ಅನಾವರಣವಾಯ್ತು 600 ಕಿ.ಮೀ ಮೈಲೇಜ್ ನೀಡುವ ಬಿಎಂಡಬ್ಲ್ಯು ಐಎಕ್ಸ್ ಎಲೆಕ್ಟ್ರಿಕ್ ಎಸ್‍ಯುವಿ

ಜರ್ಮನ್ ಮೂಲದ ವಾಹನ ತಯಾರಕ ಕಂಪನಿಯಾದ ಬಿಎಂಡಬ್ಲ್ಯು ತನ್ನ ಮೊದಲ ಆಲ್-ಎಲೆಕ್ಟ್ರಿಕ್ ಎಸ್‌ಯುವಿ ಐಎಕ್ಸ್ ಅನ್ನು ಜಾಗತಿಕವಾಗಿ ಅನಾವರಣಗೊಳಿಸಿದೆ. ಈ ಹೊಸ ಆಲ್-ಎಲೆಕ್ಟ್ರಿಕ್ ಬಿಎಂಡಬ್ಲ್ಯು ಐಎಕ್ಸ್ ಎಸ್‌ಯುವಿ ಬ್ರ್ಯಾಂಡ್‌ನ ಇತ್ತೀಚಿನ ಪ್ರಮುಖ ಮಾದರಿಯಾಗಿದೆ.

ಅನಾವರಣವಾಯ್ತು 600 ಕಿ.ಮೀ ಮೈಲೇಜ್ ನೀಡುವ ಬಿಎಂಡಬ್ಲ್ಯು ಐಎಕ್ಸ್ ಎಲೆಕ್ಟ್ರಿಕ್ ಎಸ್‍ಯುವಿ

ಈ ಹೊಸ ಆಲ್-ಎಲೆಕ್ಟ್ರಿಕ್ ಬಿಎಂಡಬ್ಲ್ಯು ಐಎಕ್ಸ್ ಎಸ್‌ಯುವಿ ಮುಂದಿನ ವರ್ಷದಲ್ಲಿ ಉತ್ಪಾದನೆಗೆ ಪ್ರವೇಶಿಸಲಿದೆ. ಹೊಸ ಬಿಎಂಡಬ್ಲ್ಯು ಐಎಕ್ಸ್ ಹೊಸ ಪ್ಲಾಟ್‌ಫಾರ್ಮ್, ವಿನ್ಯಾಸ ಭಾಷೆ ಮತ್ತು ಕೆನಕ್ಟಿವಿಟಿ ತಂತ್ರಜ್ಞಾನದ ಹೋಸ್ಟ್‌ನೊಂದಿಗೆ ಬರುತ್ತದೆ. ಹೊಸ ಬಿಎಂಡಬ್ಲ್ಯು ಐಎಕ್ಸ್ ಉದ್ದ ಮತ್ತು ಅಗಲ ಎಕ್ಸ್5ಗೆ ಹೋಲುತ್ತದೆ ಎಂದು ಹೇಳಲಾಗುತ್ತದೆ. ಇನ್ನು ಈ ಹೊಸ ಎಲೆಕ್ಟ್ರಿಕ್ ಎಸ್‍ಯುವಿ ಎತ್ತರವು ಎಕ್ಸ್6 ಗೆ ಸಮಾನವಾಗಿರುತ್ತದೆ.

ಅನಾವರಣವಾಯ್ತು 600 ಕಿ.ಮೀ ಮೈಲೇಜ್ ನೀಡುವ ಬಿಎಂಡಬ್ಲ್ಯು ಐಎಕ್ಸ್ ಎಲೆಕ್ಟ್ರಿಕ್ ಎಸ್‍ಯುವಿ

ಬಿಎಂಡಬ್ಲ್ಯು ಐಎಕ್ಸ್‌ನಲ್ಲಿರುವ ದೊಡ್ಡ ಕಿಡ್ನಿ ಗ್ರಿಲ್ ಅನ್ನು ಇಂಟಿಲಿಜಿಟೆಂಡ್ ಡ್ರೈವ್ಸ್ ಅಸಿಸ್ಟೆನ್ಸ್ ಟೆಕ್ನಾಲಜಿಗೆ ನೆರವಾಗಲು ಎಲೆಕ್ಟ್ರಿಕ್ ಎಸ್‍ಯುವಿಯಲ್ಲಿ ಅಳವಡಿಸಲಾಗಿದೆ. ಇದರಲ್ಲಿ ರಾಡಾರ್ ಸಿಸ್ಟಂ, ಸೆನ್ಸರ್ ಗಳು ಮತ್ತು ಕ್ಯಾಮೆರಾಗಳು ಸೇರಿವೆ.

MOST READ: ಮರ್ಸಿಡಿಸ್ ಬೆಂಝ್ ಜಿಎಲ್ಇ ಎಸ್‍ಯುವಿಯ ಎರಡು ಹೊಸ ರೂಪಾಂತರಗಳು ಬಿಡುಗಡೆ

ಅನಾವರಣವಾಯ್ತು 600 ಕಿ.ಮೀ ಮೈಲೇಜ್ ನೀಡುವ ಬಿಎಂಡಬ್ಲ್ಯು ಐಎಕ್ಸ್ ಎಲೆಕ್ಟ್ರಿಕ್ ಎಸ್‍ಯುವಿ

ಹೊಸ ಬಿಎಂಡಬ್ಲ್ಯು ಐಎಕ್ಸ್ ವಿನ್ಯಾಸವು ವಿಶಿಷ್ಟವಾಗಿ ಆಕರ್ಷಕವಾಗಿದೆ. ಹೆಚ್ಚು ಭವಿಷ್ಯದ ಆಧಾರಿತ ಸ್ಟೈಲಿಂಗ್ ಹೊಂದಿದೆ. ಹೊಸ ಐಎಕ್ಸ್ ಬ್ರ್ಯಾಂಡ್ನ ಹೊಸ ಸ್ಕೇಲೆಬಲ್ ಆರ್ಕಿಟೆಕ್ಚರ್ ಅನ್ನು ಸಹ ಪರಿಚಯಿಸುತ್ತದೆ. ಒಟ್ಟಾರೆ ತೂಕವನ್ನು ಕಡಿಮೆ ಮಾಡುವಾಗ ಇದು ಅಲ್ಯೂಮಿನಿಯಂ ಸ್ಪೇಸ್-ಫ್ರೇಮ್ ಮತ್ತು ಟಾರ್ಶನಲ್ ಹೊಂದಿದೆ.

ಅನಾವರಣವಾಯ್ತು 600 ಕಿ.ಮೀ ಮೈಲೇಜ್ ನೀಡುವ ಬಿಎಂಡಬ್ಲ್ಯು ಐಎಕ್ಸ್ ಎಲೆಕ್ಟ್ರಿಕ್ ಎಸ್‍ಯುವಿ

ಹೊಸ ಬಿಎಂಡಬ್ಲ್ಯು ಐಎಕ್ಸ್ ಎಲೆಕ್ಟ್ರಿಕ್ ಎಸ್‍ಯುವಿಯಲ್ಲಿ ಆಕರ್ಷಕ ಇಂಟಿರಿಯರ್ ಅನ್ನು ಹೊಂದಿದೆ. ಹೊಸ ಐಎಕ್ಸ್‌ನ ಕ್ಯಾಬಿನ್ ಫ್ಯೂಚರಿಸ್ಟಿಕ್ ಎಂದು ಭಾವಿಸುತ್ತದೆ ಮತ್ತು ಇನ್ಸ್ ಟ್ರೂಮೆಂಟ್ ಕ್ಲಸ್ಟರ್ ಅನ್ನು ಹೊಂದಿದೆ. ಇದರೊಂದಿಗೆ 15 ಇಂಚಿನ ದೊಡ್ಡ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಂ ಅನ್ನು ಕೂಡ ಅಳವಡಿಸಲಾಗಿದೆ.

MOST READ: ಅನಾವರಣವಾಯ್ತು ಟೊಯೊಟಾ ಕೊರೊಲ್ಲಾ ಟೂರಿಂಗ್ ರಿಬ್ಯಾಡ್ಜ್ ಆವೃತ್ತಿ ಸುಜುಕಿ ಸ್ವೇಸ್

ಅನಾವರಣವಾಯ್ತು 600 ಕಿ.ಮೀ ಮೈಲೇಜ್ ನೀಡುವ ಬಿಎಂಡಬ್ಲ್ಯು ಐಎಕ್ಸ್ ಎಲೆಕ್ಟ್ರಿಕ್ ಎಸ್‍ಯುವಿ

ಹೊಸ ಐಎಕ್ಸ್ ಎಲೆಕ್ಟ್ರಿಕ್ ಎಸ್‌ಯುವಿ ಎರಡು ಎಲೆಕ್ಟ್ರಿಕ್ ಮೋಟರ್‌ಗಳನ್ನು ಒಳಗೊಂಡಿರುವ ಬ್ರ್ಯಾಂಡ್‌ನ ಐದನೇ ತಲೆಮಾರಿನ ಪವರ್‌ಟ್ರೇನ್ ಅನ್ನು ಬಳಸುತ್ತದೆ ಎಂದು ಬಿಎಂಡಬ್ಲ್ಯು ಹೇಳಿಕೊಂಡಿದೆ.

ಅನಾವರಣವಾಯ್ತು 600 ಕಿ.ಮೀ ಮೈಲೇಜ್ ನೀಡುವ ಬಿಎಂಡಬ್ಲ್ಯು ಐಎಕ್ಸ್ ಎಲೆಕ್ಟ್ರಿಕ್ ಎಸ್‍ಯುವಿ

ಇದರಲ್ಲಿ 503 ಬಿಹೆಚ್‍ಪಿ ಪವರ್ ಅನ್ನು ಉತ್ಪಾದಿಸುವ ಮೋಟಾರ್ ಅನ್ನು ನೀಡಲಾಗುತ್ತದೆ. ಯುರೋಪಿಯನ್ ಡಬ್ಲ್ಯುಎಲ್‌ಟಿಪಿ ವ್ಹೀಲ್ ಪ್ರಕಾರ ಬಿಎಂಡಬ್ಲ್ಯು ಐಎಕ್ಸ್ ಸಿಂಗಲ್ ಚಾರ್ಜ್‌ನಲ್ಲಿ ಗರಿಷ್ಠ 600 ಕಿಲೋಮೀಟರ್ ಚಲಿಸುವಷ್ಟು ಸಮರ್ಥವಾಗಿದೆ ಎಂದು ಹೇಳಲಾಗಿದೆ.

MOST READ: ಮಾರಾಟದಲ್ಲಿ ಹೊಸ ಮೈಲಿಗಲ್ಲು ಸಾಧಿಸಿದ ಹೋಂಡಾ ಆಮೇಜ್ ಕಾರು

ಅನಾವರಣವಾಯ್ತು 600 ಕಿ.ಮೀ ಮೈಲೇಜ್ ನೀಡುವ ಬಿಎಂಡಬ್ಲ್ಯು ಐಎಕ್ಸ್ ಎಲೆಕ್ಟ್ರಿಕ್ ಎಸ್‍ಯುವಿ

ಆದರೆ ಇನ್ನೂ ಇದರ ಅಭಿವೃದ್ಧಿ ಹಂತಗಳಲ್ಲಿರುವುದರಿಂದ ಇದನ್ನು ಖಚಿತವಾಗಿ ಹೇಳಲು ಸಾಧ್ಯವಾಗುವುದಿಲ್ಲ. ಬಿಡುಗಡೆಯ ಬಳಿಕ ಬಿಎಂಡಬ್ಲ್ಯು ಐಎಕ್ಸ್ ಎಲೆಕ್ಟ್ರಿಕ್ ಎಸ್‍ಯುವಿಯ ನಿಖರವಾದ ಮೈಲೇಜ್ ಅಂಕಿ ಅಂಶಗಳು ತಿಳಿಯುತ್ತದೆ.

ಅನಾವರಣವಾಯ್ತು 600 ಕಿ.ಮೀ ಮೈಲೇಜ್ ನೀಡುವ ಬಿಎಂಡಬ್ಲ್ಯು ಐಎಕ್ಸ್ ಎಲೆಕ್ಟ್ರಿಕ್ ಎಸ್‍ಯುವಿ

2021ರ ಅಂತ್ಯದ ವೇಳೆಗೆ ಅಭಿವೃದ್ಧಿ ಹೊಂದಿದ ಮಾರುಕಟ್ಟೆಗಳಲ್ಲಿ ಮಾರಾಟಕ್ಕೆ ಬರುವ ಮೊದಲು ಮುಂದಿನ ವರ್ಷದ ದ್ವಿತೀಯಾರ್ಧದಲ್ಲಿ ಜರ್ಮನಿಯ ಡಿಂಗೋಲ್ಫಿಂಗ್ ಘಟಕದಲ್ಲಿ ಐಎಕ್ಸ್ ಎಲೆಕ್ಟ್ರಿಕ್ ಎಸ್‌ಯುವಿ ಉತ್ಪಾದನೆ ಪ್ರಾರಂಭವಾಗಲಿದೆ ಎಂದು ಬಿಎಂಡಬ್ಲ್ಯು ತಿಳಿಸಿದೆ.

ಅನಾವರಣವಾಯ್ತು 600 ಕಿ.ಮೀ ಮೈಲೇಜ್ ನೀಡುವ ಬಿಎಂಡಬ್ಲ್ಯು ಐಎಕ್ಸ್ ಎಲೆಕ್ಟ್ರಿಕ್ ಎಸ್‍ಯುವಿ

ಈ ಹೊಸ ಬಿಎಂಡಬ್ಲ್ಯು ಐಎಕ್ಸ್ ಆಲ್-ಎಲೆಕ್ಟ್ರಿಕ್ ಅಂತರರಾಷ್ಟ್ರೀಯ ಮಟ್ಟದಲ್ಲಿ ಬಿಡುಗಡೆಯಾದ ಬಳಿಕ ಮರ್ಸಿಡಿಸ್ ಬೆಂಝ್ ಇಕ್ಯೂಸಿ, ಆಡಿ ಇ-ಟ್ರಾನ್ ಮತ್ತು ಜಾಗ್ವಾರ್ ಐ-ಪೇಸ್ ಎಲೆಕ್ಟ್ರಿಕ್ ಕಾರುಗಳಿಗೆ ಪೈಪೋಟಿ ನೀಡುತ್ತದೆ. ಈ ಹೊಸ ಬಿಎಂಡಬ್ಲ್ಯು ಐಎಕ್ಸ್ ಎಲೆಕ್ಟ್ರಿಕ್ ಎಸ್‍ಯುವಿಯು ಭಾರತದಲ್ಲಿ ಬಿಡುಗಡೆಯಾಗುವುದರ ಬಗ್ಗೆ ಕಂಪನಿ ಯಾವುದೇ ಮಾಹಿತಿ ಬಹಿರಂಗಪಡಿಸಲಿಲಲ್ಲ.

Most Read Articles

Kannada
English summary
2021 BMW iX Electric SUV Globally Unveiled. Read In Kannada.
Story first published: Thursday, November 12, 2020, 14:29 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X