Just In
Don't Miss!
- Sports
ಯುವರಾಜ್ ಸಿಂಗ್ ಕೋಚಿಂಗ್ ಬಹಳ ಉಪಯೋಗಕ್ಕೆ ಬಂತು: ಗಿಲ್
- News
ಖಾತೆ ಹಂಚಿಕೆ ಕುರಿತಂತೆ ಡಾ. ಸುಧಾಕರ್ ವಿಚಾರದಲ್ಲಿ ಎಲ್ಲರೂ ತಟಸ್ಥ ನಿಲುವು ತಾಳಿದ್ಯಾಕೆ?
- Lifestyle
ಕೊಲೆಸ್ಟ್ರಾಲ್ ಹೆಚ್ಚಾಗಿದೆಯೇ? ಈ ಆಹಾರ ಸೇವಿಸಿ
- Education
RITES Limited Recruitment 2021: ವಿವಿಧ 9 ಹುದ್ದೆಗಳಿಗೆ ಅರ್ಜಿ ಆಹ್ವಾನ
- Movies
ದುಬಾರಿ ವಿವಾಹ; ವರುಣ್ ಧವನ್ ಮದುವೆ ನಡೆಯುತ್ತಿರುವ ಐಷಾರಾಮಿ ಹೋಟೆಲ್ ಗೆ ಇಷ್ಟೊಂದು ಖರ್ಚು ಮಾಡುತ್ತಿದ್ದಾರಾ?
- Finance
ಬಜೆಟ್ 2021: ಜ. 23ರಂದು ಹಲ್ವಾ ಕಾರ್ಯಕ್ರಮ- ಇದೇನು, ಎತ್ತ?
- Technology
ಒನ್ಪ್ಲಸ್ ನಾರ್ಡ್ ಜುಲೈ 15 ರಿಂದ ಅಮೆಜಾನ್ ತಾಣದಲ್ಲಿ ಪ್ರಿ-ಆರ್ಡರ್ಗೆ ಲಭ್ಯವಿದೆ; ಖರೀದಿಸುವಲ್ಲಿ ಮೊದಲಿಗರಾಗಿರಿ!
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
ಹೊಸ ಬಿಎಂಡಬ್ಲ್ಯು 2 ಸೀರಿಸ್ ಗ್ರ್ಯಾನ್ ಕೂಪೆ ಬ್ಲ್ಯಾಕ್ ಶ್ಯಾಡೋ ಎಡಿಷನ್ ಬಿಡುಗಡೆ
ಜರ್ಮನ್ ಮೂಲದ ವಾಹನ ತಯಾರಕ ಕಂಪನಿಯಾದ ಬಿಎಂಡಬ್ಲ್ಯು ತನ್ನ 2-ಸೀರಿಸ್ ಗ್ರ್ಯಾನ್ ಕೂಪೆ ಮಾದರಿಯ ಸ್ಪೆಷಲ್ 'ಬ್ಲ್ಯಾಕ್ ಶ್ಯಾಡೋ' ಎಡಿಷನ್ ಅನ್ನು ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಿದೆ. ಈ ಹೊಸ ಬಿಎಂಡಬ್ಲ್ಯು 2-ಸೀರಿಸ್ ಗ್ರ್ಯಾನ್ ಕೂಪೆ ಬ್ಲ್ಯಾಕ್ ಶ್ಯಾಡೋ' ಎಡಿಷನ್ ಬೆಲೆಯು ಭಾರತದ ಎಕ್ಸ್ ಶೋರೂಂ ಪ್ರಕಾರ ರೂ.42.30 ಲಕ್ಷಗಳಾಗಿದೆ.

ಹೊಸ ಬ್ಲ್ಯಾಕ್ ಶ್ಯಾಡೋ ಆವೃತ್ತಿಯನ್ನು ಕೇವಲ 24 ಯುನಿಟ್ ಗಳಿಗೆ ಸೀಮಿತಗೊಳಿಸಲಾಗುವುದು. ಈ ಹೊಸ 2-ಸೀರಿಸ್ ಗ್ರ್ಯಾನ್ ಕೂಪೆ ಬ್ಲ್ಯಾಕ್ ಶ್ಯಾಡೋ' ಎಡಿಷನ್ ಬುಕ್ಕಿಂಗ್ ಇದೇ ತಿಂಗಳ 7 ರಿಂದ ಪ್ರಾರಂಭವಾಗಲಿದೆ ಎಂದು ಹೇಳಲಾಗಿದೆ. ಹೊಸ ಇಎಂಡಬ್ಲ್ಯು 2-ಸೀರಿಸ್ ಗ್ರ್ಯಾನ್ ಕೂಪೆ ಬ್ಲ್ಯಾಕ್ ಶ್ಯಾಡೋ' ಎಡಿಷನ್ ಹಲವಾರು ಕಾಸ್ಮೆಟಿಕ್ ಮತ್ತು ನೂತನ ಫೀಚರ್ ಗಳೊಂದಿಗೆ ಬಿಡುಗಡೆಯಾಗಿದೆ.

ಎಂ ಪರ್ಫಾರ್ಮೆನ್ಸ್' ಪಾರ್ಟ್ಸ್ ಗಳೊಂದಿಗೆ ಸ್ಟ್ಯಾಂಡರ್ಡ್ ಮಾದರಿಗಿಂತ ರೂ.3 ಲಕ್ಷ ಬೆಲೆಯು ಹೆಚ್ಚಾಗಿದೆ. ಹೊಸ ಇಎಂಡಬ್ಲ್ಯು 2-ಸೀರಿಸ್ ಗ್ರ್ಯಾನ್ ಕೂಪೆ ಬ್ಲ್ಯಾಕ್ ಶ್ಯಾಡೋ' ಎಡಿಷನ್ ಆಲ್ಪೈನ್ ವೈಟ್ ಮತ್ತು ಬ್ಲ್ಯಾಕ್ ಸರ್ಫೈರ್ ಬಣ್ನಗಳ ಆಯ್ಕೆಗಳೊಂದಿಗೆ ಕೂಡಿದೆ.
MOST READ: ಮರ್ಸಿಡಿಸ್ ಬೆಂಝ್ ಜಿಎಲ್ಇ ಎಸ್‍ಯುವಿಯ ಎರಡು ಹೊಸ ರೂಪಾಂತರಗಳು ಬಿಡುಗಡೆ

ಇನ್ನು ಈ ಹೊಸ ಇಎಂಡಬ್ಲ್ಯು 2-ಸೀರಿಸ್ ಗ್ರ್ಯಾನ್ ಕೂಪೆ ಬ್ಲ್ಯಾಕ್ ಶ್ಯಾಡೋ' ಎಡಿಷನ್ ಮುಂಭಾಗದ ಗ್ರಿಲ್‌ನಲ್ಲಿ ಬ್ಲ್ಯಾಕ್ ಮೆಷ್ ಬ್ಲ್ಯಾಕ್ ಒಆರ್‌ವಿಎಂಗಳು ಮತ್ತು ಜೆಟ್ ಬ್ಲ್ಯಾಕ್ ಮ್ಯಾಟ್ ಫಿನಿಶಿಂಗ್ ನೊಂದಿಗೆ 18 ಇಂಚಿನ ಎಂ ಕಾರ್ಯಕ್ಷಮತೆ ವೈ-ಸ್ಪೋಕ್ ವೀಲ್ ಗಳನ್ನು ಒಳಗೊಂಡಿದೆ.

ಬ್ಲ್ಯಾಕ್ ಶ್ಯಾಡೋ ಆವೃತ್ತಿಯು ಹಿಂಭಾಗದಲ್ಲಿ ಬಿಎಂಡಬ್ಲ್ಯು ಎಂ ಪರ್ಫಾರ್ಮೆನ್ಸ್ ಸ್ಪಾಯ್ಲರ್ ಅನ್ನು ಸಹ ಹೊಂದಿದೆ. ಸೀಮಿತ ಆವೃತ್ತಿಯ ಮಾದರಿಯ ಒಳಾಂಗಣಗಳು ಹೊಸದಾಗಿ ವಿನ್ಯಾಸಗೊಳಿಸಲಾದ ಸ್ಪೋರ್ಟ್ ಸೀಟುಗಳನ್ನು ಹೊಂದಿದೆ. ಇನ್ನು ಈ ಕಾರಿನ ಇಂಟಿರಿಯರ್ ಅನ್ನು ಲೈಟಿಂಗ್ ಎಲಿಮೆಂಟ್ ನೊಂದಿಗೆ ಅಲಂಕಾರಿಸಿದ್ದಾರೆ.
MOST READ: ಕ್ರ್ಯಾಶ್ ಟೆಸ್ಟ್‌ನಲ್ಲಿ ಶೂನ್ಯ ಸ್ಟಾರ್ ರೇಟಿಂಗ್ ಪಡೆದ ಜನಪ್ರಿಯ ಮಾರುತಿ ಎಸ್-ಪ್ರೆಸ್ಸೊ ಕಾರು

ಬ್ಲ್ಯಾಕ್ ಶ್ಯಾಡೋ' ಎಡಿಷನ್ ಇಂಟಿರಿಯರ್ ನಲ್ಲಿ 10.25-ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಂನೊಂದಿಗೆ ವೈರ್‌ಲೆಸ್ ಆಪಲ್ ಕಾರ್ ಪ್ಲೇ ಮತ್ತು ಆಂಡ್ರಾಯ್ಡ್ ಆಟೋ, 12.3-ಇಂಚಿನ ಡಿಜಿಟಲ್ ಇನ್ಸ್ ಟ್ರೂಮೆಂಟ್ ಕ್ಲಸ್ಟರ್, ಎರಡು-ಝೋನ್ ಕ್ಲೈಮೇಂಟ್ ಕಂಟ್ರೋಲ್ ಮತ್ತು ಸ್ಟ್ಯಾಂಡರ್ಡ್ ಮಾದರಿಯ ಎಲ್ಲಾ ಫೀಚರ್ ಗಳೊಂದಿಗೆ ಮುಂದುವರಿಯುತ್ತಿದೆ.

ಹೊಸ ಬಿಎಂಡಬ್ಲ್ಯು 2-ಸೀರಿಸ್ ಗ್ರ್ಯಾನ್ ಕೂಪೆ ಬ್ಲ್ಯಾಕ್ ಶ್ಯಾಡೋ' ಎಡಿಷನ್ ಕಾರಿನಲ್ಲಿ ಸುರಕ್ಷತೆಗಾಗಿ, ಆರು ಏರ್‌ಬ್ಯಾಗ್‌ಗಳು, ಎಬಿಎಸ್ ವಿಥ್ ಇಬಿಡಿ, ಬ್ರೇಕ್ ಅಸಿಸ್ಟ್, ಡೈನಾಮಿಕ್ ಟ್ರ್ಯಾಕ್ಷನ್ ಕಂಟ್ರೋಲ್, ಕಾರ್ನರಿಂಗ್ ಬ್ರೇಕ್ ಕಂಟ್ರೋಲ್, ಐಎಸ್‌ಒಫಿಕ್ಸ್ ಚೈಲ್ಡ್ ಸೀಟ್ ಆಂಕಾರೇಜ್‌ಗಳು, ಎಲೆಕ್ಟ್ರಿಕ್ ಪಾರ್ಕಿಂಗ್ ಬ್ರೇಕ್, ಡೈನಾಮಿಕ್ ಸ್ಟೆಬಿಲಿಟಿ ಕಂಟ್ರೋಲ್, ರಿಯರ್‌ವ್ಯೂ ಕ್ಯಾಮೆರಾ, ಎಲೆಕ್ಟ್ರಾನಿಕ್ ಡಿಫರೆನ್ಷಿಯಲ್ ಲಾಕ್ ಕಂಟ್ರೋಲ್ ಮತ್ತು ಇನ್ನೂ ಅನೇಕ ಫೀಚರ್ ಗಳನ್ನು ಒಳಗೊಂಡಿದೆ.
MOST READ: ಮಾರಾಟದಲ್ಲಿ ಹೊಸ ಮೈಲಿಗಲ್ಲು ಸಾಧಿಸಿದ ಹೋಂಡಾ ಆಮೇಜ್ ಕಾರು

ಬಿಎಂಡಬ್ಲ್ಯು 2-ಸೀರಿಸ್ ಗ್ರ್ಯಾನ್ ಕೂಪೆ ಬ್ಲ್ಯಾಕ್ ಶ್ಯಾಡೋ' ಎಡಿಷನ್ ನಲ್ಲಿ ಸ್ಟ್ಯಾಂಡರ್ಡ್‌ನಂತೆಯೇ 2.0 ಲೀಟರ್ ಡೀಸೆಲ್ ಎಂಜಿನ್ ಅನ್ನು ಅಳವಡಿಸಲಾಗಿದೆ. ಈ ಎಂಜಿನ್ 187 ಬಿಹೆಚ್‍ಪಿ ಪವರ್ ಮತ್ತು 400 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ.

ಈ ಎಂಜಿನ್ ನೊಂದಿಗೆ 8-ಸ್ಪೀಡ್ ಗೇರ್ ಬಾಕ್ಸ್ ನೊಂದಿಗೆ ಜೋಡಿಸಲಾಗಿದೆ. ಈ ಹೊಸ ಬ್ಲ್ಯಾಕ್ ಶ್ಯಾಡೋ' ಎಡಿಷನ್ ಕೇವಲ 7.5 ಸೆಕೆಂಡುಗಳಲ್ಲಿ 0 - 100 ಕಿ.ಮೀ ವೇಗವನ್ನು ಪಡೆದುಕೊಳ್ಳುತ್ತದೆ.

ಹೊಸ ಬಿಎಂಡಬ್ಲ್ಯು 2-ಸೀರಿಸ್ ಗ್ರ್ಯಾನ್ ಕೂಪೆ ಬ್ಲ್ಯಾಕ್ ಶ್ಯಾಡೋ' ಎಡಿಷನ್ ಸ್ಪೋರ್ಟಿ ಆವೃತ್ತಿಯಾಗಿದ್ದು, ಇದರಲ್ಲಿ ಎಂ ಪರ್ಫಾಮೆನ್ಸ್ ಪಾರ್ಟ್ಸ್ ಗಳು ಕೂಡ ಲಭ್ಯವಿರುತ್ತದೆ. ಈ ಹೊಸ ಬ್ಲ್ಯಾಕ್ ಶ್ಯಾಡೋ' ಎಡಿಷನ್ ಸೀಮಿತ ಆವೃತ್ತಿಯಾಗಿದೆ.