ಭಾರತದಲ್ಲಿ ವಿಂಟರ್ ಕೇರ್ ಅಭಿಯಾನವನ್ನು ಆರಂಭಿಸಿದ ಇಸುಝು

ಜಪಾನ್ ಮೂಲದ ವಾಹನ ತಯಾರಕ ಕಂಪನಿಯಾದ ಇಸುಝು ಮೋಟಾರ್ಸ್ ಕಂಪನಿಯು ಭಾರತದಲ್ಲಿ ಹೊಸ ಸೀಮಿತ ಅವಧಿಯ "ವಿಂಟರ್ ಸರ್ವಿಸ್ ಅಭಿಯಾನ" ವನ್ನು ಆರಂಭಿಸಿದೆ. ಈ ಅಭಿಯಾನ ಚಳಿಗಾಲದ ಆವಧಿಯಲ್ಲಿ ತಮ್ಮ ಪಿಕ್ ಅಪ್ ಟ್ರಕ್‌ಗಳನ್ನು ಸರಿಯಾದ ನಿರ್ವಹಣೆಗೆ ಸಹಾಯ ಮಾಡುತ್ತದೆ.

ಭಾರತದಲ್ಲಿ ವಿಂಟರ್ ಕೇರ್ ಅಭಿಯಾನವನ್ನು ಆರಂಭಿಸಿದ ಇಸುಝು

ಹೊಸ ಸರ್ವಿಸ್ ಮತ್ತು ನಿರ್ವಹಣಾ ಶಿಬಿರವು ವಾಹನಗಳ ಸಂಪೂರ್ಣ ಪರಿಶೀಲನೆ, ಲೇಬರ್ ಜಾರ್ಜ್ ಮತ್ತು ಸ್ಪೇರ್ ಪಾರ್ಟ್ಸ್ ಮೇಲಿನ ರಿಯಾಯಿತಿಗಳು ಮತ್ತು ಇತರ ಹಲವಾರು ಪ್ರಯೋಜನಗಳನ್ನು ನೀಡುತ್ತದೆ. ಚಳಿಗಾಲದ ಸರ್ವಿಸ್ ಶಿಬಿರವು ಇದೇ ತಿಂಗಳ 18 ರಿಂದ 24 ರವರೆಗೆ ನಡೆಯಲಿದ್ದು, ದೇಶಾದ್ಯಂತ ಇರುವ ಇಸುಝು ಕಂಪನಿಯ ಎಲ್ಲಾ ಡೀಲರ್ ಬಳಿ ಚಳಿಗಾಲದ ಸರ್ವಿಸ್ ಕೇರ್ ಶಿಬಿರದ ಪ್ರಯೋಜವನ್ನು ಪಡೆಯಬಹುದು.

ಭಾರತದಲ್ಲಿ ವಿಂಟರ್ ಕೇರ್ ಅಭಿಯಾನವನ್ನು ಆರಂಭಿಸಿದ ಇಸುಝು

ಸರ್ವಿಸ್ ಶಿಬಿರದಲ್ಲಿ ಕಂಪನಿಯು ಇಸುಝು ವಾಹನಗಳ ಮೇಲೆ 50-ಪಾಯಿಂಟ್ ಚೆಕ್-ಅಪ್ ಅನ್ನು ಉಚಿತವಾಗಿ ನೀಡುತ್ತಿದೆ. ಇದರಲ್ಲಿ ಎಂಜಿನ್ ಆಯಿಲ್ ಮತ್ತು ವಾಹನದ ಇತರ ಕಾರ್ಯಾಚರಣೆಯ ಒಳಗೊಂಡಂತಹ ಪರಿಶೀಲನೆಯನ್ನು ನಡೆಸುತ್ತಾರೆ.

MOST READ: ಮರ್ಸಿಡಿಸ್ ಬೆಂಝ್ ಜಿಎಲ್ಇ ಎಸ್‍ಯುವಿಯ ಎರಡು ಹೊಸ ರೂಪಾಂತರಗಳು ಬಿಡುಗಡೆ

ಭಾರತದಲ್ಲಿ ವಿಂಟರ್ ಕೇರ್ ಅಭಿಯಾನವನ್ನು ಆರಂಭಿಸಿದ ಇಸುಝು

ಇದರೊಂದಿಗೆ ನಿಮ್ಮ ವಾಹನದ ಟಯರ್, ಬ್ರೇಕ್‌ಗಳು ಮತ್ತು ಗೇರ್ ಬಾಕ್ಸ್ ಸ್ಥಿತಿ ಮತ್ತು ಅದ ಕಾರ್ಯನಿರ್ವಣೆಯ ಬಗ್ಗೆ ಪರಿಶೀಲಿಸಲಾಗುತ್ತದೆ. ಸರ್ವಿಸ್ ಶಿಭಿರದಲ್ಲಿ ಎಸಿ, ಹೆಡ್‌ಲ್ಯಾಂಪ್‌ಗಳು ಮತ್ತು ಟೈಲ್‌ಲ್ಯಾಂಪ್‌ಗಳನ್ನು ಕೂಡ ಪರಿಶೀಲನೆ ನಡೆಸುತ್ತಾರೆ.

ಭಾರತದಲ್ಲಿ ವಿಂಟರ್ ಕೇರ್ ಅಭಿಯಾನವನ್ನು ಆರಂಭಿಸಿದ ಇಸುಝು

ಸರಿಯಾಗಿ ಕಾರ್ಯನಿರ್ವಹಿಸದ ಯಾವುದೇ ಬಿಡಿಭಾಗವನ್ನು ಸರ್ವಿಸ್ ಸೆಂಟರ್ ನಲ್ಲಿ ತರಬೇತಿ ಹೊಂದಿದ್ದ ತಂತ್ರಜ್ಞರು ಗ್ರಾಹಕರ ಒಪ್ಪಿಗೆಯ ನಂತರ ಬದಲಾಯಿಸಲಾಗುತ್ತದೆ. ಚಳಿಗಾಲದಲ್ಲಿ ನಿಮ್ಮ ವಾಹನವನ್ನು ಸರಿಯಾಗಿ ಮ್ಯಾಟೇನ್ ಮಾಡಲು ಕಂಪನಿಯು ಶಿಬಿರವನ್ನು ಅಯೋಜಿಸಿದ್ದಾರೆ.

MOST READ: ಅನಾವರಣವಾಯ್ತು ಟೊಯೊಟಾ ಕೊರೊಲ್ಲಾ ಟೂರಿಂಗ್ ರಿಬ್ಯಾಡ್ಜ್ ಆವೃತ್ತಿ ಸುಜುಕಿ ಸ್ವೇಸ್

ಭಾರತದಲ್ಲಿ ವಿಂಟರ್ ಕೇರ್ ಅಭಿಯಾನವನ್ನು ಆರಂಭಿಸಿದ ಇಸುಝು

ಅಲ್ಲದೇ ಶಿಬಿರದಲ್ಲಿ ಹಲವಾರು ರಿಯಾಯಿತಿಗಳನ್ನು ಪಡೆಯಬಹುದು. ಶೀಭಿರದಲ್ಲಿ ಯಾವುದೇ ಸರ್ವಿಸ್ ಮತ್ತು ನಿರ್ವಹಣಾ ಕಾರ್ಯಗಳಿಗೆ ಕಾರ್ಮಿಕ ವೆಚ್ಚದ ಮೇಲೆ ಶೇ.10 ರಷ್ಟು ರಿಯಾಯಿತಿ ನೀಡುತ್ತಿದೆ. ಹೆಚ್ಚುವರಿಯಾಗಿ ಸರ್ವಿಸ್ ಸಮಯದಲ್ಲಿ ಬದಲಾದ ಯಾವುದೇ ಬಿಡಿಭಾಗಗಳಿಗೆ ಕಂಪನಿಯು ಶೇ.7 ರಷ್ಟು ರಿಯಾಯಿತಿ ನೀಡುತ್ತದೆ.

ಭಾರತದಲ್ಲಿ ವಿಂಟರ್ ಕೇರ್ ಅಭಿಯಾನವನ್ನು ಆರಂಭಿಸಿದ ಇಸುಝು

ಸರ್ವಿಸ್ ಶಿಬಿರದಲ್ಲಿ ವಾಹನವನ್ನು ಟಾಪ್ ವಾಶ್ ಮಾಡಲಾಗುತ್ತದೆ. ಇದಲ್ಲದೇ ಸರ್ವಿಸ್ ಶಿಬಿರದಲ್ಲಿ ಗ್ರಾಹಕರು ಹೊಸ ಡಿ-ಮ್ಯಾಕ್ಸ್ ಗೆಲ್ಲವ ಹೊಸ ಸ್ಪರ್ಧೆಯ ಏರ್ಪಡಿಸಿದ್ದಾರೆ. ಭಾಗವಹಿಸುವವರು ಸ್ಪರ್ಧೆಗೆ ಅರ್ಹರಾಗಲು ಕಂಪನಿಗೆ ಉತ್ತಮ ಬ್ಯೂಸಿನೆಸ್ ಐಡಿಯಾವನ್ನು ನೀಡಬೇಕು.

MOST READ: 2020ರ ಸಿಟಿ ಕಾರಿನ ಉತ್ಪಾದನೆಯನ್ನು ಪ್ರಾರಂಭಿಸಿದ ಹೋಂಡಾ

ಭಾರತದಲ್ಲಿ ವಿಂಟರ್ ಕೇರ್ ಅಭಿಯಾನವನ್ನು ಆರಂಭಿಸಿದ ಇಸುಝು

ಇದರಲ್ಲಿ ಅತ್ಯುತ್ತಮ ಬ್ಯೂಸಿನೆಸ್ ಐಡಿಯಾ ನೀಡಿದವರಿಗೆ ಡಿ-ಮ್ಯಾಕ್ಸ್ ಸೂಪರ್ ಸ್ಟ್ರಾಂಗ್ ಮಾದರಿಯನ್ನು ಗೆಲ್ಲವ ಅವಕಾಶವಿದೆ. ಈ ಸ್ಪರ್ಧೆಯಲ್ಲಿ 1ನೇ ರನ್ನರ್ ಅಪ್ ಮತ್ತು 2ನೇ ರನ್ನರ್ ಅಪ್ ಬರುವವರಿಗೆ ವಾಹನಕ್ಕೆ ಉಚಿತ ವಿಮೆ ಮತ್ತು ರೂ.10,000 ಮೌಲ್ಯದ ಉಚಿತ ಸರ್ವಿಸ್/ಅಕ್ಸೆಸರೀಸ್ ಅನ್ನು ನೀಡಲಾಗುವುದು.

ಭಾರತದಲ್ಲಿ ವಿಂಟರ್ ಕೇರ್ ಅಭಿಯಾನವನ್ನು ಆರಂಭಿಸಿದ ಇಸುಝು

ಇಸುಝು ಮೋಟಾರ್ಸ್ ತನ್ನ ಎಂಯು-ಎಕ್ಸ್ ಎಸ್‍ಯುವಿಯನ್ನು ಥೈಲ್ಯಾಂಡ್‌‌ನಲ್ಲಿ ಇತ್ತೀಚೆಗೆ ಬಿಡುಗಡೆಗೊಳಿಸಿತ್ತು. ಹಲವು ಹೊಸ ನವೀಕರಣಗಳೊಂದಿಗೆ ಎಂಯು-ಎಕ್ಸ್ ಎಸ್‍ಯುವಿಯನ್ನು ಬಿಡುಗಡೆಗೊಳಿಸಲಾಗಿದೆ.

MOST READ: ಮಾರಾಟದಲ್ಲಿ ಹೊಸ ಮೈಲಿಗಲ್ಲು ಸಾಧಿಸಿದ ಹೋಂಡಾ ಆಮೇಜ್ ಕಾರು

ಭಾರತದಲ್ಲಿ ವಿಂಟರ್ ಕೇರ್ ಅಭಿಯಾನವನ್ನು ಆರಂಭಿಸಿದ ಇಸುಝು

ಈ ಹೊಸ ಎಂಯು-ಎಕ್ಸ್ ಎಸ್‍ಯುವಿ 4,850 ಎಂಎಂ ಉದ್ದ, 1,870 ಎಂಎಂ ಅಗಲ ಮತ್ತು 1,875 ಎಂಎಂ ಎತ್ತರವನ್ನು ಹೊಂದಿದೆ. ಇನ್ನು ಈ ಹೊಸ ವ್ಹೀಲ್‌ಬೇಸ್ 2,855 ಎಂಎಂ ಗ್ರೌಂಡ್ ಕ್ಲಿಯರೆನ್ಸ್ ಹೊಂದಿದೆ. ಹಿಂದಿನ ಮಾದರಿಗೆ ಹೋಲಿಸಿದರೆ ಹೊಸ ಎಂಯು-ಎಕ್ಸ್ ಎಸ್‍ಯುವಿ 25 ಎಂಎಂ ಉದ್ದ, 10 ಎಂಎಂ ಅಗಲ, 15 ಎಂಎಂ ಎತ್ತರ ಮತ್ತು 10 ಎಂಎಂ ವ್ಹೀಲ್‌ಬೇಸ್ ಅಷ್ಟು ಹೆಚ್ಚಿಸಲಾಗಿದೆ.

ಭಾರತದಲ್ಲಿ ವಿಂಟರ್ ಕೇರ್ ಅಭಿಯಾನವನ್ನು ಆರಂಭಿಸಿದ ಇಸುಝು

ಹೊಸ ಎಂಯು-ಎಕ್ಸ್ ಎಸ್‍ಯುವಿಯಲ್ಲಿ 1.9-ಲೀಟರ್ ವಿಜಿಎಸ್ ಟರ್ಬೊ ಸಿಆರ್‌ಡಿಐ 16ವಿ ಡಿಒಹೆಚ್‌ಸಿ ಡೀಸೆಲ್ ಎಂಜಿನ್ ಅನ್ನು ಅಳವಡಿಸಲಾಗಿದೆ. ಈ ಎಂಜಿನ್ 3,600 ಆರ್‌ಪಿಎಂನಲ್ಲಿ 150 ಬಿಹೆಚ್‍ಪಿ ಪವರ್ ಮತ್ತು 1,800-2,600 ಆರ್‌ಪಿಎಂನಲ್ಲಿ ಗರಿಷ್ಠ 350 ಎನ್‌ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ.

ಭಾರತದಲ್ಲಿ ವಿಂಟರ್ ಕೇರ್ ಅಭಿಯಾನವನ್ನು ಆರಂಭಿಸಿದ ಇಸುಝು

ಇಸುಝು ಕಂಪನಿಯು ಪ್ರಸ್ತುತ ದೇಶದಲ್ಲಿ ಕರ್ಮಿರ್ಷಿಯಲ್ ಪಿಕ್-ಅಪ್ ವಾಹನಗಳನ್ನು ಮಾರಾಟ ಮಾಡುತ್ತಿದೆ. ಚಳಿಗಾಲದಲ್ಲಿ ತಮ್ಮ ಇಸುಝು ವಾಹನವನ್ನು ಉತ್ತಮ ಸ್ಥಿತಿಯಲ್ಲಿ ಇಡಲು ಈ ವಿಂಟರ್ ಕೇರ್ ಅಭಿಯಾನದ ಪ್ರಯೋಜನವನ್ನು ಪಡೆದುಕೊಳ್ಳಬಹುದು.

Most Read Articles

Kannada
Read more on ಇಸುಝು isuzu
English summary
Isuzu Winter Care Maintenance Camp Announced In India. Read In Kannada.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X