ಜುಲೈ ತಿಂಗಳಿನಲ್ಲಿ ಮಾರಾಟಗೊಂಡ ಟಾಪ್ 10 ಕಾರುಗಳಿವು

2019ರ ಜುಲೈ ತಿಂಗಳ ಕಾರು ಮಾರಾಟದ ಅಂಕಿ ಅಂಶಗಳು ಇದೀಗ ಬಹಿರಂಗಗೊಂಡಿದ್ದು, ಎಂದಿನಂತೆಯೆ ದೇಶಿಯ ವಾಹನ ತಯಾರಕ ಸಂಸ್ಥಯಾದ ಮಾರುತಿ ಸುಜುಕಿ ಮೊದಲನೆಯ ಸ್ಥಾನವನ್ನು ಪಡೆದುಕೊಂಡಿದೆ. ಹಾಗಾದರೆ ಜನವರಿಯಲ್ಲಿ ಮಾರಾಟಗೊಂಡ ಟಾಪ್ 10 ಕಾರುಗಳು ಯಾವುವು ಎಂದು ಇಲ್ಲಿ ತಿಳಿಯಿರಿ.

ಜುಲೈ ತಿಂಗಳಿನಲ್ಲಿ ಮಾರಾಟಗೊಂಡ ಟಾಪ್ 10 ಕಾರುಗಳಿವು

2019ರ ಜುಲೈ ತಿಂಗಳಿನಲ್ಲಿ ಮಾರಾಟಗೊಂಡ ಟಾಪ್ 10 ಕಾರುಗಳಲ್ಲಿ ಸುಮಾರು 7 ಕಾರುಗಳು ಮಾರುತಿ ಸುಜುಕಿ ಸಂಸ್ಥೆಯ ಕಾರುಗಳಾಗಿದ್ದು, ಇವುಗಳಿಗೆ ಪೋಟಿಯಾಗಿ ದಕ್ಷಿಣ ಕೊರಿಯಾ ಮೂಲದ ವಾಹನ ತಯಾರಕ ಸಂಸ್ಥೆಯಾದ ಹ್ಯುಂಡೈಯ ಕಾರುಗಳು 3 ಸ್ಥಾನವನ್ನು ಪಡೆದುಕೊಂಡೊದೆ. ಮತ್ತು ಟಾಪ್ 10 ಕಾರುಗಳಲ್ಲಿ ಅಧಿಕವಾಗಿ ಹ್ಯಾಚ್‍‍ಬ್ಯಾಕ್ ಕಾರುಗಳೇ ಮಾರಾಟಗೊಂಡಿರುವುದು ಅಚ್ಚರಿ ವಿಷಯ.

ಜುಲೈ ತಿಂಗಳಿನಲ್ಲಿ ಮಾರಾಟಗೊಂಡ ಟಾಪ್ 10 ಕಾರುಗಳಿವು
Rank Model Units
1 Maruti WagonR 15,062
2 Maruti Dzire 12,923
3 Maruti Swift 12,677
4 Maruti Alto 11,577
5 Maruti Baleno 10,482
6 Maruti Eeco 9,814
7 Hyundai Venue 9,585
8 Maruti Ertiga 9,222
9 Hyundai i20 9,012
10 Hyundai Creta 6,585
ಜುಲೈ ತಿಂಗಳಿನಲ್ಲಿ ಮಾರಾಟಗೊಂಡ ಟಾಪ್ 10 ಕಾರುಗಳಿವು

ಮಾರುತಿ ಸುಜುಕಿ ವ್ಯಾಗನ್ ಆರ್

ಮಾರುತಿ ಸುಜುಕಿ ವ್ಯಾಗನ್ ಆರ್ ಕಾರು ಮೊದಲ ಬಾರಿಗೆ 1999 ರಲ್ಲಿ ಬಿಡುಗಡೆಗೊಂಡಿದ್ದರೂ, 20 ವರ್ಷಗಳಾದರು ಈ ಕಾರಿನ ಕ್ರೇಜ್ ಮಾರುಕಟ್ಟೆಯಲ್ಲಿ ಇನ್ನು ಹಾಗೆಯೆ ಇದೆ. ಈ ನಿಟ್ಟಿನಲ್ಲಿ ಮಾರುತಿ ಸುಜುಕಿ ಸಂಸ್ಥೆಯು ಹಿಂದಿನ ತಲೆಮಾರಿಗಿಂತಾ ಹೆಚ್ಚಿನ ಬದಲಾವಣೆಗಳನ್ನು ನೀಡಿ ಬಿಡುಗಡೆ ಮಾಡಿದೆ ಮತ್ತು ಈ ಕಾರು ಈ ಬಾರಿ ಸಂಸ್ಥೆಯ ಹಾರ್ಟ್‍ಟೆಕ್ಟ್ ಪ್ಲಾಟ್‍‍ಫಾರ್ಮ್ ಅನ್ನು ಆಧರಿಸಿದೆ.

ಜುಲೈ ತಿಂಗಳಿನಲ್ಲಿ ಮಾರಾಟಗೊಂಡ ಟಾಪ್ 10 ಕಾರುಗಳಿವು

ಮಾರುತಿ ಸುಜುಕಿ ಡಿಜೈರ್

ಮಾರುತಿ ಡಿಜೈರ್ ದೇಶಿಯ ಮಾರುಕಟ್ಟೆಯಲ್ಲಿ ಅಗ್ಗದ ಬೆಲೆಯಲ್ಲಿ ದೊರೆಯುತ್ತಿರುವ ಸೆಡಾನ್ ಕಾರಾಗಿದ್ದು, ಈ ಕಾರನ್ನು ಪ್ಯಾಸೆಂಜರ್ ವಾಹನವನ್ನಾಗಿ ಮತ್ತು ಟ್ಯಾಕ್ಸಿ ಉದ್ಯಮದಲ್ಲಿ ಬಳಸಬಹುದಾಗಿದೆ. ಹೀಗಾಗಿ ಈ ಕಾರು ಇತ್ತ ಸ್ವಂತ ಬಳಕೆಗು ಮತ್ತು ಟ್ಯಾಕ್ಸಿ ಉದ್ಯಮದಲ್ಲಿ ಹೆಚ್ಚಿನ ಜನಪ್ರೀಯತೆಯನ್ನು ಪಡೆಯುತ್ತಿದೆ.ಇದು ಸಾಂದರ್ಭಿಕವಾಗಿ ಮಾರಾಟ ಪಟ್ಟಿಯಲ್ಲಿ ಮೇಲ್ಭಾಗದಲ್ಲಿದೆ ಮತ್ತು ಆಲ್ಟೊವನ್ನು ಎರಡನೇ ಸ್ಥಾನಕ್ಕೆ ತರುತ್ತದೆ.

ಜುಲೈ ತಿಂಗಳಿನಲ್ಲಿ ಮಾರಾಟಗೊಂಡ ಟಾಪ್ 10 ಕಾರುಗಳಿವು

ಮಾರುತಿ ಸುಜುಕಿ ಸ್ವಿಫ್ಟ್

ಮಾರುತಿ ಸುಜುಕಿ ಸ್ವಿಫ್ಟ್ ಕಾರು 2019ರ ಇಂಡಿಯನ್ ಕಾರ್ ಆಫ್ ದಿ ಇಯರ್ ಎಂಬ ಪ್ರಶಸ್ತಿಯನ್ನು ಪಡೆದುಕೊಂಡಿದೆ. ಕಳೆದ ವರ್ಷ ಫೆಬ್ರವರಿಯಲ್ಲಿ ಬಿಡಗಡೆಯಾದ ಮೂರನೆಯ ತಲೆಮಾರಿನ ಸ್ವಿಫ್ಟ್ ಕಾರು ಹೆಚ್ಚು ಬದಲಾವಣೇಗಳನ್ನು ಪಡೆದುಕೊಂಡಿದ್ದು, ಈ ಕಾರು ಪೆಟ್ರೋಲ್ ಮತ್ತು ಡೀಸೆಲ್ ಎಂಜಿನ್ ಆಯ್ಕೆಯಲ್ಲಿ ಖರೀದಿಗೆ ಲಭ್ಯವಿದೆ.

ಜುಲೈ ತಿಂಗಳಿನಲ್ಲಿ ಮಾರಾಟಗೊಂಡ ಟಾಪ್ 10 ಕಾರುಗಳಿವು

ಮಾರುತಿ ಸುಜುಕಿ ಆಲ್ಟೋ

ಮಾರುತಿ ಆಲ್ಟೋ ಹ್ಯಾಚ್‍ಬ್ಯಾಕ್ ಕಾರು ಇಂದಿಗೂ ಸಹ ಭಾರತೀಯ ಮಾರುಕಟ್ಟೆಯಲ್ಲಿ ಗ್ರಾಹಕರಿಗೆ ಅಚ್ಚುಮೆಚ್ಚಿನ ಕಾರು ಎಂದು ಹೇಳಿದರೆ ತಪ್ಪಾಗಲಾರದು. ಈ ಕಾರು ಮಾರುತಿ 800 ಕಾರಿನ ಉತ್ತರಾಧಿಕಾರಿಯಾಗಿದ್ದು, ಇದು 800cc ಮತ್ತು 1.0-ಲೀಟರ್ ಎಂಜಿನ್ ಆಯ್ಕೆಯಲ್ಲಿ ಹಾಗು ಆಟೋಮ್ಯಾಟಿಕ್ ಆಯ್ಕೆಯಲ್ಲಿ ಕೂಡಾ ಖರೀದಿಗೆ ಲಭ್ಯವಿದೆ.

MOST READ: ದಂಡ ವಿಧಿಸಿದ ಪೊಲೀಸರಿಗೆ ಸರಿಯಾಗಿ ಚಮಕ್ ಕೊಟ್ಟ ಎಲೆಕ್ಟ್ರಿಷಿಯನ್

ಜುಲೈ ತಿಂಗಳಿನಲ್ಲಿ ಮಾರಾಟಗೊಂಡ ಟಾಪ್ 10 ಕಾರುಗಳಿವು

ಮಾರುತಿ ಸುಜುಕಿ ಬಲೆನೊ

ಮಾರುತಿ ಸುಜುಕಿ ಬಲೆನೊ ಕಾರು ಇತ್ತೀಚೆಗಷ್ಟೆ ಹಲವಾರು ಬದಲಾವಣೆಯನ್ನು ಪಡೆದುಕೊಂಡು, ಫೇಸ್‍ಲಿಫ್ಟ್ ಮಾದರಿಯನ್ನು ಹೊಂದಿದೆ. ಈ ನಿಟ್ಟಿನಲ್ಲಿ ಮಾರುತಿ ಸುಜುಕಿಯ ಪ್ರೀಮಿಯಂ ಹ್ಯಾಚ್‍‍ಬ್ಯಾಕ್ ಕಾರು ಎಂಬ ಹೆಸರನ್ನು ಪಡೆದಿರುವ ಈ ಕಾರು ಮುಂಬರುವ ದಿನಗಳಲ್ಲಿ ಇನ್ನು ಹೆಚ್ಚು ಸಾಮರ್ಥ್ಯವನ್ನು ಪಡೆದುಕೊಂಡು 'ಅರ್‍ಎಸ್' ಬ್ಯಾಡ್ಜಿಂಗ್ ಅನ್ನು ಹೊಂದಲಿದೆ.

MOST READ: ಭಾರತೀಯ ಸೇನೆಯಲ್ಲಿ ಸೇವೆ ಸಲ್ಲಿಸುತ್ತಿರುವ ವಾಹನಗಳಿಗೆ ಹೊಸ ರೂಲ್ಸ್..!

ಜುಲೈ ತಿಂಗಳಿನಲ್ಲಿ ಮಾರಾಟಗೊಂಡ ಟಾಪ್ 10 ಕಾರುಗಳಿವು

ಮಾರುತಿ ಸುಜುಕಿ ಇಕೊ

ಮಾರುತಿ ಸುಜುಕಿ ಸಂಸ್ಥೆಯು ಇತ್ತೀಚೆಗೆ ತಮ್ಮ ಜನಪ್ರಿಯ ಓಮ್ನಿ ಕಾರಿನ ಉತ್ಪಾದನೆಯನ್ನು ಮತ್ತು ಮಾರಾಟವನ್ನು ಸ್ಥಗಿತಗೊಳಿಸಿದ್ದು, ಈ ಕಾರಿನ ಬದಲಾಗಿ ಇಕೊ ಕಾರನ್ನು ಮಾರಾಟ ಮಾಡುತ್ತಿದೆ. ಒಮ್ನಿ ಕಾರಿನಂತೆಯೆ ಇಕೊ ಕಾರು ಕೂಡಾ ಹೆಚ್ಚಿನ ಸಂಖ್ಯೆಯಲ್ಲಿ ಮಾರಾಟವಾಗುತ್ತಿದ್ದು, ಈ ಬಾರಿ ಹೆಚ್ಚಿನ ಸುರಕ್ಷಾ ಸಾಧನಗಳನ್ನು ಪಡೆದುಕೊಂಡಿದೆ.

MOST READ: ಎಕ್ಸ್‌ಪ್ರೆಸ್‌ವೇಗಳಲ್ಲಿ ಎದುರಾಗುವ ಅಪಾಯಕಾರಿ ಸಂಗತಿಗಳಿವು..!

ಜುಲೈ ತಿಂಗಳಿನಲ್ಲಿ ಮಾರಾಟಗೊಂಡ ಟಾಪ್ 10 ಕಾರುಗಳಿವು

ಹ್ಯುಂಡೈ ವೆನ್ಯೂ

ಹ್ಯುಂಡೈ ಸಂಸ್ಥೆಯಲ್ಲಿ ಸಧ್ಯ ಸದ್ದು ಮಾಡುತ್ತಿರುವ ವೆನ್ಯೂ ಕಾರು ತಮ್ಮದೇ ಸಂಸ್ಥೆಯಲ್ಲಿನ ಕ್ರೆಟಾ ಕಾರನ್ನೆ ಮಾರಾಟದಲ್ಲಿ ಹಿಂದಿಕ್ಕಿದೆ. ಬಿಡುಗಡೆಗೊಂಡ ಕೆಲವೇ ದಿನಗಳಲ್ಲಿ ವೆನ್ಯೂ ಕಾರು 50000ಕ್ಕು ಹೆಚ್ಚಿನ ಸಂಖ್ಯೆಯಲ್ಲಿ ಮರಾಟಗೊಂಡು ಧಾಖಲೆ ನಿರ್ಮಿಸಿದೆ. ಇದಕ್ಕೆ ಕಾರಣ ಈ ಕಾರಿನಲ್ಲಿ ನೀಡಲಾದ ವಿನ್ಯಾಸ ಮತ್ತು ವೈಶಿಷ್ಟ್ಯತೆಗಳು ಅಂತಾನೇ ಹೇಳ್ಬೋದು.

ಜುಲೈ ತಿಂಗಳಿನಲ್ಲಿ ಮಾರಾಟಗೊಂಡ ಟಾಪ್ 10 ಕಾರುಗಳಿವು

ಮಾರುತಿ ಸುಜುಕಿ ಎರ್ಟಿಗಾ

ಎಂಪಿವಿ ಕಾರುಗಳ ಸರಣಿಯಲ್ಲಿ ಎಷ್ಟು ಕಾರುಗಳು ಬಿಡುಗಡೆಗೊಂಡರೂ ಮರಾಜೊ, ಇನೊವಾ ಕ್ರಿಸ್ಟಾ ಕಾರುಗಳನ್ನು ಪ್ರತೀ ತಿಂಗಳು ಎರ್ಟಿಗಾ ಕಾರು ಮಾರಾಟದಲ್ಲಿ ಹಿಂದಿಕ್ಕುತ್ತಿದೆ. ಇನ್ನು ಮಾರುತಿ ಸುಜುಕಿ ಸಂಸ್ಥೆಯು ಎರ್ಟಿಗಾ ಕಾರಿನ ಸಿಎನ್‍ಜಿ ಮಾದರಿಯನ್ನು ಸಹ ಬಿಡುಗಡೆ ಮಾಡಲಾಗಿದ್ದು, ಮುಂದಿನ ದಿನಗಳಲ್ಲಿ ಈ ಕಾರಿನ ಮಾರಾಟದ ಸಂಖ್ಯೆಯು ಇನ್ನು ಅಧಿಕವಾಗಲಿದೆ.

ಜುಲೈ ತಿಂಗಳಿನಲ್ಲಿ ಮಾರಾಟಗೊಂಡ ಟಾಪ್ 10 ಕಾರುಗಳಿವು

ಹ್ಯುಂಡೈ ಎಲೈಟ್ ಐ20

ಪ್ರೀಮಿಯಂ ಹ್ಯಾಚ್‍‍ಬ್ಯಾಕ್‍ನಲ್ಲಿ ಮಾರುತಿ ಸುಜುಕಿ ಬಲೆನೊ ಕರು ನಂತರ ಹ್ಯುಂಡೈ ಸಂಸ್ಥೆಯ ಎಲೈಟ್ ಐ20 ಕಾರು ಹೆಚ್ಚು ಜನಪ್ರಿಯತೆಯನ್ನು ಪಡೆದುಕೊಂಡಿದೆ. ಈ ಕಾರು ಪ್ರತೀ ಬಾರಿ ಬದಲಾವಣೇಗಳನ್ನು ಪಡೆಯುತ್ತಿದ್ದು, ಇತ್ತೀಚೆಗೆ ಈ ಕಾರಿನ ಎಲೈಟ್ ಐ20 ಆಕ್ಟೀವ್ ವೇರಿಯಂಟ್ ಕೂಡಾ ಬಿಡುಗಡೆಗೊಂಡಿದೆ.

ಜುಲೈ ತಿಂಗಳಿನಲ್ಲಿ ಮಾರಾಟಗೊಂಡ ಟಾಪ್ 10 ಕಾರುಗಳಿವು

ಹ್ಯುಂಡೈ ಕ್ರೆಟಾ

ಹ್ಯುಂಡೈ ಕ್ರೆಟಾ ದಕ್ಷಿಣ ಕೊರಿಯಾದ ಬ್ರ್ಯಾಂಡ್‍ನಿಂದ ಪ್ರೀಮಿಯಂ ಕೊಡುಗೆಯಾಗಿದ್ದು, ಪ್ರಸ್ತುತ ಅದರ ಎರಡನೆಯ ಪುನರಾವರ್ತನೆಯಲ್ಲಿ, ಕ್ರೆಟಾ ಬಹಳಷ್ಟು ವೈಶಿಷ್ಟ್ಯಗಳನ್ನು ಹೊಂದಿದೆ ಮತ್ತು ಆಕರ್ಷಕವಾಗಿ ಕಾಣುತ್ತದೆ. ಈ ಕಾರು ಎರಡು ಡೀಸೆಲ್ ಮತ್ತು ಒಂದು ಪೆಟ್ರೋಲ್ ಎಂಜಿನ್ ಆಯ್ಕೆಯಲ್ಲಿ ಖರೀದಿಗೆ ಲಭ್ಯವಿದೆ.

Most Read Articles

Kannada
English summary
Top 10 Cars Sales India July Best Seling Car Report. Read In Kannada
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X