Just In
Don't Miss!
- Sports
ಭಾರತ vs ಆಸ್ಟ್ರೇಲಿಯಾ 4ನೇ ಟೆಸ್ಟ್ ಸಿಡ್ನಿ, ದಿನ 4, Live ಸ್ಕೋರ್
- News
ಬೆಂಗಳೂರಿನ ವಿವಿಧೆಡೆ ಜನವರಿ 18 ರಿಂದ 22ರವರೆಗೆ ವಿದ್ಯುತ್ ವ್ಯತ್ಯಯ
- Lifestyle
"ಸೋಮವಾರದ ರಾಶಿಫಲ: ಮೇಷ-ಮೀನದವರೆಗಿನ ದಿನ ಭವಿಷ್ಯ"
- Finance
Flipkart Big Saving Days: ಆಪಲ್, ಸ್ಯಾಮ್ಸಂಗ್ ಸೇರಿ ಹಲವು ಬ್ರ್ಯಾಂಡ್ ಗಳ ಆಫರ್
- Movies
ಹರ ಜಾತ್ರೆಯಲ್ಲಿ ಪುನೀತ್ ರಾಜ್ ಕುಮಾರ್; ಅಪ್ಪು ಹಾಡು ಕೇಳಿ ಸಂಭ್ರಮಿಸಿದ ಅಭಿಮಾನಿಗಳು
- Education
BEL Recruitment 2021: 205 ಟೆಕ್ನೀಶಿಯನ್ ಅಪ್ರೆಂಟಿಸ್ ಹುದ್ದೆಗಳಿಗೆ ಅರ್ಜಿ ಆಹ್ವಾನ
- Technology
ಒನ್ಪ್ಲಸ್ ನಾರ್ಡ್ ಜುಲೈ 15 ರಿಂದ ಅಮೆಜಾನ್ ತಾಣದಲ್ಲಿ ಪ್ರಿ-ಆರ್ಡರ್ಗೆ ಲಭ್ಯವಿದೆ; ಖರೀದಿಸುವಲ್ಲಿ ಮೊದಲಿಗರಾಗಿರಿ!
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
ಕಾರು ಖರೀದಿ ಸುಲಭವಾಗಿಸಲು ಹೊಸ ಲೋನ್ ಸ್ಕೀಮ್ ಪರಿಚಯಿಸಿದ ಹೋಂಡಾ
ಲಾಕ್‌ಡೌನ್ ಸಡಿಲಿಕೆಯ ನಂತರ ಹೊಸ ಸುರಕ್ಷಾ ಮಾರ್ಗಸೂಚಿಯೆಂತೆ ಆಟೋ ಉದ್ಯಮವು ಮರು ಚಾಲನೆಗೊಂಡಿದ್ದು, ನೀರಿಕ್ಷಿತ ಮಟ್ಟದಲ್ಲಿ ಗ್ರಾಹಕರಿಲ್ಲದೆ ಪರದಾಡುತ್ತಿವೆ. ಹೀಗಾಗಿ ಸಂಕಷ್ಟದ ಪರಿಸ್ಥಿತಿಯಲ್ಲಿ ಗ್ರಾಹಕರನ್ನು ಸೆಳೆಯಲು ಮುಂದಾಗಿರುವ ಬಹುತೇಕ ಆಟೋ ಕಂಪನಿಗಳು ವಿವಿಧ ಮಾದರಿಯ ಲೋನ್ ಆಫರ್ ಘೋಷಿಸುತ್ತಿವೆ.

ಕರೋನಾ ವೈರಸ್‌ನಿಂದಾಗಿ ಆಟೋ ಮೊಬೈಲ್ ಸೇರಿದಂತೆ ಎಲ್ಲಾ ವಲಯದಲ್ಲೂ ಆರ್ಥಿಕ ಸ್ಥಿತಿ ಶೋಚನೀಯ ಸ್ಥಿತಿಗೆ ತಲುಪಿದೆ. ಲಾಕ್‌ಡೌನಿಂದಾಗಿ ಕುಸಿದುಬಿದ್ದಿರುವ ವ್ಯಾಪಾರ ಅಭಿವೃದ್ದಿಯನ್ನು ಸರಿದಾರಿಗೆ ತರುವುದು ಇದೀಗ ಒಂದು ಸವಾಲಾಗಿ ಪರಿಣಿಮಿಸಿದ್ದು, ಹೋಂಡಾ ಕಂಪನಿಯು ಕೆಲವು ಮಹತ್ವದ ನಿರ್ಧಾರಗಳನ್ನು ಪ್ರಕಟಿಸಿದೆ. ಇವು ಕುಸಿದಿರುವ ಕಾರು ಮಾರಾಟಕ್ಕೆ ಚೇತರಿಕೆ ನೀಡಲಿದ್ದು, ಸಂಕಷ್ಟದ ಸಮಯದಲ್ಲೂ ಗ್ರಾಹಕರನ್ನು ಸೆಳೆಯಲು ಕೆಲವು ಆಕರ್ಷಕ ಯೋಜನೆಗಳನ್ನು ರೂಪಿಸಿದೆ.

ಹೋಂಡಾ ಕಂಪನಿಯು ಕಾರು ಮಾರಾಟವನ್ನು ಸುಧಾರಣೆಗೊಳಿಸುವ ನಿಟ್ಟಿನಲ್ಲಿ ವಿವಿಧ ಬ್ಯಾಂಕ್‌ಗಳ ಜೊತೆಗೂಡಿದ್ದು, ಗ್ರಾಹಕರಿಗೆ ಆಕರ್ಷಕ ಇಎಂಐ ಯೋಜನೆ, ಕಡಿಮೆ ಬಡ್ಡಿದರದಲ್ಲಿ ಸಾಲ, ಧೀರ್ಘಾವಧಿಯ ಸಾಲಗಳನ್ನು ಆಫರ್ ಮಾಡುತ್ತಿದೆ.

ಕೋಟಕ್ ಮಹೀಂದ್ರಾ ಬ್ಯಾಂಕ್, ಬ್ಯಾಂಕ್ ಆಫ್ ಇಂಡಿಯಾ ಮತ್ತು ಹೆಚ್‌ಡಿಎಫ್‌ಸಿ ಬ್ಯಾಂಕ್ ಮೂಲಕ ವಿವಿಧ ಮಾದರಿಯ ಸುಲಭ ಸಾಲ ಸೌಲಭ್ಯಗಳನ್ನು ನೀಡುತ್ತಿದ್ದು, ಆಯ್ದ ಕಾರು ಮಾದರಿಗಳ ಮೇಲೆ ಶೇ.100ರಷ್ಟು ಆನ್‌ರೋಡ್ ಲೋನ್ ನೀಡುತ್ತಿದೆ.

ವಿವಿಧ ಮಾದರಿಯ ಇಎಂಐ ಮರುಪಾವತಿಯಲ್ಲಿ ಸ್ಟೆಪ್-ಅಪ್ ಇಎಂಐ ಮತ್ತು ಬಲೂನ್ ಇಎಂಐ ಸಂಯೋಜನೆ ಮಾಡಲಿದ್ದು, ಕಾರು ಖರೀದಿ ಮಾಡಿದ ಮೊದಲ ವರ್ಷ ಅತಿ ಕಡಿಮೆ ಇಎಂಐ ಮರುಪಾವತಿಗೆ ಅನುಕೂಲಕರವಾಗುವಂತೆ ಸಾಲ ಸೌಲಭ್ಯ ನೀಡಿದೆ.
MOST READ: ಲಾಕ್‌ಡೌನ್ ಸಂಕಷ್ಟ: ಸೆಕೆಂಡ್ ಹ್ಯಾಂಡ್ ಕಾರು ಮಾರಾಟ ಉದ್ಯಮ ಆರಂಭಿಸಿದ ಫೋಕ್ಸ್‌ವ್ಯಾಗನ್

ಇದಲ್ಲದೆ ಹೋಂಡಾ ಕಂಪನಿಯು ತನ್ನ ಜನಪ್ರಿಯ ಸೆಡಾನ್ ಮಾದರಿಯಾದ ಸಿಟಿ ಮತ್ತು ಕಂಪ್ಯಾಕ್ಟ್ ಸೆಡಾನ್ ಮಾದರಿಯ ಅಮೇಜ್ ಕಾರಿನ ಮೇಲೆ ಸೀಮಿತ ಅವಧಿಗಾಗಿ ಆಫರ್‌ಗಳನ್ನು ಘೋಷಿಸಿದ್ದು, ಕ್ಯಾಶ್ ಡಿಸ್ಕೌಂಟ್, ಎಕ್ಸ್‌ಚೆಂಜ್ ಬೋನಸ್ ಮತ್ತು ವಾರಂಟಿ ಅವಧಿ ವಿಸ್ತರಣೆಯ ಆಫರ್‌ಗಳನ್ನು ಸಹ ನೀಡುತ್ತಿದೆ.

ಅಮೇಜ್ ಕಾರು ಮಾದರಿಯ ಖರೀದಿಯ ಮೇಲೆ ರೂ.32 ಸಾವಿರ ತನಕ ಆಫರ್‌ಗಳನ್ನು ಪಡೆದುಕೊಳ್ಳಬಹುದಾಗಿದ್ದು, ಹೆಚ್ಚುವರಿಯಾಗಿ ಎರಡು ವರ್ಷಗಳ ಕಾಲ ವಾರಂಟಿ ಅವಧಿಯನ್ನು ಸಹ ವಿಸ್ತರಣೆ ಮಾಡಲಾಗುತ್ತಿದೆ.
MOST READ: ರೂ.5 ಲಕ್ಷಕ್ಕಿಂತ ಕಡಿಮೆ ಬೆಲೆಯ ಜನಪ್ರಿಯ ಕಾರುಗಳಿವು

ಹಾಗೆಯೇ ಸಿಟಿ ಸೆಡಾನ್ ಮಾದರಿಯ ಖರೀದಿಯ ಮೇಲೆ ರೂ.1 ಲಕ್ಷದ ತನಕ ಆಫರ್‌ಗಳನ್ನು ಪಡೆದುಕೊಳ್ಳಬಹುದಾಗಿದ್ದು, ವಿ ಸಿವಿಟಿ ವೆರಿಯೆಂಟ್ ಖರೀದಿ ಮೇಲೆ ರೂ.25 ಸಾವಿರ ಕ್ಯಾಶ್ ಡಿಸ್ಕೌಂಟ್ ಮತ್ತು 20 ಸಾವಿರ ಎಕ್ಸ್‌ಚೆಂಜ್ ಆಫರ್ ನೀಡಲಾಗುತ್ತದೆ.