ಆಟೋ ಎಕ್ಸ್‌ಪೋ 2020: ಭಾರತದಲ್ಲಿ ಬಿಡುಗಡೆಯಾಗುತ್ತಾ ಕಿಯಾ ಸ್ಟೊನಿಕ್?

ದಕ್ಷಿಣ ಕೊರಿಯಾದ ಕಿಯಾ ಮೋಟಾರ್ಸ್ ಸಂಸ್ಥೆಯು ಭಾರತೀಯ ಗ್ರಾಹಕರ ಬೇಡಿಕೆಯೆಂತೆ ಹತ್ತಕ್ಕೂ ಹೆಚ್ಚು ಕಾರುಗಳನ್ನು ದೆಹಲಿ ಆಟೋ ಎಕ್ಸ್‌ಪೋದಲ್ಲಿ ಅನಾವರಣಗೊಳಿಸಿದ್ದು, ಕಂಪ್ಯಾಕ್ಟ್ ಎಸ್‌ಯುವಿ ಮಾದರಿಯಾದ ಸ್ಟೊನಿಕ್ ಸಹ ಭಾರತದಲ್ಲಿ ಬಿಡುಗಡೆಯಾಗುವ ಸುಳಿವು ನೀಡಿದೆ.

ಆಟೋ ಎಕ್ಸ್‌ಪೋ 2020: ಭಾರತದಲ್ಲಿ ಬಿಡುಗಡೆಯಾಗುತ್ತಾ ಕಿಯಾ ಸ್ಟೊನಿಕ್?

ತಾಂತ್ರಿಕವಾಗಿ ಸೊನೆಟ್ ಕಾನ್ಸೆಪ್ಟ್ ಮಾದರಿಯಲ್ಲೇ ಮಾರಾಟವಾಗುತ್ತಿರುವ ಸ್ಟೊನಿಕ್ ಕಾರು ಕೊರಿಯಾ ಮತ್ತು ಲ್ಯಾಟಿನ್ ಅಮೆರಿಕಾ ಮಾರುಕಟ್ಟೆಗಳಲ್ಲಿ ಮಾರಾಟಗೊಳ್ಳುತ್ತಿದ್ದು, ಭಾರತದಲ್ಲೂ ಹೊಸ ಕಾರು ಅಧಿಕೃತವಾಗಿ ರಸ್ತೆಗಿಳಿಸುವ ಸುಳಿವು ನೀಡಿದೆ. ಭಾರತದಲ್ಲಿ ಈಗಾಗಲೇ ಹಲವು ಬಾರಿ ಪ್ರದರ್ಶನಗೊಂಡಿರುವ ಸ್ಟೊನಿಕ್ ಕಾರು ಬಿಡುಗಡೆಯಾಗಿದ್ದೆ ಆದಲ್ಲಿ ಸದ್ಯ ಮಾರುಕಟ್ಟೆಯಲ್ಲಿರುವ ಸೆಲ್ಟೊಸ್ ಮತ್ತು ಅನಾವರಣಗೊಳಿಸಲಾಗಿರುವ ಸೊನೆಟ್ ಕಾನ್ಸೆಪ್ಟ್ ಆವೃತ್ತಿಯು ಮಧ್ಯಮ ಸ್ಥಾನದಲ್ಲಿ ಮಾರಾಟವಾಗಲಿದೆ.

ಆಟೋ ಎಕ್ಸ್‌ಪೋ 2020: ಭಾರತದಲ್ಲಿ ಬಿಡುಗಡೆಯಾಗುತ್ತಾ ಕಿಯಾ ಸ್ಟೊನಿಕ್?

ಮಾಹಿತಿಗಳ ಪ್ರಕಾರ, ಸೊನೆಟ್ ಕಾರು ಎಂಟ್ರಿ ಲೆವಲ್ ಕಂಪ್ಯಾಕ್ಟ್ ಎಸ್‌ಯುವಿ ಕಾರುಗಳ ವಿಭಾಗದಲ್ಲಿ ಪೆಟ್ರೋಲ್ ಎಂಜಿನ್‌ನೊಂದಿಗೆ ಮಾರಾಟವಾಗಲಿದ್ದರೆ ಪೆಟ್ರೋಲ್ ಮತ್ತು ಡೀಸೆಲ್ ಎಂಜಿನ್ ಆಯ್ಕೆಯೊಂದಿಗೆ ಸ್ಟೊನಿಕ್ ಕಾರು ಸೊನಿಕ್ ಕಾರಿಗಿಂತಲೂ ಹೆಚ್ಚಿನ ಮಟ್ಟದ ಫೀಚರ್ಸ್ ಪೆಡೆದುಕೊಳ್ಳಲಿದೆ.

ಆಟೋ ಎಕ್ಸ್‌ಪೋ 2020: ಭಾರತದಲ್ಲಿ ಬಿಡುಗಡೆಯಾಗುತ್ತಾ ಕಿಯಾ ಸ್ಟೊನಿಕ್?

ಈ ಮೂಲಕ ಎಂಟ್ರಿ ಲೆವಲ್ ಮೈಕ್ರೊ ಎಸ್‌ಯುವಿ ಕಾರುಗಳಲ್ಲಿ ಸೊನೆಟ್ ಕಾರು, ಮಧ್ಯಮ ಕ್ರಮಾಂಕದಲ್ಲಿ ಸ್ಟೊನಿಕ್ ಮತ್ತು ಪ್ರೀಮಿಯಂ ಕಂಪ್ಯಾಕ್ಟ್ ಎಸ್‌ಯುವಿ ವಿಭಾಗದಲ್ಲಿ ಸೆಲ್ಟೊಸ್ ಕಾರು ತನ್ನ ಬೇಡಿಕೆಯನ್ನು ಮುಂದುವರಿಸಲಿದೆ.

ಆಟೋ ಎಕ್ಸ್‌ಪೋ 2020: ಭಾರತದಲ್ಲಿ ಬಿಡುಗಡೆಯಾಗುತ್ತಾ ಕಿಯಾ ಸ್ಟೊನಿಕ್?

ಸ್ಟೊನಿಕ್ ಕಾರು 1.2-ಲೀಟರ್ ಪೆಟ್ರೋಲ್ ಮತ್ತು 1.4-ಲೀಟರ್ ಡೀಸೆಲ್ ಎಂಜಿನ್‌ನೊಂದಿಗೆ ಬಿಡುಗಡೆಯಾಗುವ ಸಾಧ್ಯತೆಗಳಿದ್ದು, ರೂ.8 ಲಕ್ಷದಿಂದ ರೂ.12 ಲಕ್ಷದೊಳಗಿನ ಕಂಪ್ಯಾಕ್ಟ್ ಎಸ್‌ಯುವಿ ಖರೀದಿದಾರರನ್ನು ಇದು ಸೆಳೆಯಲಿದೆ. ಇನ್ನುಳಿದಂತೆ ಸೊನೆಟ್ ಕಾರು ರೂ. 6 ಲಕ್ಷದಿಂದ ರೂ.8 ಲಕ್ಷ ಬೆಲೆ ಅಂತರದಲ್ಲಿ ಬಿಡುಗಡೆಯಾಗಲಿದ್ದು, ಇದು ಮಾರುತಿ ಸುಜುಕಿ ಮತ್ತು ಹ್ಯುಂಡೈ ಕಾರುಗಳ ಮಾರಾಟಕ್ಕೆ ಭರ್ಜರಿ ಪೈಪೋಟಿ ನೀಡಲಿದೆ ಎನ್ನಬಹುದು.

ಆಟೋ ಎಕ್ಸ್‌ಪೋ 2020: ಭಾರತದಲ್ಲಿ ಬಿಡುಗಡೆಯಾಗುತ್ತಾ ಕಿಯಾ ಸ್ಟೊನಿಕ್?

ಸೆಲ್ಟೊಸ್ ಕಾರು ಎಕ್ಸ್‌ಶೋರೂಂ ಪ್ರಕಾರ ಆರಂಭಿಕವಾಗಿ ರೂ. 9.89 ಲಕ್ಷದಿಂದ ರೂ. 17.34 ಲಕ್ಷ ಬೆಲೆ ಅಂತರದಲ್ಲಿ ಮಾರಾಟಗೊಳ್ಳುತ್ತಿದ್ದು, ಸೊನೆಟ್ ಮತ್ತು ಸೆಲ್ಟೊಸ್ ನಡುವಿನ ಸ್ಥಾನ ತುಂಬಲು ಸ್ಟೊನಿಕ್ ಬಿಡುಗಡೆಯಾಗುವ ಎಲ್ಲಾ ಸಾಧ್ಯತೆಗಳಿವೆ.

ಆಟೋ ಎಕ್ಸ್‌ಪೋ 2020: ಭಾರತದಲ್ಲಿ ಬಿಡುಗಡೆಯಾಗುತ್ತಾ ಕಿಯಾ ಸ್ಟೊನಿಕ್?

ಇನ್ನು ಕಿಯಾ ಮೋಟಾರ್ಸ್ ಸಂಸ್ಥೆಯು ಸದ್ಯ ಸೆಲ್ಟೊಸ್ ಮತ್ತು ಕಾರ್ನಿವಾಲ್ ಕಾರುಗಳನ್ನು ಮಾತ್ರವೇ ಬಿಡುಗಡೆಗೊಳಿಸಿದ್ದು, ಮುಂದಿನ 2 ವರ್ಷಗಳ ಅವಧಿಯಲ್ಲಿ ಒಟ್ಟು 6 ಹೊಸ ಕಾರು ಮಾದರಿಯನ್ನು ಪರಿಚಯಿಸುವುದಾಗಿ ಹೇಳಿಕೊಂಡಿದೆ.

ಆಟೋ ಎಕ್ಸ್‌ಪೋ 2020: ಭಾರತದಲ್ಲಿ ಬಿಡುಗಡೆಯಾಗುತ್ತಾ ಕಿಯಾ ಸ್ಟೊನಿಕ್?

ಇದಕ್ಕಾಗಿ ಭಾರತದಲ್ಲಿ ಭಾರೀ ಪ್ರಮಾಣದ ಬಂಡವಾಳ ಹೂಡಿಕೆ ಮಾಡಿರುವ ಕಿಯಾ ಸಂಸ್ಥೆಯು ವಾರ್ಷಿಕವಾಗಿ 3 ಲಕ್ಷ ವಾಹನ ತಯಾರಿಕಾ ಘಟಕಕ್ಕೆ ಚಾಲನೆ ನೀಡಿದ್ದು, ಸಾಮಾನ್ಯ ಕಾರು ಮಾದರಿಗಳು ಮಾತ್ರವಲ್ಲದೇ ಎಲೆಕ್ಟ್ರಿಕ್ ಕಾರು ಮಾದರಿಗಳನ್ನು ಸಹ ಬಿಡುಗಡೆಗೊಳಿಸಲಿದೆ.

Most Read Articles

Kannada
English summary
Kia Showcased Stonic At Auto Expo 2020. Read in Kannada.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X