ಹೊಸ ಸುರಕ್ಷಾ ಕ್ರಮಗಳೊಂದಿಗೆ ವಾಹನ ಉತ್ಪಾದನೆಗೆ ಚಾಲನೆ ನೀಡಿದ ಅಶೋಕ್ ಲೇಲ್ಯಾಂಡ್

ಹಿಂದೂಜಾ ಸಮೂಹದ ಅಶೋಕ್ ಲೇಲ್ಯಾಂಡ್ ಕಂಪನಿಯು ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಹೊಸ ಸುರಕ್ಷಾ ಮಾರ್ಗಸೂಚಿಯೆಂತೆ ವಾಣಿಜ್ಯಗಳ ವಾಹನಗಳ ಉತ್ಪಾದನೆ ಮತ್ತು ಮಾರಾಟ ಪ್ರಕ್ರಿಯೆಗೆ ಚಾಲನೆ ನೀಡಿದ್ದು, ವೈರಸ್ ಭೀತಿ ಹಿನ್ನಲೆಯಲ್ಲಿ ಗರಿಷ್ಠ ಮಟ್ಟದ ಸುರಕ್ಷಾ ಕ್ರಮಗಳನ್ನು ಜಾರಿಗೊಳಿಸಿರುವುದಾಗಿ ಸ್ಪಷ್ಟಪಡಸಿದೆ.

ಹೊಸ ಸುರಕ್ಷಾ ಕ್ರಮಗಳೊಂದಿಗೆ ವಾಹನ ಉತ್ಪಾದನೆಗೆ ಚಾಲನೆ ನೀಡಿದ ಅಶೋಕ್ ಲೇಲ್ಯಾಂಡ್

ಕರೋನಾ ವೈರಸ್ ಆರ್ಭಟವನ್ನು ತಗ್ಗಿಸಲು ಸದ್ಯಕ್ಕೆ ಲಾಕ್‌ಡೌನ್ ಅನ್ನು ಮುಂದುವರಿಸಿದ್ದರೂ ಪರಿಸ್ಥಿತಿಗೆ ಅನುಗುಣವಾಗಿ ಕೈಗಾರಿಕಾ ವಲಯಕ್ಕೆ ಕೆಲವು ವಿನಾಯ್ತಿಗಳನ್ನು ನೀಡಲಾಗಿದ್ದು, ಬಹುತೇಕ ಆಟೋ ಕಂಪನಿಗಳು ಉತ್ಪಾದನೆ ಮತ್ತು ಮಾರಾಟ ಪ್ರಕ್ರಿಯೆಯನ್ನು ಪುನಾರಂಭಿಸಿವೆ. ಅಶೋಕ್ ಲೇಲ್ಯಾಂಡ್ ಸಹ ಚೆನ್ನೈ ಹೊರವಲಯಯದಲ್ಲಿರುವ ಉತ್ಪಾದನಾ ಘಟಕದಲ್ಲಿ ವಾಹನಗಳ ಉತ್ಪಾದನೆ ಪುನಾರಂಭಿಸಿದ್ದ ಮತ್ತು ಮಾರಾಟ ಪ್ರಕ್ರಿಯೆ ಕೂಡಾ ಆರಂಭಗೊಂಡಿದೆ.

ಹೊಸ ಸುರಕ್ಷಾ ಕ್ರಮಗಳೊಂದಿಗೆ ವಾಹನ ಉತ್ಪಾದನೆಗೆ ಚಾಲನೆ ನೀಡಿದ ಅಶೋಕ್ ಲೇಲ್ಯಾಂಡ್

ಕರೋನಾ ವೈರಸ್ ಮಟ್ಟಹಾಕಲು ಲಾಕ್‌ಡೌನ್ ಅನ್ನು ಮುಂದುವರಿಸಿಕೊಂಡೆ ಹಸಿರು ಮತ್ತು ಕಿತ್ತಳೆ ವಲಯಗಳಲ್ಲಿರುವ ಕೈಗಾರಿಕೆಗಳ ಉತ್ಪಾದನಾ ಚಟುವಟಿಕೆಗಳಿಗೆ ಷರತ್ತುಬದ್ಧ ಅವಕಾಶ ನೀಡಲಾಗಿದ್ದು, ದೇಶಾದ್ಯಂತ ಬಹುತೇಕ ಆಟೋ ಉತ್ಪಾದನಾ ಕಂಪನಿಗಳು ಕಳೆದ ಒಂದೂವರೆ ತಿಂಗಳ ನಂತರ ವಾಹನ ಉತ್ಪಾದನೆಯನ್ನು ಪುನಾರಂಭಿಸಿವೆ.

ಹೊಸ ಸುರಕ್ಷಾ ಕ್ರಮಗಳೊಂದಿಗೆ ವಾಹನ ಉತ್ಪಾದನೆಗೆ ಚಾಲನೆ ನೀಡಿದ ಅಶೋಕ್ ಲೇಲ್ಯಾಂಡ್

ಸದ್ಯ ಉತ್ಪಾದನೆ ಮತ್ತು ಮಾರಾಟ ಮಾಡುತ್ತಿರುವ ಆಟೋ ಕಂಪನಿಗಳು ಉದ್ಯೋಗ ಸ್ಥಳಗಳಲ್ಲಿ ಶೇ.50ಕ್ಕಿಂತಲೂ ಕಡಿಮೆ ಉದ್ಯೋಗಿಗಳೊಂದಿಗೆ ಕಾರ್ಯನಿರ್ವಹಣೆ ಮಾಡಲಾಗುತ್ತಿದ್ದು, ವೈರಸ್ ತಡೆಗಾಗಿ ಆನ್‌ಲೈನ್ ಮೂಲಕವೇ ಪತ್ರ ವ್ಯವಹಾರ ಕೈಗೊಂಡು ಗ್ರಾಹಕರ ಮನೆ ಬಾಗಿಲಿಗೆ ವಾಹನ ಉತ್ಪನ್ನಗಳನ್ನು ವಿತರಣೆ ಮಾಡಲಾಗುತ್ತಿದೆ.

MOST READ: ಲಾಕ್‌ಡೌನ್‌ನಿಂದ ತತ್ತರಿಸಿರುವ ಆಟೋ ಕಂಪನಿಗಳಿಗೆ ಇದೀಗ ಮತ್ತೊಂದು ಸಂಕಷ್ಟ

ಹೊಸ ಸುರಕ್ಷಾ ಕ್ರಮಗಳೊಂದಿಗೆ ವಾಹನ ಉತ್ಪಾದನೆಗೆ ಚಾಲನೆ ನೀಡಿದ ಅಶೋಕ್ ಲೇಲ್ಯಾಂಡ್

ಇನ್ನು ಮಾಹಾಮಾರಿ ಕರೋನಾ ವೈರಸ್ ಹೊಡೆದೊಡಿಸಲು ಸರ್ಕಾರಕ್ಕೆ ಹಣಕಾಸಿನ ನೆರವು ನೀಡಿರುವುದಲ್ಲದೆ ಕೈಗೆಟುಕುವ ಬೆಲೆಯಲ್ಲಿ ಲಭ್ಯವಾಗುವಂತಹ ವಿಶೇಷ ಮಾದರಿಯ ವೆಂಟಿಲೇಟರ್‌ಗಳನ್ನು ಸಿದ್ದಪಡಿಸುತ್ತಿದೆ.

ಹೊಸ ಸುರಕ್ಷಾ ಕ್ರಮಗಳೊಂದಿಗೆ ವಾಹನ ಉತ್ಪಾದನೆಗೆ ಚಾಲನೆ ನೀಡಿದ ಅಶೋಕ್ ಲೇಲ್ಯಾಂಡ್

ಅಶೋಕ್ ಲೇಲ್ಯಾಂಡ್ ಕಂಪನಿಯು ಹಲವು ಫೋಟೋ ಟೈಪ್ ವೆಂಟೇಲೆಟರ್‌ಗಳನ್ನು ಸಿದ್ದಪಡಿಸಿದ್ದು, ಕೇಂದ್ರ ಸರ್ಕಾರದ ಆರೋಗ್ಯ ಇಲಾಖೆಯಿಂದ ಅನುಮೋದನೆ ಸಿಕ್ಕ ನಂತರವಷ್ಟೇ ಅಧಿಕೃತವಾಗಿ ಉತ್ಪಾದನಾ ಪ್ರಕ್ರಿಯೆಗೆ ಚಾಲನೆ ನೀಡಲಿದೆ.

MOST READ: ಸ್ಕ್ರ್ಯಾಪಿಂಗ್ ನೀತಿ ಜಾರಿಗೆ ಅಂತಿಮ ಸಿದ್ದತೆ- ಆಟೋ ಉದ್ಯಮದಲ್ಲಿ ಹೊಸ ಸಂಚಲನ..

ಹೊಸ ಸುರಕ್ಷಾ ಕ್ರಮಗಳೊಂದಿಗೆ ವಾಹನ ಉತ್ಪಾದನೆಗೆ ಚಾಲನೆ ನೀಡಿದ ಅಶೋಕ್ ಲೇಲ್ಯಾಂಡ್

ಇದಲ್ಲದೆ ಲಾಕ್‌ಡೌನ್‌ನಿಂದಾಗಿ ಆರ್ಥಿಕ ಸಂಕಷ್ಟಕ್ಕೆ ಸಿಲುಕಿರುವ ಸಾವಿರಾರು ದಿನಗೂಲಿ ಕಾರ್ಮಿಕರಿಗೆ ದಿನಂಪ್ರತಿ ಆಹಾರ ಪೊಟ್ಟಣಗಳನ್ನು ವಿತರಣೆ ಮಾಡುತ್ತಿದ್ದು, ಅಗತ್ಯವಿರುವ ಜನರಿಗೆ ಮಾಸ್ಕ್, ಸ್ಯಾನಿಟೈಜರ್ ಮತ್ತು ಫೇಸ್‌ಶೀಲ್ಡ್‌ಗಳನ್ನು ಪೂರೈಕೆ ಮಾಡುತ್ತಿದೆ.

ಹೊಸ ಸುರಕ್ಷಾ ಕ್ರಮಗಳೊಂದಿಗೆ ವಾಹನ ಉತ್ಪಾದನೆಗೆ ಚಾಲನೆ ನೀಡಿದ ಅಶೋಕ್ ಲೇಲ್ಯಾಂಡ್

ಕರೋನಾ ವೈರಸ್ ವಿರುದ್ಧ ಹೋರಾಟಕ್ಕಾಗಿ ಆರಂಭಿಸಲಾಗಿರುವ ದೇಣಿಗೆ ಸಂಗ್ರಹ ಅಭಿಯಾನಕ್ಕೆ ಈಗಾಗಲೇ ಭಾರೀ ಪ್ರಮಾಣದ ನೆರವು ಹರಿದು ಬಂದಿದ್ದು, ಉದ್ಯಮಿಗಳು, ಚಿತ್ರ ನಟರು, ಸರ್ಕಾರಿ ಅಧಿಕಾರಿಗಳು ಮತ್ತು ಜನಸಾಮಾನ್ಯರು ಸಹ ತಮ್ಮ ಕೈಲಾದಷ್ಟು ದೇಣಿಗೆ ನೀಡಿ ಕರೋನಾ ವಿರುದ್ಧ ಸರ್ಕಾರದ ಹೋರಾಟಕ್ಕೆ ಶಕ್ತಿ ತುಂಬಿದ್ದಾರೆ.

MOST READ: ಕರೋನಾ ಸಂಕಷ್ಟ: ಟ್ಯಾಕ್ಸಿ ಮತ್ತು ಆಟೋ ಚಾಲಕರಿಗೆ ವಿಶೇಷ ಪ್ಯಾಕೇಜ್ ಘೋಷಣೆ

ಹೊಸ ಸುರಕ್ಷಾ ಕ್ರಮಗಳೊಂದಿಗೆ ವಾಹನ ಉತ್ಪಾದನೆಗೆ ಚಾಲನೆ ನೀಡಿದ ಅಶೋಕ್ ಲೇಲ್ಯಾಂಡ್

ಅದರಲ್ಲೂ ಆಟೋ ಉತ್ಪಾದನಾ ಕಂಪನಿಗಳು ಕರೋನಾ ವಿರುದ್ದ ಹೋರಾಟಕ್ಕಾಗಿ ಸಂಕಷ್ಟದ ಸಮಯದಲ್ಲೂ ಸರ್ಕಾರದ ಜೊತೆ ನಿಂತಿರುವುದಲ್ಲದೆ ವೈದ್ಯಕೀಯ ಉಪಕರಣಗಳ ತಯಾರಿಕೆಗೆ ಚಾಲನೆ ನೀಡಿವೆ.

Most Read Articles

Kannada
English summary
Ashok Leyland resume plant operations details. Read in Kannada.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X