ಪ್ರಯಾಣಿಕ ವಾಹನ ಮಾದರಿಗಳಿಗೆ ಎರಡು ಹೊಸ ಟೈರ್ ಮಾದರಿಗಳನ್ನು ಬಿಡುಗಡೆ ಮಾಡಿದ ಕಾಂಟಿನೆಂಟಲ್

ಜರ್ಮನ್ ಆಟೋ ಬಿಡಿಭಾಗಗಳ ಉತ್ಪಾದನಾ ಕಂಪನಿ ಕಾಂಟಿನೆಂಟಲ್ ಭಾರತದಲ್ಲಿ ಎರಡು ಹೊಸ ಮಾದರಿಯ ಪ್ರಯಾಣಿಕ ವಾಹನಗಳ ಟೈರ್ ಮಾದರಿಗಳನ್ನು ಬಿಡುಗಡೆ ಮಾಡಿದ್ದು, ಹೊಸ ಟೈರ್ ಮಾದರಿಗಳು ಪೂರ್ಣ ಪ್ರಮಾಣದಲ್ಲಿ ಭಾರತದಲ್ಲೇ ಅಭಿವೃದ್ದಿಗೊಂಡಿವೆ.

ಪ್ರಯಾಣಿಕ ವಾಹನ ಮಾದರಿಗಳಿಗೆ ಎರಡು ಹೊಸ ಟೈರ್ ಮಾದರಿಗಳನ್ನು ಬಿಡುಗಡೆ ಮಾಡಿದ ಕಾಂಟಿನೆಂಟಲ್

ಕಾಂಟಿನೆಂಟಲ್ ಕಂಪನಿಯು ಬಿಡುಗಡೆ ಮಾಡಿರುವ ಹೊಸ ವಿನ್ಯಾಸದ ಆಲ್ಟ್ರಾ ಕಂಟ್ಯಾಕ್ಟ್ ಯುಸಿ6 ಮತ್ತು ಕಂಫರ್ಟ್ ಕಂಟ್ಯಾಕ್ಟ್ ಸಿಸಿ6 ಮಾದರಿಗಳು ಆಧುನಿಕ ತಂತ್ರಜ್ಞಾನ ಪ್ರೇರಣೆಯೊಂದಿಗೆ ಅಭಿವೃದ್ದಿಗೊಳಿಸಲಾಗಿದ್ದು, ದೇಶಿಯ ಮಾರುಕಟ್ಟೆಯಲ್ಲಿ ಗ್ರಾಹಕರ ಬೇಡಿಕೆಗಳನ್ನು ಪೂರೈಸುವಲ್ಲಿ ಹೊಸ ಟೈರ್ ಮಾದರಿಗಳು ಕಾಂಟಿನೆಂಟಲ್ ಕಂಪನಿಗೆ ಸಾಕಷ್ಟು ಸಹಕಾರಿಯಾಗಿವೆ.

ಹೊಸ ಟೈರ್ ಮಾದರಿಗಳು ಗರಿಷ್ಠ ಸುರಕ್ಷಾ ಪ್ರೇರಣೆಯೊಂದಿಗೆ ಅಭಿವೃದ್ದಿಪಡಿಸಲಾಗಿದ್ದು, ಹೊಸ ತಂತ್ರಜ್ಞಾನ ಪ್ರೇರಣೆಯಿಂದಾಗಿ ಹೆಚ್ಚು ಕಾರ್ಯಕ್ಷಮತೆಯೊಂದಿಗೆ ವಾಹನಗಳ ಮೈಲೇಜ್ ಪ್ರಮಾಣ ಹೆಚ್ಚಳಕ್ಕೂ ಇವು ಸಹಕಾರಿಯಾಗಿವೆ.

ಪ್ರಯಾಣಿಕ ವಾಹನ ಮಾದರಿಗಳಿಗೆ ಎರಡು ಹೊಸ ಟೈರ್ ಮಾದರಿಗಳನ್ನು ಬಿಡುಗಡೆ ಮಾಡಿದ ಕಾಂಟಿನೆಂಟಲ್

ಭಾರತದಲ್ಲಿನ ರಸ್ತೆಗಳಿಗೆ ಅನುಗುಣವಾಗಿ ಉತ್ತಮ ಕಾರ್ಯಕ್ಷಮತೆ ಹೊಂದಿರುವ ಕಾಂಟಿನೆಂಟಲ್ ಹೊಸ ಟೈರ್‌ಗಳು ಅತಿ ಕಡಿಮೆ ಬ್ರೇಕಿಂಗ್‌ನೊಂದಿಗೆ ಉತ್ತಮ ಹಿಡಿತ ಹೊಂದಿದ್ದು, ವಾಹನ ಮಾದರಿಗಳಿಗೆ ಅನುಗುಣವಾಗಿ ಹೊಸ ಟೈರ್‌ಗಳನ್ನು 13-ಇಂಚಿನಿಂದ 17-ಇಂಚಿನ ವಿನ್ಯಾಸದಲ್ಲಿ ಪರಿಚಯಿಸಲಾಗಿದೆ.

ಪ್ರಯಾಣಿಕ ವಾಹನ ಮಾದರಿಗಳಿಗೆ ಎರಡು ಹೊಸ ಟೈರ್ ಮಾದರಿಗಳನ್ನು ಬಿಡುಗಡೆ ಮಾಡಿದ ಕಾಂಟಿನೆಂಟಲ್

ಈ ಕುರಿತಂತೆ ಮಾತನಾಡಿರುವ ಕಾಂಟಿನೆಂಟಲ್ ಇಂಡಿಯಾ ವಿಭಾಗದ ಟೈರ್ಸ್ ಬಿಸಿನೆಸ್ ಮುಖ್ಯಸ್ಥ ಕ್ಲೌಡ್ ಡಿ ಗಾಮಾ ರೋಸ್ ಅವರು, ಹೆಚ್ಚು ಕಾರ್ಯಕ್ಷಮತೆ, ಸುರಕ್ಷತೆ, ಉತ್ತಮ ಮೈಲೇಜ್ ಮತ್ತು ಆರಾಮದಾಯಕ ವೈಶಿಷ್ಟ್ಯಗಳನ್ನು ಒಳಗೊಂಡಿರುವ ಜನರೇಷನ್ 6 ಟೈರ್‌ಗಳನ್ನು ಭಾರತದಲ್ಲಿ ಹೊಸ ಭರವಸೆಯೊಂದಿಗೆ ಬಿಡುಗಡೆ ಮಾಡಲಾಗಿದ್ದು, ಗ್ರಾಹಕರ ವಿಶ್ವಾಸವನ್ನು ಗಳಿಸುವಲ್ಲಿ ಹೊಸ ಟೈರ್ ಮಾದರಿಗಳು ಕಂಪನಿಗೆ ಸಾಕಷ್ಟು ಸಹಕಾರಿಯಾಗಿದೆ ಎಂದಿದ್ದಾರೆ.

MOST READ: ಪ್ರತಿ ಚಾರ್ಜ್‌ಗೆ 480 ಕಿ.ಮೀ ಮೈಲೇಜ್ ನೀಡುವ ಎಲೆಕ್ಟ್ರಿಕ್ ಎಸ್‌ಯುವಿ ಬಿಡುಗಡೆ ಮಾಡಲಿದೆ ನಿಸ್ಸಾನ್

ಪ್ರಯಾಣಿಕ ವಾಹನ ಮಾದರಿಗಳಿಗೆ ಎರಡು ಹೊಸ ಟೈರ್ ಮಾದರಿಗಳನ್ನು ಬಿಡುಗಡೆ ಮಾಡಿದ ಕಾಂಟಿನೆಂಟಲ್

ಹಾಗೆಯೇ ಕಾಂಟಿನೆಂಟಲ್ ಹೊಸ ಟೈರ್ ಮಾದರಿಗಳನ್ನು ಸ್ಥಳೀಯ ತಂತ್ರಜ್ಞಾನದೊಂದಿಗೆ ಅಭಿವೃದ್ದಿಪಡಿಸುವ ಕುರಿತಾಗಿಯೂ ಮಾಹಿತಿ ಹಂಚಿಕೊಳ್ಳಲಾಗಿದ್ದು, ಯುಪಿಯಲ್ಲಿರುವ ಮೊಡಿಪುರಂ ಉತ್ಪಾದನಾ ಘಟಕದಲ್ಲಿ ಹೊಸ ಆಲ್ಟ್ರಾ ಕಂಟ್ಯಾಕ್ಟ್ ಯುಸಿ6 ಮತ್ತು ಕಂಫರ್ಟ್ ಕಂಟ್ಯಾಕ್ಟ್ ಸಿಸಿ6 ಟೈರ್ ಉತ್ಪಾದನೆ ಚಾಲನೆ ನೀಡಲಾಗಿದೆ.

ಪ್ರಯಾಣಿಕ ವಾಹನ ಮಾದರಿಗಳಿಗೆ ಎರಡು ಹೊಸ ಟೈರ್ ಮಾದರಿಗಳನ್ನು ಬಿಡುಗಡೆ ಮಾಡಿದ ಕಾಂಟಿನೆಂಟಲ್

ಮುಂಬರುವ ದಿನಗಳಲ್ಲಿ ಮತ್ತಷ್ಟು ಹೊಸ ಮಾದರಿಯ ಟೈರ್ ಉತ್ಪನ್ನಗಳನ್ನು ಸ್ಥಳೀಯ ಮಾರುಕಟ್ಟೆಯ ಬೇಡಿಕೆ ಪೂರೈಸಲು ಸಿದ್ದವಿರುವುದಾಗಿ ಹೇಳಿಕೊಂಡಿರುವ ಕಾಂಟಿನೆಂಟಲ್ ಕಂಪನಿಯು ಬೇಡಿಕೆಗೆ ಅನುಗುಣವಾಗಿ ಉತ್ಪಾದನೆ ಹೆಚ್ಚಿಸಲು ಬಂಡವಾಳ ಪ್ರಮಾಣವನ್ನು ಕೂಡಾ ಹೆಚ್ಚಿಸಿದೆ.

MOST READ: ವಾಹನ ಖರೀದಿಯನ್ನು ಸುಲಭವಾಗಿಸಲಿದೆ ಅಗಸ್ಟ್ 1ರಿಂದ ಜಾರಿಗೆ ಬಂದಿರುವ ಹೊಸ ವಿಮಾ ನೀತಿ..

ಪ್ರಯಾಣಿಕ ವಾಹನ ಮಾದರಿಗೆ 2 ಹೊಸ ಮಾದರಿಯ ಟೈರ್ ಬಿಡುಗಡೆ ಮಾಡಿದ ಕಾಂಟಿನೆಂಟಲ್

ಇನ್ನು ಹೊಸ ತಂತ್ರಜ್ಞಾನ ಪ್ರೇರಣೆಯೊಂದಿಗೆ ಅಭಿವೃದ್ದಿಗೊಂಡಿರುವ ಆಲ್ಟ್ರಾ ಕಂಟ್ಯಾಕ್ಟ್ ಯುಸಿ6 ಮತ್ತು ಕಂಫರ್ಟ್ ಕಂಟ್ಯಾಕ್ಟ್ ಸಿಸಿ6 ಟೈರ್‌ಗಳ ಬೆಲೆಯು ಈ ಹಿಂದಿನ ಟೈರ್ ಮಾದರಿಗಳಿಂತಲೂ ಆಕರ್ಷಕವಾಗಿದ್ದು, ಭಾರತೀಯ ಗ್ರಾಹಕರ ಅಭಿರುಚಿಗೆ ತಕ್ಕಂತೆ ಮತ್ತಷ್ಟು ಹೊಸ ಟೈರ್ ಮಾದರಿಗಳು ಮಾರುಕಟ್ಟೆ ಪ್ರವೇಶಿಸಲಿವೆ.

Most Read Articles

Kannada
English summary
Continental Launch Generation 6 Made In India Passenger Vehicle Tyres. Read in Kannada.
Story first published: Wednesday, August 19, 2020, 22:06 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X