ಅನಾವರಣವಾಗಲಿದೆ ಹೊಸ ಫೋಕ್ಸ್‌ವ್ಯಾಗನ್ ಟಾವೊಸ್ ಎಸ್‍ಯುವಿ

ಫೋಕ್ಸ್‌ವ್ಯಾಗನ್ ಕಂಪನಿಯು ಹೊಸ ಮಿಡ್ ಎಸ್‍ಯುವಿಯನ್ನು ಅಭಿವೃದ್ದಿ ಪಡಿಸುತ್ತಿದೆ ಎಂದು ಈ ಹಿಂದೆ ವರದಿ ಪ್ರಕಟವಾಗಿತ್ತು. ಇದೀಗ ಫೋಕ್ಸ್‌ವ್ಯಾಗನ್ ಈ ಹೊಸ ಮಿಡ್ ಎಸ್‍ಯುವಿಗೆ ಟಾವೊಸ್ ಎಂಬ ಹೆಸರನ್ನು ನೀಡಲಾಗಿದೆ.

ಅನಾವರಣವಾಗಲಿದೆ ಹೊಸ ಫೋಕ್ಸ್‌ವ್ಯಾಗನ್ ಟಾವೊಸ್ ಎಸ್‍ಯುವಿ

ಈ ಹೊಸ ಫೋಕ್ಸ್‌ವ್ಯಾಗನ್ ಟಾವೊಸ್ ಮಿಡ್ ಎಸ್‍ಯುವಿಯು 2020ರ ಅಕ್ಟೋಬರ್ 13ರಂದು ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಅನಾವರಣವಾಗಲಿದೆ. ಈ ಹೊಸ ಮಿಡ್ ಎಸ್‍ಯುವಿಯು ಟಿಗ್ವಾನ್ ಎಸ್‍ಯುವಿಗಿಂತ ಕೆಳಗಿನ ಸ್ಥಾನದಲ್ಲಿರುತ್ತದೆ. ಅಮೆರಿಕದ ಫೋಕ್ಸ್‌ವ್ಯಾಗನ್ ಹಿರಿಯ ಉಪಾಧ್ಯಕ್ಷ ಹೆನ್ ಶಾಫರ್ ಅವರು ಮಾತನಾಡಿ, ಹೊಸ ಮಿಡ್ ಎಸ್‍ಯುವಿಯನ್ನು ಹೆಸರನ್ನು ಘೋಷಿಸಲು ಸಂತಸವಾಗುತ್ತಿದೆ.

ಅನಾವರಣವಾಗಲಿದೆ ಹೊಸ ಫೋಕ್ಸ್‌ವ್ಯಾಗನ್ ಟಾವೊಸ್ ಎಸ್‍ಯುವಿ

ನ್ಯೂ ಮೆಕ್ಸಿಕೊದ ಟಾವೊಸ್ ಪಟ್ಟಣದ ಹೆಸರನ್ನು ಹೊಸ ಮಿಡ್ ಎಸ್‍ಯುವಿಗೆ ಇಡಲಾಗಿದೆ. ಅಡ್ವೆಂಜರ್ ಆರ್ಟ್ ಡಿಸೈನ್ ಹೊಂದಿರುವ ಆಕರ್ಷಕ ಎಸ್‍ಯುವಿಯಾಗಿದೆ ಟಾವೊಸ್ ಎಂದು ಅವರು ಹೇಳಿದರು.

MOST READ: ಅನಾವರಣವಾಯ್ತು ಟೊಯೊಟಾ ಕೊರೊಲ್ಲಾ ಟೂರಿಂಗ್ ರಿಬ್ಯಾಡ್ಜ್ ಆವೃತ್ತಿ ಸುಜುಕಿ ಸ್ವೇಸ್

ಅನಾವರಣವಾಗಲಿದೆ ಹೊಸ ಫೋಕ್ಸ್‌ವ್ಯಾಗನ್ ಟಾವೊಸ್ ಎಸ್‍ಯುವಿ

ಫೋಕ್ಸ್‌ವ್ಯಾಗನ್ ಟಾವೊಸ್ ಮಿಡ್ ಎಸ್‍ಯುವಿಯ ಟೀಸರ್ ಚಿತ್ರದಲ್ಲಿ ತೆಳುವಾದ ಎಲ್ಇಡಿ ಲೈಟ್ ಗಳನ್ನು ಹೊಂದಿರುವ ಹೆಡ್‌ಲೈಟ್‌ಗಳು ಮತ್ತು ಎಸ್‍ಯುವಿ ಮೇಲಿನ ಭಾಗದ ಸಿಲೂಯೆಟ್ ಟಿ-ಕ್ರಾಸ್ ಮಾದರಿಗಿಂತ ಭಿನ್ನವಾಗಿ ಕಾಣುತ್ತದೆ.

ಅನಾವರಣವಾಗಲಿದೆ ಹೊಸ ಫೋಕ್ಸ್‌ವ್ಯಾಗನ್ ಟಾವೊಸ್ ಎಸ್‍ಯುವಿ

ಫೋಕ್ಸ್‌ವ್ಯಾಗನ್ ಟಾವೊಸ್ ಮಿಡ್ ಎಸ್‍ಯುವಿಯನ್ನು ನಿರ್ದಿಷ್ಟವಾಗಿ ಉತ್ತರ ಅಮೆರಿಕಾದ ಮಾರುಕಟ್ಟೆಗೆ ವಿನ್ಯಾಸಗೊಳಿಸಲಾಗಿದೆ. ಟಾವೊಸ್ ಚೀನಾದ ಥಾರು ಎಸ್‍ಯುವಿಯನ್ನು ಆಧರಿಸಿ ಅಭಿವೃದ್ದಿ ಪಡಿಸಲಾಗಿದೆ.

MOST READ: ಶೀಘ್ರದಲ್ಲೇ ಬಿಡುಗಡೆಯಾಗಲಿದೆ ಹೊಸ ಸ್ಕೋಡಾ ಕೊಡಿಯಾಕ್ ಎಸ್‍‍‍ಯುವಿ

ಅನಾವರಣವಾಗಲಿದೆ ಹೊಸ ಫೋಕ್ಸ್‌ವ್ಯಾಗನ್ ಟಾವೊಸ್ ಎಸ್‍ಯುವಿ

ಆದರೆ ಥಾರು ಎಸ್‍ಯುವಿಗೆ ಹೋಲಿಸಿದರೆ ಟಾವೊಸ್ ಕೆಲವು ವಿನ್ಯಾಸ ಬದಲಾವಣೆಗಳನ್ನು ಹೊಂದಿರುತ್ತದೆ. ಹೊಸ ಫೋಕ್ಸ್‌ವ್ಯಾಗನ್ ಟಾವೊಸ್ ಮಿಡ್ ಎಸ್‍ಯುವಿಯು ಚೀನಾದ ತಾರೆಕ್ ಮತ್ತು ಥಾರು ಎಸ್‍ಯುವಿಗಳಿಗಿಂತ ಭಿನ್ನವಾಗಿ ಟೀಸರ್ ನಲ್ಲಿ ಕಾಣುತ್ತದೆ.

ಅನಾವರಣವಾಗಲಿದೆ ಹೊಸ ಫೋಕ್ಸ್‌ವ್ಯಾಗನ್ ಟಾವೊಸ್ ಎಸ್‍ಯುವಿ

ಫೋಕ್ಸ್‌ವ್ಯಾಗನ್ ಟಾವೊಸ್ ಮಿಡ್ ಎಸ್‍ಯುವಿಯ ಮುಂಭಾಗದಲ್ಲಿ ಎಲ್‌ಇಡಿಗಳ ಸ್ಟ್ರಿಪ್ ಅನ್ನು ಹೊಂದಿದೆ. ಚೀನಾದಲ್ಲಿರುವ ಥಾರು ಮಿಡ್ ಎಸ್‍ಯುವಿಯಲ್ಲಿ ಎರಡು ಎಂಜಿನ್ ಆಯ್ಕೆಗಳನ್ನು ಹೊಂದಿದೆ. ಇದೇ ಎಂಜಿನ್ ಆಯ್ಕೆಯನ್ನು ಹೊಸ ಟಾವೊಸ್ ಮಿಡ್ ಎಸ್‍ಯುವಿಯಲ್ಲಿ ನೀಡುವ ಸಾಧ್ಯತೆಗಳಿದೆ.

MOST READ: ಮಾರಾಟದಲ್ಲಿ ಹೊಸ ಮೈಲಿಗಲ್ಲು ಸಾಧಿಸಿದ ಹೋಂಡಾ ಆಮೇಜ್ ಕಾರು

ಅನಾವರಣವಾಗಲಿದೆ ಹೊಸ ಫೋಕ್ಸ್‌ವ್ಯಾಗನ್ ಟಾವೊಸ್ ಎಸ್‍ಯುವಿ

ಥಾರು ಎಸ್‍ಯುವಿಯಲ್ಲಿ 1.4-ಲೀಟರ್ ಟರ್ಬೋಚಾರ್ಜ್ಡ್ ಎಂಜಿನ್ ಅನ್ನು ಹೊಂದಿದೆ. ಈ ಎಂಜಿನ್ 148 ಬಿಹೆಚ್‌ಪಿ ಪವರ್ ಅನ್ನು ಉತ್ಪಾದಿಸುತ್ತದೆ. ಇದರೊಂದಿಗೆ 184 ಬಿಹೆಚ್‌ಪಿ ಪವರ್ ಅನ್ನು ಉತ್ಪಾದಿಸುವ 2.0-ಲೀಟರ್ ಟರ್ಬೋಚಾರ್ಜ್ಡ್ ಎಂಜಿನ್ ಅನ್ನು ಹೊಂದಿದೆ.

ಅನಾವರಣವಾಗಲಿದೆ ಹೊಸ ಫೋಕ್ಸ್‌ವ್ಯಾಗನ್ ಟಾವೊಸ್ ಎಸ್‍ಯುವಿ

ಈ ಎಂಜಿನ್ ನೊಂದಿಗೆ 7-ಸ್ಪೀಡ್ ಡ್ಯುಯಲ್-ಕ್ಲಚ್ ಗೇರ್ ಬಾಕ್ಸ್ ಸ್ಟ್ಯಾಂಡರ್ಡ್ ಆಗಿ ಅಳವಡಿಸಲಾಗಿದೆ, ಥಾರು ಮಿಡ್ ಎಸ್‍ಯುವಿಯ ಟಾಪ್ ಸ್ಪೆಕ್ ಮಾದರಿಯಲ್ಲಿ ಆಲ್-ವ್ಹೀಲ್-ಡ್ರೈವ್ ಸಿಸ್ಟಂ ಅನ್ನು ಹೊಂದಿದೆ.

MOST READ: ಬಿಡುಗಡೆಯ ಸನಿಹದಲ್ಲಿ ಹೊಸ ಮಾರುತಿ ಸುಜುಕಿ ಸೆಲೆರಿಯೊ

ಅನಾವರಣವಾಗಲಿದೆ ಹೊಸ ಫೋಕ್ಸ್‌ವ್ಯಾಗನ್ ಟಾವೊಸ್ ಎಸ್‍ಯುವಿ

ಹೊಸ ಟಾವೊಸ್ ಮಿಡ್ ಎಸ್‍ಯುವಿಯು ಮೆಕ್ಸಿಕೊದ ವಿಡಬ್ಲ್ಯೂ ಗ್ರೂಪ್‌ನ ಪ್ಯೂಬ್ಲಾ ಕಾರ್ಖಾನೆಯಲ್ಲಿ ಉತ್ಪಾದನೆಯಾಗುವ ನಿರೀಕ್ಷೆಯಿದೆ, ಪ್ಯೂಬ್ಲಾ ಕಾರ್ಖಾನೆಯನ್ನು ಮೊದಲು ಬೀಟಲ್ ಉತ್ಪಾದಿಸಲು ಬಳಸಲಾಗುತ್ತಿತ್ತು.

ಅನಾವರಣವಾಗಲಿದೆ ಹೊಸ ಫೋಕ್ಸ್‌ವ್ಯಾಗನ್ ಟಾವೊಸ್ ಎಸ್‍ಯುವಿ

ಈ ಹೊಸ ಟಾವೊಸ್ ಮಿಡ್ ಎಸ್‍ಯುವಿಯನ್ನು ಫೋಕ್ಸ್‌ವ್ಯಾಗನ್ ಕಂಪನಿಯು 2021ರಲ್ಲಿ ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಲಿದೆ. ಇನ್ನು ಜರ್ಮನ್ ವಾಹನ ತಯಾರಕ ಕಂಪನಿಯಾದ ಫೋಕ್ಸ್‌ವ್ಯಾಗನ್ ಮುಂದಿನ ವರ್ಷ ಭಾರತದಲ್ಲಿ ಟಿಗ್ವಾನ್ ಫೇಸ್‌ಲಿಫ್ಟ್ ಮತ್ತು ಟೈಗನ್ ಎಸ್‍ಯುವಿಗಳನ್ನು ಬಿಡುಗಡೆಗೊಳಿಸಲಿದೆ.

Most Read Articles

Kannada
English summary
Volkswagen Taos Mid-Sized SUV Debut On October 13, 2020. Read In Kannada.
Story first published: Saturday, September 19, 2020, 11:35 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X