ಮುಂದಿನ ಚಿತ್ರದಲ್ಲಿ ಬ್ಯಾಟ್‍‍ಮ್ಯಾನ್ ಬಳಸುವ ಕಾರು ಹೀಗಿರಲಿದೆ

ಬ್ಯಾಟ್‍‍ಮ್ಯಾನ್ ಸರಣಿಯ ಪ್ರತಿ ಚಿತ್ರಗಳು ಸೂಪರ್‍‍ಹಿಟ್ ಆಗಿವೆ. ಅಲ್ಲದೇ ಬಾಕ್ಸ್ ಆಫೀಸ್ ನಲ್ಲಿ ಧೂಳೆಬ್ಬಿಸಿವೆ. ಬ್ಯಾಟ್‍‍ಮ್ಯಾನ್‍ ಜಗತ್ತಿನಾದ್ಯಂತ ಅಪಾರ ಅಭಿಮಾನಿ ಬಳಗವನ್ನು ಹೊಂದಿದೆ. ಇದೀಗ ಹೊಸ ಬ್ಯಾಟ್‍‍ಮ್ಯಾನ್ ಚಿತ್ರದ ಕೆಲವು ಫೋಟೊಗಳು ಬಹಿರಂಗವಾಗಿವೆ.

ಮುಂದಿನ ಚಿತ್ರದಲ್ಲಿ ಬ್ಯಾಟ್‍‍ಮ್ಯಾನ್ ಬಳಸುವ ಕಾರು ಹೀಗಿರಲಿದೆ

ಮುಂದಿನ ವರ್ಷ ಹೊಸ ಬ್ಯಾಟ್‍‍ಮ್ಯಾನ್ ಚಲನಚಿತ್ರ ಬಿಡುಗಡೆಯಾಗಲಿದೆ. ಈ ಚಿತ್ರದ ನಿರ್ದೇಶಕರಾದ ಮ್ಯಾಟ್ ರೀವ್ಸ್ ಇತ್ತೀಚೆಗೆ ಚಿತ್ರದ ಕೆಲವು ಪೋಟೋಗಳನ್ನು ತಮ್ಮ ಟ್ವಿಟರ್‍ ಖಾತೆಯಲ್ಲಿ ಶೇರ್‍‍ಮಾಡಿಕೊಂಡಿದ್ದಾರೆ. ಈ ಫೋಟೋನಲ್ಲಿ ಬ್ಯಾಟ್‍‍‍ಮ್ಯಾನ್ ಹೊಸ ಸೂಟ್‍‍ನಲ್ಲಿ ಹೊಸ ಬ್ಯಾಟ್‍‍ಮೊಬೈಲ್ ಕಾರಿನ ಪಕ್ಕದಲ್ಲಿ ನಿಂತಿರುವುದು ಕಂಡುಬಂದಿದೆ. ಬ್ಯಾಟ್‍‍ಮೊಬೈಲ್ ಕಾರು ಯಾವಾಗಲೂ ಬ್ಯಾಟ್‍ಮ್ಯಾನ್‍ ಚಲನಚಿತ್ರದಲ್ಲಿ ಪ್ರಮಖ ಆಕರ್ಷಣೆಯಾಗಿದೆ.

ಮುಂದಿನ ಚಿತ್ರದಲ್ಲಿ ಬ್ಯಾಟ್‍‍ಮ್ಯಾನ್ ಬಳಸುವ ಕಾರು ಹೀಗಿರಲಿದೆ

ಬ್ಯಾಟ್‍‍ಮ್ಯಾನ್ ಬಳಸುತ್ತಿದೆ ಹಿಂದಿನ ಮಾದರಿಗೆ ಹೋಲಿಸಿದರೆ, ಇತ್ತೀಚಿನ ಆವೃತ್ತಿಯ ಬ್ಯಾಟ್‍‍ಮೊಬೈಲ್ ಕಾರು ಹೆಚ್ಚು ಆಕರ್ಷಕ ಲುಕ್ ಅನ್ನು ಹೊಂದಿದೆ.

ಮುಂದಿನ ಚಿತ್ರದಲ್ಲಿ ಬ್ಯಾಟ್‍‍ಮ್ಯಾನ್ ಬಳಸುವ ಕಾರು ಹೀಗಿರಲಿದೆ

ಬ್ಯಾಟ್‍‍ಮೊಬೈಲ್ ಕಾರಿನ ಮುಂಭಾಗದಲ್ಲಿ ಮತ್ತು ಪಕ್ಕದಲ್ಲಿ ಬ್ಯಾಟ್‍‍ಮ್ಯಾನ್ ನಿಂತಿರುವ ಚಿತ್ರವನ್ನು ನಿರ್ದೇಶಕ ಶೇರ್ ಮಾಡಿದ್ದಾರೆ. ಈ ಕಾರು ಹಿಂದಿನ ಬ್ಯಾಟ್‍ಮ್ಯಾನ್‍ ಕಾರಿಗೆ ಹೋಲಿಸಿದರೆ ಸಾಮಾನ್ಯವಾಗಿದೆ. ಆದರೆ ಈ ಕಾರನ್ನು ವ್ಯಾಪಕವಾಗಿ ಮಾಡಿಫೈ ಮಾಡಲಾಗಿದೆ.

ಮುಂದಿನ ಚಿತ್ರದಲ್ಲಿ ಬ್ಯಾಟ್‍‍ಮ್ಯಾನ್ ಬಳಸುವ ಕಾರು ಹೀಗಿರಲಿದೆ

ಕಾರಿನ ಮುಂಭಾಗವು ಮ್ಯಾಟ್ ಬ್ಲ್ಯಾಕ್ ಬಣ್ಣವನ್ನು ಹೊಂದಿದೆ. ಕಾರಿನಲ್ಲಿರುವ ಹುಡ್‍‍ನ ಎರಡು ಬದಿಗಳಲ್ಲಿ ಮೆಟಲ್ ಫ್ರೇಮ್ ಅನ್ನು ಅಳವಡಿಸಲಾಗಿದೆ. ಕಾರಿನಲ್ಲಿ ಹುಡ್ ಮೆಷಿನ್‍‍‍ಗಳಿಗೆ ಹೆಚ್ಚಿನ ಸ್ಥಳಾವಕಾಶವನ್ನು ಕಲ್ಪಿಸಲು ಕಾರಿನ ಎಂಜಿನ್ ಅನ್ನು ಹಿಂಭಾಗದಲ್ಲಿ ಇರಿಸಲಾಗಿದೆ.

ಮುಂದಿನ ಚಿತ್ರದಲ್ಲಿ ಬ್ಯಾಟ್‍‍ಮ್ಯಾನ್ ಬಳಸುವ ಕಾರು ಹೀಗಿರಲಿದೆ

ಚಿತ್ರದಲ್ಲಿ ಕಾರಿನ ಹಿಂಭಾಗದ ಬಗ್ಗೆ ಮಾಹಿತಿಯು ಬಹಿರಂಗಗೊಂಡಿದೆ. ಬ್ಯಾಟ್‍‍ಮೊಬೈಲ್ ಕಾರಿನಲ್ಲಿ ದೊಡ್ಡ ಮತ್ತು ಅಗಲವಾದ ಟಯರ್‍‍ಗಳಿವೆ. ಹೊಸ ಬ್ಯಾಟ್‍‍‍ಮೊಬೈಲ್ ಕಾರು ದೊಡ್ಡ ವ್ಹೀಲ್ ಆರ್ಚ್‍‍ಗಳನ್ನು ಹೊಂದಿದೆ.

ಮುಂದಿನ ಚಿತ್ರದಲ್ಲಿ ಬ್ಯಾಟ್‍‍ಮ್ಯಾನ್ ಬಳಸುವ ಕಾರು ಹೀಗಿರಲಿದೆ

ಈ ಕಾರಿನಲ್ಲಿ ಆಕರ್ಷಕವಾದ ಹೆಡ್‍‍ಲೈಟ್ ಮತ್ತು ಟೇಲ್‍‍‍ಲೈಟ್‍‍ಗಳಿವೆ. ಕಾರಿನ ಬಾಡಿಯನ್ನು ಗಟ್ಟಿಯಾಗಿಸಲು ರೋಲ್ ಗೇಜ್ ಅನ್ನು ಅಳವಡಿಸಲಾಗಿದೆ. ಬ್ಯಾಟ್‍ಮೊಬೈಲ್ ಕಾರಿನ ಹಿಂಭಾಗದಲ್ಲಿ ದೊಡ್ಡ ಎಂಜಿನ್ ಅನ್ನು ಅಳವಡಿಸಲಾಗಿದೆ.

ಮುಂದಿನ ಚಿತ್ರದಲ್ಲಿ ಬ್ಯಾಟ್‍‍ಮ್ಯಾನ್ ಬಳಸುವ ಕಾರು ಹೀಗಿರಲಿದೆ

ಈ ಎಂಜಿನ್ ಹೆಚ್ಚು ಪವರ್‍‍ಫುಲ್ ಆಗಿದೆ. ಪವರ್‍‍ಫುಲ್ ಎಂಜಿನ್ ಅನ್ನು ಅಳವಡಿಸಿರುವುದರಿಂದ ಈ ಕಾರಿನ ಬಾಡಿಯನ್ನು ಸದೃಡವಾಗಿ ತಯಾರಿಸಲಾಗಿದೆ. ಒಟ್ಟಾರೆಯಾಗಿ ಹಿಂದಿನ ಬ್ಯಾಟ್‍‍ಮೊಬೈಲ್ ಕಾರಿಗೆ ಹೋಲಿಸಿದರೆ ವಿಭಿನ್ನವಾಗಿ ತಯಾರಿಸಲಾಗಿದೆ.

ಮುಂದಿನ ಚಿತ್ರದಲ್ಲಿ ಬ್ಯಾಟ್‍‍ಮ್ಯಾನ್ ಬಳಸುವ ಕಾರು ಹೀಗಿರಲಿದೆ

ಹೊಸ ಬ್ಯಾಟ್‍‍ಮ್ಯಾನ್ ಚಲನಚಿತ್ರವು 2021ರ ಜೂನ್ 25ರಂದು ತೆರೆಕಾಣಲಿದೆ. ರಾಬರ್ಟ್ ಪ್ಯಾಟಿನ್ಸನ್ ಈ ಚಿತ್ರದಲ್ಲಿ ಮುಖ್ಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಸಿನಿಪ್ರಿಯರು ಬ್ಯಾಟ್‍‍ಮ್ಯಾನ್ ಚಿತ್ರಕ್ಕಾಗಿ ಕಾತುರದಿಂದ ಕಾಯುತ್ತಿದ್ದಾರೆ. ಚಿತ್ರದಲ್ಲಿ ಬ್ಯಾಟ್‍ಮ್ಯಾನ್ ಬಳಸುವ ಬ್ಯಾಟ್‍ಮೊಬೈಲ್ ಕಾರಿನ ಬಗ್ಗೆ ಹೆಚ್ಚು ಕೂತಹಲ ಮೂಡಿಸಿದೆ.

Most Read Articles

Kannada
English summary
All-new Batmobile from the upcoming Batman Movie revealed. Read in Kannada.
Story first published: Saturday, March 7, 2020, 18:05 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X