Just In
Don't Miss!
- Movies
ಹರ ಜಾತ್ರೆಯಲ್ಲಿ ಪುನೀತ್ ರಾಜ್ ಕುಮಾರ್; ಅಪ್ಪು ಹಾಡು ಕೇಳಿ ಸಂಭ್ರಮಿಸಿದ ಅಭಿಮಾನಿಗಳು
- News
ಕೇಂದ್ರ ಸರ್ಕಾರ ಎನ್ಐಎ ನೋಟಿಸ್ ಮೂಲಕ ಕಿರುಕುಳ ನೀಡುತ್ತಿದೆ:ರೈತರ ಆರೋಪ
- Finance
ಸಿಲಿಂಡರ್ ಬುಕ್ ಮಾಡಿದ ಎರಡು ಗಂಟೆಯೊಳಗೆ ಮನೆ ಬಾಗಿಲಿಗೆ ಡೆಲಿವರಿ
- Sports
ಆಸಿಸ್ ಬೌಲರ್ಗಳಿಗೆ ಪಾಂಟಿಂಗ್ ಚಾಟಿ: ಶಾರ್ದೂಲ್- ಸುಂದರ್ ಆಟಕ್ಕೆ ಮೆಚ್ಚುಗೆ
- Lifestyle
ಸಂಜೆ ಸ್ನ್ಯಾಕ್ಸ್ ಗೆ ಹೇಳಿಮಾಡಿಸಿದ್ದು ಈ ತಡ್ಕಾ ಮಸಾಲೆ ಮ್ಯಾಗಿ
- Education
BEL Recruitment 2021: 205 ಟೆಕ್ನೀಶಿಯನ್ ಅಪ್ರೆಂಟಿಸ್ ಹುದ್ದೆಗಳಿಗೆ ಅರ್ಜಿ ಆಹ್ವಾನ
- Technology
ಒನ್ಪ್ಲಸ್ ನಾರ್ಡ್ ಜುಲೈ 15 ರಿಂದ ಅಮೆಜಾನ್ ತಾಣದಲ್ಲಿ ಪ್ರಿ-ಆರ್ಡರ್ಗೆ ಲಭ್ಯವಿದೆ; ಖರೀದಿಸುವಲ್ಲಿ ಮೊದಲಿಗರಾಗಿರಿ!
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
ಸ್ಪಾಟ್ ಟೆಸ್ಟ್ನಲ್ಲಿ ಕಾಣಿಸಿಕೊಂಡ ಬಿಎಸ್-6 ಟಾಟಾ ಟಿಯಾಗೋ ಡೀಸೆಲ್ ಆವೃತ್ತಿ
ಟಾಟಾ ಮೋಟಾರ್ಸ್ ಈ ವರ್ಷದ ಜನವರಿ ತಿಂಗಳ ಕೊನೆಯಲ್ಲಿ ಬಿಎಸ್-6 ಟಿಯಾಗೋ ಮತ್ತು ಟಿಗೋರ್ ಫೇಸ್‍ಲಿಫ್ಟ್ ಮಾದರಿಗಳನ್ನು ಬಿಡುಗಡೆಗೊಳಿಸಿದ್ದರು. ಹೊಸ ಟಾಟಾ ಟಿಯಾಗೋ ಕಾರಿನ ಆರಂಭಿಕ ಬೆಲೆಯು ಭಾರತದ ಎಕ್ಸ್ ಶೋರೂಂ ಪ್ರಕಾರ ರೂ.4.60 ಲಕ್ಷಗಳಾಗಿದೆ.

ಬಿಎಸ್-6 ಮಾಲಿನ್ಯ ನಿಯಮಕ್ಕೆ ಅನುಗುಣವಾಗಿ ಕೇವಲ ಪೆಟ್ರೋಲ್ ಮಾದರಿಯ ಟಿಯಾಗೋವನ್ನು ಬಿಡುಗಡೆಗೊಳಿಸಿದ್ದರು. ಟಿಯಾಗೋ ಡೀಸೆಲ್ ಆವೃತ್ತಿಯ ಬೇಡಿಕೆಯು ಕಡಿಮೆಯಾಗಿರುವುದರಿಂದ ಸ್ಥಗಿತಗೊಳಿಸಿದ್ದರು. ಆದರೆ ಇದೀಗ ಟಿಯಾಗೋ ಡೀಸೆಲ್ ಆವೃತ್ತಿಯು ಸ್ಪಾಟ್ ಟೆಸ್ಟ್ ನಡೆಸುತ್ತಿರುವುದು ಕಂಡು ಬಂದಿದೆ. ಆದರೆ ಇದು ಟಿಯಗೋ ಡೀಸೆಲ್ ಆವೃತ್ತಿ ಎಂಬುದು ಸಂಪೂರ್ಣವಾಗಿ ಖಚಿತವಾಗಿಲ್ಲ. ಆದರೆ ರಶ್ಲೇನ್ ಇದು ಟಾಟಾ ಟಿಯಾಗೋ ಡೀಸೆಲ್ ಆವೃತ್ತಿಯಾಗಿರಬಹುದು ಎಂದು ವರದಿ ಮಾಡಲಾಗಿದೆ.

ಟಾಟಾ ಟೊಯಾಗೋ ಕಾರಿನಲ್ಲಿ ಮುಂಭಾಗದಲ್ಲಿರುವ ಸ್ಲಿಮ್ಮರ್ ಹೆಡ್‍ಲ್ಯಾಂಪ್‍ಗಳು ಮತ್ತು ಫ್ರಂಟ್ ಗ್ರಿಲ್ ಸೇರಿವೆ. ಇವುಗಳನ್ನು ಕ್ರೋಮ್‍ನಲ್ಲಿ ಟಾಟಾ ಅವರ ಸಿಗ್ನೇಚರ್ ಹ್ಯುಮಾನಿಟಿ ಲೈನ್ ಮೂಲಕ ಅಂಡರ್‍ಲೈನ್ ಮಾಡಲಾಗಿದೆ. ಈ ಕಾರಿನ ಮುಂಭಾಗದಲ್ಲಿ ಹೊಸ ಬಂಪರ್ ಅನ್ನು ಅಳವಡಿಸಲಾಗಿದೆ. ಇನ್ನೂ ನವೀಕರಿಸಿದ ಏರ್‍ಡ್ಯಾಮ್ ಮತ್ತು ಫಾಂಗ್ ಲ್ಯಾಂಪ್ ಗಳನ್ನು ನೀಡಲಾಗಿದೆ.
MOST READ: ಭರ್ಜರಿಯಾಗಿ ಮಾರಾಟವಾಯ್ತು ಫೋಕ್ಸ್‌ವ್ಯಾಗನ್ ಟಿ-ರಾಕ್ ಎಸ್‍ಯುವಿ

ಟಿಯಾಗೋ ಕಾರಿನ ಮುಂಭಾಗಲ್ಲಿ ಪಾದಚಾರಿಗಳ ಸುರಕ್ಷತಾ ಮಾನದಂಡಗಳಿಗೆ ಅನುಗುಣವಾಗಿ ರೈಸಡ್ ಬಾನೆಟ್ ಅನ್ನು ನೀಡಲಾಗಿದೆ. ಈ ಕಾರಿನ ಹಿಂಭಾಗದಲ್ಲಿ ಮರುವಿನ್ಯಾಸಗೊಳಿಸಲಾದ ಬಂಪರ್ ಮತ್ತು ಟೇಲ್‍ಲೈಟ್‍ಗಳಿವೆ.

ಇನ್ನು ಕಾರಿನ ಇಂಟಿರಿಯರ್‍ನಲ್ಲಿ ಫ್ಯಾಬ್ರಿಕ್ ಸೀಟ್‍ಗಳನ್ನು ಒಳಗೊಂಡಿದೆ. ಇನ್ನು ಆಂಡ್ರಾಯ್ಡ್ ಆಟೋ ಮತ್ತು ಆ್ಯಪಲ್ ಕಾರ್‍ಪ್ಲೇ ಅನ್ನು ಅಳವಡಿಸಲಾಗಿದೆ. ಇದರೊಂದಿಗೆ ಹರ್ಮನ್ ಆಡಿಯೋ, ಕೈಮೆಂಟ್ ಕಂಟ್ರೋಲ್ ಸಿಸ್ಟಂ, ಡ್ರೈವ್ ಮೋಡ್‍ಗಳು ಮತ್ತು ಟಚ್‍ಸ್ಕ್ರೀನ್ ಇನ್ಫೋಟೇನ್‍ಮೆಂಟ್ ಸಿಸ್ಟಂ ಅನ್ನು ಹೊಂದಿದೆ. ಕಾರಿನಲ್ಲಿ 15 ಇಂಚಿನ ಅಲಾಯ್ ವ್ಹೀಲ್‍ಗಳನ್ನು ಅಳವಡಿಸಲಾಗಿದೆ.
MOST READ: ಇತಿಹಾಸದ ಪುಟ ಸೇರಿದ ಫೋಕ್ಸ್‌ವ್ಯಾಗನ್ ಎಮಿಯೊ ಕಾರು

2020ರ ಟಾಟಾ ಟಿಯಾಗೋ ಕಾರಿಗೆ ಗ್ಲೋಬಲ್ ಎನ್‍ಸಿಎಪಿ ಕ್ರ್ಯಾಶ್ ಟೆಸ್ಟ್ ನಲ್ಲಿ ನಾಲ್ಕು ಸ್ಟಾರ್ ರೇಟಿಂಗ್ ಅನ್ನು ಪಡೆದುಕೊಂಡಿದೆ. ಕ್ರ್ಯಾಶ್ ಟೆಸ್ಟ್ ನಲ್ಲಿ ಅಡಾಲ್ಟ್ ಅಕ್ವಿಪ್ಯಾಟ್ ಪ್ರೋಡಕ್ಷನ್ ನಲ್ಲಿ 12.52/17 ಪಾಯಿಂಟ್ ಅನ್ನು ಪಡೆದುಕೊಂಡಿದೆ.

ಚೈಲ್ಡ್ ಅಕ್ವಿಪ್ಯಾಟ್ ಪ್ರೊಟಕ್ಷನ್‍ನಲ್ಲಿ 34.15 ಪಾಯಿಂಟ್ ಪಡೆದು ಒಟ್ಟಾಗಿ 19 ಅಂಕವನ್ನು ಪಡೆದುಕೊಂಡಿದೆ. ಈ ಎರಡೂ ಕಾರುಗಳಿಲ್ಲಿಯೂ ಸುರಕ್ಷತೆಗೆ ಹೆಚ್ಚಿನ ಪ್ರಾಮುಖ್ಯತೆಯನ್ನು ನೀಡಲಾಗಿದೆ. ಸುರಕ್ಷತೆಗಾಗಿ ಎರಡು ಕಾರುಗಳಲ್ಲಿ ಸ್ಟ್ಯಾಂಡರ್ಡ್ ಸೇಫ್ಟಿ ಕಿಟ್‍ನಲ್ಲಿ ಡ್ಯುಯಲ್ ಏರ್‍ಬ್ಯಾಗ್, ಎಬಿಎಸ್ ಜೊತೆ ಇಬಿಡಿ, ಕಾರ್ನರ್ ಸ್ಟಿಬಿಲಿಟಿ ಕಂಟ್ರೋಲ್ ಮತ್ತು ರೇರ್ ಪಾರ್ಕಿಂಗ್ ಸೆನ್ಸಾರ್‍ಗಳಿವೆ.
MOST READ: ಮರ್ಸಿಡಿಸ್ ಬೆಂಝ್ ಜಿಎಲ್ಇ ಎಸ್‍ಯುವಿಯ ಎರಡು ಹೊಸ ರೂಪಾಂತರಗಳು ಬಿಡುಗಡೆ

ಇನ್ನು ಟಾಟಾ ಟಿಯಾಗೋ ಪೆಟ್ರೋಲ್ ಆವೃತಿಯಲ್ಲಿ 1.2 ಲೀಟರ್ ಮೂರು ಸಿಲಿಂಡರ್ ಬಿಎಸ್-6 ಎಂಜಿನ್ ಅನ್ನು ಅಳವಡಿಸಲಾಗಿವೆ. ಈ ಎಂಜಿನ್ 86 ಬಿಹೆಚ್‍ಪಿ ಪವರ್ ಮತ್ತು 113 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಈ ಎಂಜಿನ್‍ನೊಂದಿಗೆ 5 ಸ್ಪೀಡ್ ಮ್ಯಾನುವಲ್ ಅಥವಾ ಎಎಂಟಿ ಗೇರ್‍ಬಾಕ್ಸ್ ಅನ್ನು ಅಳವಡಿಸಲಾಗಿದೆ.

ಟಿಯಾಗೋ ಕಾರಿನ 1.5 ಲೀಟರ್ ಡೀಸೆಲ್ ಎಂಜಿನ್ ಅನ್ನು ಸ್ಥಗಿತಗೊಳಿಸದ್ದರು. ಹೊಸ ಟಿಯಾಗೋ ಡೀಸೆಲ್ ಆವೃತ್ತಿಯಲ್ಲಿ ಅಳವಡಿಸುವ ಎಂಜಿನ್ ಬಗ್ಗೆ ಯಾವುದೇ ಮಾಹಿತಿಗಳು ಬಹಿರಂಗವಾಗಿಲ್ಲ. ಟಿಯಾಗೊ ಕಾರು ದೇಶಿಯ ಮಾರುಕಟ್ಟೆಯಲ್ಲಿ ಹ್ಯುಂಡೈ ಸ್ಯಾಂಟ್ರೊ, ಮಾರುತಿ ಸುಜುಕಿ ಸೆಲೆರಿಯೊ ಮತ್ತು ದಟ್ಸನ್ ಗೋ ಕಾರುಗಳಿಗೆ ಪೈಪೋಟಿ ನೀಡುತ್ತದೆ.