Just In
Don't Miss!
- Finance
ಬಜೆಟ್ 2021: ಸ್ಟ್ಯಾಂಡರ್ಡ್ ಡಿಡಕ್ಷನ್ ರು. 1 ಲಕ್ಷಕ್ಕೆ ಹೆಚ್ಚಳ ನಿರೀಕ್ಷೆ
- Sports
ಬೈರ್ಸ್ಟೋವ್ಗೆ 2 ಪಂದ್ಯಗಳ ವಿಶ್ರಾಂತಿ ನೀಡಿರುವುದನ್ನು ಸಮರ್ಥಿಸಿದ ಇಂಗ್ಲೆಂಡ್ ಕೋಚ್
- Education
WCD Chitradurga Recruitment 2021: ಅಂಗನವಾಡಿಯಲ್ಲಿ 129 ಹುದ್ದೆಗಳಿಗೆ ಅರ್ಜಿ ಆಹ್ವಾನ
- News
ಕೊರೊನಾ ಬಂದಿದ್ದು ಚೀನಾದಿಂದ ಅಲ್ಲ... ಶಿವನಿಂದ, ನಾನೇ ಶಿವ!
- Movies
'ಬೆಲ್ ಬಾಟಂ-2' ಟೈಟಲ್ ಪೋಸ್ಟರ್ ಅನಾವರಣ: ಡಿಟೆಕ್ಟಿವ್ ದಿವಾಕರ್ ಈಸ್ ಬ್ಯಾಕ್
- Lifestyle
ಗರ್ಭಾವಸ್ಥೆಯಲ್ಲಿ ಥೈರಾಯ್ಡ್ ಸಮಸ್ಯೆ: ಇದರ ಅಪಾಯಗಳೇನು, ತಡೆಗಟ್ಟುವುದು ಹೇಗೆ?
- Technology
ಒನ್ಪ್ಲಸ್ ನಾರ್ಡ್ ಜುಲೈ 15 ರಿಂದ ಅಮೆಜಾನ್ ತಾಣದಲ್ಲಿ ಪ್ರಿ-ಆರ್ಡರ್ಗೆ ಲಭ್ಯವಿದೆ; ಖರೀದಿಸುವಲ್ಲಿ ಮೊದಲಿಗರಾಗಿರಿ!
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
ಐಷಾರಾಮಿ ಕಾರು ಮಾದರಿಯಲ್ಲಿ ಮಾಡಿಫೈಗೊಂಡ ಫೋರ್ಡ್ ಇಕೋಸ್ಪೋರ್ಟ್
ಬಹುತೇಕ ವಾಹನ ಮಾಲೀಕರು ತಮ್ಮ ವಾಹನಗಳನ್ನು ಇತರೆ ವಾಹನಗಳಿಂತಲೂ ಭಿನ್ನವಾಗಿ ಕಾಣಲು ಒಂದಿಷ್ಟು ಹಣ ಖರ್ಚು ಮಾಡಿ ಮಾಡಿಫೈ ಮೋರೆ ಹೋಗುವುದು ಇದೀಗ ಸಾಮಾನ್ಯವಾಗಿದೆ. ಇತ್ತೀಚೆಗೆ ಫೋರ್ಡ್ ಇಕೋಸ್ಪೋರ್ಟ್ ಮಾಲೀಕರೊಬ್ಬರು ತಮ್ಮ ಹೊಸ ಕಾರನ್ನು ಮಾಡಿಫೈ ಬಣ್ಣದೊಂದಿಗೆ ರಸ್ತೆಗಳಿಸಿದ್ದು, ಮಾಡಿಫೈ ಇಕೋಸ್ಪೋರ್ಟ್ ಕಾರು ಮಾದರಿಯು ಐಷಾರಾಮಿ ಕಾರಿನಂತೆ ಮಿಂಚುತ್ತಿದೆ.

ಕಂಪ್ಯಾಕ್ಟ್ ಎಸ್‌ಯುವಿ ಕಾರು ಮಾರಾಟದಲ್ಲಿ ತನ್ನದೇ ಆದ ಜನಪ್ರಿಯತೆ ಹೊಂದಿರುವ ಫೋರ್ಡ್ ಇಕೋಸ್ಪೋರ್ಟ್ ಕಾರು ಮಾದರಿಯು ವಿಭಿನ್ನ ತಾಂತ್ರಿಕ ಅಂಶಗಳೊಂದಿಗೆ ಮುಂಚೂಣಿ ಸಾಧಿಸಿದ್ದು, ಇಕೋಸ್ಪೋರ್ಟ್ ಕಾರಿನ ಕಾರ್ಯಕ್ಷಮತೆಯನ್ನು ಮೆಚ್ಚುವ ಲಕ್ಷಾಂತರ ಅಭಿಮಾನಿಗಳಿದ್ದಾರೆ. ಜೊತೆಗೆ ಇಕೋಸ್ಪೋರ್ಟ್ ಮಾದರಿಯನ್ನು ತಮ್ಮಿಷ್ಟದಂತೆ ಮಾಡಿಫೈಗೊಳಿಸುವ ಗ್ರಾಹಕರ ಸಂಖ್ಯೆ ಕೂಡಾ ಹೆಚ್ಚಿದ್ದು, ಇತ್ತೀಚೆಗೆ ಕೇರಳದಲ್ಲಿ ಇಕೋಸ್ಪೋರ್ಟ್ ಕಾರು ಮಾದರಿಗೆ ಕಸ್ಟಮ್ ಆಲ್ ಬ್ಲ್ಯಾಕ್ ಥೀಮ್ ನೀಡಿದ್ದಾನೆ.

ಸಂಪೂರ್ಣವಾಗಿ ಕಪ್ಪು ಬಣ್ಣವನ್ನು ಹೊಂದಿರುವ ಮಾಡಿಫೈ ಇಕೋಸ್ಪೋಟ್ ಕಾರು ಮಾದರಿಯು ದೂರದಿಂದ ಐಷಾರಾಮಿ ಲುಕ್ ಪಡೆದುಕೊಂಡಿದ್ದು, ಕಸ್ಟಮ್ ಆಯಾಲ್ ವೀಲ್ಹ್ ಮತ್ತು ಮತ್ತು ಮುಂಭಾಗದ ಗ್ರಿಲ್‌ನಲ್ಲಿ ದೊಡ್ಡದಾದ ಬ್ರಾಂಡ್ ಲೊಗೊ ಜೋಡಿಸಲಾಗಿಸಲಾಗಿದೆ.

ಆಲ್ ಬ್ಲ್ಯಾಕ್ ಥೀಮ್‌ನೊಂದಿಗೆ ಕಾರಿನ ಒಳಭಾಗದಲ್ಲೂ ಪ್ರಮುಖ ಬದಲಾವಣೆ ಪರಿಚಯಿಸಲಾಗಿದ್ದು, ಆಸನಗಳು ಸಹ ಸಂಪೂರ್ಣ ಕಪ್ಪು ಬಣ್ಣದ ಲೇದರ್ ಆಸನಗಳನ್ನು ಪಡೆದುಕೊಂಡಿರುವುದು ಕಾರಿಗೆ ಬಲಿಷ್ಠ ನೋಟ ನೀಡಿದೆ.

ಕಸ್ಟಮ್ ಡಿಸೈನ್ ಹೊರತುಪಡಿಸಿ ಕಾರಿನ ಎಂಜಿನ್ ಮತ್ತು ಇತರೆ ತಾಂತ್ರಿಕ ಅಂಶಗಳು ಮೂಲ ಮಾದರಿಯಂತೆ ಮುಂದುವರಿಸಲಾಗಿದ್ದು, ಸಾರಿಗೆ ಇಲಾಖೆಯ ನಿಯಮಾವಳಿ ಪ್ರಕಾರವೇ ಮಾಡಿಫೈ ಸೌಲಭ್ಯಗಳನ್ನು ಜೋಡಿಸಲಾಗಿದೆ. ಇನ್ನು ಕಾರು ಮಾಲೀಕರು ಕೇವಲ ಆಕರ್ಷಕಣೆಯ ಉದ್ದೇಶದಿಂದ ಮಾಡಿಫೈ ಮಾಡಿಸುವ ಮೊದಲು ಯಾವೆಲ್ಲಾ ಮಾಡಿಫೈ ಸೌಲಭ್ಯಗಳು ಕಾನೂನಾತ್ಮಕವಾಗಿವೆ ಮತ್ತು ಯಾವೆಲ್ಲಾ ಮಾಡಿಫೈ ಸೌಲಭ್ಯಗಳು ಕಾನೂನುಬಾಹಿರವಾಗಿವೆ ಎಂಬುವುದನ್ನು ಅರಿತು ಮಾಡಿಫೈ ಸೌಲಭ್ಯ ಅಳವಡಿಸಿಕೊಳ್ಳುವುದು ತುಂಬಾ ಮುಖ್ಯವಾದ ವಿಚಾರ.

ಇಲ್ಲವಾದರೆ ಮಾಡಿಫೈ ಸೌಲಭ್ಯಗಳಿಗಾಗಿ ಲಕ್ಷಾಂತರ ಖರ್ಚು ಮಾಡುವುದಲ್ಲದೆ ಅದು ಸಾರಿಗೆ ನಿಯಮಗಳಿಗೆ ವಿರುದ್ಧವಾಗಿದ್ದಲ್ಲಿ ದಂಡ ಕೂಡಾ ಪಾವತಿಸಿಬಹುದಾದ ಪರಿಸ್ಥಿತಿ ಎದುರಾಗಬಹುದು.

ಅದಕ್ಕಾಗಿ ನಿಮ್ಮ ಇಷ್ಟದ ವಾಹನಗಳಿಗೆ ಮಾಡಿಫೈ ಸೌಲಭ್ಯಗಳನ್ನು ಜೋಡಣೆ ಮಾಡುವ ಮುನ್ನ ಸಾಕಷ್ಟು ಎಚ್ಚರಿಕೆ ವಹಿಸಿಬೇಕಿದ್ದು, ಆದಷ್ಟು ಸ್ಟ್ಯಾಂಡರ್ಡ್ ಮಾಡಿಫೈ ಸೌಲಭ್ಯಗಳನ್ನು ಮಾತ್ರ ಬಳಕೆಗೆ ಮಾಡಿ.

ವಾಹನ ಮಾಲೀಕರು ಗಮನಿಸಬೇಕಾದ ಮತ್ತೊಂದು ಪ್ರಮುಖ ವಿಚಾರವೆಂದರೆ ಅತಿಯಾದ ಮಾಡಿಫೈ ಸೌಲಭ್ಯಗಳು ಕಾರುಗಳಿಗೆ ಆಕರ್ಷಣೆ ನೀಡಬಹುದಾದರೂ ವಾಹನಗಳ ಕಾರ್ಯಕ್ಷಮತೆ ಮೇಲೆ ಪರಿಣಾಮ ಬೀರುತ್ತಲ್ಲದೆ ಸುರಕ್ಷಾ ಸೌಲಭ್ಯಗಳ ಕಾರ್ಯನಿರ್ವಹಣೆಗೂ ಅಡಚಣೆ ಉಂಟು ಮಾಡಬಹುದು.

ಅತಿಯಾದ ಮಾಡಿಫೈ ಸೌಲಭ್ಯಗಳು ಹಲವಾರು ಸಂದರ್ಭಗಳಲ್ಲಿ ಕಾರಿನ ಸುರಕ್ಷಾ ಸೌಲಭ್ಯಗಳ ಕಾರ್ಯನಿರ್ವಹಣೆಗೆ ಅಡ್ಡಿ ಮಾಡಿದ ಪರಿಣಾಮ ಅಪಘಾತಗಳಲ್ಲಿ ಪ್ರಯಾಣಿಕರು ಜೀವ ಕಳೆದುಕೊಂಡ ಪ್ರಕರಣಗಳು ದಾಖಲಾಗಿದ್ದು, ಮಾಡಿಫೈ ಸೌಲಭ್ಯಗಳನ್ನು ಪಡೆದುಕೊಳ್ಳುವಾಗ ಅವುಗಳ ಸಾಧಕ ಭಾದಕ ತಿಳಿಯುವುದು ಒಳಿತು.
Image Courtesy: akshay_anil93