ಬಿಎಂಡಬ್ಲ್ಯು ಇಂಡಿಯಾ ಅಧ್ಯಕ್ಷ ಮತ್ತು ಸಿಇಒ ರುದ್ರತೇಜ್ ಸಿಂಗ್ ಇನ್ನಿಲ್ಲ

ಇಡೀ ದೇಶವೇ ಕರೋನಾ ವೈರಸ್ ಮಾಹಾಮಾರಿಯಿಂದಾಗಿ ಸ್ಥಬ್ತವಾಗಿದ್ದು, ಈ ನಡುವೆ ಆಟೋ ಉದ್ಯಮಕ್ಕೆ ವಿಷಾದಕರ ಸಂಗತಿಯೊಂದು ಆಘಾತವನ್ನುಂಟು ಮಾಡಿದೆ. ಅತಿ ಕಿರಿಯ ವಯಸ್ಸಿನಲ್ಲೇ ಐಷಾರಾಮಿ ಕಾರು ಕಂಪನಿಯೊಂದರ ಮುಖ್ಯಸ್ಥರಾಗಿದ್ದ ರುದ್ರತೇಜ್ ಸಿಂಗ್(46) ಹೃದಯಾಘಾತದಿಂದ ಮೃತಪಟ್ಟಿದ್ದಾರೆ.

ಬಿಎಂಡಬ್ಲ್ಯು ಇಂಡಿಯಾ ಅಧ್ಯಕ್ಷ ಮತ್ತು ಸಿಇಒ ರುದ್ರತೇಜ್ ಸಿಂಗ್ ಇನ್ನಿಲ್ಲ

ಬಿಎಂಡಬ್ಲ್ಯು ಇಂಡಿಯಾ ಅಧ್ಯಕ್ಷ ಮತ್ತು ಸಿಇಒ ಆಗಿ ಕಳೆದ ವರ್ಷ ಅಗಸ್ಟ್ 1ರಂದು ನೇಮಕಗೊಂಡಿದ್ದ ರುದ್ರತೇಜ್ ಸಿಂಗ್ ಅತಿಕಡಿಮೆ ಅವಧಿಯಲ್ಲಿ ಹಲವಾರು ಬದಲಾವಣೆ ತರುವ ಮೂಲಕ ಐಷಾರಾಮಿ ಕಾರುಗಳ ಮಾರಾಟದಲ್ಲಿ ಮಹತ್ವದ ಬದಲಾವಣೆ ಕಾರಣರಾಗಿದ್ದರು. ಆದರೆ ಕಳೆದ ಒಂದು ತಿಂಗಳಿನಿಂದ ತೀವ್ರ ಆಘಾತಕ್ಕೆ ಒಳಾಗಿದ್ದ ರುದ್ರತೇಜ್ ಸಿಂಗ್ ಅವರು ಇಂದು ತೀವ್ರ ಹೃದಾಯಘಾತದಿಂದ ಸಾವನ್ನಪ್ಪಿದ್ದು, ರೂಢಿ ಅವರ ನಿಧನಕ್ಕೆ ಇಡೀ ಆಟೋ ಉದ್ಯಮ ಅನೇಕ ಗಣ್ಯರು ಸಂತಾಪ ಸೂಚಿಸಿದ್ದಾರೆ.

ಬಿಎಂಡಬ್ಲ್ಯು ಇಂಡಿಯಾ ಅಧ್ಯಕ್ಷ ಮತ್ತು ಸಿಇಒ ರುದ್ರತೇಜ್ ಸಿಂಗ್ ಇನ್ನಿಲ್ಲ

ಕಿರಿಯ ವಯಸ್ಸಿನಲ್ಲೇ ಹಲವಾರು ಅತ್ಯುನ್ನತ ಜವಾಬ್ದಾರಿಯನ್ನು ವಹಿಸಿಕೊಂಡು ಉನ್ನತ ಸ್ಥಾನಕ್ಕೇರಿದ್ದ ರುದ್ರತೇಜ್ ಅವರು ಇತ್ತೀಚೆಗೆ ರಾಯಲ್ ಎನ್‌ಫೀಲ್ಡ್ ಗ್ಲೊಬ್ಲಲ್ ಬೈಕ್ ಮಾರಾಟ ವಿಭಾಗದ ಅಧ್ಯಕ್ಷ ಸ್ಥಾನದಿಂದ ಬಿಎಂಡಬ್ಲ್ಯು ಇಂಡಿಯಾ ಅಧ್ಯಕ್ಷ ಸ್ಥಾನಕ್ಕೆ ನೇಮಕಗೊಂಡಿದ್ದರು.

MOST READ: ಕರೋನಾ ಕಾರಣಕ್ಕೆ ಕಾರಿನಲ್ಲೇ ತಂಗುತ್ತಿರುವ ವೈದ್ಯ..!

ಬಿಎಂಡಬ್ಲ್ಯು ಇಂಡಿಯಾ ಅಧ್ಯಕ್ಷ ಮತ್ತು ಸಿಇಒ ರುದ್ರತೇಜ್ ಸಿಂಗ್ ಇನ್ನಿಲ್ಲ

ಆಟೋ ಉದ್ಯಮದಲ್ಲಿ ರೂಢಿ ಎಂದೇ ಚಿರಪರಿಚಿತರಾಗಿರುವ ರುದ್ರತೇಜ್ ಅವರು ಆಟೋ ಉದ್ಯಮದ ಜೊತೆಗೆ ವಿವಿಧ ಕ್ಷೇತ್ರಗಳಲ್ಲೂ 25 ವರ್ಷಗಳ ನಾಯಕತ್ವದ ಜವಾಬ್ದಾರಿಯನ್ನು ಸಮರ್ಥವಾಗಿ ನಿಭಾಯಿಸಿದ್ದರು.

ಬಿಎಂಡಬ್ಲ್ಯು ಇಂಡಿಯಾ ಅಧ್ಯಕ್ಷ ಮತ್ತು ಸಿಇಒ ರುದ್ರತೇಜ್ ಸಿಂಗ್ ಇನ್ನಿಲ್ಲ

ಆಟೋ ಉದ್ಯಮಕ್ಕೂ ಬರುವ ಮುನ್ನ ಸುಮಾರು 16 ವರ್ಷಗಳ ಕಾಲ ಯೂನಿಲಿವರ್ ಸೇರಿದಂತೆ ಹಲವಾರು ಅಂತರಾಷ್ಟ್ರೀಯ ಕಂಪನಿಗಳಲ್ಲಿ ಅಧ್ಯಕ್ಷ ಸ್ಥಾನವಹಿಸಿಕೊಂಡಿದ್ದ ರುದ್ರತೇಜ್ ಅವರು ಟ್ರಯಂಫ್ ಮೋಟಾರ್‌ಸೈಕಲ್ ಮತ್ತು ರಾಯಲ್ ಎನ್‌ಫೀಲ್ದ್ ಬೈಕ್ ಮಾರಾಟ ವಿಭಾಗದಲ್ಲೂ ಭಾರೀ ಬದಲಾವಣೆಗೆ ಕಾರಣರಾಗಿದ್ದರು.

MOST READ: ಲಾಕ್ ಡೌನ್ ಎಫೆಕ್ಟ್- ಮಾರ್ಗ ಮಧ್ಯದಲ್ಲೇ ಉಳಿದ ಸಾವಿರಾರು ಕೋಟಿ ಮೌಲ್ಯದ ಹೊಸ ವಾಹನಗಳು

ಬಿಎಂಡಬ್ಲ್ಯು ಇಂಡಿಯಾ ಅಧ್ಯಕ್ಷ ಮತ್ತು ಸಿಇಒ ರುದ್ರತೇಜ್ ಸಿಂಗ್ ಇನ್ನಿಲ್ಲ

ತದನಂತರ ಇತ್ತೀಚೆಗೆ ಬಿಎಂಡಬ್ಲ್ಯು ಇಂಡಿಯಾ ವಿಭಾಗದ ಮುಖ್ಯಸ್ಥರಾಗಿ ನೇಮಕಗೊಂಡಿದ್ದ ರೂಢಿ, ಸಂಕಷ್ಟದ ಸಮಯದಲ್ಲೂ ಕೆಲವು ಆತಂರಿಕ ಬದಲಾವಣೆಗಳನ್ನು ತರುವ ಮೂಲಕ ಐಷಾರಾಮಿ ಕಾರು ಮಾರಾಟದಲ್ಲಿ ಎರಡನೇ ಸ್ಥಾನವನ್ನು ಕಾಯ್ದುಕೊಳ್ಳುವಲ್ಲಿ ಸಾಕಷ್ಟು ಶ್ರಮವಹಿಸಿದ್ದರು.

ಬಿಎಂಡಬ್ಲ್ಯು ಇಂಡಿಯಾ ಅಧ್ಯಕ್ಷ ಮತ್ತು ಸಿಇಒ ರುದ್ರತೇಜ್ ಸಿಂಗ್ ಇನ್ನಿಲ್ಲ

ದೆಹಲಿ ವಿಶ್ವವಿದ್ಯಾಲಯದಿಂದ ವಾಣಿಜ್ಯ ವಿಭಾಗದಲ್ಲಿ ಪದವಿ ಪಡೆದಿದ್ದ ರೂಢಿ ಅವರು ತದನಂತರ ಗಾಜಿಯಾಬಾದ್‌‌ನಲ್ಲಿ ಮಾರುಕಟ್ಟೆ ಮತ್ತು ಹಣಕಾಸು ವಿಭಾಗದಲ್ಲಿ ಎಂಬಿವಿ ಪದವಿ ಪಡೆದುಕೊಂಡಿದ್ದರು.

MOST READ: ಕರೋನಾ ವೈರಸ್ ವಿರುದ್ದದ ಹೋರಾಟಕ್ಕಾಗಿ ರೂ.100 ಕೋಟಿ ದೇಣಿಗೆ ನೀಡಿದ ಬಜಾಜ್ ಗ್ರೂಪ್

ಬಿಎಂಡಬ್ಲ್ಯು ಇಂಡಿಯಾ ಅಧ್ಯಕ್ಷ ಮತ್ತು ಸಿಇಒ ರುದ್ರತೇಜ್ ಸಿಂಗ್ ಇನ್ನಿಲ್ಲ

ಆದರೆ ಸಂಕಷ್ಟಕರ ಸಮಯದಲ್ಲಿ ರೂಢಿಯವರು ಸಾವಿನ ಸುದ್ದಿಯು ಬಿಎಂಡಬ್ಲ್ಯು ಇಂಡಿಯಾ ಕಂಪನಿಗೆ ಆಘಾತ ಉಂಟು ಮಾಡಿದ್ದು, ಹಣಕಾಸು ವಿಭಾಗದ ಮುಖ್ಯಸ್ಥ ಅರ್ಲಿಂಡೋ ಟಿಕ್ಸೆರ್ ಅವರನ್ನು ಹಂಗಾಮಿ ಅಧ್ಯಕ್ಷರನ್ನಾಗಿ ನೇಮಕ ಮಾಡಲಾಗಿದೆ.

Most Read Articles

Kannada
English summary
BMW India President & CEO, Rudratej Singh Passes Away: Succumbs To Cardiac Arrest. Read in Kannada.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X