ಸಾಧಾರಣ ಕಾರುಗಳಲ್ಲಿ ಓಡಾಡುವ ಖ್ಯಾತ ನಟರಿವರು..!

ಬಾಲಿವುಡ್ ಚಿತ್ರರಂಗದಲ್ಲಿ ಪ್ರತಿ ವರ್ಷ ಹಲವಾರು ಚಿತ್ರಗಳನ್ನು ನಿರ್ಮಿಸಲಾಗುತ್ತದೆ. ಹೆಚ್ಚಿನ ಸಂಖ್ಯೆಯಲ್ಲಿ ಚಿತ್ರಗಳು ತಯಾರಾಗುವುದರಿಂದ ಈ ಚಿತ್ರಗಳಲ್ಲಿ ನಟಿಸುವ ನಟರು ಹೆಚ್ಚಿನ ಆದಾಯವನ್ನು ಗಳಿಸುತ್ತಾರೆ.

ಸಾಧಾರಣ ಕಾರುಗಳಲ್ಲಿ ಓಡಾಡುವ ಖ್ಯಾತ ನಟರಿವರು..!

ಅವರ ಜೀವನ ಶೈಲಿಯನ್ನು ನೋಡಿ ಹೊಟ್ಟೆ ಉರಿ ಪಡುವವರೂ ಇದ್ದಾರೆ. ಇದಕ್ಕೆ ಅವರ ಬಳಿಯಿರುವ ಐಷಾರಾಮಿ ಕಾರು ಹಾಗೂ ಐಷಾರಾಮಿ ಮನೆಗಳು ಮುಖ್ಯ ಕಾರಣವಾಗಿವೆ. ಕೆಲವು ನಟರ ಬಳಿ ಕೋಟಿಗಟ್ಟಲೇ ಬೆಲೆಬಾಳುವ ಕಾರುಗಳಿವೆ. ಆದರೆ ಐಷಾರಾಮಿ ಜೀವನ ನಡೆಸುತ್ತಿರುವ ಶ್ರೀಮಂತರು ಹೇಳಲಾಗುವ ಕೆಲವು ನಟರು ಸಾಧಾರಣ ಕಾರುಗಳನ್ನು ಹೊಂದಿರುವ ವರದಿಗಳಾಗಿವೆ.

ಸಾಧಾರಣ ಕಾರುಗಳಲ್ಲಿ ಓಡಾಡುವ ಖ್ಯಾತ ನಟರಿವರು..!

ಈ ನಟರು ಪ್ರತಿದಿನದ ಪ್ರಯಾಣಕ್ಕಾಗಿ ದುಬಾರಿ ಕಾರುಗಳ ಬದಲಿಗೆ ಸಾಧಾರಣ ಕಾರುಗಳನ್ನು ಬಳಸುತ್ತಿರುವುದು ವರದಿಯಾಗಿದೆ. ಲಕ್ಷಗಟ್ಟಲೇ ಬೆಲೆಯನ್ನು ಹೊಂದಿದ್ದರೂ ಈ ನಟರ ಖ್ಯಾತಿಗೆ ಈ ಕಾರುಗಳು ಸಾಧಾರಣವಾಗಿವೆ. ಈ ಲೇಖನದಲ್ಲಿ ಸಾಧಾರಣ ಕಾರುಗಳನ್ನು ಬಳಸುವ ಬಾಲಿವುಡ್ ನಟ, ನಟಿಯರು ಯಾರು ಎಂಬುದನ್ನು ನೋಡೋಣ.

ಸಾಧಾರಣ ಕಾರುಗಳಲ್ಲಿ ಓಡಾಡುವ ಖ್ಯಾತ ನಟರಿವರು..!

ಆಮೀರ್ ಖಾನ್

ಮಿ.ಪಫೆಕ್ಷನಿಸ್ಟ್ ಖ್ಯಾತಿಯ ಆಮೀರ್ ಖಾನ್‍‍ರವರ ಬಳಿ ಬಿ‍ಎಂ‍‍ಡಬ್ಲ್ಯು, ಬೆಂಝ್ ಹಾಗೂ ಬೆಂಟ್ಲಿ ಕಂಪನಿಗಳ ಬೆಲೆ ಬಾಳುವ ಐಷಾರಾಮಿ ಕಾರುಗಳಿವೆ. ಇವುಗಳ ಜೊತೆಗೆ ಟೊಯೊಟಾ ಫಾರ್ಚೂನರ್ ಹಾಗೂ ಎಕ್ಸ್ ಯುವಿ 500 ಕಾರುಗಳನ್ನೂ ಸಹ ಹೊಂದಿದ್ದಾರೆ. ಆಮೀರ್ ಖಾನ್‍‍ರವರು ಹೆಚ್ಚಾಗಿ ಈ ಕಾರುಗಳಲ್ಲಿ ಓಡಾಡುತ್ತಾರೆ.

ಸಾಧಾರಣ ಕಾರುಗಳಲ್ಲಿ ಓಡಾಡುವ ಖ್ಯಾತ ನಟರಿವರು..!

ಜಾನ್ ಅಬ್ರಹಾಂ

ಜಾನ್ ಅಬ್ರಹಾಂ ಬಾಲಿವುಡ್‍‍ನ ಜನಪ್ರಿಯ ನಟರಲ್ಲಿ ಒಬ್ಬರು. ಇವರು ಸಿನಿಮಾಗಳಿಗಿಂತ ಆಟೋಮೊಬೈಲ್‍‍ನಲ್ಲಿ ಹೆಚ್ಚು ಆಸಕ್ತಿಯನ್ನು ಹೊಂದಿದ್ದಾರೆ. ಇವರು ಕಡಿಮೆ ಬೆಲೆಯ ಕಾರುಗಳಿಂದ ದುಬಾರಿ ಬೆಲೆಯ ಕಾರುಗಳವರೆಗೆ ಹಲವು ವಾಹನಗಳನ್ನು ಹೊಂದಿದ್ದಾರೆ.

ಸಾಧಾರಣ ಕಾರುಗಳಲ್ಲಿ ಓಡಾಡುವ ಖ್ಯಾತ ನಟರಿವರು..!

ಇವರು ನಿಸ್ಸಾನ್ ಜಿಟಿ - ಆರ್ ಸೂಪರ್ ಕಾರ್ ಅನ್ನು ಹೊಂದಿದ್ದಾರೆ. ಇದರ ಜೊತೆಗೆ ಇವರು ಮಾರುತಿ ಸುಜುಕಿಯ ಜಿಪ್ಸಿ ಆಫ್ ರೋಡ್ ಕಾರ್ ಅನ್ನು ಸಹ ಹೊಂದಿದ್ದಾರೆ. ಈ ಕಾರಿನಲ್ಲಿಯೇ ಇವರು ಹೆಚ್ಚಾಗಿ ಓಡಾಡುತ್ತಾರೆ. ಮಾರುತಿ ಸುಜುಕಿ ಕಂಪನಿಯು ಈ ಕಾರಿನ ಉತ್ಪಾದನೆಯನ್ನು ಸ್ಥಗಿತಗೊಳಿಸಿದೆ.

ಸಾಧಾರಣ ಕಾರುಗಳಲ್ಲಿ ಓಡಾಡುವ ಖ್ಯಾತ ನಟರಿವರು..!

ಜಾಕಿ ಶ್ರಾಫ್

ಜಾಕಿ ಶ್ರಾಫ್ ಈ ಹಿಂದೆ ನಾಯಕ ನಟನಾಗಿ ನಟಿಸುತ್ತಿದ್ದರು. ಈಗ ಹಲವಾರು ಚಿತ್ರಗಳಲ್ಲಿ ಪ್ರಮುಖ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಇವರು ತಮ್ಮ ಪ್ರಯಾಣಕ್ಕಾಗಿ ಟೊಯೊಟಾ ಇನೊವಾ ಕಾರ್ ಅನ್ನು ಹೆಚ್ಚು ಬಳಸುತ್ತಾರೆ. ಇವರ ಬಳಿ ಬೆಂಟ್ಲಿ ಕಾರಿದ್ದರೂ ಸಹ ಟೊಯೊಟಾ ಇನೊವಾ ಕಾರಿನಲ್ಲಿ ಹೆಚ್ಚು ಓಡಾಡುತ್ತಾರೆ.

ಸಾಧಾರಣ ಕಾರುಗಳಲ್ಲಿ ಓಡಾಡುವ ಖ್ಯಾತ ನಟರಿವರು..!

ಅನಿಲ್ ಕಪೂರ್

ಮಿ.ಇಂಡಿಯಾ ಎಂದು ಕರೆಯಲಾಗುವ ಅನಿಲ್ ಕಪೂರ್‍‍ರವರು ಸುಮಾರು 40 ವರ್ಷಗಳಿಂದ ಬಾಲಿವುಡ್ ಚಿತ್ರರಂಗದಲ್ಲಿದ್ದಾರೆ. ಬಾಲಿವುಡ್‍‍ನ ಶ್ರೀಮಂತ ನಟರಲ್ಲಿ ಇವರೂ ಒಬ್ಬರು. ಇವರ ಬಳಿ ಬಿ‍ಎಂ‍‍ಡಬ್ಲ್ಯು, ಆಡಿ ಹಾಗೂ ಬೆಂಝ್ ಕಾರುಗಳಿವೆ.

ಸಾಧಾರಣ ಕಾರುಗಳಲ್ಲಿ ಓಡಾಡುವ ಖ್ಯಾತ ನಟರಿವರು..!

ಆದರೆ ಇವರು ಹೆಚ್ಚಾಗಿ ಟಾಟಾ ಕಂಪನಿಯ ಸಫಾರಿ ಸ್ಟಾರ್ಮ್ ಎಸ್‍‍ಯುವಿಯಲ್ಲಿ ಓಡಾಡುತ್ತಾರೆ. ಈ ಕಾರ್ ಅನ್ನು ಟಾಟಾ ಮೋಟಾರ್ಸ್ ಗಿಫ್ಟ್ ಆಗಿ ನೀಡಿದೆಯೆಂದು ಹೇಳಲಾಗಿದೆ. 2.2 ಲೀಟರಿನ ಡೀಸೆಲ್ ಎಂಜಿನ್ ಹೊಂದಿರುವ ಈ ಕಾರಿನಲ್ಲಿ ಮ್ಯಾನುವಲ್ ಗೇರ್‍‍ಬಾಕ್ಸ್ ಅಳವಡಿಸಲಾಗಿದೆ.

ಸಾಧಾರಣ ಕಾರುಗಳಲ್ಲಿ ಓಡಾಡುವ ಖ್ಯಾತ ನಟರಿವರು..!

ದಿಶಾ ಪಟಾನಿ

ದಿಶಾ ಪಟಾನಿ ಬಾಲಿವುಡ್ ಚಿತ್ರರಂಗದ ಉದಯೋನ್ಮುಖ ನಟಿ. ದಿಶಾ ಪಟಾನಿರವರ ಬಳಿ ಮರ್ಸಿಡಿಸ್ ಬೆಂಝ್ ಇ ಕ್ಲಾಸ್, ಲ್ಯಾಂಡ್ ರೋವರ್ ರೇಂಜ್ ರೋವರ್, ಬಿ‍ಎಂ‍ಡಬ್ಲ್ಯು 7 ಸೀರಿಸ್ ಕಾರುಗಳಿವೆ. ಆದರೆ ಇವರು ಹೆಚ್ಚಾಗಿ ಹೋಂಡಾ ಸಿವಿಕ್ ಹಾಗೂ ಶೆವ್ರೊಲೆಟ್ ಕ್ರೂಸ್ ಕಾರುಗಳಲ್ಲಿ ಓಡಾಡುತ್ತಾರೆ.

Most Read Articles

Kannada
English summary
Famous Bollywood actors humble cars. Read in Kannada.
Story first published: Tuesday, March 3, 2020, 17:13 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X