ಜನವರಿ 1ರಿಂದ ಕಡ್ಡಾಯವಾಗಿ ಜಾರಿಯಾಬೇಕಿದ್ದ ಫಾಸ್ಟ್‌ಟ್ಯಾಗ್ ಅಳವಡಿಕೆ ಮತ್ತೆ ಮುಂದೂಡಿಕೆ

ರಾಷ್ಟ್ರೀಯ ಹೆದ್ದಾರಿಗಳಲ್ಲಿ ಹಾಯ್ದುಹೊಗುವ ಪ್ರತಿಯೊಂದು ವಾಹನವು ಜನವರಿ 1ರಿಂದ ಕಡ್ಡಾಯವಾಗಿ ಫಾಸ್ಟ್‌ಟ್ಯಾಗ್ ಸೌಲಭ್ಯವನ್ನು ಹೊಂದಿರಲೇಬೇಕೆಂಬ ನಿಯಮವನ್ನು ಜಾರಿಗೆ ಮುಂದಾಗಿದ್ದ ಕೇಂದ್ರ ಹೆದ್ದಾರಿ ಅಭಿವೃದ್ದಿ ಪ್ರಾಧಿಕಾರವು ಕಾರಣಾಂತರ ಮತ್ತೊಮ್ಮೆ ಕಡ್ಡಾಯ ನಿಯಮವನ್ನು ಮುಂದೂಡಿಕೆ ಮಾಡಿದೆ.

ಜನವರಿ 1ರಿಂದ ಕಡ್ಡಾಯವಾಗಿ ಜಾರಿಯಾಬೇಕಿದ್ದ ಫಾಸ್ಟ್‌ಟ್ಯಾಗ್ ಅಳವಡಿಕೆ ಮತ್ತೆ ಮುಂದೂಡಿಕೆ

ಫಾಸ್ಟ್‌ಟ್ಯಾಗ್ ಮೂಲಕ ಶೇ.100ರಷ್ಟು ನಗದುರಹಿತ ಟೋಲ್ ಶುಲ್ಕ ಪಾವತಿ ಸೌಲಭ್ಯವನ್ನು ಜಾರಿಗೊಳಿಸುವ ಸಂಬಂಧ ಹಲವಾರು ಬಾರಿ ಕಡ್ಡಾಯ ಫಾಸ್ಟ್‌ಟ್ಯಾಗ್ ಅಳಡಿಕೆಯ ಗಡುವು ನೀಡಿದ್ದ ಕೇಂದ್ರ ಹೆದ್ದಾರಿ ಅಭಿವೃದ್ದಿ ಪ್ರಾಧಿಕಾರವು ಕಳೆದ ವಾರವಷ್ಟೇ 2021ರ ಜನವರಿ 1 ರಿಂದ ಕಡ್ಡಾಯವಾಗಿ ಜಾರಿಗೆ ತರುವುದಾಗಿ ಹೇಳಿಕೊಂಡಿತ್ತು. ಆದರೆ ಕಡ್ಡಾಯ ನಿಯಮ ಜಾರಿಗೆ ದಿನಗಣನೆಯ ನಡುವೆಯೂ ನಗದು ಮೂಲಕ ಶುಲ್ಕ ಪಾವತಿ ಮಾಡುವ ವಾಹನ ಮಾಲೀಕರ ಸಂಖ್ಯೆ ಮಾತ್ರ ಕಡಿಮೆಯಾಗುತ್ತಿಲ್ಲ.

ಜನವರಿ 1ರಿಂದ ಕಡ್ಡಾಯವಾಗಿ ಜಾರಿಯಾಬೇಕಿದ್ದ ಫಾಸ್ಟ್‌ಟ್ಯಾಗ್ ಅಳವಡಿಕೆ ಮತ್ತೆ ಮುಂದೂಡಿಕೆ

ಒಂದು ವೇಳೆ ಫಾಸ್ಟ್‌ಟ್ಯಾಗ್ ಕಡ್ಡಾಯವಾದ ನಂತರ ನಗದು ಪಾವತಿ ಮಾಡುವ ಲೈನ್‌ಗಳನ್ನು ಸಂಪೂರ್ಣವಾಗಿ ಮಚ್ಚಲಿರುವ ಹೆದ್ದಾರಿ ಪ್ರಾಧಿಕಾರವು ಪೂರ್ಣ ಪ್ರಮಾಣದಲ್ಲಿ ಫಾಸ್ಟ್‌ಟ್ಯಾಗ್ ಮೂಲಕವೇ ಶುಲ್ಕ ಸಂಗ್ರಹಣೆಗೆ ಮಾಡಲಿದೆ.

ಜನವರಿ 1ರಿಂದ ಕಡ್ಡಾಯವಾಗಿ ಜಾರಿಯಾಬೇಕಿದ್ದ ಫಾಸ್ಟ್‌ಟ್ಯಾಗ್ ಅಳವಡಿಕೆ ಮತ್ತೆ ಮುಂದೂಡಿಕೆ

ಹೊಸ ಸೌಲಭ್ಯವು ಕಡ್ಡಾಯವಾದ ನಂತರ ಫಾಸ್ಟ್‌ಟ್ಯಾಗ್ ಇಲ್ಲದ ವಾಹನ ಸವಾರರು ದುಪ್ಪಟ್ಟ ಶುಲ್ಕ ಪಾವತಿ ಮಾಡಬೇಕಾದ ಪರಿಸ್ಥಿತಿ ಎದುರಾಗಲಿದೆ. ಹೀಗಾಗಿ ಫಾಸ್ಟ್‌ಟ್ಯಾಗ್ ಸೌಲಭ್ಯದ ಕಡ್ಡಾಯಕ್ಕೆ ಮತ್ತಷ್ಟು ಸಮಯಾವಕಾಶ ತೆಗೆದುಕೊಳ್ಳುತ್ತಿರುವ ಹೆದ್ದಾರಿ ಪ್ರಾಧಿಕಾರವು ಫೆಬ್ರುವರಿ 15ಕ್ಕೆ ಫಾಸ್ಟ್‌ಟ್ಯಾಗ್ ಕಡ್ಡಾಯವನ್ನು ಮತ್ತೊಮ್ಮೆ ಮುಂದೂಡಿಕೆ ಮಾಡಿದೆ.

ಜನವರಿ 1ರಿಂದ ಕಡ್ಡಾಯವಾಗಿ ಜಾರಿಯಾಬೇಕಿದ್ದ ಫಾಸ್ಟ್‌ಟ್ಯಾಗ್ ಅಳವಡಿಕೆ ಮತ್ತೆ ಮುಂದೂಡಿಕೆ

2016ರಿಂದಲೇ ಚಾಲ್ತಿಯಲ್ಲಿರುವ ಫಾಸ್ಟ್‌ಟ್ಯಾಗ್ ಸೌಲಭ್ಯವನ್ನು ಕಳೆದ ಒಂದು ವರ್ಷದ ಅವಧಿಯಲ್ಲಿ ಕಳೆದ ವರ್ಷಕ್ಕಿಂತಲೂ ಶೇ.400 ರಷ್ಟು ವಾಹನ ಮಾಲೀಕರು ಹೊಸ ಶುಲ್ಕ ಪಾವತಿ ಸೌಲಭ್ಯವನ್ನು ಅಳವಡಿಸಿಕೊಂಡಿದ್ದು, ಇದುವರೆಗೆ ಶೇ.70 ವಾಹನಗಳಲ್ಲಿ ಮಾತ್ರವೇ ಹೊಸ ಸೌಲಭ್ಯವು ಅಳವಡಿಕೆಯಾಗಿದೆ. ಆದರೆ ಶೇ.100 ರಷ್ಟು ವಾಹನಗಳಲ್ಲೂ ಫಾಸ್ಟ್‌ಟ್ಯಾಗ್ ಜೋಡಣೆ ಮಾಡಬೇಕೆಂಬ ಕೇಂದ್ರ ಹೆದ್ದಾರಿ ಅಭಿವೃದ್ದಿ ಪ್ರಾಧಿಕಾರದ ಯೋಜನೆಗೆ ವಾಹನ ಮಾಲೀಕರು ಮಾತ್ರ ತಲೆಕೆಡಿಸಿಕೊಳ್ಳುತ್ತಿಲ್ಲ.

ಜನವರಿ 1ರಿಂದ ಕಡ್ಡಾಯವಾಗಿ ಜಾರಿಯಾಬೇಕಿದ್ದ ಫಾಸ್ಟ್‌ಟ್ಯಾಗ್ ಅಳವಡಿಕೆ ಮತ್ತೆ ಮುಂದೂಡಿಕೆ

ಫಾಸ್ಟ್‌ಟ್ಯಾಗ್ ಲೈನ್‌ಗಳಲ್ಲಿ ನುಗ್ಗುವ ಫಾಸ್ಟ್‌ಟ್ಯಾಗ್ ರಹಿತ ವಾಹನ ಮಾಲೀಕರಿಗೆ ದುಪ್ಪಟ್ಟ ಶುಲ್ಕ ವಸೂಲಿ ಮಾಡಿದರೂ ಇನ್ನು ಕೂಡಾ ಫಾಸ್ಟ್‌ಟ್ಯಾಗ್ ಬಳಕೆದಾರರ ಸಂಖ್ಯೆಯು ನಿಗದಿತ ಮಟ್ಟದಲ್ಲಿ ಹೆಚ್ಚುತ್ತಿಲ್ಲ. ಹೀಗಾಗಿ ಹೊಸ ಸೌಲಭ್ಯದ ಕಡ್ಡಾಯಕ್ಕೆ ಮತ್ತೊಂದು ಗಡುವು ನೀಡುತ್ತಿರುವ ಹೆದ್ದಾರಿ ಅಭಿವೃದ್ದಿ ಪ್ರಾಧಿಕಾರವು ಫಾಸ್ಟ್‌ಟ್ಯಾಗ್ ಬಳಕೆಯನ್ನು ಹೆಚ್ಚಿಸುವತ್ತ ಗಮನಹರಿಸಿದೆ.

ಜನವರಿ 1ರಿಂದ ಕಡ್ಡಾಯವಾಗಿ ಜಾರಿಯಾಬೇಕಿದ್ದ ಫಾಸ್ಟ್‌ಟ್ಯಾಗ್ ಅಳವಡಿಕೆ ಮತ್ತೆ ಮುಂದೂಡಿಕೆ

ಫಾಸ್ಟ್‌ಟ್ಯಾಗ್ ಬಳಕೆದಾರರ ಪ್ರಮಾಣದಲ್ಲಿ ಶೇ.90 ರಷ್ಟು ಹೆಚ್ಚಳವಾಗುವ ತನಕ ಕಾದುನೋಡಲು ಮುಂದಾಗಿರುವ ಹೆದ್ದಾರಿ ಅಭಿವೃದ್ದಿ ಪ್ರಾಧಿಕಾರವು ಫಾಸ್ಟ್‌ಟ್ಯಾಗ್ ಬಳಕೆಯನ್ನು ಉತ್ತೇಜಿಸುವ ಸಂಬಂಧ ಹಲವಾರು ಹೊಸ ಬದಲಾವಣೆಗಳ ಪರಿಚಯಿಸುವ ಮೂಲಕ ಬಳಕೆದಾರರನ್ನು ಆಕರ್ಷಿಸುತ್ತಿದೆ.

ಜನವರಿ 1ರಿಂದ ಕಡ್ಡಾಯವಾಗಿ ಜಾರಿಯಾಬೇಕಿದ್ದ ಫಾಸ್ಟ್‌ಟ್ಯಾಗ್ ಅಳವಡಿಕೆ ಮತ್ತೆ ಮುಂದೂಡಿಕೆ

ಹೆದ್ದಾರಿ ಅಭಿವೃದ್ದಿ ಪ್ರಾಧಿಕಾರವು ಫಾಸ್ಟ್‌ಟ್ಯಾಗ್ ಬಳಕೆದಾರರಿಗೆ ಮತ್ತಷ್ಟು ಸುಲಭವಂತೆ ಅಪ್ಲಿಕೇಶನ್‌ನಲ್ಲಿ ಹೊಸ ವೈಶಿಷ್ಟ್ಯತೆಗಳನ್ನು ನವೀಕರಿಸಿದ್ದು, ಫಾಸ್ಟ್‌ಟ್ಯಾಗ್ ಆಪ್‌ನಲ್ಲಿ ಪರಿಚಯಿಸಿರುವ ಹೊಸ ವೈಶಿಷ್ಟ್ಯತೆಯಿಂದಾಗಿ ಖಾತೆಯಲ್ಲಿ ಬ್ಯಾಲೆನ್ಸ್ ಸ್ಥಿತಿಗತಿಯನ್ನು ಸುಲಭವಾಗಿ ತಿಳಿದುಕೊಳ್ಳಬಹುದಾಗಿದೆ.

MOST READ: ಪ್ರತಿ ಚಾರ್ಜ್‌ಗೆ ಗರಿಷ್ಠ 509ಕಿ.ಮೀ ಮೈಲೇಜ್ ನೀಡಲಿದೆ ಸ್ಕೋಡಾ ಎನ್ಯಾಕ್ ಎಲೆಕ್ಟ್ರಿಕ್ ಎಸ್‌ಯುವಿ..!

ಜನವರಿ 1ರಿಂದ ಕಡ್ಡಾಯವಾಗಿ ಜಾರಿಯಾಬೇಕಿದ್ದ ಫಾಸ್ಟ್‌ಟ್ಯಾಗ್ ಅಳವಡಿಕೆ ಮತ್ತೆ ಮುಂದೂಡಿಕೆ

ಆ್ಯಪ್‌ನಲ್ಲಿ ಲಭ್ಯವಿರುವ ಬ್ಯಾಲೆನ್ಸ್ ಚೆಕ್ ಸ್ಟೇಟಸ್ ಆಯ್ಕೆಯನ್ನು ಬಳಕೆ ಮಾಡಿಕೊಂಡು ಹಣದ ಲಭ್ಯತೆಯನ್ನು ತಿಳಿಯಬಹುದಾಗಿದ್ದು, ಇದು ಟೋಲ್‌ಗಳಲ್ಲಿ ವಾಹನ ಮಾಲೀಕರು ಅನಾವಶ್ಯಕವಾಗಿ ಕಾಯುವುದನ್ನು ತಪ್ಪಿಸುತ್ತದೆ.

ಜನವರಿ 1ರಿಂದ ಕಡ್ಡಾಯವಾಗಿ ಜಾರಿಯಾಬೇಕಿದ್ದ ಫಾಸ್ಟ್‌ಟ್ಯಾಗ್ ಅಳವಡಿಕೆ ಮತ್ತೆ ಮುಂದೂಡಿಕೆ

ಬ್ಯಾಲೆನ್ಸ್ ಚೆಕ್ ಸ್ಟೇಟಸ್ ಆಯ್ಕೆಯನ್ನು ಬಳಕೆ ಮಾಡಿದ ನಂತರ ಹಣದ ಲಭ್ಯತೆ ಕುರಿತಂತೆ ಮಾಹಿತಿ ನೀಡುವ ಫಾಸ್ಟ್‌ಟ್ಯಾಗ್ ಆ್ಯಪ್‌ನಲ್ಲಿ ನಿಗದಿತ ಮಟ್ಟದ ಬ್ಯಾನೆನ್ಸ್ ಇದ್ದಲ್ಲಿ ಹಸಿರು ಬಣ್ಣವನ್ನು, ನಿಗದಿತ ಮಟ್ಟದ ಬ್ಯಾನೆನ್ಸ್ ಇಲ್ಲವಾದಲ್ಲಿ ಆರೇಂಜ್ ಬಣ್ಣವನ್ನು ತೊರಿಸುತ್ತದೆ.

MOST READ: 2020ರ ಅವಧಿಯಲ್ಲಿ ಬಿಡುಗಡೆಯಾದ ಪ್ರಮುಖ ಹತ್ತು ಕಾರುಗಳಿವು..!

ಜನವರಿ 1ರಿಂದ ಕಡ್ಡಾಯವಾಗಿ ಜಾರಿಯಾಬೇಕಿದ್ದ ಫಾಸ್ಟ್‌ಟ್ಯಾಗ್ ಅಳವಡಿಕೆ ಮತ್ತೆ ಮುಂದೂಡಿಕೆ

ಒಂದು ವೇಳೆ ಫಾಸ್ಟ್‌ಟ್ಯಾಗ್ ಖಾತೆಯಲ್ಲಿ ನಿಗದಿತ ಮಟ್ಟಕ್ಕಿಂತಲೂ ಕಡಿಮೆ ಬ್ಯಾಲೆನ್ಸ್ ಹೊಂದಿದ್ದಲ್ಲಿ ರೆಡ್ ಬಣ್ಣದ ಮೂಲಕ ರೀಚಾರ್ಜ್‌ಗೆ ಸೂಚಿಸಲಿದ್ದು, ಅತಿ ಸುಲಭವಾಗಿ ಬ್ಯಾನೆಲ್ಸ್ ಚೆಕ್ ಸೌಲಭ್ಯದೊಂದಿಗೆ ಟೋಲ್ ಪ್ಲಾಜಾಗಳಲ್ಲಿರುವ ಪಾಯಿಂಟ್ ಆಫ್ ಸೇಲ್‌ಗಳ ಮೂಲಕ ರೀಚಾರ್ಜ್ ಮಾಡಿಕೊಳ್ಳಬಹುದಾಗಿದೆ.

Most Read Articles

Kannada
English summary
Transport ministry extends deadline for using fastag till 15 February 2021.
Story first published: Thursday, December 31, 2020, 16:19 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X