ಫೋರ್ಡ್ ಫಿಗೋ ಕಾರು ಮಾರಾಟದಲ್ಲಿ ಶೇ.93 ರಷ್ಟು ಕುಸಿತ

ಫೋರ್ಡ್ ಫಿಗೋ ಭಾರತೀಯ ಮಾರುಕಟ್ಟೆಯಲ್ಲಿ ಜನಪ್ರಿಯ ಹ್ಯಾಚ್‌ಬ್ಯಾಕ್‌ಗಳಲ್ಲಿ ಒಂದಾಗಿದೆ, ಆದರೆ ಇತ್ತೀಚೆಗೆ ಫೋರ್ಡ್ ಫಿಗೋ ಜನಪ್ರಿಯತೆ ಮತ್ತು ಬೇಡಿಕೆಯು ಗಣನೀಯವಾಗಿ ಕಡಿಮೆಯಾಗಿದೆ. ಫೋರ್ಡ್ ಫಿಗೋ ಪೆಟ್ರೋಲ್ ಮತ್ತು ಡೀಸೆಲ್ ಆಯ್ಕೆಗಳನ್ನು ಒಳಗೊಂಡಿದೆ.

ಫೋರ್ಡ್ ಫಿಗೋ ಕಾರು ಮಾರಾಟದಲ್ಲಿ ಶೇ.93 ರಷ್ಟು ಕುಸಿತ

2020ರ ಜುಲೈ ತಿಂಗಳಲ್ಲಿ ಫೋರ್ಡ್ ಫಿಗೋ ಕಾರಿನ 101 ಯುನಿಟ್ ಗಳು ಮಾರಾಟವಾಗಿದೆ, ಇನ್ನು ಕಳೆದ ವರ್ಷದ ಜುಲೈ ತಿಂಗಳಲ್ಲಿ ಫೋರ್ಡ್ ಫಿಗೋ 1466 ಯುನಿಟ್‌ಗಳು ಮಾರಾಟವಾಗಿತ್ತು. ಕಳೆದ ವರ್ಷದ ಜುಲೈ ತಿಂಗಳಲ್ಲಿ ಹೋಲಿಸಿದರೆ ಈ ವರ್ಷದ ಜುಲೈ ತಿಂಗಳಲ್ಲಿ 1365 ಯುನಿಟ್‌ಗಳು ಕಡಿಮೆಯಾಗಿದೆ. ಇದು ವರ್ಷದಿಂದ ವರ್ಷಕ್ಕೆ ಮಾರಾಟದಲ್ಲಿ ಶೇ.93 ರಷ್ಟು ಕುಸಿತವಾಗಿದೆ.

ಫೋರ್ಡ್ ಫಿಗೋ ಕಾರು ಮಾರಾಟದಲ್ಲಿ ಶೇ.93 ರಷ್ಟು ಕುಸಿತ

ಫಿಗೋ ಹ್ಯಾಚ್‌ಬ್ಯಾಕ್‌ ನಲ್ಲಿ ಎರಡು ಎಂಜಿನ್ ಆಯ್ಕೆಯನ್ನು ಹೊಂದಿದೆ. ಈ ಫೋರ್ಡ್ ಫಿಗೋ ಕಾರಿನಲ್ಲಿ 1.2-ಲೀಟರ್ ಟಿ-ವಿಸಿಟಿ ಪೆಟ್ರೋಲ್ ಎಂಜಿನ್ ಅನ್ನು ಅಳವಡಿಸಲಾಗಿದೆ. ಈ ಎಂಜಿನ್ 96 ಬಿಹೆಚ್‍ಪಿ ಪವರ್ ಮತ್ತು 119 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸಲಾಗಿದೆ.

MOST READ: ಸ್ಪಾಟ್ ಟೆಸ್ಟ್​ನಲ್ಲಿ ಕಾಣಿಸಿಕೊಂಡ ಟೊಯೊಟಾ ಫಾರ್ಚೂನರ್ ಫೇಸ್‌ಲಿಫ್ಟ್‌

ಫೋರ್ಡ್ ಫಿಗೋ ಕಾರು ಮಾರಾಟದಲ್ಲಿ ಶೇ.93 ರಷ್ಟು ಕುಸಿತ

ಇದರೊಂದಿಗೆ 1.5-ಲೀಟರ್ ಟಿಡಿಸಿ ಡೀಸೆಲ್ ಎಂಜಿನ್ ಅನ್ನು ಅಳವಡಿಸಲಾಗಿದೆ. ಈ ಎಂಜಿನ್ 215 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಈ ಎರಡು ಎಂಜಿನ್ ಗಳೊಂದಿಗೆ 5-ಸ್ಪೀಡ್ ಮ್ಯಾನುವಲ್ ಗೇರ್‌ಬಾಕ್ಸ್‌ ಅನ್ನು ಜೋಡಿಸಲಾಗಿದೆ.

ಫೋರ್ಡ್ ಫಿಗೋ ಕಾರು ಮಾರಾಟದಲ್ಲಿ ಶೇ.93 ರಷ್ಟು ಕುಸಿತ

ಇದರೊಂದಿಗೆ ಫೋರ್ಡ್ ಕಂಪನಿಯು ಫಿಗೋ ಪೆಟ್ರೊಲ್ ಮಾದರಿಯನ್ನು ಆಟೋಮ್ಯಾಟಿಕ್ ಆವೃತ್ತಿಯಲ್ಲಿ ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಲು ಸಜ್ಜಾಗುತ್ತಿದೆ. ಈ ಹೊಸ ಫೋರ್ಡ್ ಫೀಗೋ ಪೆಟ್ರೋಲ್ ಆಟೋಮ್ಯಾಟಿಕ್ ಆವೃತ್ತಿಯು ಶೀಘ್ರದಲ್ಲೇ ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಯಾಗಲಿದೆ.

MOST READ: ಸ್ಥಗಿತಗೊಂಡಿಲ್ಲ ಫೋಕ್ಸ್‌ವ್ಯಾಗನ್ ಕಾರಿನ ಈ ಮಾದರಿಗಳು

ಫೋರ್ಡ್ ಫಿಗೋ ಕಾರು ಮಾರಾಟದಲ್ಲಿ ಶೇ.93 ರಷ್ಟು ಕುಸಿತ

ಹೊಸ ಫೋರ್ಡ್ ಫೀಗೋ ಪೆಟ್ರೋಲ್ ಆಟೋಮ್ಯಾಟಿಕ್ ಆವೃತ್ತಿಯಲ್ಲಿ ಫೋರ್ಡ್ ಪಾಸ್ ಕನೆಕ್ಟಿವಿಟಿಯನ್ನು ನೀಡಬಹುದು. ಇದು ಕ್ಲೌಡ್ ಕನೆಕ್ಟೆಡ್ ಡಿವೈಸ್ ಆಗಿದ್ದು, ಕಾರಿನ ಮಾಲೀಕರು ರಿಯಲ್ ಟೈಂ ಫೋರ್ಡ್ ಪಾಸ್ ಸ್ಮಾರ್ಟ್‍‍ಫೋನ್ ಅಪ್ಲಿಕೇಶನ್‍‍ನೊಂದಿಗೆ ಕನೆಕ್ಟ್ ಮಾಡಿಕೊಳ್ಳಬಹುದಾಗಿದೆ.

ಫೋರ್ಡ್ ಫಿಗೋ ಕಾರು ಮಾರಾಟದಲ್ಲಿ ಶೇ.93 ರಷ್ಟು ಕುಸಿತ

ಈ ಫೀಚರ್‍‍ನಿಂದಾಗಿ ಕಾರುಗಳ ಲಾಕಿಂಗ್, ಅನ್‍‍ಲಾಕಿಂಗ್, ಫ್ಯೂಯಲ್ ಲೆವೆಲ್, ಡಿಸ್ಟನ್ಸ್ ಟು ಎಂಪ್ಟಿ, ಕಾರು ಇರುವ ಲೊಕೇಷನ್ ಬಗ್ಗೆ ಮಾಹಿತಿಯನ್ನು ಪಡೆಯಬಹುದು. ಇದರ ಜೊತೆಗೆ ಹತ್ತಿರದಲ್ಲಿರುವ ಡೀಲರ್ ಹಾಗೂ ಹಿಂದಿನ ಸರ್ವಿಸ್‍‍ಗಳ ಬಗೆಗಿನ ಮಾಹಿತಿಯನ್ನು ಸಹ ಪಡೆಯಬಹುದು.

MOST READ: ಭಾರತಕ್ಕೆ ಲಗ್ಗೆ ಇಡಲಿದೆ ಹೊಸ ಹೋಂಡಾ ಹೆಚ್‌ಆರ್-ವಿ ಎಸ್‍ಯುವಿ

ಫೋರ್ಡ್ ಫಿಗೋ ಕಾರು ಮಾರಾಟದಲ್ಲಿ ಶೇ.93 ರಷ್ಟು ಕುಸಿತ

ಫೋರ್ಡ್ ಫೀಗೋ ಪೆಟ್ರೋಲ್ ಆಟೋಮ್ಯಾಟಿಕ್ ಆವೃತ್ತಿಯಲ್ಲಿ ಪ್ಯಾಡಲ್‌ಶಿಫ್ಟರ್‌ಗಳನ್ನು ಸಹ ನೀಡಬಹುದು, ಇದು ಫಿಗೋ ಡ್ರೈವ್ ಮಾಡುವವರಿಗೆ ಇನ್ನಷ್ಟು ಮುದ ನೀಡುತ್ತದೆ. ಇನ್ನು ಫಿಗೋ ಆಟೋಮ್ಯಾಟಿಕ್ ಆವೃತ್ತಿಯ ಫೀಚರುಗಳಲ್ಲಿ ಹೆಚ್ಚಿನ ಬದಲಾವಣೆಗಳನ್ಜು ಹೊಂದಿರುವುದಿಲ್ಲ.

ಫೋರ್ಡ್ ಫಿಗೋ ಕಾರು ಮಾರಾಟದಲ್ಲಿ ಶೇ.93 ರಷ್ಟು ಕುಸಿತ

ಫೋರ್ಡ್ ಫಿಗೋ ಕಾರಿನ ಆರಂಭಿಕ ಬೆಲೆಯು ರೂ.5.49 ಲಕ್ಷಗಳಾಗಿದೆ. ಫೋರ್ಡ್ ಫಿಗೋ ಕಾರು ಭಾರತೀಯ ಮಾರುಕಟ್ಟೆಯಲ್ಲಿ ಮಾರುತಿ ಸುಜುಕಿ ಸ್ವಿಫ್ಟ್, ಹ್ಯುಂಡೈ ಗ್ರ್ಯಾಂಡ್ ಐ 10 ನಿಯೋಸ್, ಟಾಟಾ ಟಿಯಾಗೊ ಕಾರುಗಳಿಗೆ ಪೈಪೋಟಿಯನ್ನು ನೀಡುತ್ತದೆ.

Most Read Articles

Kannada
Read more on ಫೋರ್ಡ್ ford
English summary
Ford Figo Sales Dropped By 93% In July 2020. Read In Kannada.
Story first published: Tuesday, August 11, 2020, 15:57 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X