ಸಿ5 ಏರ್‌ಕ್ರಾಸ್ ಬಿಡುಗಡೆಯ ನಂತರ ಪೆಟ್ರೋಲ್ ಎಂಜಿನ್ ಮಾತ್ರ ಬಿಡುಗಡೆ ಮಾಡಲಿದೆ ಸಿಟ್ರನ್

ಭಾರತವು ಮಧ್ಯಮ ಗಾತ್ರದ ಕಾರು ಮಾರಾಟದಲ್ಲಿ ಜಾಗತಿಕವಾಗಿ ಪ್ರಮುಖ ಆಕರ್ಷಣೆಯಾಗುತ್ತಿದ್ದು, ಹಲವಾರು ಹೊಸ ಕಾರು ಉತ್ಪಾದನಾ ಕಂಪನಿಗಳು ಭಾರತದಲ್ಲಿ ಉದ್ಯಮ ಕಾರ್ಯಾಚರಣೆ ಆರಂಭಿಸುತ್ತಿವೆ. ಫ್ರೆಂಚ್ ಆಟೋ ಕಂಪನಿಯಾದ ಸಿಟ್ರನ್ ಕೂಡಾ ಭಾರತದಲ್ಲಿ ಭಾರೀ ಪ್ರಮಾಣದ ಬಂಡವಾಳ ಹೂಡಿಕೆಯೊಂದಿಗೆ ಕಾರು ಮಾರಾಟ ಆರಂಭಿಸುತ್ತಿದೆ.

ಪೆಟ್ರೋಲ್ ಎಂಜಿನ್ ಕಾರುಗಳನ್ನು ಮಾತ್ರ ಬಿಡುಗಡೆ ಮಾಡಲಿದೆ ಸಿಟ್ರನ್

2021ಕ್ಕೆ ಭಾರತದಲ್ಲಿ ತನ್ನ ಮೊದಲ ಕಾರು ಮಾದರಿಯನ್ನು ಅಧಿಕೃತವಾಗಿ ಬಿಡುಗಡೆ ಮಾಡಲಿರುವ ಸಿಟ್ರನ್ ಕಂಪನಿಯು ಮೊದಲ ಹಂತದಲ್ಲಿ ಸಿ5 ಏರ್‌ಕ್ರಾಸ್ ಎಸ್‌ಯುವಿ ಮಾದರಿಯೊಂದಿಗೆ ದೇಶಿಯ ಮಾರುಕಟ್ಟೆ ಪ್ರವೇಶಿಸಲಿದ್ದು, ಹಂತ-ಹಂತವಾಗಿ ಗ್ರಾಹಕರ ಬೇಡಿಕೆಯೆಂತೆ ಹ್ಯಾಚ್‌ಬ್ಯಾಕ್, ಕಂಪ್ಯಾಕ್ಟ್ ಎಸ್‌ಯುವಿ ಮತ್ತು ಎಂಪಿವಿ ಕಾರುಗಳ ಜೊತೆಗೆ ಎಲೆಕ್ಟ್ರಿಕ್ ಕಾರು ಮಾದರಿಗಳನ್ನು ಸಹ ಬಿಡುಗಡೆ ಮಾಡುವ ಯೋಜನೆಯಲ್ಲಿದೆ.

ಪೆಟ್ರೋಲ್ ಎಂಜಿನ್ ಕಾರುಗಳನ್ನು ಮಾತ್ರ ಬಿಡುಗಡೆ ಮಾಡಲಿದೆ ಸಿಟ್ರನ್

ಇದಕ್ಕಾಗಿ ಈಗಾಗಲೇ ಅಂತಿಮ ಹಂತದ ಸಿದ್ದತೆ ನಡೆಸಿರುವ ಸಿಟ್ರನ್ ಕಂಪನಿಯು ಈಗಾಗಲೇ ಕಾರು ಉತ್ಪಾದನೆಯ ಟ್ರಯರ್ ಪ್ರಕ್ರಿಯೆಗೆ ಚಾಲನೆ ನೀಡಿದ್ದು, ಪ್ರಮುಖ 3 ಕಾರುಗಳನ್ನು ಭಾರತದಲ್ಲೇ ಪೂರ್ಣ ಪ್ರಮಾಣದಲ್ಲಿ ಅಭಿವೃದ್ದಿಗೊಳಿಸುವ ಗುರಿಯೋಜನೆ ಹೊಂದಿದೆ.

ಪೆಟ್ರೋಲ್ ಎಂಜಿನ್ ಕಾರುಗಳನ್ನು ಮಾತ್ರ ಬಿಡುಗಡೆ ಮಾಡಲಿದೆ ಸಿಟ್ರನ್

2023ರ ವೇಳೆಗೆ ಶೇ.100ರಷ್ಟು ಬಿಡಿಭಾಗಗಳೊಂದಿಗೆ ಭಾರತದಲ್ಲೇ ಹೊಸ ಕಾರು ಉತ್ಪನ್ನಗಳನ್ನು ಅಭಿವೃದ್ದಿಗೊಳಿಸುವ ಗುರಿಯೋಜನೆ ಹೊಂದಿರುವ ಸಿಟ್ರನ್ ಕಂಪನಿಯು ತಮಿಳುನಾಡಿನ ತಿರುವಲ್ಲೂರ್‌ನಲ್ಲಿ ಮೊದಲ ಕಾರು ಉತ್ಪಾದನಾ ಘಟಕಕ್ಕೆ ಚಾಲನೆ ನೀಡಿದ್ದು, ಮಧ್ಯಮ ಗಾತ್ರದ ಕಾರಗಳ ಜೊತೆ ಐಷಾರಾಮಿ ಫೀಚರ್ಸ್‌ ಕಾರು ಮಾದರಿಗಳನ್ನು ಸಹ ರಸ್ತೆಗಿಳಿಸಲಿದೆ.

ಪೆಟ್ರೋಲ್ ಎಂಜಿನ್ ಕಾರುಗಳನ್ನು ಮಾತ್ರ ಬಿಡುಗಡೆ ಮಾಡಲಿದೆ ಸಿಟ್ರನ್

ಯುರೋಪ್ ಮಾರುಕಟ್ಟೆಯಲ್ಲಿ ಪಿಎಸ್ಎ ಗ್ರೂಪ್ ಸಂಸ್ಥೆಯ ಅಡಿಯಲ್ಲಿ ಕಾರ್ಯನಿರ್ವಹಿಸುವ ಸಿಟ್ರನ್, ಫ್ಯೂಜೊ ಮತ್ತು ಡಿಎಸ್ ಬ್ರಾಂಡ್‌ಗಳು ಯುರೋಪ್ ಮಾರುಕಟ್ಟೆಯಲ್ಲಿ ಅತಿ ಹೆಚ್ಚು ಬೇಡಿಕೆಯುಳ್ಳ ಕಾರುಗಳಾಗಿದ್ದು, ಇದರಲ್ಲಿ ಸಿಟ್ರನ್ ನಿರ್ಮಾಣದ ಸಿ5 ಏರ್‌ಕ್ರಾಸ್ ಸದ್ಯ ಭಾರತದಲ್ಲಿ ಬಿಡುಗಡೆಯಾಗುತ್ತಿದೆ.

ಪೆಟ್ರೋಲ್ ಎಂಜಿನ್ ಕಾರುಗಳನ್ನು ಮಾತ್ರ ಬಿಡುಗಡೆ ಮಾಡಲಿದೆ ಸಿಟ್ರನ್

ಸಿಟ್ರನ್ ಹೊಸ ಕಾರುಗಳು ಹಲವು ವಿಶೇಷ ತಾಂತ್ರಿಕ ಸೌಲಭ್ಯಗಳೊಂದಿಗೆ ಬಿಡುಗಡೆಯಾಗುವ ಸುಳಿವು ನೀಡಿದ್ದು, ಬೆಲೆ ವಿಚಾರದಲ್ಲೂ ಗಮನಸೆಳೆಯಲಿದೆ. ಸಿ5 ಏರ್‌ಕ್ರಾಸ್ ನಂತರ ಮತ್ತಷ್ಟು ಹೊಸ ಕಾರುಗಳನ್ನು ಪರಿಚಯಿಸಲಿದ್ದು, ಹೊಸ ಕಾರುಗಳ ಗ್ರಾಹಕರ ಆಯ್ಕೆಯಲ್ಲಿ ಮುಂಚೂಣಿ ಸಾಧಿಸುವ ಮಾದರಿಗಳಾಗುವ ನೀರಿಕ್ಷೆಗಳಿವೆ.

ಪೆಟ್ರೋಲ್ ಎಂಜಿನ್ ಕಾರುಗಳನ್ನು ಮಾತ್ರ ಬಿಡುಗಡೆ ಮಾಡಲಿದೆ ಸಿಟ್ರನ್

ಸಿ5 ಏರ್‌ಕ್ರಾಸ್ ಕಾರು ಮಾದರಿಯು ಬಿಎಸ್-6 ಎಮಿಷನ್ ಪ್ರೇರಿತ 2.0-ಲೀಟರ್ ಟರ್ಬೋ ಡೀಸೆಲ್ ಎಂಜಿನ್ ಪಡೆದುಕೊಳ್ಳುವುದು ಖಚಿತವಾಗಿದ್ದು, 6-ಸ್ಪೀಡ್ ಮ್ಯಾನುವಲ್ ಮತ್ತು 6-ಸ್ಪೀಡ್ ಆಟೋಮ್ಯಾಟಿಕ್ ಗೇರ್‌ಬಾಕ್ಸ್ ಆಯ್ಕೆಯನ್ನು ಪಡೆದುಕೊಳ್ಳಲಿದೆ.

MOST READ: ಪ್ರತಿ ಚಾರ್ಜ್‌ಗೆ ಗರಿಷ್ಠ 509ಕಿ.ಮೀ ಮೈಲೇಜ್ ನೀಡಲಿದೆ ಸ್ಕೋಡಾ ಎನ್ಯಾಕ್ ಎಲೆಕ್ಟ್ರಿಕ್ ಎಸ್‌ಯುವಿ..!

ಪೆಟ್ರೋಲ್ ಎಂಜಿನ್ ಕಾರುಗಳನ್ನು ಮಾತ್ರ ಬಿಡುಗಡೆ ಮಾಡಲಿದೆ ಸಿಟ್ರನ್

ಆದರೆ ಹೊಸ ಕಾರಿನಲ್ಲಿ ಪೆಟ್ರೋಲ್ ಮಾದರಿಯ ಬಿಡುಗಡೆಯ ಕುರಿತು ಸ್ಪಷ್ಟಪಡಿಸಿರುವ ಸಿಟ್ರನ್ ಇಂಡಿಯಾ ಕಂಪನಿಯು ಸಿ5 ಏರ್‌ಕ್ರಾಸ್ ಮಾದರಿಯನ್ನು ಡೀಸೆಲ್ ಆಯ್ಕೆಯಲ್ಲಿ ಬಿಡುಗಡೆ ಮಾಡಲಿದ್ದು, ಸಿ5 ಏರ್‌ಕ್ರಾಸ್ ನಂತರದಲ್ಲಿ ಬಿಡುಗಡೆಯಾಗುವ ಯಾವುದೇ ಕಾರುಗಳಲ್ಲಿ ಡೀಸೆಲ್ ಎಂಜಿನ್ ಆಯ್ಕೆ ಇರುವುದಿಲ್ಲ ಎಂದಿದೆ.

ಪೆಟ್ರೋಲ್ ಎಂಜಿನ್ ಕಾರುಗಳನ್ನು ಮಾತ್ರ ಬಿಡುಗಡೆ ಮಾಡಲಿದೆ ಸಿಟ್ರನ್

ಭವಿಷ್ಯ ಯೋಜನೆಯಂತೆ ಮಧ್ಯಮ ಕ್ರಮಾಂಕದ ಕಾರುಗಳಲ್ಲಿ ಪೆಟ್ರೋಲ್ ಮಾದರಿಗಳನ್ನು ಮಾತ್ರವೇ ಗುರಿಹೊಂದಲಾಗಿದೆ ಎಂದು ಸ್ಪಷ್ಟಪಡಿಸಿರುವ ಸಿಟ್ರನ್ ಇಂಡಿಯಾ ಕಂಪನಿಯು ಸಿ5 ಏರ್‌ಕ್ರಾಸ್ ನಂತರ ಬಿಡುಗಡೆಯಾಗಲಿರುವ ಸಿ3 ಏರ್‌ಕ್ರಾಸ್ ಕಂಪ್ಯಾಕ್ಟ್ ಎಸ್‌ಯುವಿ ಮತ್ತುಎಂಪಿವಿ ಕಾರುಗಳಲ್ಲಿ ವಿವಿಧ ಪೆಟ್ರೋಲ್ ಎಂಜಿನ್‌ಗಳನ್ನು ಮಾತ್ರವೇ ಮಾರಾಟ ಮಾಡಲಿದೆ.

MOST READ: ಭಾರತದಲ್ಲಿ ಎರಡು ಹೊಸ ಎಸ್‌ಯುವಿ ಕಾರು ಮಾದರಿಗಳನ್ನು ಬಿಡುಗಡೆ ಮಾಡಲಿದೆ ಹ್ಯುಂಡೈ

ಪೆಟ್ರೋಲ್ ಎಂಜಿನ್ ಕಾರುಗಳನ್ನು ಮಾತ್ರ ಬಿಡುಗಡೆ ಮಾಡಲಿದೆ ಸಿಟ್ರನ್

ಮುಂಬರುವ ದಿನಗಳಲ್ಲಿ ಮಾಲಿನ್ಯ ತಡೆ ಉದ್ದೇಶದಿಂದ ವಿವಿಧ ರಾಷ್ಟ್ರಗಳಲ್ಲಿ ಡೀಸೆಲ್ ಎಂಜಿನ್ ವಾಹನಗಳ ಬಳಕೆ ಮೇಲೆ ಹಲವಾರು ನಿರ್ಬಂಧಗಳನ್ನು ವಿಧಿಸುತ್ತಿರುವುದೇ ಗ್ರಾಹಕರು ಪೆಟ್ರೋಲ್ ಕಾರುಗಳ ಆಯ್ಕೆಯತ್ತ ಗಮನಹರಿಸಿದ್ದು, ಗ್ರಾಹಕರ ಬೇಡಿಕೆ ಪೆಟ್ರೋಲ್ ಮತ್ತು ಪೂರ್ಣ ಪ್ರಮಾಣದ ಎಲೆಕ್ಟ್ರಿಕ್ ಕಾರುಗಳ ಯೋಜನೆಯತ್ತ ಗಮನಹರಿಸಿರುವುದಾಗಿ ಸಿಟ್ರನ್ ಇಂಡಿಯಾ ಮುಖ್ಯಸ್ಥ ಸೌರಭ್ ವತ್ಸಾ ಸ್ಪಷ್ಟಪಡಿಸಿದ್ದಾರೆ.

Most Read Articles

Kannada
English summary
Citroen Will Offer Only Petrol Models In India. Read in Kannada.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X