Just In
Don't Miss!
- Movies
ಜನವರಿ 22ರಂದು ಐದು ಕನ್ನಡ ಸಿನಿಮಾ ಬಿಡುಗಡೆ
- News
ಲಿಂಗಾಂಬೂದಿಪಾಳ್ಯ ಕೆರೆಗೆ ಹರಿಯಲಿದೆ ಕೆಆರ್ಎಸ್ ನೀರು
- Lifestyle
ಈ 3 ವಸ್ತುಗಳನ್ನು ಹಾಕಿ ಮಾಡಿದ ಜ್ಯೂಸ್ ಕುಡಿದರೆ ಬೊಜ್ಜು ಕರುಗುತ್ತೆ, ಸೌಂದರ್ಯ ಹೆಚ್ಚುತ್ತೆ
- Finance
1986ರಿಂದ 2021 ಸೆನ್ಸೆಕ್ಸ್ ಪ್ರಮುಖ ಮೈಲುಗಲ್ಲುಗಳು: 50,000 ಪಾಯಿಂಟ್ ದಾಖಲೆ ಹಾದಿ
- Sports
ತವರಿಗೆ ಮರಳಿದ ಟೀಮ್ ಇಂಡಿಯಾ: ಮುಂಬೈನಲ್ಲಿ ರಹಾನೆಗೆ ಅದ್ದೂರಿ ಸ್ವಾಗತ
- Education
BMRCL Recruitment 2021: ಸೀನಿಯರ್ ಅರ್ಬನ್ ಮತ್ತು ಟ್ರಾನ್ಸ್ ಪೋರ್ಟ್ ಪ್ಲಾನರ್ ಹುದ್ದೆಗಳಿಗೆ ಅರ್ಜಿ ಆಹ್ವಾನ
- Technology
ಒನ್ಪ್ಲಸ್ ನಾರ್ಡ್ ಜುಲೈ 15 ರಿಂದ ಅಮೆಜಾನ್ ತಾಣದಲ್ಲಿ ಪ್ರಿ-ಆರ್ಡರ್ಗೆ ಲಭ್ಯವಿದೆ; ಖರೀದಿಸುವಲ್ಲಿ ಮೊದಲಿಗರಾಗಿರಿ!
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
ಫಾಸ್ಟ್‌ಟ್ಯಾಗ್ ಕಡ್ಡಾಯವನ್ನು ಮತ್ತೊಮ್ಮೆ ಮುಂದೂಡಿಕೆ ಮಾಡಲು ಮುಂದಾದ ಎನ್‌ಹೆಚ್ಎಐ
ಜನವರಿ 1ರಿಂದ ರಾಷ್ಟ್ರೀಯ ಹೆದ್ದಾರಿಗಳಲ್ಲಿ ಹಾಯ್ದುಹೊಗುವ ಪ್ರತಿಯೊಂದು ವಾಹನವು ಫಾಸ್ಟ್‌ಟ್ಯಾಗ್ ಹೊಂದಿರಲೇಬೇಕೆಂಬ ಕಡ್ಡಾಯ ನಿಯಮವನ್ನು ಜಾರಿಗೆ ತರವಾಗುತ್ತಿದ್ದು, ನಗದು ಪಾವತಿ ಮಾಡುವ ವಾಹನ ಮಾಲೀಕರ ಇಳಿಕೆಯಾಗದ ಹಿನ್ನಲೆಯಲ್ಲಿ ಮತ್ತೊಮ್ಮೆ ಕಡ್ಡಾಯ ದಿನಾಂಕವನ್ನು ಮುಂದೂಡಿಕೆ ಮಾಡಲಾಗುತ್ತಿದೆ.

ರಾಷ್ಟ್ರೀಯ ಹೆದ್ದಾರಿಗಳಲ್ಲಿ ಶೇ.100ರಷ್ಟು ನಗದುರಹಿತ ಶುಲ್ಕ ಪಾವತಿ ಸೌಲಭ್ಯವನ್ನು ಜಾರಿಗೊಳಿಸುವ ಸಂಬಂಧ ಹಲವಾರು ಬಾರಿ ಕಡ್ಡಾಯ ಫಾಸ್ಟ್‌ಟ್ಯಾಗ್ ಅಳಡಿಕೆಗೆ ಗಡುವು ವಿಧಿಸಿದ್ದ ಕೇಂದ್ರ ಹೆದ್ದಾರಿ ಅಭಿವೃದ್ದಿ ಪ್ರಾಧಿಕಾರವು 2021ರ ಜನವರಿ 1 ರಿಂದ ಮತ್ತೊಮ್ಮೆ ಕಡ್ಡಾಯ ಮಾಡುವುದಾಗಿ ಹೇಳಿಕೊಂಡಿತ್ತು. ಆದರೆ ಕಡ್ಡಾಯ ನಿಯಮದ ನಡುವೆಯೂ ಹಣಪಾವತಿ ಮಾಡುವ ವಾಹನ ಮಾಲೀಕರ ಸಂಖ್ಯೆ ಮಾತ್ರ ಕಡಿಮೆಯಾಗುತ್ತಿಲ್ಲ.

2016ರಿಂದಲೇ ಚಾಲ್ತಿಯಲ್ಲಿರುವ ಫಾಸ್ಟ್‌ಟ್ಯಾಗ್ ಸೌಲಭ್ಯವನ್ನು ಕಳೆದ ಒಂದು ವರ್ಷದ ಅವಧಿಯಲ್ಲಿ ಕಳೆದ ವರ್ಷಕ್ಕಿಂತಲೂ ಶೇ.400 ರಷ್ಟು ವಾಹನ ಮಾಲೀಕರು ಹೊಸ ಶುಲ್ಕ ಪಾವತಿ ಸೌಲಭ್ಯವನ್ನು ಅಳವಡಿಸಿಕೊಂಡಿದ್ದು, ಇದುವರೆಗೆ ಶೇ.70 ವಾಹನಗಳಲ್ಲಿ ಹೊಸ ಸೌಲಭ್ಯವು ಅಳವಡಿಕೆಯಾಗಿದೆ.

ಆದರೆ ಶೇ.100 ರಷ್ಟು ವಾಹನಗಳಲ್ಲೂ ಫಾಸ್ಟ್‌ಟ್ಯಾಗ್ ಜೋಡಣೆ ಮಾಡಬೇಕೆಂಬ ಕೇಂದ್ರ ಹೆದ್ದಾರಿ ಅಭಿವೃದ್ದಿ ಪ್ರಾಧಿಕಾರದ ಯೋಜನೆಗೆ ವಾಹನ ಮಾಲೀಕರು ಮಾತ್ರ ತಲೆಕೆಡಿಸಿಕೊಳ್ಳುತ್ತಿಲ್ಲ. ಫಾಸ್ಟ್‌ಟ್ಯಾಗ್ ಲೈನ್‌ಗಳಲ್ಲಿ ನುಗ್ಗುವ ಫಾಸ್ಟ್‌ಟ್ಯಾಗ್ ರಹಿತ ವಾಹನ ಮಾಲೀಕರಿಗೆ ದುಪ್ಪಟ್ಟ ಶುಲ್ಕ ವಸೂಲಿ ಮಾಡಿದರೂ ಇನ್ನು ಕೂಡಾ ಫಾಸ್ಟ್‌ಟ್ಯಾಗ್ ಬಳಕೆದಾರರ ಸಂಖ್ಯೆಯು ನಿಗದಿತ ಮಟ್ಟದಲ್ಲಿ ಹೆಚ್ಚುತ್ತಿಲ್ಲ.

ಒಂದು ವೇಳೆ ಫಾಸ್ಟ್‌ಟ್ಯಾಗ್ ಕಡ್ಡಾಯವಾದ ನಂತರ ನಗದು ಪಾವತಿ ಮಾಡುವ ಲೈನ್‌ಗಳನ್ನು ಸಂಪೂರ್ಣವಾಗಿ ಮಚ್ಚಲಿರುವ ಹೆದ್ದಾರಿ ಪ್ರಾಧಿಕಾರವು ಪೂರ್ಣ ಪ್ರಮಾಣದಲ್ಲಿ ಫಾಸ್ಟ್‌ಟ್ಯಾಗ್ ಮೂಲಕವೇ ಶುಲ್ಕ ಸಂಗ್ರಹಣೆಗೆ ಸಿದ್ದತೆ ನಡೆಸಿದ್ದು, ಫಾಸ್ಟ್‌ಟ್ಯಾಗ್ ಇಲ್ಲದ ವಾಹನ ಸವಾರರು ದುಪ್ಪಟ್ಟ ಶುಲ್ಕ ಪಾವತಿ ಮಾಡಬೇಕಾದ ಪರಿಸ್ಥಿತಿ ಎದುರಾಗುತ್ತದೆ. ಹೀಗಾಗಿ ಫಾಸ್ಟ್‌ಟ್ಯಾಗ್ ಸೌಲಭ್ಯವನ್ನು ಕಡ್ಡಾಯವಾಗಿ ಬಳಕೆ ಮಾಡಿ ಎನ್ನುವ ಹೆದ್ದಾರಿ ಪ್ರಾಧಿಕಾರದ ಮನವಿಗೆ ಇನ್ನು ಹಲವು ವಾಹನ ಮಾಲೀಕರು ತಲೆಕೆಡಿಸಿಕೊಳ್ಳುತ್ತಿಲ್ಲ.

ಫಾಸ್ಟ್‌ಟ್ಯಾಗ್ ಬಳಕೆದಾರರ ಪ್ರಮಾಣದಲ್ಲಿ ಶೇ.90 ರಷ್ಟು ಹೆಚ್ಚಳವಾಗುವ ತನಕ ಕಾದುನೋಡಲು ಮುಂದಾಗಿರುವ ಹೆದ್ದಾರಿ ಅಭಿವೃದ್ದಿ ಪ್ರಾಧಿಕಾರವು ಮುಂದಿನ ಕೆಲವೇ ತಿಂಗಳಿನಲ್ಲಿ ಹೊಸ ಸೌಲಭ್ಯವನ್ನು ಕಡ್ಡಾಯ ಮಾಡುವ ಸಾಧ್ಯತೆಗಳಿದ್ದು, ಫಾಸ್ಟ್‌ಟ್ಯಾಗ್ ಬಳಕೆಯನ್ನು ಉತ್ತೇಜಿಸುವ ಸಂಬಂಧ ಹಲವಾರು ಹೊಸ ಬದಲಾವಣೆಗಳ ಪರಿಚಯಿಸುವ ಮೂಲಕ ಬಳಕೆದಾರರಿಗೆ ಹೊಸ ಸೌಲಭ್ಯವನ್ನು ಸರಳಗೊಳಿಸಲಾಗಿದೆ.

ಹೆದ್ದಾರಿ ಅಭಿವೃದ್ದಿ ಪ್ರಾಧಿಕಾರವು ಫಾಸ್ಟ್‌ಟ್ಯಾಗ್ ಬಳಕೆದಾರರಿಗೆ ಮತ್ತಷ್ಟು ಸುಲಭವಂತೆ ಅಪ್ಲಿಕೇಶನ್‌ನಲ್ಲಿ ಹೊಸ ವೈಶಿಷ್ಟ್ಯತೆಗಳನ್ನು ನವೀಕರಿಸಿದ್ದು, ಫಾಸ್ಟ್‌ಟ್ಯಾಗ್ ಆಪ್‌ನಲ್ಲಿ ಪರಿಚಯಿಸಿರುವ ಹೊಸ ವೈಶಿಷ್ಟ್ಯತೆಯಿಂದಾಗಿ ಖಾತೆಯಲ್ಲಿ ಬ್ಯಾಲೆನ್ಸ್ ಸ್ಥಿತಿಗತಿಯನ್ನು ಸುಲಭವಾಗಿ ತಿಳಿದುಕೊಳ್ಳಬಹುದಾಗಿದೆ.

ಆ್ಯಪ್‌ನಲ್ಲಿ ಲಭ್ಯವಿರುವ ಬ್ಯಾಲೆನ್ಸ್ ಚೆಕ್ ಸ್ಟೇಟಸ್ ಆಯ್ಕೆಯನ್ನು ಬಳಕೆ ಮಾಡಿಕೊಂಡು ಹಣದ ಲಭ್ಯತೆಯನ್ನು ತಿಳಿಯಬಹುದಾಗಿದ್ದು, ಇದು ಟೋಲ್‌ಗಳಲ್ಲಿ ವಾಹನ ಮಾಲೀಕರು ಅನಾವಶ್ಯಕವಾಗಿ ಕಾಯುವುದನ್ನು ತಪ್ಪಿಸುತ್ತದೆ.
MOST READ: ಪ್ರತಿ ಚಾರ್ಜ್‌ಗೆ ಗರಿಷ್ಠ 509ಕಿ.ಮೀ ಮೈಲೇಜ್ ನೀಡಲಿದೆ ಸ್ಕೋಡಾ ಎನ್ಯಾಕ್ ಎಲೆಕ್ಟ್ರಿಕ್ ಎಸ್‌ಯುವಿ..!

ಬ್ಯಾಲೆನ್ಸ್ ಚೆಕ್ ಸ್ಟೇಟಸ್ ಆಯ್ಕೆಯನ್ನು ಬಳಕೆ ಮಾಡಿದ ನಂತರ ಹಣದ ಲಭ್ಯತೆ ಕುರಿತಂತೆ ಮಾಹಿತಿ ನೀಡುವ ಫಾಸ್ಟ್‌ಟ್ಯಾಗ್ ಆ್ಯಪ್‌ನಲ್ಲಿ ನಿಗದಿತ ಮಟ್ಟದ ಬ್ಯಾನೆನ್ಸ್ ಇದ್ದಲ್ಲಿ ಹಸಿರು ಬಣ್ಣವನ್ನು, ನಿಗದಿತ ಮಟ್ಟದ ಬ್ಯಾನೆನ್ಸ್ ಇಲ್ಲವಾದಲ್ಲಿ ಆರೇಂಜ್ ಬಣ್ಣವನ್ನು ತೊರಿಸುತ್ತದೆ.

ಒಂದು ವೇಳೆ ಫಾಸ್ಟ್‌ಟ್ಯಾಗ್ ಖಾತೆಯಲ್ಲಿ ನಿಗದಿತ ಮಟ್ಟಕ್ಕಿಂತಲೂ ಕಡಿಮೆ ಬ್ಯಾಲೆನ್ಸ್ ಹೊಂದಿದ್ದಲ್ಲಿ ರೆಡ್ ಬಣ್ಣದ ಮೂಲಕ ರೀಚಾರ್ಜ್‌ಗೆ ಸೂಚಿಸಲಿದ್ದು, ಅತಿ ಸುಲಭವಾಗಿ ಬ್ಯಾನೆಲ್ಸ್ ಚೆಕ್ ಸೌಲಭ್ಯದೊಂದಿಗೆ ಟೋಲ್ ಪ್ಲಾಜಾಗಳಲ್ಲಿರುವ ಪಾಯಿಂಟ್ ಆಫ್ ಸೇಲ್‌ಗಳ ಮೂಲಕ ರೀಚಾರ್ಜ್ ಮಾಡಿಕೊಳ್ಳಬಹುದಾಗಿದೆ.
MOST READ: 2020ರ ಅವಧಿಯಲ್ಲಿ ಬಿಡುಗಡೆಯಾದ ಪ್ರಮುಖ ಹತ್ತು ಕಾರುಗಳಿವು..!

ಇದರೊಂದಿಗೆ ಬಳಕೆದಾರರಿಗೆ ಮತ್ತಷ್ಟು ಸುಲಭವಾಗುವಂತೆ ಕಪ್ಪು ಪಟ್ಟಿಯಲ್ಲಿರುವ ಖಾತೆಗಳನ್ನು ರಿಫ್ರೆಶ್ ಮಾಡಲು 10 ನಿಮಿಷದಿಂದ 3 ನಿಮಿಷಗಳಿಗೆ ಇಳಿಕೆ ಮಾಡಿದ್ದು, ಇದು ಕಪ್ಪು ಪಟ್ಟಿಯಲ್ಲಿರುವ ಖಾತೆಗಳನ್ನು ತಕ್ಷಣವೇ ಸಾಮಾನ್ಯ ಖಾತೆಗಳ ಪಟ್ಟಿಯಲ್ಲಿ ಸೇರ್ಪಡೆಯಾಗುವಂತೆ ಮಾಡುತ್ತದೆ. ಇದರಿಂದ ವಾಹನ ಮಾಲೀಕರು ಖಾತೆಯಲ್ಲಿ ಹಣ ಕಡಿಮೆಯಾದರೂ ತಕ್ಷಣವೇ ರೀಚಾರ್ಜ್ ಮಾಡುವ ಮೂಲಕ ಟೋಲ್ ಬಳಕೆ ಮಾಡಬಹುದಾಗಿದೆ.