ಮಾಡಿಫೈಗೊಂಡು ಮಿಂಚಿದ ಫೋರ್ಡ್ ಎಂಡೀವರ್ ಎಸ್‍ಯುವಿ

ಫೋರ್ಡ್ ಎಂಡೀವರ್ ಭಾರತೀಯ ಮಾರುಕಟ್ಟೆಯಲ್ಲಿ ಜನಪ್ರಿಯ ಎಸ್‍ಯುವಿಗಳಲ್ಲಿ ಒಂದಾಗಿದೆ. ಅಲ್ಲದೇ ಫೋರ್ಡ್ ಎಂಡೀವರ್ ಉತ್ತಮ ಆಫ್-ರೋಡ್ ವಾಹನವಾಗಿದ್ದು, ಆಫ್-ರೋಡ್ ವಿಭಾಗದಲ್ಲಿ ಎಂಡೀವರ್ ಭಾರೀ ಬೇಡಿಕೆಯನ್ನು ಕಾಯ್ದುಕೊಂಡ ಎಸ್‍ಯುವಿಯಾಗಿದೆ.

ಮಾಡಿಫೈಗೊಂಡು ಮಿಂಚಿದ ಫೋರ್ಡ್ ಎಂಡೀವರ್ ಎಸ್‍ಯುವಿ

ಫೋರ್ಡ್ ಎಂಡೀವರ್ ಎಸ್‍ಯುವಿಯನ್ನು ಹಲವು ಆಫ್-ರೋಡ್ ಪ್ರಿಯರು ಖರೀದಿಸಿ ಮಾಡಿಫೈಗೊಳಿಸುತ್ತಾರೆ. ಇದೇ ರೀತಿ ಫೋರ್ಡ್ ಎಂಡೀವರ್ ಎಸ್‍ಯುವಿಯನ್ನು ಮಾಡಿಫೈಗೊಳಿಸಿದ ವೀಡಿಯೋವನ್ನು ಜಿಯಾಲ್ ಕ್ರಿಯೇಷನ್ಸ್ ಯೂಟ್ಯೂಬ್ ಚಾನೆಲ್ ನಲ್ಲಿ ಪೋಸ್ಟ್ ಮಾಡಿದೆ. ಫೋರ್ಡ್ ಎಂಡೀವರ್ ಅನ್ನು ಮಾಡಿಫೈಗೊಳಿಸಿ ಈ ಎಸ್‍ಯುವಿಗೆ ಇಡುಂಬನ್ ಎಂಬ ಹೆಸರನ್ನು ಇಟ್ಟಿದ್ದಾರೆ . ಈ ಫೋರ್ಡ್ ಎಂಡೀವರ್ ಸಂಫೂರ್ಣವಾಗಿ ಮಾಡಿಫೈಗೊಳಿಸಿದ್ದಾರೆ.

ಮಾಡಿಫೈಗೊಂಡು ಮಿಂಚಿದ ಫೋರ್ಡ್ ಎಂಡೀವರ್ ಎಸ್‍ಯುವಿ

ಈ ಫೋರ್ಡ್ ಎಂಡೀವರ್ ಎಸ್‍ಯುವಿಯ ಮುಂಭಾಗದಲ್ಲಿ ಸ್ಟಾಕ್ ಹೆಡ್‌ಲ್ಯಾಂಪ್ ಅನ್ನು ಆಫ್ಟರ್ ಮಾರ್ಕೆಟ್ ಎಲ್ಇಡಿ ಡಿಆರ್ಎಲ್ಗಳೊಂದಿಗೆ ಇರಿಸಲಾಗಿದೆ. ಇನ್ನು ಈ ಎಸ್‍ಯುವಿಗೆ ರಾಪ್ಟರ್ ಎಕ್ಸ್ ಸರಣಿ ಬಾಡಿ ಕಿಟ್ ಅನ್ನು ಅಳವಡಿಸಿದೆ. ಈ ಎಸ್‍ಯುವಿಯು ಅಗ್ರೇಸಿವ್ ಲುಕ್ ಅನ್ನು ಹೊಂದಿದೆ.

MOST READ: ಮೊದಲ ಬಾರಿಗೆ ಸ್ಪಾಟ್ ಟೆಸ್ಟ್​ನಲ್ಲಿ ಕಾಣಿಸಿಕೊಂಡ ಟೊಯೊಟಾ ಫಾರ್ಚೂನರ್ ಫೇಸ್‌ಲಿಫ್ಟ್‌

ಮಾಡಿಫೈಗೊಂಡು ಮಿಂಚಿದ ಫೋರ್ಡ್ ಎಂಡೀವರ್ ಎಸ್‍ಯುವಿ

ಈ ಎಸ್‍ಯುವಿಯ ಅಡಿ ಭಾಗದಲ್ಲಿ ದೊಡ್ಡ ಸ್ಕಿಡ್ ಪ್ಲೇಟ್ ಅನ್ನು ಹೊಂದಿದೆ. ಇನ್ನು ಮುಂಭಾಗದಲ್ಲಿ ಫೋರ್ಡ್ ಬ್ಯಾಡ್ಜಿಂಗ್ ಹೊಂದಿರುವ ಹೊಸ ಗ್ರಿಲ್ ಅನ್ನು ಅಳವಡಿಸಲಾಗಿದೆ. ಈ ಬ್ಯಾಡ್ಜಿಂಗ್ ಆಕರ್ಷಕವಾಗಿ ಕಾಣುತ್ತದೆ.

ಮಾಡಿಫೈಗೊಂಡು ಮಿಂಚಿದ ಫೋರ್ಡ್ ಎಂಡೀವರ್ ಎಸ್‍ಯುವಿ

ಇನ್ನು ಫೋರ್ಡ್ ಎಸ್‍ಯುವಿಯ ಸೈಡ್ ಫ್ರೊಫೈಲ್ ನಲ್ಲಿ ಎಂಟು ಇಂಚಿನ ಫೆಂಡರ್ ಪ್ಲರ್ಸ್ ಅನ್ನು ಹೊಂದಿದೆ, ಅದು ಹೆಚ್ಚು ರಗಡ್ ಲುಕ್ ಅನ್ನು ನೀಡುತ್ತದೆ. ಇನ್ನು ಈ ಎಸ್‍ಯುವಿಯ ಪ್ರಮುಖ ಆಕರ್ಷಣೆ 12 ಹಂತದ ಹೊಂದಾಣಿಕೆ ಮಾಡಬಹುದಾದ ನೈಟ್ರೋಜನ್ ಸಸ್ಪೆಂಕ್ಷನ್ ಅನ್ನು ಒಳಗೊಂಡಿದೆ.

MOST READ: ಬೆಂಗಳೂರಿನಲ್ಲಿ ಸ್ಪಾಟ್ ಟೆಸ್ಟ್ ನಡೆಸಿದ ನಿಸ್ಸಾನ್ ಮ್ಯಾಗ್ನೆಟ್ ಎಸ್‍ಯುವಿ

ಮಾಡಿಫೈಗೊಂಡು ಮಿಂಚಿದ ಫೋರ್ಡ್ ಎಂಡೀವರ್ ಎಸ್‍ಯುವಿ

ಇದು ಈ ಎಸ್‍ಯುವಿಗೆ ಹೆಚ್ಚಿನ ಸಸ್ಪೆಂಕ್ಷನ್ ಮತ್ತು ಪರ್ಫಾಮೆನ್ಸ್ ಅನ್ನು ಕೂಡ ಹೆಚ್ಚಿಸುತ್ತದೆ. ಇನ್ನು ಈ ಫೋರ್ಡ್ ಎಂಡೀವರ್ ಎಸ್‍ಯುವಿಯಲ್ಲಿ ಗ್ಲೋಸ್ ಬ್ಲ್ಯಾಕ್ ಅಲಾಯ್ ವ್ಜೀಲ್ ಅನ್ನು ಅಳವಡಿಸಲಾಗಿದೆ.

ಮಾಡಿಫೈಗೊಂಡು ಮಿಂಚಿದ ಫೋರ್ಡ್ ಎಂಡೀವರ್ ಎಸ್‍ಯುವಿ

ಇನ್ನು ಈ ಎಸ್‍ಯುವಿಯ ಹಿಂಭಾಗದಲ್ಲಿ ಆಫ್ಟರ್ ಮಾರ್ಕೆಟ್ ರಿಫ್ಲೆಕ್ಟರ್ ಲೈಟ್ ಅನ್ನು ಅಳವಡಿಸಿದೆ. ಇನ್ನು ಈ ಎಂಡೀವರ್ ಅನ್ನು ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಎವರೆಸ್ಟ್ ಎಂಬ ಹೆಸರಿನಲ್ಲಿ ಮಾರಾಟ ಮಾಡಲಾಗುತ್ತದೆ. ಈ ಮಾಡಿಫೈ ಮಾದಲಾದ ಎಸ್‍ಯುವಿಯಲ್ಲಿ ಎಂಡೀವರ್ ಎಂಬ ಹೆಸರಿನ ಬ್ರ್ಯಾಡ್ಕ್ ಅನ್ನು ತೆಗೆದು ಎವರೆಸ್ಟ್ ಎಂಬ ಬ್ಯಾಡ್ಜ್ ಅನ್ನು ಅಳವಡಿಸಿದೆ.

MOST READ: ಗ್ಲೋಬಲ್ ಎನ್‌ಸಿಎಪಿಯ ಸುರಕ್ಷತಾ ಟೆಸ್ಟ್​ನಲ್ಲಿ ಅಗ್ರಸ್ಥಾನಗಳಿಸಿದ ಮಹೀಂದ್ರಾ ಕಾರು

ಮಾಡಿಫೈಗೊಂಡು ಮಿಂಚಿದ ಫೋರ್ಡ್ ಎಂಡೀವರ್ ಎಸ್‍ಯುವಿ

ಇನ್ನು ಈ ಎಸ್‍ಯುವಿಯಲ್ಲಿ 3.2 ಲೀಟರ್ -5 ಸಿಲಿಂಡರ್ ಟರ್ಬೋಚಾರ್ಜ್ಡ್ ಡೀಸೆಲ್ ಎಂಜಿನ್ ಅನ್ನು ಅಳವಡಿಸಲಾಗಿದೆ, ಈ ಎಂಜಿನ್ ನೊಂದಿಗೆ 6-ಸ್ಪೀಡ್ ಆಟೋಮ್ಯಾಟಿಕ್ ಗೇರ್ ಬಾಕ್ಸ್ ಅನ್ನು ಜೋಡಿಸಲಾಗಿದೆ.

ಮಾಡಿಫೈಗೊಂಡು ಮಿಂಚಿದ ಫೋರ್ಡ್ ಎಂಡೀವರ್ ಎಸ್‍ಯುವಿ

ಎಂಡೀವರ್ ಜನಪ್ರಿಯ ಆಪ್-ರೋಡ್ ಎಸ್‍ಯುವಿಯಾಗಿದೆ. ಈ ಫೋರ್ಡ್ ಎಂಡೀವರ್ ಭಾರತೀಯ ಮಾರುಕಟ್ಟೆಯಲ್ಲಿ ಟೊಯೊಟಾ ಫಾರ್ಚೂನರ್, ಮಹೀಂದ್ರಾ ಅಲ್ಟುರಾಸ್ ಜಿ4 ಮತ್ತು ಇಸುಝು ಎಂಯು-ಎಕ್ಸ್ ಎಸ್‍‍ಯುವಿಗಳಿಗೆ ಪೈಪೋಟಿ ನೀಡುತ್ತದೆ.

Most Read Articles

Kannada
Read more on ಫೋರ್ಡ್ ford
English summary
India’s First 7 Inch Lifted Ford Endeavour With Wild Modifications. Read In Kannada.
Story first published: Saturday, July 25, 2020, 21:02 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X