Just In
- 17 min ago
ಗಣರಾಜ್ಯೋತ್ಸವದ ಸಂಭ್ರಮಕ್ಕಾಗಿ ಮ್ಯಾಗ್ನೈಟ್ ಕಾರಿನೊಂದಿಗೆ ನಿಸ್ಸಾನ್ ಹೊಸ ಅಭಿಯಾನ ಘೋಷಣೆ
- 1 hr ago
ಹೊಸ ಎಲೆಕ್ಟ್ರಿಕ್ ವಾಹನ ಉತ್ಪಾದನಾ ಘಟಕದ ಮೇಲೆ ಭಾರೀ ಪ್ರಮಾಣದ ಹೂಡಿಕೆಗೆ ಸಿದ್ದವಾದ ಒಕಿನಾವ
- 2 hrs ago
ಡೀಲರ್ ಬಳಿ ತಲುಪಿದ ಹೊಸ ಬೆನೆಲ್ಲಿ ಟಿಆರ್ಕೆ 502 ಬೈಕ್
- 2 hrs ago
ನ್ಯಾಷನಲ್ ಡ್ರ್ಯಾಗ್ ರೇಸಿಂಗ್: 2020ರ ಆವೃತ್ತಿಯನ್ನು ಗೆದ್ದ ಕನ್ನಡಿಗ ಹೇಮಂತ್ ಮುದ್ದಪ್ಪ!
Don't Miss!
- Lifestyle
ಗಣರಾಜ್ಯೋತ್ಸವ ಪರೇಡ್ನಲ್ಲಿ ಇತಿಹಾಸ ಸೃಷ್ಟಿಸಲಿದ್ದಾರೆ ಸ್ವಾತಿ ರಾಥೋಡ್
- Movies
ದಿಗ್ಗಜ ಗಾಯಕ ಎಸ್ಪಿ ಬಾಲಸುಬ್ರಹ್ಮಣ್ಯಂಗೆ ಪದ್ಮವಿಭೂಷಣ ಪ್ರಶಸ್ತಿ
- News
ಭಾರತದಲ್ಲಿ 19.5 ಲಕ್ಷ ಜನರಿಗೆ ಕೊರೊನಾವೈರಸ್ ಲಸಿಕೆ
- Sports
ಐಎಸ್ಎಲ್: ಬಾಗನ್ ಸೋಲಿಸುವ ಆತ್ಮವಿಶ್ವಾಸದಲ್ಲಿ ನಾರ್ಥ್ ಈಸ್ಟ್
- Finance
ಎಲ್&ಟಿ ತ್ರೈಮಾಸಿಕ ಆದಾಯ 5% ಏರಿಕೆ: ದಾಖಲೆಯ 2,467 ಕೋಟಿ ರೂಪಾಯಿ
- Education
Indian Air Force Recruitment 2021: ಏರ್ಮೆನ್ ಗ್ರೂಪ್ X & Y ಹುದ್ದೆಗಳಿಗೆ ಅರ್ಜಿ ಆಹ್ವಾನ
- Technology
ಒನ್ಪ್ಲಸ್ ನಾರ್ಡ್ ಜುಲೈ 15 ರಿಂದ ಅಮೆಜಾನ್ ತಾಣದಲ್ಲಿ ಪ್ರಿ-ಆರ್ಡರ್ಗೆ ಲಭ್ಯವಿದೆ; ಖರೀದಿಸುವಲ್ಲಿ ಮೊದಲಿಗರಾಗಿರಿ!
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
ಬಿಡುಗಡೆಯ ಆರಂಭದಲ್ಲೇ ಅತ್ಯುತ್ತಮ ಬೇಡಿಕೆ ಪಡೆದುಕೊಂಡ ಆಡಿ ಕ್ಯೂ2 ಎಸ್‌ಯುವಿ
ಆಡಿ ಇಂಡಿಯಾ ಕಂಪನಿಯು ಜಾಗತಿಕ ಮಾರುಕಟ್ಟೆಯಲ್ಲಿನ ತನ್ನ ಪ್ರಮುಖ ಕಾರು ಮಾದರಿಗಳನ್ನು ಭಾರತದಲ್ಲೂ ಬಿಡುಗಡೆ ಮಾಡುತ್ತಿದ್ದು, ಇದೇ ಮೊದಲ ಬಾರಿಗೆ ಎಂಟ್ರಿ ಲೆವಲ್ ಎಸ್‌ಯುವಿ ಮಾದರಿಯಾದ ಕ್ಯೂ2 ಆವೃತ್ತಿಯನ್ನು ಭಾರತದಲ್ಲಿ ಬಿಡುಗಡೆ ಮಾಡುವ ಮೂಲಕ ಆರಂಭದಲ್ಲೇ ಅತ್ಯುತ್ತಮ ಬೇಡಿಕೆ ಪಡೆದುಕೊಂಡಿದೆ.

ಕ್ಯೂ2 ಎಸ್‌ಯುವಿ ಕಾರು ಮಾದರಿಯ ಖರೀದಿಗಾಗಿ ಈ ತಿಂಗಳ ಆರಂಭದಲ್ಲಿ ಬುಕ್ಕಿಂಗ್ ಆರಂಭಿಸಿದ್ದ ಆಡಿ ಕಂಪನಿಯು ಇದುವರೆಗೆ 100ಕ್ಕೂ ಹೆಚ್ಚು ಬುಕ್ಕಿಂಗ್ ಪಡೆದುಕೊಂಡಿದ್ದು, ಎಂಟ್ರಿ ಲೆವಲ್ ಐಷಾರಾಮಿ ಕಾರಿಗೆ ಉತ್ತಮ ಬೇಡಿಕೆ ಹರಿದುಬಂದಿದೆ. ಕ್ಯೂ2 ಮಾದರಿಯು ಫೋಕ್ಸ್‌ವ್ಯಾಗನ್ ಗ್ರೂಪ್‌ನ ಎಂಕ್ಯೂಬಿ ಪ್ಲ್ಯಾಟ್‌ಫ್ಲಾಮ್ ಅಡಿ ಅಭಿವೃದ್ದಿಗೊಂಡಿದ್ದು, ಕ್ಯೂ ಸರಣಿಯ ಆರನೇ ಕಾರು ಮಾದರಿ ಇದಾಗಿದೆ.

ಗ್ರಾಹಕರು ಹೊಸ ಕ್ಯೂ2 ಕಾರನ್ನು ಸ್ಟ್ಯಾಂಡರ್ಡ್, ಪ್ರೀಮಿಯಂ, ಪ್ರೀಮಿಯಂ ಪ್ಲಸ್ 1, ಪ್ರೀಮಿಯಂ ಪ್ಲಸ್ 2 ಮತ್ತು ಟೆಕ್ನಾಲಜಿ ಎನ್ನುವ ಐದು ವೆರಿಯೆಂಟ್‌ಗಳಲ್ಲಿ ಖರೀದಿಸಬಹುದಾಗಿದ್ದು, ಹೊಸ ಕಾರು ಆರಂಭಿಕವಾಗಿ ರೂ. 34.99 ಲಕ್ಷದಿಂದ ಟಾಪ್ ಎಂಡ್ ಮಾದರಿಯನ್ನು ರೂ. 48.89 ಲಕ್ಷ ಬೆಲೆಗೆ ಖರೀದಿ ಮಾಡಬಹುದಾಗಿದೆ.

ಕ್ಯೂ2 ಕಾರು ಮಾದರಿಯು ಸಂಪೂರ್ಣವಾಗಿ ಸಿಬಿಯು ಆಮದು ನೀತಿ ಅಡಿ ಭಾರತದಲ್ಲಿ ಮಾರಾಟಗೊಳ್ಳಲಿದ್ದು, ಅಡ್ವಾನ್ಸ್ ಲೈನ್ ಮತ್ತು ಡಿಸೈನ್ ಲೈನ್ ಎರಡು ಮಾದರಿಗಳಲ್ಲಿ ಹೊಸ ಕಾರನ್ನು ಅಭಿವೃದ್ದಿಗೊಳಿಸಲಾಗಿದೆ.

ಅಡ್ವಾನ್ಸ್ ಲೈನ್‌ನಲ್ಲಿ ಸ್ಟ್ಯಾಂಡರ್ಡ್, ಪ್ರೀಮಿಯಂ, ಪ್ರೀಮಿಯಂ ಪ್ಲಸ್ 1 ಮಾದರಿಗಳನ್ನು ಮಾರಾಟಗೊಳ್ಳಲಿದ್ದರೆ, ಡಿಸೈನ್ ಲೈನ್‌ನಲ್ಲಿ ಪ್ರೀಮಿಯಂ ಪ್ಲಸ್ 2 ಮತ್ತು ಟೆಕ್ನಾಲಜಿ ವೆರಿಯೆಂಟ್‌ಗಳು ಮಾರಾಟಗೊಳ್ಳಲಿವೆ. ಹೊಸ ಕ್ಯೂ2 ಕಾರು ಮಾದರಿಯು 4,191ಎಂಎಂ ಉದ್ದ, 1,794ಎಂಎಂ ಅಗಲ, 1,508ಎಂಎಂ ಎತ್ತರ, 2,601ಎಂಎಂ ವೀಲ್ಹ್‌ಬೆಸ್‌ನೊಂದಿಗೆ ಆಕರ್ಷಕ ವಿನ್ಯಾಸ ಹೊಂದಿದೆ.

ಆಡಿ ಕಂಪನಿಯು ಕ್ಯೂ2 ಕಾರು ಮಾದರಿಯಲ್ಲಿ 2.0-ಲೀಟರ್ ಟಿಎಫ್ಎಸ್ಐ ಪೆಟ್ರೋಲ್ ಎಂಜಿನ್ ಜೋಡಣೆ ಮಾಡಿದ್ದು, 7-ಸ್ಪೀಡ್ ಟ್ರಾನಿಕ್ ಡ್ಯುಯಲ್ ಕ್ಲಚ್ ಆಟೋಮ್ಯಾಟಿಕ್ ಟ್ರಾನ್ಸ್‌ಮಿಷನ್‌ನೊಂದಿಗೆ 190-ಬಿಎಚ್‌ಪಿ ಮತ್ತು 320-ಎನ್ಎಂ ಟಾರ್ಕ್ ಉತ್ಪಾದನೆ ಮಾಡಬಲ್ಲದು.
MOST READ: ಪ್ರತಿ ಚಾರ್ಜ್‌ಗೆ ಗರಿಷ್ಠ 509ಕಿ.ಮೀ ಮೈಲೇಜ್ ನೀಡಲಿದೆ ಸ್ಕೋಡಾ ಎನ್ಯಾಕ್ ಎಲೆಕ್ಟ್ರಿಕ್ ಎಸ್‌ಯುವಿ..!

ಕ್ಯೂ2 ಎಸ್‌ಯುವಿ ಮಾದರಿಯಲ್ಲಿ ನಾಲ್ಕು ಚಕ್ರಗಳಿಗೂ ಶಕ್ತಿ ಪೂರೈಸುವ ಕ್ವಾಟ್ರೊ ಫೋರ್ ವೀಲ್ಹ್ ಡ್ರೈವ್ ಸಿಸ್ಟಂ ಜೋಡಣೆ ಮಾಡಲಾಗಿದ್ದು, ಕೇವಲ 6.5-ಸೆಕೆಂಡ್‌ಗಳಲ್ಲಿ ಸೊನ್ನೆಯಿಂದ 100ಕಿ.ಮೀ ವೇಗ ಪಡೆದುಕೊಳ್ಳುವುದರ ಜೊತೆಗ ಪ್ರತಿ ಗಂಟೆಗೆ ಗರಿಷ್ಠ 228ಕಿ.ಮೀ ಟಾಪ್ ಸ್ಪೀಡ್‌ನಲ್ಲಿ ಚಲಿಸಬಲ್ಲದು.

ಸ್ಟ್ಯಾಂಡರ್ಡ್ ಮಾದರಿಗಿಂತಲೂ ಟೆಕ್ನಾಲಜಿ ವೆರಿಯೆಂಟ್‌ನಲ್ಲಿ ಹೆಚ್ಚಿನ ಮಟ್ಟದ ಪ್ರೀಮಿಯಂ ಫೀಚರ್ಸ್‌ಗಳಲಿದ್ದು, ಎಲ್ಇಡಿ ಹೆಡ್‌ಲ್ಯಾಂಪ್, ಇಂಟ್ರಾಗ್ರೆಟೆಡ್ ಡೈನಾಮಿಕ್ ಟರ್ನ್ ಇಂಡಿಕೇಟರ್, 17-ಇಂಚಿನ ಅಲಾಯ್ ವೀಲ್ಹ್, ವರ್ಚುವಲ್ ಕುಕ್‌ಪಿಟ್, ಅಗಲವಾದ ಟಚ್‌ಸ್ಕ್ರೀನ್, 'ಮೈಆಡಿ ಕನೆಕ್ಟ್' ಒಳಗೊಂಡ ಇನ್ಪೋಟೈನ್‌ಮೆಂಟ್ ಸಿಸ್ಟಂ, ಆ್ಯಪಲ್ ಕಾರ್ ಪ್ಲೇ ಮತ್ತು ಅಂಡ್ರಾಯಿಡ್ ಆಟೋ ಸೌಲಭ್ಯಗಳಿವೆ.
MOST READ: ಹೊಸ ಪೊಲೊ ಕಾರು ವಿತರಣೆ ಮಾಡಿದ ಎರಡೇ ನಿಮಿಷದಲ್ಲಿ ನಡೆಯಿತು ಅಪಘಾತ..!

ಹಾಗೆಯೇ ಹೊಸ ಕಾರಿನಲ್ಲಿ ವೈರ್‌ಲೆಸ್ ಚಾರ್ಜಿಂಗ್, ಆ್ಯಂಬಿಯೆಂಟ್ ಲೈಟಿಂಗ್, ಡ್ಯುಯಲ್ ಜೋನ್ ಕ್ಲೈಮೆಟ್ ಕಂಟ್ರೋಲ್, ಸ್ಪೋರ್ಟಿ ಫ್ಲ್ಯಾಟ್-ಬಾಟಮ್ ಸ್ಟ್ರೀರಿಂಗ್ ವೀಲ್ಹ್ ಸೇರಿದಂತೆ ಹಲವಾರು ಫೀಚರ್ಸ್‌ಗಳಿದ್ದು, ಭಾರತದಲ್ಲಿ ಹೊಸ ಕಾರು ಮರ್ಸಿಡಿಸ್ ಬೆಂಝ್ ಜಿಎಲ್ಎ, ವೊಲ್ವೊ ಎಕ್ಸ್‌ಸಿ40 ಮತ್ತು ಬಿಎಂಡಬ್ಲ್ಯು ಎಕ್ಸ್1 ಮಾದರಿಗಳಿಗೆ ಪೈಪೋಟಿ ನೀಡಲಿದೆ.