ಬಿಡುಗಡೆಯಾಗಲಿದೆ ವೊಲ್ವೊ ನಿರ್ಮಾಣದ ಮೊದಲ ಬುಲೆಟ್ ಪ್ರೂಫ್ ಕಾರು

ಬುಲೆಟ್ ಪ್ರೂಫ್ ಕಾರು ಅಥವಾ ಎಸ್‍‍ಯು‍‍ವಿಯ ಬಗ್ಗೆ ಮಾಹಿತಿಯನ್ನು ಹುಡುಕುವಾಗ ಸಿಗುವ ಹೆಸರುಗಳ ಪಟ್ಟಿಯಲ್ಲಿ ಬಿಎಂಡಬ್ಲ್ಯು, ಮರ್ಸಿಡಿಸ್ ಬೆಂಝ್ ಹಾಗೂ ಲ್ಯಾಂಡ್ ರೋವರ್ ಹೆಸರುಗಳು ಮೊದಲಿಗೆ ಬರುತ್ತವೆ. ಸ್ವೀಡನ್ ಮೂಲದ ದೈತ್ಯ ಆಟೋ ಕಂಪನಿ ವೊಲ್ವೊ ಸಹ ಈಗ ಆ ಪಟ್ಟಿಗೆ ಸೇರ್ಪಡೆಗೊಂಡಿದೆ. ಹೌದು, ವೊಲ್ವೊ ಕಂಪನಿಯು ಗುಂಡು ನಿರೋಧಕ ಹಾಗೂ ಬಾಂಬ್ ನಿರೋಧಕ ಎಕ್ಸ್‌ಸಿ 90 ಬುಲೆಟ್ ಪ್ರೂಫ್ ಎಸ್‌ಯುವಿ ಬಿಡುಗಡೆಗೊಳಿಸುವುದಾಗಿ ಘೋಷಿಸಿದೆ.

ಬಿಡುಗಡೆಯಾಗಲಿದೆ ವೊಲ್ವೊ ನಿರ್ಮಾಣದ ಮೊದಲ ಬುಲೆಟ್ ಪ್ರೂಫ್ ಕಾರು

ಬುಲೆಟ್ ಪ್ರೂಫ್ ಎಕ್ಸ್ ಸಿ90 ಎಸ್‍‍ಯು‍‍ವಿಯು ಸ್ಟಾಂಡರ್ಡ್ ಮಾದರಿಯ ವೊಲ್ವೊ ಎಕ್ಸ್ ಸಿ90 ನಂತೆ ಕಾಣುತ್ತದೆ. ಅದರ ಬಗ್ಗೆ ಹೆಚ್ಚಿನ ಮಾಹಿತಿಗಳು ಲಭ್ಯವಾಗಿಲ್ಲ. ಬುಲೆಟ್ ಪ್ರೂಫ್ ಮಾದರಿಯ ಕಾರಿನಲ್ಲಿ ಸಾಕಷ್ಟು ಪ್ರಮಾಣದಲ್ಲಿ ಉಕ್ಕು ಹಾಗೂ ಗುಂಡು ನಿರೋಧಕ ಗಾಜನ್ನು ಅಳವಡಿಸಿರುವುದರಿಂದ, ಎಸ್‍‍ಯುವಿಯ ತೂಕವು 4.5 ಟನ್‌ಗಳಷ್ಟಾಗಲಿದೆ. ಸ್ಟ್ಯಾಂಡರ್ಡ್ ಮಾದರಿಯ ಎಕ್ಸ್‌ಸಿ 90 ಎಸ್‍‍ಯುವಿಯು ಸುಮಾರು 2.2 ಟನ್‌ಗಳಷ್ಟು ತೂಕವನ್ನು ಹೊಂದಿದೆ.

ಬಿಡುಗಡೆಯಾಗಲಿದೆ ವೊಲ್ವೊ ನಿರ್ಮಾಣದ ಮೊದಲ ಬುಲೆಟ್ ಪ್ರೂಫ್ ಕಾರು

ವೊಲ್ವೊದ ಹೊಸ ಬುಲೆಟ್ ಪ್ರೂಫ್ ಎಕ್ಸ್‌ಸಿ 90 ಎಸ್‌ಯುವಿಯು ದೊಡ್ಡ ಉದ್ಯಮಿಗಳು, ರಾಜಕಾರಣಿಗಳು, ರಾಜತಾಂತ್ರಿಕರು, ರಾಷ್ಟ್ರದ ಮುಖ್ಯಸ್ಥರ ನೆಚ್ಚಿನ ಕಾರ್ ಆಗುವ ಸಾಧ್ಯತೆಗಳಿವೆ. ಈ ಎಸ್‍‍ಯು‍‍ವಿಯನ್ನು ತಯಾರಿಸಲು ವೊಲ್ವೊ ಕಂಪನಿಯು ಹೆಚ್ಚಿನ ಶ್ರಮ ಹಾಗೂ ಮಾನವಶಕ್ತಿಯನ್ನು ಬಳಸುವುದರ ಜೊತೆಗೆ ಸಾಕಷ್ಟು ಸಮಯವನ್ನು ವ್ಯಯಿಸಿದೆ. ಕಂಪನಿಯು ಈ ವಾಹನದ ವಿನ್ಯಾಸ ಹಾಗೂ ಅಭಿವೃದ್ಧಿಗಾಗಿ ಸುಮಾರು ಎರಡು ವರ್ಷಗಳನ್ನು ತೆಗೆದುಕೊಂಡಿದೆ.

ಬಿಡುಗಡೆಯಾಗಲಿದೆ ವೊಲ್ವೊ ನಿರ್ಮಾಣದ ಮೊದಲ ಬುಲೆಟ್ ಪ್ರೂಫ್ ಕಾರು

ವೊಲ್ವೊ ಎಕ್ಸ್‌ಸಿ 90 ಬುಲೆಟ್ ಪ್ರೂಫ್ ವಾಹನವು ವಿಶ್ವದ ಅತ್ಯುತ್ತಮ ಬುಲೆಟ್ ಪ್ರೂಫ್ ಎಸ್‍‍‍ಯುವಿಗಳಲ್ಲಿ ಒಂದು ಎಂಬ ಹೆಗ್ಗಳಿಕೆಯನ್ನು ಹೊಂದಿದೆ. ವಿಆರ್8 ರ್‍ಯಾಕಿಂಗ್ ಪ್ರಕಾರ ಎರಡನೇ ಅತಿ ಹೆಚ್ಚು ವಿಪಿಎಎಂ ಪ್ರೊಟೆಕ್ಷನ್ ರೇಟಿಂಗ್ ಪಡೆದಿದೆ. ಇದರರ್ಥ 60 ಡಿಗ್ರಿ ಬ್ಯಾಲಿಸ್ಟಿಕ್ ರಕ್ಷಣೆಯನ್ನು ಒದಗಿಸುವುದರ ಜೊತೆಗೆ ಎಕ್ಸ್‌ಸಿ 90 ಸ್ಫೋಟಕಗಳನ್ನು ಪರಿಣಾಮಕಾರಿಯಾಗಿ ಎದುರಿಸುತ್ತದೆ. ವೊಲ್ವೊ ಎಕ್ಸ್‌ಸಿ 90 ಬುಲೆಟ್ ಪ್ರೂಫ್ ಎಸ್‍‍ಯುವಿಯನ್ನು ಟಿ6 ಎಡಬ್ಲ್ಯೂಡಿ ಇನ್‌ಸ್ಕ್ರಿಪ್ಷನ್ ಟ್ರಿಮ್‌ ಮಾದರಿಯಲ್ಲಿ ಮಾರಾಟ ಮಾಡಲಿದೆ.

ಬಿಡುಗಡೆಯಾಗಲಿದೆ ವೊಲ್ವೊ ನಿರ್ಮಾಣದ ಮೊದಲ ಬುಲೆಟ್ ಪ್ರೂಫ್ ಕಾರು

ಎಸ್‍‍ಯುವಿಯ ರಕ್ಷಾಕವಚವನ್ನು ಜರ್ಮನಿಯ ಬ್ರೆಮೆನ್‌ನಲ್ಲಿರುವ ಟ್ರಾಸ್ಕೊ ಘಟಕದಲ್ಲಿ ನಿರ್ಮಿಸಲಾಗಿದೆ. ಎಸ್‌ಯುವಿ 10 ಎಂಎಂನಷ್ಟು ದಪ್ಪದಾದ ಬಲಿಷ್ಟ ಸ್ಟೀಲ್ ಹಾಗೂ 50 ಎಂಎಂನಷ್ಟು ದಪ್ಪದಾದ ಗಾಜನ್ನು ಹೊಂದಿದೆ. ಎಸ್‌ಯುವಿಯಲ್ಲಿರುವ ಸ್ಟೀಲ್ ಹಾಗೂ ದಪ್ಪ ಗಾಜುಗಳ ತೂಕವು ಸುಮಾರು 1.4 ಟನ್‍‍ನಷ್ಟಾಗುತ್ತದೆ. ಉಳಿದ ರಕ್ಷಣಾತ್ಮಕ ಆಡ್-ಆನ್‌ಗಳೊಂದಿಗೆ, ಎಕ್ಸ್‌ಸಿ 90 ಶಸ್ತ್ರಸಜ್ಜಿತ ಎಸ್‍‍ಯು‍‍ವಿಯ ಒಟ್ಟು ತೂಕವು 4,490 ಕೆ.ಜಿಗಳಷ್ಟಾಗಲಿದೆ.

ವೊಲ್ವೊ ಕಂಪನಿಯು, ಈ ಎಸ್‍‍ಯುವಿಯ ರಕ್ಷಾಕವಚ ಹಾಗೂ ರಕ್ಷಣಾತ್ಮಕ ಆಡ್-ಆನ್‌ಗಳ ಬಗೆಗಿನ ಇನ್ನಿತರ ಮಾಹಿತಿಯನ್ನು ಬಹಿರಂಗ ಪಡಿಸಿಲ್ಲ. ಕಂಪನಿಯು, ಹೆಚ್ಚುವರಿ ತೂಕವನ್ನು ಬೆಂಬಲಿಸುವ ಸಲುವಾಗಿ, ಎಕ್ಸ್‌ಸಿ 90 ಬುಲೆಟ್ ಪ್ರೂಫ್ ಎಸ್‍‍ಯುವಿಯಲ್ಲಿ ಅಪ್‌ಗ್ರೇಡೆಡ್ ಸಸ್ಪೆಂಷನ್ ಅಳವಡಿಸಿರುವುದನ್ನು ಹಾಗೂ ಬ್ರೇಕಿಂಗ್‍‍ನ ದಕ್ಷತೆಯನ್ನು ಹೆಚ್ಚಿಸಲು ಬ್ರೇಕಿಂಗ್ ವ್ಯವಸ್ಥೆಗಳನ್ನು ಅಪ್‍‍ಗ್ರೇಡ್ ಮಾಡಲಾಗಿರುವ ಸಂಗತಿಗಳನ್ನು ಮಾತ್ರ ಬಹಿರಂಗ ಪಡಿಸಿದೆ.

ಬಿಡುಗಡೆಯಾಗಲಿದೆ ವೊಲ್ವೊ ನಿರ್ಮಾಣದ ಮೊದಲ ಬುಲೆಟ್ ಪ್ರೂಫ್ ಕಾರು

ವೊಲ್ವೊ ಕಂಪನಿಯು ಈ ಎಸ್‍‍ಯುವಿಯನ್ನು ಮಾತ್ರವಲ್ಲದೇ, ಇದರ ಜೊತೆಗೆ ಇತರ ಗುಂಡು ನಿರೋಧಕ ಕಾರುಗಳನ್ನು ಹಾಗೂ ಅರೆ-ಬುಲೆಟ್ ಪ್ರೂಫ್ ಮಾದರಿಗಳಾದ ಎಕ್ಸ್‌ಸಿ 60 ಟಿ 6 ಎಡಬ್ಲ್ಯೂಡಿ ಮತ್ತು ಎಕ್ಸ್‌ಸಿ 90 ಟಿ 6 ಎಡಬ್ಲ್ಯೂಡಿ ಇನ್ಸ್ ಕ್ರಿಪ್ಷನ್‍ ಕಾರುಗಳನ್ನೂ ಸಹ ಮಾರಾಟ ಮಾಡುತ್ತದೆ. ಈ ಅರೆ-ಬುಲೆಟ್ ಪ್ರೂಫ್ ವಾಹನಗಳನ್ನು ಬುಕ್ಕಿಂಗ್ ಮಾಡಿರುವ ಗ್ರಾಹಕರು ಮುಂದಿನ ವರ್ಷದ ವೇಳೆಗೆ ಈ ವಾಹನಗಳ ವಿತರಣೆಯನ್ನು ನಿರೀಕ್ಷಿಸಬಹುದು. ಎಕ್ಸ್‌ಸಿ 90ಟಿ 6 ಎಡಬ್ಲ್ಯೂಡಿ ಇನ್ಸ್ ಕ್ರಿಪ್ಷನ್‍ ವಾಹನಗಳ ವಿತರಣೆಯು 2020ರಲ್ಲಿ ಶುರುವಾಗಲಿದೆ.

ಬಿಡುಗಡೆಯಾಗಲಿದೆ ವೊಲ್ವೊ ನಿರ್ಮಾಣದ ಮೊದಲ ಬುಲೆಟ್ ಪ್ರೂಫ್ ಕಾರು

ಡ್ರೈವ್‍‍ಸ್ಪಾರ್ಕ್ ಅಭಿಪ್ರಾಯ

ವೊಲ್ವೊ ಕಂಪನಿಯು ಗುಣಮಟ್ಟದ ಕಾರುಗಳನ್ನು, ಎಸ್‌ಯುವಿಗಳನ್ನು ತಯಾರಿಸುವುದರಲ್ಲಿ ಹೆಸರುವಾಸಿಯಾಗಿದೆ. ಸಂಪೂರ್ಣ ಬುಲೆಟ್ ಪ್ರೂಫ್ ಎಕ್ಸ್ ಸಿ90 ಟಿ6 ಎ‍‍ಡಬ್ಲ್ಯುಡಿ ಇನ್ಸ್ ಕ್ರಿಪ್ಷನ್‍ ಈ ಸಾಲಿನಲ್ಲಿರುವ ಟಾಪ್ ಮಾದರಿಯ ವಾಹನವಾಗಿದೆ. ಈ ವಾಹನವು ಬಹು ಸಂಖ್ಯೆಯ ಗ್ರಾಹಕರನ್ನು ಹೊಂದಿದೆ. ವೊಲ್ವೊ ಕಂಪನಿಯು ಯಾವ ಅಪ್‍‍ಗ್ರೇಡ್‍‍ಗಳನ್ನು ಮಾಡಿದೆ ಎಂದು ಖಚಿತವಾಗಿಲ್ಲ. 4.4 ಟನ್ ಮೆಟಲ್ ಹಾಗೂ ಗಾಜಿನ ತೂಕಕ್ಕೆ ಅನುಗುಣವಾಗಿ ಎಂಜಿನ್ ಇರಲಿದೆ ಎಂಬುದು ಸ್ಪಷ್ಟ. ಬುಲೆಟ್ ಪ್ರೂಫ್ ಕಾರುಗಳು ಅಪಾಯದಿಂದ ಪಾರಾಗಲು ಯಾವಾಗಲೂ ವೇಗವಾಗಿರಬೇಕಾಗುತ್ತದೆ. ಕಾದು ನೋಡೋಣ.

Most Read Articles

Kannada
Read more on ವೊಲ್ವೊ volvo
English summary
Volvo’s Four Ton Fully Armoured Beast — The All New XC90 T6 AWD Inscription. Read in Kannada.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X