ಆಟೋ ಎಕ್ಸ್‌ಪೋ 2020: ಹ್ಯುಂಡೈ ನೆಕ್ಸೊ ಫ್ಯೂಲ್ ಸೆಲ್ಸ್ ಎಲೆಕ್ಟ್ರಿಕ್ ಕಾರು ಅನಾವರಣ

ಎಲೆಕ್ಟ್ರಿಕ್ ಕಾರುಗಳ ನಂತರ ಇದೀಗ ಜಗತ್ತಿನಾದ್ಯಂತ ಹೈಡ್ರೊಜನ್ ಫ್ಯೂಲ್ ಸೆಲ್ಸ್ ಎಲೆಕ್ಟ್ರಿಕ್ ಕಾರುಗಳ ಉತ್ಪಾದನೆಯತ್ತ ಆಟೋ ಉತ್ಪಾದನಾ ಸಂಸ್ಥೆಗಳು ಎದುರು ನೋಡುತ್ತಿದ್ದು, ಹ್ಯುಂಡೈ ತನ್ನ ಮೊದಲ ಪ್ರಯತ್ನದಲ್ಲಿ ನಿರ್ಮಾಣ ಮಾಡಿರುವ ಫ್ಯೂಲ್ ಸೆಲ್ಸ್ ಎಲೆಕ್ಟ್ರಿಕ್ ಕಾರೊಂದು ಭಾರತೀಯ ಮಾರುಕಟ್ಟೆಗೂ ಪ್ರವೇಶಿಸುತ್ತಿದೆ.

ಆಟೋ ಎಕ್ಸ್‌ಪೋ 2020: ಹ್ಯುಂಡೈ ನೆಕ್ಸೊ ಫ್ಯೂಲ್ ಸೆಲ್ಸ್ ಎಲೆಕ್ಟ್ರಿಕ್ ಕಾರು ಅನಾವರಣ

ಫ್ಯೂಲ್ ಸೆಲ್ಸ್ ಪ್ರೆರಣೆ ಹೊಂದಿರುವ ನೆಕ್ಸೊ ಕಾರುನ್ನು 2020ರ ದೆಹಲಿ ಆಟೋ ಎಕ್ಸ್‌ಪೋದಲ್ಲಿ ಅನಾವರಣಗೊಳಿಸಿರುವ ಹ್ಯುಂಡೈ ಸಂಸ್ಥೆಯು ಹೊಸ ಕಾರನ್ನು ಭಾರತದಲ್ಲೂ ಬಿಡುಗಡೆ ಮಾಡುವ ಸುಳಿವು ನೀಡಿದ್ದು, ಹೊಸ ಕಾರು ಸಾಮಾನ್ಯ ಎಲೆಕ್ಟ್ರಿಕ್ ಕಾರುಗಳಿಂತಲೂ ಹೆಚ್ಚಿನ ಮಟ್ಟದ ಮೈಲೇಜ್ ಪ್ರೇರಣೆ ಹೊಂದಿರಲಿದೆ. ಹೀಗಾಗಿ ಭವಿಷ್ಯದಲ್ಲಿ ಸಾಮಾನ್ಯ ಎಲೆಕ್ಟ್ರಿಕ್ ಕಾರುಗಳಿಂತಲೂ ಹೈಡ್ರೊಜನ್ ಫ್ಯೂಲ್ ಸೆಲ್ಸ್ ಎಲೆಕ್ಟ್ರಿಕ್ ಕಾರುಗಳ ಸದ್ದು ಜೋರಾಗಲಿದೆ.

ಆಟೋ ಎಕ್ಸ್‌ಪೋ 2020: ಹ್ಯುಂಡೈ ನೆಕ್ಸೊ ಫ್ಯೂಲ್ ಸೆಲ್ಸ್ ಎಲೆಕ್ಟ್ರಿಕ್ ಕಾರು ಅನಾವರಣ

ಹೈಡ್ರೋಜನ್ ಫ್ಯೂಯಲ್ ಸೆಲ್ ಕಾರುಗಳು ಸಾಮಾನ್ಯ ವಿದ್ಯುತ್ ವಾಹನಗಳಿಗಿಂತಲೂ ಹೆಚ್ಚಿನ ಮೈಲೇಜ್ ನೀಡುವುದು ಈಗಾಗಲೇ ಸಾಬೀತಾಗಿದ್ದು, ಹಲವು ಕಾರು ತಯಾರಕ ಕಂಪನಿಗಳು ಭಾರತವನ್ನ ಹೈಡ್ರೊಜನ್ ಪವರ್ ವಾಹನಗಳ ದೊಡ್ಡ ಮಾರುಕಟ್ಟೆಯೆಂದು ಪರಿಗಣಿಸಿದ್ದಾರೆ.

ಆಟೋ ಎಕ್ಸ್‌ಪೋ 2020: ಹ್ಯುಂಡೈ ನೆಕ್ಸೊ ಫ್ಯೂಲ್ ಸೆಲ್ಸ್ ಎಲೆಕ್ಟ್ರಿಕ್ ಕಾರು ಅನಾವರಣ

ಇದೀಗ ಬಿಡುಗಡೆಯಾಗಲಿರುವ ಹ್ಯುಂಡೈ ನೆಕ್ಸೊ ಕಾರಿನಲ್ಲೂ ಕೂಡಾ ಒಂದು ಬಾರಿ ಪೂರ್ಣ ಪ್ರಮಾಣದಲ್ಲಿ ಹೈಡ್ರೊಜನ್ ಫ್ಯೂಲ್ ಸೆಲ್ಸ್ ಅನ್ನು ಟ್ಯಾಂಕ್ ಭರ್ತಿ ಮಾಡಿಸಿದ್ದಲ್ಲಿ ಗರಿಷ್ಠ 666 ಕಿ.ಮೀ ಮೈಲೇಜ್ ಹಿಂದಿರುಗಿಸಲಿದ್ದು, ಇದು ಸಾಮಾನ್ಯ ಎಲೆಕ್ಟ್ರಿಕ್ ಕಾರಿಗಿಂತಲೂ ವಿಭಿನ್ನ ತಾಂತ್ರಿಕ ಸೌಲಭ್ಯವನ್ನು ಪಡೆದುಕೊಂಡಿರುತ್ತವೆ.

ಆಟೋ ಎಕ್ಸ್‌ಪೋ 2020: ಹ್ಯುಂಡೈ ನೆಕ್ಸೊ ಫ್ಯೂಲ್ ಸೆಲ್ಸ್ ಎಲೆಕ್ಟ್ರಿಕ್ ಕಾರು ಅನಾವರಣ

ವಿಶೇಷ ತಂತ್ರಜ್ಞಾನದ ಮೂಲಕ ಹೈಡ್ರೊಜನ್ ಅನ್ನು ರಾಸಾಯನಿಕವಾಗಿ ಪರಿವರ್ತಿಸುವ ಪ್ರಕ್ರಿಯೆಯಲ್ಲಿ ಆಮ್ಲಜನಕದೊಂದಿಗೆ ಬೆರೆತುಕೊಳ್ಳುವ ಹೈಡ್ರೊಜನ್ ರಸಾಯನವು ಗಾಡವಾದ ಕೆಮಿಕಲ್ ರಿಯಾಕ್ಷನ್‌‌ನೊಂದಿಗೆ ಎಲೆಕ್ಟ್ರಿಕ್ ಮೋಟಾರ್‌ಗೆ ಶಕ್ತಿ ಒದಗಿಸುತ್ತದೆ. ಈ ಪ್ರಕ್ರಿಯೆಯಲ್ಲಿ ಪರಿಸರಕ್ಕೂ ಯಾವುದೇ ರೀತಿಯ ಹಾನಿಯಾಗದಿರುವುದು ಹೆಚ್ಚು ಗಮನಸೆಳೆಯುತ್ತಿದ್ದು, ಹ್ಯುಂಡೈ ಸಂಸ್ಥೆಯು ಸದ್ಯದಲ್ಲೇ ಮತ್ತಷ್ಟು ಹೈಡ್ರೊಜನ್ ಫ್ಯೂಲ್ ಸೆಲ್ಸ್ ಎಲೆಕ್ಟ್ರಿಕ್ ಕಾರುಗಳನ್ನು ಅಭಿವೃದ್ದಿಗೊಳಿಸಲು ಮುಂದಾಗಿದೆ.

ಆಟೋ ಎಕ್ಸ್‌ಪೋ 2020: ಹ್ಯುಂಡೈ ನೆಕ್ಸೊ ಫ್ಯೂಲ್ ಸೆಲ್ಸ್ ಎಲೆಕ್ಟ್ರಿಕ್ ಕಾರು ಅನಾವರಣ

ನೆಕ್ಸೊ ಕಾರಿನಲ್ಲಿ ಮೂರು ಹೈಡ್ರೊಜನ್ ಫ್ಯೂಲ್ ಸೆಲ್ಸ್ ಟ್ಯಾಂಕ್‌ಗಳನ್ನು ನೀಡಲಾಗಿದ್ದು, ಇವು 156-ಲೀಟರ್ ಸಾಮರ್ಥ್ಯ ಹೊಂದಿವೆ. ಈ ಟ್ಯಾಂಕ್‌ಗಳು ಕನಿಷ್ಠ ತಾಪಮಾನದಲ್ಲಿ ಹೆಚ್ಚು ಕ್ರಿಯಾಶೀಲವಾಗಿರುತ್ತವೆ ಮತ್ತು 30 ಡಿಗ್ರಿ ಸೆಲ್ಸಿಯಸ್ ತಾಪಮಾನಕ್ಕಿಂತ ಹೆಚ್ಚು ಉಷ್ಣಾಂಶವಿದ್ದಲ್ಲಿ ನೀರು ಆವಿಯಾಗುವಿಕೆ ಹೆಚ್ಚಿರುತ್ತದೆ.

ಆಟೋ ಎಕ್ಸ್‌ಪೋ 2020: ಹ್ಯುಂಡೈ ನೆಕ್ಸೊ ಫ್ಯೂಲ್ ಸೆಲ್ಸ್ ಎಲೆಕ್ಟ್ರಿಕ್ ಕಾರು ಅನಾವರಣ

ಇದರಿಂದಾಗಿ ಹೆಚ್ಚು ಉಷ್ಣಾಂಶವಿದ್ದಲ್ಲಿ ಹೈಡ್ರೊಜನ್ ಫ್ಯೂಲ್ ಸೆಲ್ಸ್ ಆವಿಯಾಗುವಿಕೆ ಪ್ರಕ್ರಿಯೆ ಹೆಚ್ಚಾದಷ್ಟು ಕಾರಿನ ಮೈಲೇಜ್ ಮೇಲೆ ಪರಿಣಾಮ ಬೀರಲಿದ್ದು, ತಂಪಾದ ವಾತಾರಣದಲ್ಲಿ ಫ್ಯೂಲ್ ಸೆಲ್ಸ್ ಕಾರುಗಳು ಹೆಚ್ಚು ಕಾರ್ಯಕ್ಷಮತೆ ಪಡೆದುಕೊಳ್ಳಲಿವೆ.

ಆಟೋ ಎಕ್ಸ್‌ಪೋ 2020: ಹ್ಯುಂಡೈ ನೆಕ್ಸೊ ಫ್ಯೂಲ್ ಸೆಲ್ಸ್ ಎಲೆಕ್ಟ್ರಿಕ್ ಕಾರು ಅನಾವರಣ

ಹ್ಯುಂಡೈ ನೆಕ್ಸೊ ಕಾರು ಕೂಡಾ ಸುಧಾರಿತ ತಂತ್ರಜ್ಞಾನ ಪ್ರೇರಣೆಯೊಂದಿಗೆ ಅತ್ಯುತ್ತಮ ಮೈಲೇಜ್ ಹಿಂದಿರುಗಿಸುವ ಭರವಸೆ ನೀಡಿದ್ದು, ಹೊಸ ಕಾರಿನಲ್ಲಿ ಹಲವಾರು ವಿಶ್ವದರ್ಜೆಯ ಫೀಚರ್ಸ್‌ಗಳನ್ನು ನೀಡಲಾಗಿದೆ.

ಆಟೋ ಎಕ್ಸ್‌ಪೋ 2020: ಹ್ಯುಂಡೈ ನೆಕ್ಸೊ ಫ್ಯೂಲ್ ಸೆಲ್ಸ್ ಎಲೆಕ್ಟ್ರಿಕ್ ಕಾರು ಅನಾವರಣ

ಬಿಡುಗಡೆಯ ಅವಧಿಯ ಮತ್ತು ಬೆಲೆ(ಅಂದಾಜು)

2021ಕ್ಕೆ ದಕ್ಷಿಣ ಕೊರಿಯಾದಲ್ಲಿ ನೆಕ್ಸೊ ಕಾರು ಅಧಿಕೃತವಾಗಿ ಖರೀದಿಗೆ ಲಭ್ಯವಾಗುವ ಸಾಧ್ಯತೆಗಳಿದ್ದು, ಭಾರತದಲ್ಲಿ ಈ ಹೊಸ ಕಾರು 2023 ಅಥವಾ 2024ರ ಅವಧಿಯಲ್ಲಿ ಬಿಡುಗಡೆಯಾಗಲಿದೆ. ಹೊಸ ಕಾರು ಎಲೆಕ್ಟ್ರಿಕ್ ಮತ್ತು ಹೈಬ್ರಿಡ್ ಕಾರುಗಳಿಂತಲೂ ಹೆಚ್ಚು ದುಬಾರಿಯಾಗಲಿದ್ದು, ನೆಕ್ಸೊ ಕಾರು ರೂ. 40 ಲಕ್ಷ ಬೆಲೆ ಅಂತರದಲ್ಲಿ ಬಿಡುಗಡೆಯಾಗುವ ಸಾಧ್ಯತೆಗಳಿವೆ.

Most Read Articles

Kannada
English summary
Hyundai Nexo Fuel Cell Unveiled At Auto Expo. Read in Kannada.
Story first published: Friday, February 7, 2020, 17:13 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X