ಭಾರತದಲ್ಲಿ ಹೊಸ ಎಂಪಿವಿ ಕಾರು ಬಿಡುಗಡೆಗೆ ಅಂತಿಮ ಹಂತದ ಸಿದ್ದತೆಯಲ್ಲಿ ಸಿಟ್ರನ್

ಸಿಟ್ರನ್ ಭಾರತದಲ್ಲಿ ವಿವಿಧ ಕಾರು ಮಾದರಿಗಳನ್ನು ಬಿಡುಗಡೆಗೊಳಿಸಲು ಸಜ್ಜಾಗುತ್ತಿದ್ದು, ಮೊದಲ ಹಂತದಲ್ಲಿ ಸಿ5 ಏರ್‌ಕ್ರಾಸ್ ಎಸ್‌ಯುವಿ ಮಾದರಿಯ ಬಿಡುಗಡೆಯೊಂದಿಗೆ ಹಲವು ಹೊಸ ಕಾರು ಮಾದರಿಗಳನ್ನು ದೇಶಿಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸುವ ಯೋಜನೆಯಲ್ಲಿದೆ.

ಭಾರತದಲ್ಲಿ ಹೊಸ ಎಂಪಿವಿ ಕಾರು ಬಿಡುಗಡೆಗೆ ಅಂತಿಮ ಹಂತದ ಸಿದ್ದತೆಯಲ್ಲಿ ಸಿಟ್ರನ್

ಯುರೋಪ್ ಮಾರುಕಟ್ಟೆಯ ಜನಪ್ರಿಯ ಕಾರು ಉತ್ಪಾದನಾ ಕಂಪನಿಯಾದ ಪಿಎಸ್ಎ ಗ್ರೂಪ್ ಅಂಗಸಂಸ್ಥೆಯಾಗಿರುವ ಸಿಟ್ರನ್ ಕಂಪನಿಯು ಭಾರತದಲ್ಲಿ 2021ರ ಆರಂಭದಲ್ಲಿ ಮೊದಲ ಕಾರು ಬಿಡುಗಡೆ ಮಾಡುವ ಅಂತಿಮ ಹಂತದ ಸಿದ್ದತೆಯಲ್ಲಿದ್ದು, ದೇಶಿಯ ಮಾರುಕಟ್ಟೆಯಲ್ಲಿನ ಬೇಡಿಕೆ ಅನುಸಾರವಾಗಿ ವಿವಿಧ ವಿನ್ಯಾಸದ ಎಸ್‌ಯುವಿ, ಎಂಪಿವಿ ಮತ್ತು ಹ್ಯಾಚ್‌ಬ್ಯಾಕ್ ಕಾರುಗಳನ್ನು ಬಿಡುಗಡೆ ಮಾಡುವ ಯೋಜನೆ ಹೊಂದಿದೆ.

ಹೊಸ ಕಾರುಗಳ ಉತ್ಪಾದನೆಗಾಗಿ ಈಗಾಗಲೇ ಅಧಿಕೃತವಾಗಿ ಚಾಲನೆ ನೀಡಿರುವ ಸಿಟ್ರನ್ ಕಂಪನಿಯು ಟ್ರಯಲ್ ವರ್ಷನ್ ಉತ್ಪಾದನಾ ಪ್ರಕ್ರಿಯೆಯನ್ನು ಕೈಗೊಂಡಿದ್ದು, ಸಿ5 ಏರ್‌ಕ್ರಾಸ್ ಎಸ್‌ಯುವಿಯೊಂದಿಗೆ ಎಂಪಿವಿ ಮಾದರಿಯ ರೋಡ್ ಟೆಸ್ಟಿಂಗ್ ಪ್ರಕ್ರಿಯೆಯನ್ನು ಸಹ ಹಂತ ಹಂತವಾಗಿ ನಡೆಸುತ್ತಿದೆ.

ಭಾರತದಲ್ಲಿ ಹೊಸ ಎಂಪಿವಿ ಕಾರು ಬಿಡುಗಡೆಗೆ ಅಂತಿಮ ಹಂತದ ಸಿದ್ದತೆಯಲ್ಲಿ ಸಿಟ್ರನ್

ಸಿಟ್ರನ್ ಕಂಪನಿಯು 2021ರ ಆರಂಭದಲ್ಲಿ ಸಿ5 ಏರ್‌ಕ್ರಾಸ್ ಬಿಡುಗಡೆಯ ನಂತರ ಕಂಪ್ಯಾಕ್ಟ್ ಎಸ್‌ಯುವಿ ಮಾದರಿಯೊಂದರ ಬಿಡುಗಡೆಯ ಯೋಜನೆ ರೂಪಿಸಿದ್ದು, ತದನಂತರವಷ್ಟೇ ಎಂಪಿವಿ ಮಾದರಿಯೊಂದನ್ನು ರಸ್ತೆಗಿಳಿಸುವ ಸಾಧ್ಯತೆಗಳಿವೆ.

ಭಾರತದಲ್ಲಿ ಹೊಸ ಎಂಪಿವಿ ಕಾರು ಬಿಡುಗಡೆಗೆ ಅಂತಿಮ ಹಂತದ ಸಿದ್ದತೆಯಲ್ಲಿ ಸಿಟ್ರನ್

ಹಲವು ವಿಶೇಷ ಸೌಲಭ್ಯಗಳನ್ನು ಹೊಂದಿರುವ ಬೆರ್ಲಿಂಗೊ ಕಾರು ಭಾರತದಲ್ಲಿ ಹೊಸ ಸಂಚಲನ ಮೂಡಿಸುವ ತವಕದಲ್ಲಿದ್ದು, ಸದ್ಯ ಮಾರುಕಟ್ಟೆಯಲ್ಲಿರುವ ಪ್ರಮುಖ ಎಂಪಿವಿ ಕಾರು ಮಾದರಿಗಳಿಗೆ ಭರ್ಜರಿ ನೀಡುವ ಎಲ್ಲಾ ಗುಣಲಕ್ಷಣಗಳನ್ನು ಹೊಂದಿದೆ. ಭಾರತದಲ್ಲಿ ಬಿಡುಗಡೆಯಾಗಲಿರುವ ಬೆರ್ಲಿಂಗೊ ಎಕ್ಸ್ಎಲ್ ಕಾರಿನ ಬಿಡುಗಡೆ ಕುರಿತಾಗಿ ಯಾವುದೇ ಅಧಿಕೃತ ಮಾಹಿತಿ ಇಲ್ಲವಾದರೂ ಹೊಸ ಕಾರು ಮಾರುತಿ ಸುಜುಕಿ ಎರ್ಟಿಗಾ, ಮಹೀಂದ್ರಾ ಮಾರಾಜೋ ಮತ್ತು ಟೊಯೊಟಾ ಇನೋವಾ ಕ್ರಿಸ್ಟಾ ಕಾರಿಗೂ ಪೈಪೋಟಿ ನೀಡುವ ಹಲವು ಫೀಚರ್ಸ್ ಈ ಕಾರಿನಲ್ಲಿವೆ.

ಭಾರತದಲ್ಲಿ ಹೊಸ ಎಂಪಿವಿ ಕಾರು ಬಿಡುಗಡೆಗೆ ಅಂತಿಮ ಹಂತದ ಸಿದ್ದತೆಯಲ್ಲಿ ಸಿಟ್ರನ್

ಮಧ್ಯಮ ಕ್ರಮಾಂಕದ ಎಂಪಿವಿ ಆವೃತ್ತಿಯಾಗಿರುವ ಬೆರ್ಲಿಂಗೊ ಎಕ್ಸ್ಎಲ್ ಕಾರು ಮಾದರಿಯು ಪ್ರತಿಸ್ಪರ್ಧಿ ಕಾರು ಮಾದರಿಗಳಿಂತಲೂ ಅತ್ಯುತ್ತಮ ಒಳಾಂಗಣ ಸೌಲಭ್ಯದೊಂದಿಗೆ 7 ಸೀಟರ್ ಆಸನ ಸೌಲಭ್ಯ ಹೊಂದಿದೆ.

MOST READ: ಪ್ರತಿ ಚಾರ್ಜ್‌ಗೆ ಗರಿಷ್ಠ 509ಕಿ.ಮೀ ಮೈಲೇಜ್ ನೀಡಲಿದೆ ಸ್ಕೋಡಾ ಎನ್ಯಾಕ್ ಎಲೆಕ್ಟ್ರಿಕ್ ಎಸ್‌ಯುವಿ..!

ಭಾರತದಲ್ಲಿ ಹೊಸ ಎಂಪಿವಿ ಕಾರು ಬಿಡುಗಡೆಗೆ ಅಂತಿಮ ಹಂತದ ಸಿದ್ದತೆಯಲ್ಲಿ ಸಿಟ್ರನ್

ಎರಡನೇ ಮತ್ತು ಮೂರನೇ ಸಾಲಿನ ಪ್ರಯಾಣಿಕರಿಗೆ ಉತ್ತಮ ಸ್ಥಳಾವಕಾಶ ಹೊಂದಿರುವ ಹೊಂದಿರುವ ಹೊಸ ಕಾರು 4,753-ಎಂಎಂ ಉದ್ದ, 1,848-ಎಂಎಂ ಅಗಲ, 1,879-ಎಂಎಂ ಎತ್ತರದೊಂದಿಗೆ 2+3+2 ಮಾದರಿಯಲ್ಲಿ ಆಸನ ಸೌಲಭ್ಯವನ್ನು ಪಡೆದುಕೊಂಡಿದೆ.

ಭಾರತದಲ್ಲಿ ಹೊಸ ಎಂಪಿವಿ ಕಾರು ಬಿಡುಗಡೆಗೆ ಅಂತಿಮ ಹಂತದ ಸಿದ್ದತೆಯಲ್ಲಿ ಸಿಟ್ರನ್

ಬೆರ್ಲಿಂಗೊ ಕಾರು ಮಾದರಿಯು ವ್ಯಯಕ್ತಿಕ ಬಳಕೆಗೆ ಮಾತ್ರವಲ್ಲದೆ ಫ್ಲಿಟ್ ಸಂಚಾರಕ್ಕೂ ಉತ್ತಮ ಆಯ್ಕೆಯಾಗಲಿದ್ದು, ಭಾರತದಲ್ಲಿ ಮಾರಾಟದಿಂದ ಸ್ಥಗಿತವಾಗಿರುವ ಷವರ್ಲೆ ಎಂಜಾಯ್ ಕಾರು ಮಾದರಿಯಲ್ಲಿ ಟೂರಿಸ್ಟ್ ವಾಹನ ಮಾದರಿಯಾಗಿ ಬೇಡಿಕೆ ಪಡೆದುಕೊಳ್ಳುವ ನೀರಿಕ್ಷೆಯಿದೆ.

MOST READ: 2020ರ ಅವಧಿಯಲ್ಲಿ ಬಿಡುಗಡೆಯಾದ ಪ್ರಮುಖ ಹತ್ತು ಕಾರುಗಳಿವು..!

ಭಾರತದಲ್ಲಿ ಹೊಸ ಎಂಪಿವಿ ಕಾರು ಬಿಡುಗಡೆಗೆ ಅಂತಿಮ ಹಂತದ ಸಿದ್ದತೆಯಲ್ಲಿ ಸಿಟ್ರನ್

ಹೊಸ ಕಾರು ಭಾರತದಲ್ಲಿ ರೂ.10 ಲಕ್ಷದಿಂದ ರೂ.14 ಲಕ್ಷ ಬೆಲೆ ಅಂತರದಲ್ಲಿ ಮಾರಾಟಗೊಳ್ಳುವ ನೀರಿಕ್ಷೆಯಿದ್ದು, 1.2-ಲೀಟರ್ ಟರ್ಬೋ ಪೆಟ್ರೋಲ್ ಮತ್ತು 1.5-ಲೀಟರ್ ಟರ್ಬೋ ಡೀಸೆಲ್ ಎಂಜಿನ್ ಆಯ್ಕೆ ಪಡೆದುಕೊಳ್ಳುವ ನೀರಿಕ್ಷೆಯಿದೆ. ಹಾಗೆಯೇ ಹೊಸ ಕಾರಿನಲ್ಲಿ ಸ್ಲೈಡ್ ಡೋರ್ ಮತ್ತು ಡ್ಯಾಶ್ ಮೌಂಟೆಡ್ ಗೇರ್‌ಶಿಫ್ಟ್ ಸಿಕ್ಟ್ ಫೀಚರ್ಸ್ ಹೊಂದಿದೆ.

Most Read Articles

Kannada
English summary
Citroen Berlingo MPV Spotted Testing. Read in Kannada.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X