ಬಿ‍ಎಸ್ 6 ಕಾರುಗಳ ಬುಕ್ಕಿಂಗ್ ಶುರುಮಾಡಿದ ಟಾಟಾ ಮೋಟಾರ್ಸ್

ಭಾರತ ಮೂಲದ ಕಾರು ತಯಾರಕ ಕಂಪನಿಯಾದ ಟಾಟಾ ಮೋಟಾರ್ಸ್ ತನ್ನ ಸರಣಿಯ ಕಾರುಗಳನ್ನು ಬಿಎಸ್ 6 ಎಂಜಿನ್‍ನೊಂದಿಗೆ ಅಪ್‍‍ಗ್ರೇಡ್‍‍ಗೊಳಿಸಿದೆ. ಈ ಕಾರುಗಳಲ್ಲಿ ಟಿಯಾಗೋ, ಟಿಗೋರ್ ಹಾಗೂ ನೆಕ್ಸಾನ್‍‍ಗಳು ಸೇರಿವೆ. ಟಾಟಾ ಮೋಟಾರ್ಸ್ ಈ ಕಾರುಗಳ ಬುಕ್ಕಿಂಗ್‍‍ಗಳನ್ನು ಆರಂಭಿಸಿದೆ.

ಬಿ‍ಎಸ್ 6 ಕಾರುಗಳ ಬುಕ್ಕಿಂಗ್ ಶುರುಮಾಡಿದ ಟಾಟಾ ಮೋಟಾರ್ಸ್

ಈ ಕಾರುಗಳನ್ನು ಕಂಪನಿಯ ವೆಬ್‍‍ಸೈಟ್ ಮೂಲಕ ಬುಕ್ಕಿಂಗ್ ಮಾಡಬಹುದು. ರೂ.11,000 ಪಾವತಿಸಿ ಈ ಕಾರುಗಳನ್ನು ಬುಕ್ಕಿಂಗ್ ಮಾಡಬಹುದಾಗಿದೆ. ಈ ಕಾರುಗಳ ಬಿಡುಗಡೆಯೊಂದಿಗೆ ಟಾಟಾ ಮೋಟಾರ್ಸ್ ಕಂಪನಿಯೂ ಸಹ ಬಿ‍ಎಸ್ 6 ಮಾಲಿನ್ಯ ನಿಯಮಗಳನ್ನು ಅಳವಡಿಸಿಕೊಂಡಂತಾಗಿದೆ. ಆದರೆ ಟಾಟಾ ಮೋಟಾರ್ಸ್ ಈ ಕಾರುಗಳ ಬೆಲೆಯನ್ನು ಇನ್ನೂ ಬಹಿರಂಗಪಡಿಸಿಲ್ಲ.

ಬಿ‍ಎಸ್ 6 ಕಾರುಗಳ ಬುಕ್ಕಿಂಗ್ ಶುರುಮಾಡಿದ ಟಾಟಾ ಮೋಟಾರ್ಸ್

ಬಿ‍ಎಸ್ 6 ಎಂಜಿನ್ ಹೊಂದಿರುವ ಟಿಯಾಗೋ, ಟಿಗೋರ್ ಹಾಗೂ ನೆಕ್ಸಾನ್ ಕಾರುಗಳನ್ನು ಮಾರುಕಟ್ಟೆಯಲ್ಲಿರುವ ಬಿ‍ಎಸ್ 4 ಕಾರುಗಳಿಗಿಂತ ಹೆಚ್ಚಿನ ಪ್ರಮಾಣದಲ್ಲಿ ಅಪ್‍‍ಡೇಟ್‍‍ಗೊಳಿಸಲಾಗಿದ್ದು, ಸುಧಾರಿತ ಟೆಕ್ನಾಲಜಿಗಳನ್ನು ಅಳವಡಿಸಲಾಗಿದೆ.

ಬಿ‍ಎಸ್ 6 ಕಾರುಗಳ ಬುಕ್ಕಿಂಗ್ ಶುರುಮಾಡಿದ ಟಾಟಾ ಮೋಟಾರ್ಸ್

ಟಾಟಾ ಮೋಟಾರ್ಸ್ ಕಂಪನಿಯು ಬಿ‍ಎಸ್ 6 ಎಂಜಿನ್ ಹೊಂದಿರುವ ಈ ಮೂರು ಕಾರುಗಳನ್ನು ಮುಂದಿನ ತಿಂಗಳು ನಡೆಯಲಿರುವ 2020ರ ಆಟೋ ಎಕ್ಸ್ ಪೋದಲ್ಲಿ ಪ್ರದರ್ಶಿಸುವ ಸಾಧ್ಯತೆಗಳಿವೆ. ಟಾಟಾ ಮೋಟಾರ್ಸ್‍‍ನ ಪ್ಯಾಸೆಂಜರ್ ವೆಹಿಕಲ್ ಬಿಸಿನೆಸ್ ಯುನಿಟ್ ಅಧ್ಯಕ್ಷರಾದ ಮಾಯಂಕ್ ಪಾರೀಖ್‍‍ರವರು ಈ ಬಗ್ಗೆ ಮಾತನಾಡಿದರು.

ಬಿ‍ಎಸ್ 6 ಕಾರುಗಳ ಬುಕ್ಕಿಂಗ್ ಶುರುಮಾಡಿದ ಟಾಟಾ ಮೋಟಾರ್ಸ್

ಟಾಟಾ ಮೋಟಾರ್ಸ್ ಬಿ‍ಎಸ್ 6 ಎಂಜಿನ್ ಕಾರುಗಳನ್ನು ಅಭಿವೃದ್ಧಿಪಡಿಸಲು ಹೆಚ್ಚು ಶ್ರಮ ವಹಿಸುತ್ತಿದೆ. ನಾವು ಇದರಲ್ಲಿ ಯಶಸ್ವಿಯಾಗಿರುವುದಕ್ಕೆ ಹೆಮ್ಮೆ ಪಡುತ್ತೇವೆ. ನಾವು ನಮ್ಮ ಸರಣಿಯ ಎಲ್ಲಾ ಕಾರುಗಳನ್ನು ಬಿ‍ಎಸ್ 6 ನಿಯಮಗಳಿಗೆ ತಕ್ಕಂತೆ ಅಪ್‍‍ಡೇಟ್‍‍ಗೊಳಿಸಿ ಬಿಡುಗಡೆಗೊಳಿಸುತ್ತಿದ್ದೇವೆ. ಇದರಿಂದಾಗಿ ಭಾರತದಲ್ಲಿ ವಾಯುಮಾಲಿನ್ಯವನ್ನು ಕಡಿಮೆಗೊಳಿಸಲು ಟಾಟಾ ಮೋಟಾರ್ಸ್ ತನ್ನದೇ ಆದ ಕೊಡುಗೆಯನ್ನು ನೀಡಲಿದೆ ಎಂದು ಅವರು ಹೇಳಿದರು.

ಬಿ‍ಎಸ್ 6 ಕಾರುಗಳ ಬುಕ್ಕಿಂಗ್ ಶುರುಮಾಡಿದ ಟಾಟಾ ಮೋಟಾರ್ಸ್

ಬಿ‍ಎಸ್ 6 ಎಂಜಿನ್ ಹೊಂದಿರುವ ಹೊಸ ಟಿಯಾಗೋ ಕಾರು ಡಿಜಿಟಲ್ ಇನ್ಸ್ ಟ್ರೂಮೆಂಟ್ ಕ್ಲಸ್ಟರ್, 7 ಇಂಚಿನ ಟಚ್‍‍ಸ್ಕ್ರೀನ್ ಇನ್ಫೋಟೇನ್‍‍ಮೆಂಟ್ ಸಿಸ್ಟಂ ಹಾಗೂ ಆಟೋಮ್ಯಾಟಿಕ್ ಕ್ಲೈಮೆಟ್ ಕಂಟ್ರೋಲ್‍‍ಗಳನ್ನು ಹೊಂದಿದೆ.

ಬಿ‍ಎಸ್ 6 ಕಾರುಗಳ ಬುಕ್ಕಿಂಗ್ ಶುರುಮಾಡಿದ ಟಾಟಾ ಮೋಟಾರ್ಸ್

ಈ ಕಾರಿನಲ್ಲಿ ಅಳವಡಿಸಲಾಗಿರುವ 1.2 ಲೀಟರಿನ 3 ಸಿಲಿಂಡರ್ ರೆವೊಟ್ರಾನ್ ಎಂಜಿನ್ 83 ಬಿಹೆಚ್‍‍ಪಿ ಪವರ್ 114 ಎನ್‍ಎಂ ಟಾರ್ಕ್ ಉತ್ಪಾದಿಸುತ್ತದೆ. ಈ ಎಂಜಿನ್‍‍ನಲ್ಲಿ 5 ಸ್ಪೀಡಿನ ಮ್ಯಾನುವಲ್ ಹಾಗೂ ಆಟೋಮ್ಯಾಟಿಕ್ ಗೇರ್‍‍ಬಾಕ್ಸ್ ಅಳವಡಿಸಲಾಗಿದೆ.

ಬಿ‍ಎಸ್ 6 ಕಾರುಗಳ ಬುಕ್ಕಿಂಗ್ ಶುರುಮಾಡಿದ ಟಾಟಾ ಮೋಟಾರ್ಸ್

ಮಾರುಕಟ್ಟೆಯಲ್ಲಿರುವ ಬಿ‍ಎಸ್ 4 ಎಂಜಿನ್ ಹೊಂದಿರುವ ಟಿಯಾಗೋ ಕಾರಿನ ಬೆಲೆಯು ಎಕ್ಸ್ ಶೋರೂಂ ದರದಂತೆ ರೂ.4.40ಲಕ್ಷದಿಂದ ರೂ.6.37 ಲಕ್ಷಗಳಾಗಿದೆ. ಟಾಟಾ ಮೋಟಾರ್ಸ್ ಟಿಯಾಗೋದ 1.0 ಲೀಟರಿನ ಡೀಸೆಲ್ ಎಂಜಿನ್ ಉತ್ಪಾದನೆಯನ್ನು ಸ್ಥಗಿತಗೊಳಿಸಲಿದೆ.

ಬಿ‍ಎಸ್ 6 ಕಾರುಗಳ ಬುಕ್ಕಿಂಗ್ ಶುರುಮಾಡಿದ ಟಾಟಾ ಮೋಟಾರ್ಸ್

ಬಿ‍ಎಸ್ 6 ಎಂಜಿನ್ ಹೊಂದಿರುವ ಟಾಟಾ ಟಿಗೋರ್ ಕಾರಿನಲ್ಲಿರುವ ವಿನ್ಯಾಸದಲ್ಲಿ ಬದಲಾವಣೆ ಮಾಡಲಾಗಿದೆ. ಈ ಕಾರಿನಲ್ಲಿ ಶಾರ್ಪ್ ಹೆಡ್‍‍ಲೈಟ್ ಹೊಂದಿರುವ ಎಲ್‍ಇ‍‍ಡಿ ಡಿ‍ಆರ್‍ಎಲ್, ಹೊಸ ಫ್ರಂಟ್ ಬಂಪರ್ ಹಾಗೂ ಹೊಸ ಫಾಗ್ ಲ್ಯಾಂಪ್‍‍ಗಳನ್ನು ಅಳವಡಿಸಲಾಗಿದೆ. ಈ ಕಾರಿನ ಇಂಟಿರಿಯರ್‍‍ನಲ್ಲಿ 7 ಇಂಚಿನ ಟಚ್‍‍ಸ್ಕ್ರೀನ್ ಅಳವಡಿಸಲಾಗಿದೆ.

ಬಿ‍ಎಸ್ 6 ಕಾರುಗಳ ಬುಕ್ಕಿಂಗ್ ಶುರುಮಾಡಿದ ಟಾಟಾ ಮೋಟಾರ್ಸ್

ಈ ಕಾರ್ ಅನ್ನು 1.2 ಲೀಟರಿನ 3 ಸಿಲಿಂಡರ್ ರೆವೊಟ್ರಾನ್ ಎಂಜಿನ್‍‍ನೊಂದಿಗೆ ಮಾರಾಟ ಮಾಡುವ ಸಾಧ್ಯತೆಗಳಿವೆ. ಈ ಎಂಜಿನ್ 84 ಬಿ‍‍ಹೆಚ್‍‍ಪಿ ಪವರ್ ಹಾಗೂ 114 ಎನ್‍ಎಂ ಟಾರ್ಕ್ ಉತ್ಪಾದಿಸುತ್ತದೆ. ಈ ಎಂಜಿನ್‍‍ನಲ್ಲಿ 5 ಸ್ಪೀಡಿನ ಮ್ಯಾನುವಲ್ ಹಾಗೂ ಆಟೋಮ್ಯಾಟಿಕ್ ಗೇರ್‍‍ಬಾಕ್ಸ್ ಅಳವಡಿಸಲಾಗುವುದು.

ಬಿ‍ಎಸ್ 6 ಕಾರುಗಳ ಬುಕ್ಕಿಂಗ್ ಶುರುಮಾಡಿದ ಟಾಟಾ ಮೋಟಾರ್ಸ್

ಮಾರುಕಟ್ಟೆಯಲ್ಲಿರುವ ಟಿಗೋರ್ ಕಾರಿನ ಬೆಲೆಯು ಎಕ್ಸ್ ಶೋರೂಂ ದರದಂತೆ ರೂ.5.50ಲಕ್ಷದಿಂದ ರೂ.7.45 ಲಕ್ಷಗಳಾಗಿದ್ದು, ಬಿ‍ಎಸ್ 6 ಎಂಜಿನ್ ಹೊಂದಿರುವ ಟಿಗೋರ್ ಕಾರಿನ ಬೆಲೆಯು ಏರಿಕೆಯಾಗುವ ಸಾಧ್ಯತೆಗಳಿವೆ. ಬಿ‍ಎಸ್ 6 ಎಂಜಿನ್ ಹೊಂದಿರುವ ಟಾಟಾ ನೆಕ್ಸಾನ್ ಕಾರಿನಲ್ಲಿ ಹೊಸ ಬಂಪರ್ ಹಾಗೂ ಹೊಸ ಬಾನೆಟ್ ವಿನ್ಯಾಸವನ್ನು ನೀಡಲಾಗಿದೆ.

ಬಿ‍ಎಸ್ 6 ಕಾರುಗಳ ಬುಕ್ಕಿಂಗ್ ಶುರುಮಾಡಿದ ಟಾಟಾ ಮೋಟಾರ್ಸ್

ಇದರ ಜೊತೆಗೆ ಹೊಸ ಹೆಡ್‍ಲ್ಯಾಂಪ್, ಹೊಸ ಗ್ರಿಲ್, ಹೊಸ ಫಾಗ್‍ಲ್ಯಾಂಪ್, ಹೊಸ ಡಿ‍ಆರ್‍ಎಲ್‍‍ಗಳನ್ನು ಅಳವಡಿಸಲಾಗಿದೆ. ವರದಿಗಳ ಪ್ರಕಾರ ಈ ಕಾರ್ ಅನ್ನು ಪೆಟ್ರೋಲ್ ಹಾಗೂ ಡೀಸೆಲ್ ಎಂಜಿನ್‍‍ನೊಂದಿಗೆ ಮಾರಾಟ ಮಾಡಲಾಗುವುದು.

ಬಿ‍ಎಸ್ 6 ಕಾರುಗಳ ಬುಕ್ಕಿಂಗ್ ಶುರುಮಾಡಿದ ಟಾಟಾ ಮೋಟಾರ್ಸ್

ಈ ಕಾರಿನಲ್ಲಿ ಅಳವಡಿಸಲಾಗಿರುವ 1.2 ಲೀಟರಿನ ಟರ್ಬೊ‍‍ಚಾರ್ಜ್ಡ್ ಪೆಟ್ರೋಲ್ ಎಂಜಿನ್ 108 ಬಿ‍‍ಹೆಚ್‍‍ಪಿ ಪವರ್ ಹಾಗೂ 170 ಎನ್‍ಎಂ ಟಾರ್ಕ್ ಉತ್ಪಾದಿಸುತ್ತದೆ. 1.5 ಲೀಟರಿನ ಡೀಸೆಲ್ ಎಂಜಿನ್ 108 ಬಿ‍‍ಹೆಚ್‍‍ಪಿ ಪವರ್ ಹಾಗೂ 260 ಎನ್‍ಎಂ ಟಾರ್ಕ್ ಉತ್ಪಾದಿಸುತ್ತದೆ. ನೆಕ್ಸಾನ್ ಕಾರಿನಲ್ಲಿ 5 ಸ್ಪೀಡಿನ ಮ್ಯಾನುವಲ್ ಹಾಗೂ ಆಟೋಮ್ಯಾಟಿಕ್ ಗೇರ್‍‍ಬಾಕ್ಸ್ ಅಳವಡಿಸಲಾಗುವುದು.

ಬಿ‍ಎಸ್ 6 ಕಾರುಗಳ ಬುಕ್ಕಿಂಗ್ ಶುರುಮಾಡಿದ ಟಾಟಾ ಮೋಟಾರ್ಸ್

ಬಿಎಸ್ 4 ಎಂಜಿನ್ ಹೊಂದಿರುವ ಟಾಟಾ ನೆಕ್ಸಾನ್ ಕಾರಿನ ಬೆಲೆಯು ಎಕ್ಸ್ ಶೋರೂಂ ದರದಂತೆ ರೂ.6.58 ಲಕ್ಷಗಳಿಂದ ರೂ.11.10 ಲಕ್ಷಗಳಾಗಿದೆ. ಬಿಡುಗಡೆಯಾಗಲಿರುವ ಬಿಎಸ್ 6 ಎಂಜಿನ್‍ ಹೊಂದಿರುವ ನೆಕ್ಸಾನ್ ಕಾರಿನ ಬೆಲೆಯು ಹೆಚ್ಚಾಗುವ ಸಾಧ್ಯತೆಗಳಿವೆ.

Most Read Articles

Kannada
English summary
Tata starts bookings of BS6 cars. Read in Kannada.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X