ಕನೆಕ್ಟೆಡ್ ಫೀಚರ್ಸ್‌ವುಳ್ಳ ಕಾರು ಮಾರಾಟದಲ್ಲಿ ಕಿಯಾ ಮೋಟಾರ್ಸ್ ಹೊಸ ದಾಖಲೆ

ಐಷಾರಾಮಿ ಕಾರುಗಳಲ್ಲಿ ಮಾತ್ರವೇ ಜೋಡಣೆ ಮಾಡಲಾಗುತ್ತಿದ್ದ ಕನೆಕ್ಟೆಡ್ ಕಾರ್ ಫೀಚರ್ಸ್‌ಗಳು ಇದೀಗ ಮಧ್ಯಮ ಗಾತ್ರದ ಕಾರುಗಳಲ್ಲೂ ಜನಪ್ರಿಯವಾಗುತ್ತಿದ್ದು, ಕಿಯಾ ಮೋಟಾರ್ಸ್ ಕಂಪನಿಯು ಇದುವರೆಗೆ ಬರೋಬ್ಬರಿ 1 ಲಕ್ಷ ಕನೆಕ್ಟೆಡ್ ಫೀಚರ್ಸ್ ಹೊಂದಿರುವ ಕಾರುಗಳನ್ನು ಮಾರಾಟ ಮಾಡಿದೆ.

ಕನೆಕ್ಟೆಡ್ ಫೀಚರ್ಸ್‌ವುಳ್ಳ ಕಾರು ಮಾರಾಟದಲ್ಲಿ ಕಿಯಾ ಮೋಟಾರ್ಸ್ ಹೊಸ ದಾಖಲೆ

37 ಫೀಚರ್ಸ್ ಒಳಗೊಂಡಿರುವ ಬ್ಲ್ಯೂ ಲಿಂಕ್ ಸೂಟ್ಸ್‌ ಹೊಂದಿರುವ ಯುವಿಒ ಕನೆಕ್ಟ್ ಟೆಕ್ನಾಲಜಿ ಸೌಲಭ್ಯದಿಂದಾಗಿ ಕಿಯಾ ಹೊಸ ಕಾರುಗಳಿಗೆ ಗರಿಷ್ಠ ಭದ್ರತೆ ದೊರೆತಿದ್ದು, ಇದು ಕಿಯಾ ಹೊಸ ಕಾರುಗಳ ಖರೀದಿದಾರರ ಪ್ರಮುಖ ಆಕರ್ಷಣೆಯಾಗಿದೆ. ಸ್ಮಾರ್ಟ್ ಫೋನ್ ಅಥವಾ ಸ್ಮಾರ್ಟ್ ವಾಚ್ ಮೂಲಕವೇ ಕಾರಿನ ಬಹುತೇಕ ತಾಂತ್ರಿಕ ಅಂಶಗಳನ್ನು ನಿಯಂತ್ರಣ ಮಾಡಬಹುದಾಗಿದ್ದು, ಇದರಿಂದ ವಾಹನ ಕಳ್ಳತನ ಸಮಸ್ಯೆಗಳಿಗೆ ಪರಿಣಾಮಕಾರಿಯಾಗಿ ಕಡಿವಾಣ ಹಾಕುತ್ತಿದೆ.

ಕನೆಕ್ಟೆಡ್ ಫೀಚರ್ಸ್‌ವುಳ್ಳ ಕಾರು ಮಾರಾಟದಲ್ಲಿ ಕಿಯಾ ಮೋಟಾರ್ಸ್ ಹೊಸ ದಾಖಲೆ

ಸದ್ಯ ಕಿಯಾ ಮೋಟಾರ್ಸ್ ಕಂಪನಿಯು ಹೊಸ ಕನೆಕ್ಟೆಡ್ ಫೀಚರ್ಸ್‌ಗಳನ್ನು ಕಾರ್ನಿವಾಲ್‌ ಎಂಪಿವಿ ಕಾರಿನಲ್ಲಿ ಸ್ಟ್ಯಾಂಡರ್ಡ್ ಆಗಿ ನೀಡಲಾಗುತ್ತಿದ್ದು, ಸೆಲ್ಟೊಸ್‌ ಮತ್ತು ಸೊನೆಟ್ ಕಾರಿನ ಹೈ ಎಂಡ್ ಮಾದರಿಗಳಲ್ಲಿ ಮಾತ್ರವೇ ಜೋಡಣೆ ಮಾಡಲಾಗಿದೆ.

ಕನೆಕ್ಟೆಡ್ ಫೀಚರ್ಸ್‌ವುಳ್ಳ ಕಾರು ಮಾರಾಟದಲ್ಲಿ ಕಿಯಾ ಮೋಟಾರ್ಸ್ ಹೊಸ ದಾಖಲೆ

ಸಾಮಾನ್ಯ ಮಾದರಿಗಿಂತಲೂ ದುಬಾರಿ ಬೆಲೆ ನಡುವೆಯೂ ಕನೆಕ್ಟೆಡ್ ಫೀಚರ್ಸ್ ಹೊಂದಿರುವ ಕಾರುಗಳೇ ಹೆಚ್ಚು ಮಾರಾಟವಾಗಿದ್ದು, ಇದುವರೆಗೆ ಬರೋಬ್ಬರಿ 1 ಲಕ್ಷ ಯುನಿಟ್ ಕಾರುಗಳು ಕನೆಕ್ಟೆಡ್ ಫೀಚರ್ಸ್‌ನೊಂದಿಗೆ ಮಾರಾಟಗೊಂಡಿವೆ.

ಕನೆಕ್ಟೆಡ್ ಫೀಚರ್ಸ್‌ವುಳ್ಳ ಕಾರು ಮಾರಾಟದಲ್ಲಿ ಕಿಯಾ ಮೋಟಾರ್ಸ್ ಹೊಸ ದಾಖಲೆ

37 ಫೀಚರ್ಸ್ ಒಳಗೊಂಡಿರುವ ಬ್ಲ್ಯೂ ಲಿಂಕ್ ಸೂಟ್ಸ್‌ ಹೊಂದಿರುವ ಯುವಿಒ ಕನೆಕ್ಟ್ ಟೆಕ್ನಾಲಜಿಯನ್ನು ಕಿಯಾ ಮೋಟಾರ್ಸ್ ಕಂಪನಿಯೇ ಅಭಿವೃದ್ದಿಗೊಳಿಸಿದ್ದು, ನ್ಯಾವಿಗೆಷನ್, ವೆಹಿಕಲ್ ಟ್ರ್ಯಾಕಿಂಗ್, ಥೆಪ್ಟ್ ಅಲರ್ಟ್, ಜಿಯೋ ಫೆನ್ಸಿಂಗ್ ಸೇರಿದಂತೆ ವಿವಿಧ ಮಾದರಿಯ ಸುಧಾರಿತ ಮಾಹಿತಿ ತಂತ್ರಜ್ಞಾನವು ಈ ಪ್ಯಾಕೇಜ್‌ನಲ್ಲಿದೆ. ಈ ಮೂಲಕ ಕಾರು ಮಾರಾಟದಲ್ಲಿ ಹೊಸ ಸಂಚಲನಕ್ಕೆ ಕಾರಣವಾಗಿರುವ ಕಿಯಾ ಮೋಟಾರ್ಸ್ ಕಂಪನಿಯು ಮುಂಬರುವ ದಿನಗಳಲ್ಲಿ ಮತ್ತಷ್ಟು ಕನೆಕ್ವೆಡ್ ಕಾರುಗಳ ಮಾರಾಟವನ್ನು ತನ್ನದಾಗಿಸಿಕೊಳ್ಳಲಿದೆ.

ಕನೆಕ್ಟೆಡ್ ಫೀಚರ್ಸ್‌ವುಳ್ಳ ಕಾರು ಮಾರಾಟದಲ್ಲಿ ಕಿಯಾ ಮೋಟಾರ್ಸ್ ಹೊಸ ದಾಖಲೆ

ಇನ್ನು ಭಾರತದಲ್ಲಿ ಕಾರು ಮಾರಾಟ ಆರಂಭಿಸಿದ ಕೆಲವೇ ದಿನಗಳಲ್ಲಿ ಭರ್ಜರಿ ಮುನ್ನಡೆ ಕಾಯ್ದುಕೊಳ್ಳುತ್ತಿರುವ ಕಿಯಾ ಮೋಟಾರ್ಸ್ ಕಂಪನಿಯು ಸದ್ಯ ಪ್ರಮುಖ ಕಾರು ಮಾರಾಟ ಕಂಪನಿಗಳನ್ನು ಹಿಂದಿಕ್ಕಿ ನಾಲ್ಕನೇ ಸ್ಥಾನದಲ್ಲಿದ್ದು, ಮುಂಬರುವ ದಿನಗಳಲ್ಲಿ ಮತ್ತಷ್ಟು ಮಾರಾಟ ಮಳಿಗೆಗಳೊಂದಿಗೆ ಗ್ರಾಹಕರ ಬೇಡಿಕೆಯಲ್ಲಿ ಮುನ್ನಡೆ ಸಾಧಿಸಲಿದೆ.

ಕನೆಕ್ಟೆಡ್ ಫೀಚರ್ಸ್‌ವುಳ್ಳ ಕಾರು ಮಾರಾಟದಲ್ಲಿ ಕಿಯಾ ಮೋಟಾರ್ಸ್ ಹೊಸ ದಾಖಲೆ

ಕಾರು ಮಾರಾಟದಲ್ಲಿ ಸದ್ಯ ಮಾರುತಿ ಸುಜುಕಿ, ಹ್ಯುಂಡೈ, ಟಾಟಾ ಮೋಟಾರ್ಸ್ ನಂತರ ನಾಲ್ಕನೇ ಸ್ಥಾನದಲ್ಲಿರುವ ಕಿಯಾ ಮೋಟಾರ್ಸ್ ಕಂಪನಿಯು ಮಹೀಂದ್ರಾ, ಹೋಂಡಾ, ಟೊಯೊಟಾ ಕಂಪನಿಗಳನ್ನು ಹಿಂದಿಕ್ಕಿ ಅಗ್ರಸ್ಥಾನಕ್ಕೇರಿದ್ದು, ಮುಂಬರುವ ದಿನಗಳಲ್ಲಿ ಹೊಸ ಮಾರಾಟ ಮಳಿಗೆಗಳೊಂದಿಗೆ ಪ್ರಮುಖ ನಗರಗಳಲ್ಲಿ ಮತ್ತಷ್ಟು ಮಾರಾಟ ಸಂಖ್ಯೆ ಹೆಚ್ಚಿಸುವ ಯೋಜನೆಯಲ್ಲಿದೆ.

ಕನೆಕ್ಟೆಡ್ ಫೀಚರ್ಸ್‌ವುಳ್ಳ ಕಾರು ಮಾರಾಟದಲ್ಲಿ ಕಿಯಾ ಮೋಟಾರ್ಸ್ ಹೊಸ ದಾಖಲೆ

ಕಿಯಾ ಮೋಟಾರ್ಸ್ ಕಂಪನಿಯು ಸದ್ಯ ದೇಶದ ಪ್ರಮುಖ 170 ನಗರಗಳಲ್ಲಿ 250 ಮಾರಾಟ ಮಳಿಗೆಗಳು ಕಾರ್ಯನಿರ್ವಹಿಸುತ್ತಿದ್ದು, ಹೊಸ ವರ್ಷದ ಆರಂಭದಲ್ಲಿ ಕಿಯಾ ಮೋಟಾರ್ಸ್ ಮಾರಾಟ ಮಳಿಗೆಗಳ ಸಂಖ್ಯೆ 300ಕ್ಕೆ ಏರಿಕೆಯಾಗಲಿದೆ ಎನ್ನಲಾಗಿದೆ.

MOST READ: ಪ್ರತಿ ಚಾರ್ಜ್‌ಗೆ ಗರಿಷ್ಠ 509ಕಿ.ಮೀ ಮೈಲೇಜ್ ನೀಡಲಿದೆ ಸ್ಕೋಡಾ ಎನ್ಯಾಕ್ ಎಲೆಕ್ಟ್ರಿಕ್ ಎಸ್‌ಯುವಿ..!

ಕನೆಕ್ಟೆಡ್ ಫೀಚರ್ಸ್‌ವುಳ್ಳ ಕಾರು ಮಾರಾಟದಲ್ಲಿ ಕಿಯಾ ಮೋಟಾರ್ಸ್ ಹೊಸ ದಾಖಲೆ

ಮಾಹಾನಗರಗಳು ಸೇರಿದಂತೆ ಟೈರ್ 1, ಟೈರ್ 2 ನಗರಗಳಲ್ಲಿ ಹೊಸದಾಗಿ 60ಕ್ಕೂ ಹೆಚ್ಚು ಕಿಯಾ ಮೋಟಾರ್ಸ್ ಮಾರಾಟ ಮಳಿಗೆಗಳು ನಿರ್ಮಾಣದ ಹಂತದಲ್ಲಿದ್ದು, ಹೊಸ ವರ್ಷಾಚಾರಣೆ ವೇಳೆಗೆ ಮಾರಾಟ ಮಳಿಗೆಗಳಿಗೆ ಚಾಲನೆ ನೀಡಲು ಸಿದ್ದತೆ ನಡೆಸಲಾಗಿದೆ.

ಕನೆಕ್ಟೆಡ್ ಫೀಚರ್ಸ್‌ವುಳ್ಳ ಕಾರು ಮಾರಾಟದಲ್ಲಿ ಕಿಯಾ ಮೋಟಾರ್ಸ್ ಹೊಸ ದಾಖಲೆ

ಸೆಲ್ಟೊಸ್ ಜೊತೆ ಇದೀಗ ಸೊನೆಟ್ ಕಾರು ಮಾರಾಟ ಮಾಡುತ್ತಿರುವ ಕಿಯಾ ಮೋಟಾರ್ಸ್ ಕಂಪನಿಯು ಕಾರು ಮಾರಾಟದಲ್ಲಿ ಹೊಸ ದಾಖಲೆಗೆ ಕಾರಣವಾಗಿದ್ದು, ಮುಂಬರುವ ದಿನಗಳಲ್ಲಿ ಮತ್ತಷ್ಟು ಹೊಸ ಕಾರು ಮಾದರಿಗಳನ್ನು ಮಾರಾಟ ಮಾಡುವ ಸಿದ್ದತೆಯಲ್ಲಿದೆ.

MOST READ: 2020ರ ಅವಧಿಯಲ್ಲಿ ಬಿಡುಗಡೆಯಾದ ಪ್ರಮುಖ ಹತ್ತು ಕಾರುಗಳಿವು..!

ಕನೆಕ್ಟೆಡ್ ಫೀಚರ್ಸ್‌ವುಳ್ಳ ಕಾರು ಮಾರಾಟದಲ್ಲಿ ಕಿಯಾ ಮೋಟಾರ್ಸ್ ಹೊಸ ದಾಖಲೆ

ಸೆಲ್ಟೊಸ್, ಕಾರ್ನಿವಾಲ್ ಮತ್ತು ಸೊನೆಟ್ ನಂತರ ಮತ್ತಷ್ಟು ಹೊಸ ಕಾರುಗಳನ್ನು ಬಿಡುಗಡೆ ಮಾಡುವ ಸಿದ್ದತೆಯಲ್ಲಿರುವ ಕಿಯಾ ಮೋಟಾರ್ಸ್ ಕಂಪನಿಯು ಶೀಘ್ರದಲ್ಲೇ ಮಧ್ಯಮ ಕ್ರಮಾಂಕದ ಎಂಪಿವಿ ಜೊತೆಗೆ ಎಲೆಕ್ಟ್ರಿಕ್ ಕಾರು ಮಾದರಿಗಳನ್ನು ಸಹ ಬಿಡುಗಡೆ ಮಾಡುತ್ತಿದೆ.

Most Read Articles

Kannada
English summary
Kia Motors Sells 1 lakh Connected Cars. Read in Kannada.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X