ಐಷಾರಾಮಿ ಬಿಎಂಡಬ್ಲ್ಯು 530ಐ ಸ್ಪೋರ್ಟ್ ಕಾರು ಬಿಡುಗಡೆ

ಬಿಎಂಡಬ್ಲ್ಯು ಇಂಡಿಯಾ ತನ್ನ ಹೊಸ 530ಐ ಸ್ಪೋರ್ಟ್ ರೂಪಾಂತರವನ್ನು ಭಾರತದಲ್ಲಿ ಬಿಡುಗಡೆಗೊಳಿಸಿದೆ. ಸ್ಥಳೀಯವಾಗಿ ಅಭಿವೃದ್ಧಿಪಡಿಸಲಾದ ಹೊಸ ಬಿಎಂಡಬ್ಲ್ಯು 530ಐ ಸ್ಪೋರ್ಟ್ ಕಾರಿನ ಬೆಲೆಯು ಭಾರತದ ಎಕ್ಸ್ ಶೋರೂಂ ಪ್ರಕಾರ ರೂ.55.40 ಲಕ್ಷಗಳಾಗಿದೆ.

ಬಿಎಂಡಬ್ಲ್ಯು 530ಐ ಸ್ಪೋರ್ಟ್ ಭಾರತೀಯ ಮಾರುಕಟ್ಟೆಯಲ್ಲಿ 5 ಸೀರಿಸ್ ಕಾರು ಆಗಿದೆ. ಈ ಕಾರಿನ ಮುಂಭಾಗದ ವಿನ್ಯಾಸದ ಬಗ್ಗೆ ಹೇಳುದಾದರೆ ಫ್ರಂಟ್ ಬಂಪರ್, ಹೊಸದಾಗಿ ವಿನ್ಯಾಸಗೊಳಿಸಲಾದ 17 ಇಂಚಿನ ಅಲಾಯ್ ವ್ಹೀಲ್, ಕ್ರೋಮ್‍-ಟಿಪ್ಡ್ ಎಕ್ಸಾಸ್ಟ್ ಪೈಪ್‌ಗಳು ಮತ್ತು ಟ್ವೀಕ್‍‍ಗಳ ಸೇರಿದಂತೆ ಇತರ ನವೀಕರಣಗಳನ್ನು ಮಾಡಲಾಗಿದೆ.

ಬಿ‍‍ಎಂಡಬ್ಲ್ಯು 530ಐ ಸ್ಪೋರ್ಟ್ ಕಾರಿನ ಇಂಟಿರಿಯರ್‍‍ನಲ್ಲಿ ಮೊಬೈಲ್ ಕನೆಕ್ಟಿವಿಟಿ, ಆ್ಯಪಲ್ ಕಾರ್‍‍‍ಪ್ಲೇ ಮತ್ತು ಆಂಡ್ರಾಯ್ಡ್ ಆಟೋ ಹೊಂದಾಣಿಕೆಯೊಂದಿಗೆ ದೊಡ್ಡದಾದ 10.25 ಇಂಚಿನ ಟಚ್‍‍ಸ್ಕ್ರೀನ್ ಇನ್ಫೋಟೇನ್‍‍‍ಮೆಂಟ್ ಸಿಸ್ಟಂ ಅನ್ನು ಹೊಂದಿದೆ. ಸೆಡಾನ್ ಗೆಸ್ಟರ್ ಕಂಟ್ರೋಲ್, ಆಂಬಿಯೆಂಟ್ ಲೈಟಿಂಗ್, ಡ್ಯುಯಲ್ ಟೋನ್ ಕ್ಯಾನ್ಪೆರಾ ಬೀಜ್ / ಬ್ಲ್ಯಾಕ್ ಸ್ಕೀಮ್ ಮತ್ತು 12-ಸ್ಪೀಕರ್ ಸಿಸ್ಟಂ ಅನ್ನು ಅಳವಡಿಸಲಾಗಿದೆ.

ಬಿಎಂಡಬ್ಲ್ಯು 530ಐ ಕಾರಿನಲ್ಲಿ ಬಿಎಸ್-6 ಪ್ರೇರಿತ 2.0 ಲೀಟರ್ ನಾಲ್ಕು ಸಿಲಿಂಡರ್ ಪೆಟ್ರೋಲ್ ಎಂಜಿನ್ ಅನ್ನು ಅಳವಡಿಸಲಾಗಿದೆ. ಈ ಎಂಜಿನ್ 250 ಬಿ‍‍ಹೆಚ್‍‍ಪಿ ಪವರ್ ಮತ್ತು 350 ಎನ್‍‍ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಈ ಎಂಜಿನ್‍‍ನೊಂದಿಗೆ 8 ಸ್ಪೀಡ್ ಆಟೋಮ್ಯಾಟಿಕ್ ಗೇರ್‍‍ಬಾಕ್ಸ್ ಅನ್ನು ಅಳವಡಿಸಲಾಗಿದೆ.

ಈ ಬಿಎಂಡಬ್ಲು 5 ಸೀರಿಸ್ ಕಾರು 6.1 ಸೆಕೆಂಡುಗಳಲ್ಲಿ 0-100 ಕಿ.ಮೀ ವೇಗವನ್ನು ಕ್ರಮಿಸುತ್ತದೆ. ಈ ಬಿಎಂಡಬ್ಲ್ಯು ಕಾರು ಅತ್ಯಾಧುನಿಕ ತಂತ್ರಜ್ಞಾನಗಳನ್ನೂ ಸಹ ಹೊಂದಿದೆ. ಈ ಕಾರಿನಲ್ಲಿ ಲಾಂಚ್ ಕಂಟ್ರೋಲ್, ಪ್ಯಾಡಲ್ ಶೀಫ್ಟರ್ ರೇರ್ ವ್ಹೀಲ್ ಡ್ರೈವ್ ಮತ್ತು ನಾಲ್ಕು ಡ್ರೈವಿಂಗ್ ಮೋಡ್‍‍ಗಳನ್ನು ಹೊಂದಿದೆ. ಈ ಕಾರಿನಲ್ಲಿ ಅಡಾಪ್ಟಿವ್ ಹೆಡ್‍‍‍ಲ್ಯಾಂಪ್‍‍ಗಳು, ಡೈನಾಮಿಕ್ ಸ್ಟೆಬಿಲಿಟಿ ಕಂಟ್ರೋಲ್, ಕಾರ್ನರಿಂಗ್ ಬ್ರೇಕ್ ರನ್-ಫ್ಲಾಟ್ ಟಯರ್ ಮತ್ತು ಡೈನಾಮಿಕ್ ಟ್ರ್ಯಾಕ್ಷನ್ ಕಂಟ್ರೋಲ್ ಅನ್ನು ಹೊಂದಿದೆ.

ಸ್ಥಳೀಯವಾಗಿ ಜೋಡಿಸಲಾದ ಹೊಸ ಬಿಎಂಡಬ್ಲ್ಯು 530 ಐ ಸ್ಪೋರ್ಟ್ ರೂಪಾಂತರವು ಈಗ ದೇಶಾದ್ಯಂತ ಕಂಪನಿಯ ಡೀಲರ್‍‍‍ಶಿಪ್‍‍ನಲ್ಲಿ ಲಭ್ಯವಿದೆ. ಈ ಐಷಾರಾಮಿ ಸೆಡಾನ್‍‍ನ ಬುಕ್ಕಿಂಗ್ ಮುಕ್ತಯವಾಗಿದೆ. ಶೀಘ್ರದಲ್ಲೇ ಈ ಕಾರಿನ ವಿತರಣೆಯನ್ನು ಪ್ರಾರಂಭಿಸಲಿದೆ. ಹೊಸ ಬಿಎಂಡಬ್ಲ್ಯು 5-ಸೀರಿಸ್ ಮಿನರಲ್ ವೈಟ್, ಬ್ಲ್ಯಾಕ್ ಸಫೈರ್, ಮೆಡಿಟರೇನಿಯನ್ ಬ್ಲೂ ಮತ್ತು ಬ್ಲೂಸ್ಟೋನ್ ಮೆಟಾಲಿಕ್ ಎಂಬ ನಾಲ್ಕು ಬಣ್ಣಗಳಲ್ಲಿ ಲಭ್ಯವಿದೆ.

ಬಿಎಂಡಬ್ಲ್ಯು 530ಐ ಸ್ಪೋರ್ಟ್ ಈಗ ಭಾರತೀಯ ಮಾರುಕಟ್ಟೆಯಲ್ಲಿ ಉತ್ತಮ 5 ಸೀರಿಸ್ ಸೆಡಾನ್ ಆಗಿದೆ. ಹೊಸ 5 ಸೀರಿಸ್ ಸೆಡಾನ್ ಕಾರು ಭಾರತೀಯ ಮಾರುಕಟ್ಟೆಯಲ್ಲಿ ಆಡಿ ಎ6, ಮರ್ಸಿಡಿಸ್ ಬೆಂಝ್ ಇ-ಕ್ಲಾಸ್ ಮತ್ತು ಜಾಗ್ವರ್ ಎಕ್ಸ್‌ಎಫ್ ಕಾರುಗಳಿಗೆ ಪೈಪೋಟಿಯನ್ನು ನೀಡುತ್ತದೆ.

Most Read Articles

Kannada
English summary
2020 BMW 530i Sport Launched In India: Prices Start At Rs 55.40 Lakh. Read in Kannada.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X