Just In
Don't Miss!
- News
ಪೊಲೀಸ್ ಠಾಣೆಯಲ್ಲಿ ಬಗೆಹರಿದ ಒಂದು ಕೋಣದ ವಿವಾದ!
- Movies
'ದೀಪ್ ಸಿಧು ಜೊತೆ ನನಗೆ ಯಾವುದೇ ಸಂಬಂಧವಿಲ್ಲ': ಸಂಸದ, ನಟ ಸನ್ನಿ ಡಿಯೋಲ್ ಸ್ಪಷ್ಟನೆ
- Finance
ಬಜೆಟ್ 2021: ಸ್ಟ್ಯಾಂಡರ್ಡ್ ಡಿಡಕ್ಷನ್ ರು. 1 ಲಕ್ಷಕ್ಕೆ ಹೆಚ್ಚಳ ನಿರೀಕ್ಷೆ
- Sports
ಬೈರ್ಸ್ಟೋವ್ಗೆ 2 ಪಂದ್ಯಗಳ ವಿಶ್ರಾಂತಿ ನೀಡಿರುವುದನ್ನು ಸಮರ್ಥಿಸಿದ ಇಂಗ್ಲೆಂಡ್ ಕೋಚ್
- Education
WCD Chitradurga Recruitment 2021: ಅಂಗನವಾಡಿಯಲ್ಲಿ 129 ಹುದ್ದೆಗಳಿಗೆ ಅರ್ಜಿ ಆಹ್ವಾನ
- Lifestyle
ಗರ್ಭಾವಸ್ಥೆಯಲ್ಲಿ ಥೈರಾಯ್ಡ್ ಸಮಸ್ಯೆ: ಇದರ ಅಪಾಯಗಳೇನು, ತಡೆಗಟ್ಟುವುದು ಹೇಗೆ?
- Technology
ಒನ್ಪ್ಲಸ್ ನಾರ್ಡ್ ಜುಲೈ 15 ರಿಂದ ಅಮೆಜಾನ್ ತಾಣದಲ್ಲಿ ಪ್ರಿ-ಆರ್ಡರ್ಗೆ ಲಭ್ಯವಿದೆ; ಖರೀದಿಸುವಲ್ಲಿ ಮೊದಲಿಗರಾಗಿರಿ!
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
ಹೊಸ ವಿನ್ಯಾಸದಲ್ಲಿ ಅನಾವರಣಗೊಂಡ 2021ರ ನಿಸ್ಸಾನ್ ಕಿಕ್ಸ್ ಫೇಸ್‌ಲಿಫ್ಟ್ ಎಸ್‍ಯುವಿ
ನಿಸ್ಸಾನ್ ಕಂಪನಿಯು ತನ್ನ ಅಮೆರಿಕಾದ ಮಾರುಕಟ್ಟೆಯಲ್ಲಿ 2021ರ ಕಿಕ್ಸ್ ಫೇಸ್‌ಲಿಫ್ಟ್ ಎಸ್‍ಯುವಿಯನ್ನು ಅನಾವರಣಗೊಳಿಸಿದೆ. ಈ ಹೊಸ ನಿಸ್ಸಾನ್ ಕಿಕ್ಸ್ ಫೇಸ್‌ಲಿಫ್ಟ್ ಎಸ್‍ಯುವಿಯು ಕಾಸ್ಮೆಟಿಕ್ ಅಪ್ಡೇಟ್ ಮತ್ತು ನೂತನ ಫೀಚರ್ ಗಳನ್ನು ಪಡೆದುಕೊಂಡಿದೆ.

2021ರ ನಿಸ್ಸಾನ್ ಕಿಕ್ಸ್ ಫೇಸ್‌ಲಿಫ್ಟ್ ಎಸ್‍ಯುವಿಯ ವಿನ್ಯಾಸದ ಬಗ್ಗೆ ಹೇಳುವುದಾದರೆ, ದೊಡ್ಡ ವಿ-ಮೋಷನ್ ಗ್ರಿಲ್ ಅನ್ನು ಹೊಂದಿದೆ. ಜೊತೆಗೆ ಕ್ರೋಮ್ ಸುತ್ತುವರೆದಿದೆ. ಗ್ರಿಲ್‌ನ ಎರಡೂ ಬದಿಗಳಲ್ಲಿ ಸುತ್ತುವರಿಯಲ್ಪಟ್ಟ ಇಂಟಿಗ್ರೇಟೆಡ್ ಎಲ್‌ಇಡಿ ಡಿಆರ್‌ಎಲ್‌ಗಳೊಂದಿಗೆ ಹೊಸ ಟ್ವಿನ್ ಎಲ್‌ಇಡಿ ಹೆಡ್‌ಲ್ಯಾಂಪ್‌ಗಳನ್ನು ಹೊಂದಿವೆ.

ಈ ಹೊಸ ನಿಸ್ಸಾನ್ ಕಿಕ್ಸ್ ಫೇಸ್‌ಲಿಫ್ಟ್ ಎಸ್‍ಯುವಿಯ ಮುಂಭಾಗದ ಬಂಪರ್ ಅನ್ನು ದೊಡ್ಡ ಗ್ರಿಲ್ಗೆ ಸರಿಹೊಂದುವಂತೆ ನವೀಕರಿಸಲಾಗಿದೆ. ಇದರೊಂದಿಗೆ ಎರಡು ಕಡೆಗಳಲ್ಲಿ ಫಾಗ್ ಲ್ಯಾಂಪ್ ಅನ್ನು ಕೂಡ ಅಳವಡಿಸಲಾಗಿದೆ.
MOST READ: ಮಾರಾಟದಲ್ಲಿ ಹೊಸ ಮೈಲಿಗಲ್ಲು ಸಾಧಿಸಿದ ಹೋಂಡಾ ಆಮೇಜ್ ಕಾರು

ಹಿಂಭಾಗದ ಪ್ರೊಫೈಲ್ ಹೆಚ್ಚಾಗಿ ಬದಲಾಗದೆ ಉಳಿದಿದೆ. 2021ರ ನಿಸ್ಸಾನ್ ಕಿಕ್ಸ್ ಫೇಸ್‌ಲಿಫ್ಟ್ ಎಸ್‍ಯುವಿಯ ಹಿಂಭಾಗದ ಪ್ರೊಫೈಲ್ ಬೂಟ್-ಲಿಡ್, ಟೈಲ್ ಲೈಟ್ ಕ್ಲಸ್ಟರ್ ಮತ್ತು ಹಿಂಭಾಗದ ಬಂಪರ್ ಅನ್ನು ಸ್ವಲ್ಪ ಪರಿಷ್ಕರಣೆ ಮಾಡಿದೆ. ಇನ್ನು ಸೈಡ್ ಪ್ರೊಫೈಲ್ ನಲ್ಲಿ ಹೊಸದಾಗಿ ವಿನ್ಯಾಸಗೊಳಿಸಲಾದ ಅಲಾಯ್ ವ್ಹೀಲ್ ಗಳನ್ನು ಹೊಂದಿವೆ.

ಹೊಸ ನಿಸ್ಸಾನ್ ಕಿಕ್ಸ್ ಫೇಸ್‌ಲಿಫ್ಟ್ ಎಸ್‍ಯುವಿ ಒಳಭಾಗದ ಬಗ್ಗೆ ಹೇಳುವುದಾದರೆ, ಮರುವಿನ್ಯಾಸಗೊಳಿಸಲಾದ ಡ್ಯಾಶ್‌ಬೋರ್ಡ್ ಅನ್ನು ಪ್ರೀಮಿಯಂ ಸಾಫ್ಟ್-ಟಚ್ ಉಪಕರಣಗಳನ್ನು ಹೊಂದಿವೆ. ಎಸಿ ವೆಂಟ್ ಗಳ ಸ್ಥಾನವನ್ನು ಬದಲಾಯಿಸಲಾಗಿದೆ.
MOST READ: ಬಿಡುಗಡೆಯ ಸನಿಹದಲ್ಲಿ ಹೊಸ ಮಾರುತಿ ಸುಜುಕಿ ಸೆಲೆರಿಯೊ

ಇನ್ನು ಈ ಹೊಸ ಎಸ್‍ಯುವಿಯ ಸೆಂಟರ್ ಕನ್ಸೋಲ್‌ನಲ್ಲಿ 8 ಇಂಚಿನ ದೊಡ್ಡ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಂ ಅನ್ನು ಪರಿಚಯಿಸುವುದು ಮುಖ್ಯ ನವೀಕರಣಗಳಲ್ಲಿ ಒಂದಾಗಿದೆ, ಇದು ನಿಸ್ಸಾನ್ ಕನೆಕ್ಟಿವಿಟಿ ತಂತ್ರಜ್ಞಾನದೊಂದಿಗೆ ಆಪಲ್ ಕಾರ್ ಪ್ಲೇ ಆಂಡ್ರಾಯ್ಡ್ ಆಟೋಗಳನ್ನು ಒಳಗೊಂಡಿದೆ.

2021ರ ನಿಸ್ಸಾನ್ ಕಿಕ್ಸ್ ಫೇಸ್‌ಲಿಫ್ಟ್ ಎಸ್‍ಯುವಿ ಫ್ಲಾಟ್-ಬಾಟಮ್ ಸ್ಟೀಯರಿಂಗ್ ವ್ಹೀಲ್ ಅನ್ನು ಮೌಂಟಡ್ ಕಂಟ್ರೋಲ್, ಸೆಮಿ ಡಿಜಿಟಲ್ ಇನ್ಸ್ ಟ್ರೂಮೆಂಟ್ ಕ್ಲಸ್ಟರ್, ಆಟೋಮ್ಯಾಟಿಕ್ ಕ್ಲೈಮೇಂಟ್ ಕಂಟ್ರೋಲ್ ಮತ್ತು ಇತರ ಫೀಚರ್ ಗಳನ್ನು ಸಹ ಒಳಗೊಂಡಿದೆ. ಮುಂಭಾಗ ಮತ್ತು ಹಿಂಭಾಗದಲ್ಲಿರುವ ಸೀಟುಗಳು ಈ ಹೆಚ್ಚು ಪ್ರೀಮಿಯಂ ಆಗಿದೆ.
MOST READ: ಕರೋನಾ ವೈರಸ್ ಬಗ್ಗೆ ಜನ ಜಾಗೃತಿ ಮೂಡಿಸಲು ಉಬರ್ ಜೊತೆಗೆ ಕೈಜೋಡಿಸಿದ ಪೊಲೀಸ್ ಇಲಾಖೆ

ಈ ಎಸ್‍ಯುವಿಯ ಕ್ಯಾಬಿನ್ ಹೆಚ್ಚು ದುಬಾರಿ ಅನುಭವವನ್ನು ನೀಡುತ್ತದೆ. ಜಪಾನ್ ಮಾರುಕಟ್ಟೆಯಲ್ಲಿ 2021ರ ನಿಸ್ಸಾನ್ ಕಿಕ್ಸ್ ಫೇಸ್‌ಲಿಫ್ಟ್ ಅನ್ನು ಈ ವರ್ಷದ ಆರಂಭದಲ್ಲಿ ಅನಾವರಣಗೊಳಿಸಿತ್ತು. ಅಮೆರಿಕಾದಲ್ಲಿ ಅನಾವರಣಗೊಳಿಸಿದ ನಿಸ್ಸಾನ್ ಕಿಕ್ಸ್ ಫೇಸ್‌ಲಿಫ್ಟ್ ಜಪಾನ್ ಸ್ಪೆಕ್ ಮಾದರಿಗೆ ಹೋಲುತ್ತದೆ.

2021ರ ನಿಸ್ಸಾನ್ ಕಿಕ್ಸ್ ಫೇಸ್‌ಲಿಫ್ಟ್ ಎಸ್‍ಯುವಿಯಲ್ಲಿ ಹಿಂದಿನ ಮಾದರಿಯಲ್ಲಿದ್ದ ಅದೇ 1.6-ಲೀಟರ್ ಎಂಜಿನ್ ಅನ್ನು ಅಳವಡಿಸಲಾಗಿದೆ. ಈ ಹೊಸ ಕಿಕ್ಸ್ ಫೇಸ್‌ಲಿಫ್ಟ್ ಎಸ್‍ಯುವಿಯ ಬೆಲೆಯ ಮಾಹಿತಿಯನ್ನು ಇನ್ನು ಬಹಿರಂಗಪಡಿಸಲಿಲ್ಲ. ಈ ಹೊಸ ನಿಸ್ಸಾನ್ ಕಿಕ್ಸ್ ಫೇಸ್‌ಲಿಫ್ಟ್ ಎಸ್‍ಯುವಿಯು ಮುಂದಿನ ವರ್ಷದ ಆರಂಭದಲ್ಲಿ ಅಂತರರಾಷ್ಟ್ರೀಯ ಮಾರುಕಟ್ಟೆಗಳಲ್ಲಿ ಬಿಡುಗಡೆಯಾಗಲಿದೆ.

2021ರ ನಿಸ್ಸಾನ್ ಕಿಕ್ಸ್ ಫೇಸ್‌ಲಿಫ್ಟ್ ಎಸ್‍ಯುವಿಯನ್ನು ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸುವುದಾದರೆ, ಅದರಲ್ಲಿ 1.3-ಲೀಟರ್ ಟರ್ಬೊ-ಪೆಟ್ರೋಲ್ ಎಂಜಿನ್ ಅನ್ನು ಅಳವಡಿಸಬಹುದು. ಇದನ್ನು ಮ್ಯಾನುವವಲ್ ಅಥವಾ ಸಿವಿಟಿ ಗೇರ್‌ಬಾಕ್ಸ್ ಆಯ್ಕೆಗಳನ್ನು ನೀಡಬಹುದು. 2021ರ ನಿಸ್ಸಾನ್ ಕಿಕ್ಸ್ ಫೇಸ್‌ಲಿಫ್ಟ್ ಎಸ್‍ಯುವಿಯು ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಯಾದ ಬಳಿಕ ಕಿಯಾ ಸೆಲ್ಟೋಸ್ ಮತ್ತು ಹ್ಯುಂಡೈ ಕ್ರೆಟಾ ಎಸ್‍ಯುವಿಗಳಿಗೆ ಪೈಪೋಟಿ ನೀಡುತ್ತದೆ.