿನ ಮಾರಾಟ

ಜೊತೆಗೆ ಪ್ರಯಾಣಿಕರ ಸುರಕ್ಷತೆಗಾಗಿ ನೆಕ್ಸಾನ್ ಕಾರುಗಳಲ್ಲಿ ಚಾಲಕ ಮತ್ತು ಪ್ರಯಾಣಿಕ ಸೀಟುಗಳ ಕಡೆಗೆ ಡ್ಯುಯಲ್ ಏರ್‌ಬ್ಯಾಗ್, ಎಬಿಎಸ್, ಐಸೋಫೆಕ್ಸ್ ಚೈಲ್ಡ್ ಮೌಟೆಂಡ್ ಸೀಟುಗಳು ಮತ್ತು ಬಲಿಷ್ಠ ಬಾಡಿ ಕಿಟ್ ಹೊಂದಿರುವುದು ಕಾರಿನ ಮೌಲ್ಯವನ್ನ ಹೆಚ್ಚಿಸಿದೆ.

ಕ್ರ್ಯಾಶ್ ಟೆಸ್ಟಿಂಗ್‍ನ ನಂತರ ಅಧಿಕಗೊಂಡ ಟಾಟಾ ನೆಕ್ಸಾನ್ ಕಾರಿನ ಮಾರಾಟ

ಇನ್ನು 1.2-ಲೀಟರ್ ಪೆಟ್ರೋಲ್ ಎಂಜಿನ್ ಮತ್ತು 1.5-ಲೀಟರ್ ಡೀಸೆಲ್ ಎಂಜಿನ್ ಹೊಂದಿರುವ ನೆಕ್ಸಾನ್ ಕಾರುಗಳು ಗ್ರಾಹಕರ ಬೇಡಿಕೆಗೆ ಅನುಗುಣವಾಗಿ 5-ಸ್ಪೀಡ್ ಮ್ಯಾನುವಲ್ ಗೇರ್‌ಬಾಕ್ಸ್ ಹಾಗೂ 6-ಸ್ಪೀಡ್ ಆಟೋಮ್ಯಾಟಿಕ್ ಗೇರ್‌ಬಾಕ್ಸ್ ಪಡೆದುಕೊಂಡಿದೆ. ಈ ಮೂಲಕ ಯುವ ಸಮುದಾಯ ನೆಚ್ಚಿನ ಆಯ್ಕೆಯಾಗಿರುವ ನೆಕ್ಸಾನ್ ಕಾರುಗಳು ಇದೀಗ ಸುರಕ್ಷತೆಯಲ್ಲೂ ಮುನ್ನಡೆ ಸಾಧಿಸಿವೆ ಎನ್ನಬಹುದು.

Most Read Articles

Kannada
English summary
Tata Nexon sales cross 5.5k for the first time – Continues to be No 2 compact SUV. Read In Kannada
Story first published: Monday, April 8, 2019, 8:55 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X