ಸೆಪ್ಟೆಂಬರ್ 4ಕ್ಕೆ ಬಿಡುಗಡೆಯಾಗಲಿವೆ ಫೋಕ್ಸ್‌ವ್ಯಾಗನ್ ನವೀಕೃತ ಕಾರುಗಳು

ಜರ್ಮನಿ ಮೂಲದ ದೈತ್ಯ ಕಾರು ತಯಾರಕ ಕಂಪನಿಯಾದ ಫೋಕ್ಸ್‌ವ್ಯಾಗನ್, ತನ್ನ ಪೊಲೊ ಹಾಗೂ ವೆಂಟೊ ಕಾರಿನ ನವೀಕೃತ ಆವೃತ್ತಿಗಳನ್ನು ಸೆಪ್ಟೆಂಬರ್ 4ರಂದು ಭಾರತದಲ್ಲಿ ಬಿಡುಗಡೆಗೊಳಿಸಲಿದೆ. ಈ ಎರಡೂ ಮಾದರಿಯ ಕಾರುಗಳು ಭಾರತದ ಮಾರುಕಟ್ಟೆಯಲ್ಲಿ ಸಾಕಷ್ಟು ವರ್ಷಗಳಿಂದ ಮಾರಾಟವಾಗುತ್ತಿವೆ.

ಸೆಪ್ಟೆಂಬರ್ 4ಕ್ಕೆ ಬಿಡುಗಡೆಯಾಗಲಿವೆ ಫೋಕ್ಸ್‌ವ್ಯಾಗನ್ ನವೀಕೃತ ಕಾರುಗಳು

ಈ ಕಾರುಗಳನ್ನು ಈಗ ಅಪ್‍‍ಡೇಟ್‍‍ಗೊಳಿಸಿ ಬಿಡುಗಡೆ ಮಾಡಲಾಗುತ್ತಿದೆ. ಪೊಲೊ ಹಾಗೂ ವೆಂಟೊ ಎರಡೂ ಕಾರುಗಳಲ್ಲಿರುವ ಮುಂಭಾಗದ ವಿನ್ಯಾಸ ಹಾಗೂ ಟೇಲ್ ಲೈಟ್‍‍ಗಳು ಲಿಮಿಟೆಡ್ ಎಡಿಷನ್‍‍ನಲ್ಲಿ ಬಿಡುಗಡೆಯಾದ ಹೈ ಪರ್ಫಾಮೆನ್ಸ್ ಫೋಕ್ಸ್‌ವ್ಯಾಗನ್ ಜಿ‍‍ಟಿ‍ಐನಲ್ಲಿದ್ದಂತೆ ಇವೆ. ಇವುಗಳ ಜೊತೆಗೆ ಹೊಸ ಫೋಕ್ಸ್‌ವ್ಯಾಗನ್ ಪೊಲೊ ಹಾಗೂ ವೆಂಟೊದ ಟಾಪ್ ಮಾದರಿಗಳು ಹೊಸ ಅಲಾಯ್ ವ್ಹೀಲ್‍‍ಗಳನ್ನು ಹೊಂದಿರುವ ಸಾಧ್ಯತೆಗಳಿವೆ.

ಸೆಪ್ಟೆಂಬರ್ 4ಕ್ಕೆ ಬಿಡುಗಡೆಯಾಗಲಿವೆ ಫೋಕ್ಸ್‌ವ್ಯಾಗನ್ ನವೀಕೃತ ಕಾರುಗಳು

ನವೀಕೃತ ಪೊಲೊ ಹಾಗೂ ವೆಂಟೊ ಕಾರುಗಳು ಸೀಟ್ ಬೆಲ್ಟ್ ರಿಮ್ಯಾಂಡರ್, ರೇರ್ ಪಾರ್ಕಿಂಗ್ ಸೆನ್ಸಾರ್ ಹಾಗೂ ಸ್ಪೀಡ್ ಅಲರ್ಟ್ ಸಿಸ್ಟಂ ಹೊಂದಿರಲಿವೆ. ಡ್ಯುಯಲ್ ಫ್ರಂಟ್ ಏರ್‌ಬ್ಯಾಗ್ ಹಾಗೂ ಎಬಿಎಸ್ ಅನ್ನು ಎಲ್ಲಾ ಮಾದರಿಗಳಲ್ಲಿ ಸ್ಟಾಂಡರ್ಡ್ ಆಗಿ ನೀಡಲಾಗುವುದು.

ಸೆಪ್ಟೆಂಬರ್ 4ಕ್ಕೆ ಬಿಡುಗಡೆಯಾಗಲಿವೆ ಫೋಕ್ಸ್‌ವ್ಯಾಗನ್ ನವೀಕೃತ ಕಾರುಗಳು

ಈ ಎರಡೂ ನವೀಕೃತ ಕಾರುಗಳು ಹೆಚ್ಚಿನ ಸಂಖ್ಯೆಯ ಸೌಕರ್ಯ ಹಾಗೂ ಫೀಚರ್‍‍ಗಳನ್ನು ಹೊಂದಿರಲಿವೆ. ಹೊಸ ನವೀಕೃತ ಪೊಲೊ ಕಾರು, 1.0 ಲೀಟರಿನ ನ್ಯಾಚುರಲಿ ಆಸ್ಪೀರೇಟೆಡ್ ಪೆಟ್ರೋಲ್ ಎಂಜಿನ್ ಹಾಗೂ 1.5 ಲೀಟರಿನ ಡೀಸೆಲ್ ಎಂಜಿನ್ ಆಯ್ಕೆಗಳನ್ನು ಹೊಂದಿರುವ ಸಾಧ್ಯತೆಗಳಿವೆ.

ಸೆಪ್ಟೆಂಬರ್ 4ಕ್ಕೆ ಬಿಡುಗಡೆಯಾಗಲಿವೆ ಫೋಕ್ಸ್‌ವ್ಯಾಗನ್ ನವೀಕೃತ ಕಾರುಗಳು

ಈ ಎರಡೂ ಎಂಜಿನ್‍‍ಗಳು ಬಿಎಸ್ 6 ಮಾಲಿನ್ಯ ನಿಯಮಗಳು ಜಾರಿಗೆ ಬಂದ ನಂತರ ಸ್ಥಗಿತಗೊಳ್ಳಲಿವೆ. ಪೊಲೊ ಫೇಸ್‌ಲಿಫ್ಟ್ ಜಿಟಿ ಮಾದರಿಯ ಕಾರು ಬಿಎಸ್ 4 ಆಧಾರಿತ 1.2 ಲೀಟರಿನ ಟರ್ಬೊ ಪೆಟ್ರೋಲ್ ಎಂಜಿನ್ ಹಾಗೂ 1.5 ಲೀಟರಿನ ಡೀಸೆಲ್ ಎಂಜಿನ್ ಹೊಂದಿದೆ. ಬಿಎಸ್6 ನಿಯಮಗಳು ಜಾರಿಗೆ ಬರುವ ಮೊದಲು ಹಂತಹಂತವಾಗಿ ಈ ಎಂಜಿನ್‍‍ಗಳನ್ನು ಸ್ಥಗಿತಗೊಳಿಸಲಾಗುವುದು.

ಸೆಪ್ಟೆಂಬರ್ 4ಕ್ಕೆ ಬಿಡುಗಡೆಯಾಗಲಿವೆ ಫೋಕ್ಸ್‌ವ್ಯಾಗನ್ ನವೀಕೃತ ಕಾರುಗಳು

ನವೀಕೃತ ವೆಂಟೊ ಈಗಿರುವ 1.6-ಲೀಟರ್ ಪೆಟ್ರೋಲ್, 1.2-ಲೀಟರ್ ಟರ್ಬೊ-ಪೆಟ್ರೋಲ್ ಹಾಗೂ 1.5-ಲೀಟರ್ ಡೀಸೆಲ್ ಎಂಜಿನ್‍‍ಗಳನ್ನು ಹೊಂದಿರುವ ಸಾಧ್ಯತೆಗಳಿವೆ. ನಿರೀಕ್ಷೆಗಳ ಪ್ರಕಾರ ಕಂಪನಿಯು ಎಲ್ಲಾ ಎಂಜಿನ್‌ಗಳನ್ನು ಅಪ್‌ಗ್ರೇಡ್ ಮಾಡಿ, 2020ರ ಏಪ್ರಿಲ್ 1ಕ್ಕೆ ಮೊದಲು ಬಿಎಸ್6 ನಿಯಮಗಳಿಗೆ ತಕ್ಕಂತೆ ರೂಪಿಸುವ ಸಾಧ್ಯತೆಗಳಿವೆ.

ಸೆಪ್ಟೆಂಬರ್ 4ಕ್ಕೆ ಬಿಡುಗಡೆಯಾಗಲಿವೆ ಫೋಕ್ಸ್‌ವ್ಯಾಗನ್ ನವೀಕೃತ ಕಾರುಗಳು

ಫೋಕ್ಸ್‌ವ್ಯಾಗನ್ ಪೊಲೊ ರೂ.5.82 ಲಕ್ಷ ಹಾಗೂ ರೂ. 9.72 ಲಕ್ಷ ಬೆಲೆಯನ್ನು ಹೊಂದಿದೆ. ಈ ಹ್ಯಾಚ್‌ಬ್ಯಾಕ್ ಕಾರು ದೇಶಿಯ ಮಾರುಕಟ್ಟೆಯಲ್ಲಿ ಮಾರುತಿ ಸುಜುಕಿ ಸ್ವಿಫ್ಟ್, ಹ್ಯುಂಡೈ ಗ್ರ್ಯಾಂಡ್ ಐ 10 ನಿಯೋಸ್ ಹಾಗೂ ಫೋರ್ಡ್ ಫಿಗೊ ಕಾರುಗಳಿಗೆ ಪೈಪೋಟಿ ನೀಡುತ್ತದೆ.

MOST READ: ಹಳೆಯದಾದಷ್ಟು ದುಬಾರಿಯಾಗುತ್ತವೆ ಈ ಜನಪ್ರಿಯ ಬೈಕುಗಳು

ಸೆಪ್ಟೆಂಬರ್ 4ಕ್ಕೆ ಬಿಡುಗಡೆಯಾಗಲಿವೆ ಫೋಕ್ಸ್‌ವ್ಯಾಗನ್ ನವೀಕೃತ ಕಾರುಗಳು

ಫೋಕ್ಸ್‌ವ್ಯಾಗನ್ ವೆಂಟೊ ರೂ. 8.75 ಲಕ್ಷ ಹಾಗೂ ರೂ.14.34 ಲಕ್ಷ ಬೆಲೆಯನ್ನು ಹೊಂದಿದೆ. ಈ ಸೆಡಾನ್ ಕಾರು, ಮಾರುತಿ ಸುಜುಕಿ ಸಿಯಾಜ್, ಹೋಂಡಾ ಸಿಟಿ ಹಾಗೂ ಹ್ಯುಂಡೈ ವರ್ನಾ ಕಾರುಗಳಿಗೆ ಪೈಪೋಟಿ ನೀಡುತ್ತದೆ. ಇಲ್ಲಿ ಉಲ್ಲೇಖಿಸಲಾದ ಎಲ್ಲಾ ಬೆಲೆಗಳು ಭಾರತದ ಎಕ್ಸ್ ಶೋರೂಂ ದರಗಳಾಗಿವೆ.

MOST READ: ಅಚ್ಚರಿಯಾದರೂ ನಿಜ: ಭಾರತದಲ್ಲಿಲ್ಲದ ಈ ಕಾರುಗಳು ಪಾಕಿಸ್ತಾನದಲ್ಲಿವೆ..!

ಸೆಪ್ಟೆಂಬರ್ 4ಕ್ಕೆ ಬಿಡುಗಡೆಯಾಗಲಿವೆ ಫೋಕ್ಸ್‌ವ್ಯಾಗನ್ ನವೀಕೃತ ಕಾರುಗಳು

ಪೊಲೊ ಹಾಗೂ ವೆಂಟೊದ ನವೀಕೃತ ಕಾರುಗಳ ಬಿಡುಗಡೆಯಾದ ನಂತರ ಬೆಲೆಗಳು ಸ್ವಲ್ಪಮಟ್ಟಿಗೆ ಏರಿಕೆಯಾಗುವ ಸಾಧ್ಯತೆಗಳಿವೆ. ಇದರ ಜೊತೆಗೆ, ಫೋಕ್ಸ್‌ವ್ಯಾಗನ್ ಕಂಪನಿಯು ಎಂಜಿನ್‌ಗಳನ್ನು ಬಿಎಸ್6 ನಿಯಮಗಳಿಗೆ ತಕ್ಕಂತೆ ಅಪ್‍‍ಗ್ರೇಡ್ ಮಾಡಿದಾಗ ಬೆಲೆಗಳು ಹೆಚ್ಚಾಗಲಿವೆ.

MOST READ: ವಾಹನ ಸವಾರರೇ ಎಚ್ಚರ: ನಕಲಿ ಪೊಲೀಸರಿಂದ ಹಗಲು ದರೋಡೆ

ಸೆಪ್ಟೆಂಬರ್ 4ಕ್ಕೆ ಬಿಡುಗಡೆಯಾಗಲಿವೆ ಫೋಕ್ಸ್‌ವ್ಯಾಗನ್ ನವೀಕೃತ ಕಾರುಗಳು

ಫೋಕ್ಸ್‌ವ್ಯಾಗನ್ ಪೊಲೊ ಹಾಗೂ ವೆಂಟೊ ಕಾರುಗಳನ್ನು ದೇಶಿಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಿದಾಗಿನಿಂದ ಹೆಚ್ಚಿನ ಪ್ರಮಾಣದಲ್ಲಿ ನವೀಕರಿಸಲಾಗಿಲ್ಲ. ಈ ಎರಡೂ ಮಾದರಿಯ ಕಾರುಗಳು ತಮ್ಮ ಸೆಗ್‍‍ಮೆಂಟಿನಲ್ಲಿ ಬಹಳ ಹಳೆಯದಾಗಿವೆ. ಬೇರೆ ಕಂಪನಿಯ ಕಾರುಗಳು ಅಪ್‍‍ಡೇಟ್ ಆಗಿರುವ ಕಾರಣ ಈ ಕಾರುಗಳ ಮಾರಾಟದಲ್ಲಿ ಕುಸಿತ ಉಂಟಾಗಿದೆ.

ಸೆಪ್ಟೆಂಬರ್ 4ಕ್ಕೆ ಬಿಡುಗಡೆಯಾಗಲಿವೆ ಫೋಕ್ಸ್‌ವ್ಯಾಗನ್ ನವೀಕೃತ ಕಾರುಗಳು

ಫೋಕ್ಸ್‌ವ್ಯಾಗನ್ ಬಿಎಸ್ 6 ನಿಯಮಗಳಿಗೆ ತಕ್ಕಂತೆ ಇರುವ ತನ್ನ 1.0-ಲೀಟರ್ ಟಿಎಸ್‌ಐ ಪೆಟ್ರೋಲ್ ಎಂಜಿನ್ ಅನ್ನು ಸ್ಥಳೀಯವಾಗಿ ತಯಾರಿಸಲಿದೆ. ಈ ಎಂಜಿನ್ ಅನ್ನು ಅಂತರರಾಷ್ಟ್ರೀಯ ಮಾರುಕಟ್ಟೆಗಳಲ್ಲಿ ಮಾರಾಟವಾಗುತ್ತಿರುವ ಕಾರುಗಳಲ್ಲಿ ಅಳವಡಿಸಲಾಗಿದೆ. ಈ ಎಂಜಿನ್ ಅನ್ನು ಮುಂದಿನ ತಿಂಗಳು ಬಿಡುಗಡೆಯಾಗಲಿರುವ ಪೊಲೊ ಹಾಗೂ ವೆಂಟೊ ಫೇಸ್‌ಲಿಫ್ಟ್ ಆವೃತ್ತಿಗಳಲ್ಲಿ ಅಳವಡಿಸಲಾಗಿದೆಯೇ ಇಲ್ಲವೇ ಎಂಬುದು ಖಚಿತವಾಗಿಲ್ಲ.

ಸೆಪ್ಟೆಂಬರ್ 4ಕ್ಕೆ ಬಿಡುಗಡೆಯಾಗಲಿವೆ ಫೋಕ್ಸ್‌ವ್ಯಾಗನ್ ನವೀಕೃತ ಕಾರುಗಳು

ಡ್ರೈವ್‍‍ಸ್ಪಾರ್ಕ್ ಅಭಿಪ್ರಾಯ

ಫೋಕ್ಸ್‌ವ್ಯಾಗನ್, ಪೋಲೊ ಹಾಗೂ ವೆಂಟೊ ಶ್ರೇಣಿಯ ಕಾರುಗಳನ್ನು ನವೀಕರಿಸಲು ಸಾಕಷ್ಟು ಸಮಯ ತೆಗೆದುಕೊಂಡಿದೆ. ಎಂಜಿನ್‍‍ಗಳನ್ನು ಇನ್ನೂ ನವೀಕರಿಸಬೇಕಾಗಿದೆ. ಫೋಕ್ಸ್‌ವ್ಯಾಗನ್ ಡೀಸೆಲ್ ಎಂಜಿನ್ ಅನ್ನು ಇನ್ನಷ್ಟು ಆಧುನಿಕರಣಗೊಳಿಸಲು ಕಾಯುತ್ತಿರುವಂತಿದೆ. ಹೊಸ ಮಾಲಿನ್ಯ ನಿಯಮಗಳು ಜಾರಿಗೆ ಬಂದ ನಂತರ ಅಥವಾ ಅದಕ್ಕೂ ಮುನ್ನ ಎಂಜಿನ್‍‍ಗಳನ್ನು ಹೊಸ ಮಾಲಿನ್ಯ ನಿಯಮಗಳಿಗೆ ತಕ್ಕಂತೆ ಅಭಿವೃದ್ಧಿಪಡಿಸುವ ಸಾಧ್ಯತೆಗಳಿವೆ.

Most Read Articles

Kannada
English summary
Volkswagen Ready To Launch Polo And Vento Facelifts On 4th September: Will Feature BS-IV Engines - Read in kannada
Story first published: Wednesday, August 28, 2019, 10:58 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X